Vidyut Jammwal: ಹಾಲಿವುಡ್ ವೇದಿಕೆಯಲ್ಲಿ ಗಾಯತ್ರಿ ಮಂತ್ರ ಪಠಿಸಿದ ಖ್ಯಾತ ನಟ
Vidyut Jammwal: ಕಿಟಾವೊ ಸಕುರೈ ನಿರ್ದೇಶನದ ‘ಸ್ಟ್ರೀಟ್ ಫೈಟರ್’ ಚಿತ್ರದಲ್ಲಿ ನೋವಾ ಸೆಂಟಿನಿಯೊ, ಜೇಸನ್ ಮೊಮೊವಾ, ಅಂಡ್ರ್ಯೂ ಕೋಜಿ ಮತ್ತು ಕುರ್ಟಿಸ್ ’50 ಸೆಂಟ್’ ಜಾಕ್ಸನ್ ಅಂತಹ ಘಟಾನುಘಟಿ ಕಲಾವಿದರು ನಟಿಸಿದ್ದಾರೆ. ಅಕ್ಟೋಬರ್ 16 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ನಟ ವಿದ್ಯುತ್ ಜಮ್ವಾಲ್ ಅವರ ಹಾಲಿವುಡ್ ಚೊಚ್ಚಲ ಚಿತ್ರವಾಗಿದ್ದು, ಹಾಲಿವುಡ್ ವೇದಿಕೆಯಲ್ಲಿ ಗಾಯತ್ರಿ ಮಂತ್ರ ಪಠಿಸಿರುವುದು ಸಖತ್ ಚರ್ಚೆಗಳು ಆಗುತ್ತಿವೆ.
ನಟ ವಿದ್ಯುತ್ ಜಮ್ವಾಲ್ -
ಬಹಳ ದಿನಗಳಿಂದ ಸಿನಿ ಪ್ರೇಮಿಗಳು ಕಾಯುತ್ತಿದ್ದ ಬಹುನಿರೀಕ್ಷಿತ ಚಿತ್ರ ಸ್ಟ್ರೀಟ್ ಫೈಟರ್‌ನ (Street Fighter) ಟ್ರೇಲರ್ (Trailer) ಸಿನಿಮಾಕಾನ್ 2026 ಕಾರ್ಯಕ್ರಮದಲ್ಲಿ ಅನಾವರಣಗೊಳಿಸಲಾಯಿತು. ವಿಶ್ವಪ್ರಸಿದ್ಧ ವಿಡಿಯೋ ಗೇಮ್ ಸರಣಿ ‘ಸ್ಟ್ರೀಟ್ ಫೈಟರ್’ ಆಧರಿತ ಈ ಸಿನಿಮಾದಲ್ಲಿ ವಿದ್ಯುತ್ ಅವರು ಐಕಾನಿಕ್ ಯೋಗ ಮಾಸ್ಟರ್ ‘ಧಲ್ಸಿಮ್’ ಪಾತ್ರವನ್ನು ನಿರ್ವಹಿಸಿದ್ದಾರೆ. ನಟ ವಿದ್ಯುತ್ ಜಮ್ವಾಲ್ (Vidyut Jammwal) ಅವರ ಹಾಲಿವುಡ್ (Hollywood) ಚೊಚ್ಚಲ ಚಿತ್ರವಾಗಿದ್ದು, ಹಾಲಿವುಡ್ ವೇದಿಕೆಯಲ್ಲಿ ಗಾಯತ್ರಿ ಮಂತ್ರ (Gayatri Mantra) ಪಠಿಸಿರುವುದು ಸಖತ್ ಚರ್ಚೆಗಳು ಆಗುತ್ತಿವೆ.
ಏಪ್ರಿಲ್ 17, 2026 ರಂದು, ವಿದ್ಯುತ್ ಜಮ್ವಾಲ್ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಸಿನಿಮಾಕಾನ್ 2026 ಕಾರ್ಯಕ್ರಮದ ವೀಡಿಯೊವನ್ನು ಹಂಚಿಕೊಂಡರು, ಅಲ್ಲಿ ಸ್ಟ್ರೀಟ್ ಫೈಟರ್ ಪಾತ್ರವರ್ಗವು ತನ್ನ ಟ್ರೇಲರ್ ಅನ್ನು ಅನಾವರಣಗೊಳಿಸಿತು. ವೀಡಿಯೊದಲ್ಲಿ, ವಿದ್ಯುತ್ ಪ್ರಾರ್ಥನೆಗಳನ್ನು ಪಠಿಸುವುದನ್ನು ಕಾಣಬಹುದು.
ಇದನ್ನೂ ಓದಿ: Rishab Shetty: ‘ಕಾಂತಾರದಲ್ಲಿ ನಟಿಸುವ ಆಸೆ ಇರಲಿಲ್ಲʼ; ರಿಷಬ್ ಶೆಟ್ಟಿ
ವಿದ್ಯುತ್ ಅವರು ಇತರೆ ನಟರ ಅನುಮತಿ ಪಡೆದು ಕಣ್ಣುಮುಚ್ಚಿ ಸೂರ್ಯ ಮಂತ್ರ, ಚಂದ್ರ ಮಂತ್ರ ಮತ್ತು ಗಾಯತ್ರಿ ಮಂತ್ರವನ್ನು ಭಕ್ತಿಯಿಂದ ಪಠಿಸಿದರು. ವಿಶೇಷವೆಂದರೆ, ವೇದಿಕೆಯಲ್ಲಿದ್ದ ಅವರ ಸಹನಟರಾದ ನೋವಾ ಸೆಂಟಿನಿಯೊ ಸೇರಿದಂತೆ ಇತರ ಜಾಗತಿಕ ತಾರೆಗಳು ಕೂಡ ವಿದ್ಯುತ್ ಅವರಿಗೆ ಸಾಥ್ ನೀಡಿ ಮೌನ ಪ್ರಾರ್ಥನೆಯಲ್ಲಿ ಪಾಲ್ಗೊಂಡರು.
ನಾವೆಲ್ಲರೂ ಒಂದಾಗಿ ಪಾರ್ಥನೆ
"ನನ್ನಲ್ಲಿ ಪ್ರಜ್ಞೆಯನ್ನು ತುಂಬುವ ಕೆಲವು ವೈಯಕ್ತಿಕ ಮೈಲಿಗಲ್ಲುಗಳಿವೆ. ನಾನು ಯಾರೆಂದು ನೆನಪಿಸುವ ಕ್ಷಣಗಳು ಇವು. ಲಾಸ್ ವೇಗಾಸ್‌ನಲ್ಲಿರುವ ಸಿನಿಮಾಕಾನ್‌ನಲ್ಲಿ ಪ್ರಾರ್ಥನೆ ಸಲ್ಲಿಸುವ ಗೌರವ ನನಗೆ ಸಿಕ್ಕಿತು. ಪದಗಳನ್ನು ಮೀರಿ, ಭಾಷೆಯನ್ನು ಮೀರಿ, ನಾವೆಲ್ಲರೂ ಒಂದಾಗಿ ಪಾರ್ಥನೆ ಮಾಡಿದ್ದೇವೆ ಎಂದು ಬರೆದುಕೊಂಡಿದ್ದಾರೆ.
ಕಳೆದ ವರ್ಷ, ಡಿಸೆಂಬರ್ 2025 ರಲ್ಲಿ, ವಿದ್ಯುತ್ ಸ್ಟ್ರೀಟ್ ಫೈಟರ್ ಪಾತ್ರವರ್ಗದ ಮೊದಲ ಲುಕ್ ಹಂಚಿಕೊಂಡರು, ಇದರಲ್ಲಿ ನಟರು, ನೋಹ್ ಸೆಂಟಿನಿಯೊ, ಆಂಡ್ರ್ಯೂ ಕೋಜಿ, ಕ್ಯಾಲಿನಾ ಲಿಯಾಂಗ್, ರೋಮನ್ ರೇನ್ಸ್, ಡೇವಿಡ್ ಡಸ್ಟ್ಮಾಲ್ಚಿಯನ್, ಜೇಸನ್ ಮೊಮೊವಾ, ಕರ್ಟಿಸ್ '50 ಸೆಂಟ್' ಜಾಕ್ಸನ್, ಕೋಡಿ ರೋಡ್ಸ್, ಆಂಡ್ರ್ಯೂ ಶುಲ್ಜ್ ಮತ್ತು ಎರಿಕ್ ಆಂಡ್ರೆ ಸೇರಿದ್ದಾರೆ.
ಮೂಲ ಸ್ಟ್ರೀಟ್ ಫೈಟರ್ ವಿಡಿಯೋ ಗೇಮ್ ಸರಣಿಯನ್ನು 1987 ರಲ್ಲಿ ಪ್ರಾರಂಭಿಸಲಾಯಿತು. ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ಈ ಆಟ ಬಿಡುಗಡೆಯಾದಾಗಿನಿಂದ ವಿಶ್ವಾದ್ಯಂತ 55 ಮಿಲಿಯನ್ ಪ್ರತಿಗಳು ಮಾರಾಟವಾಗಿವೆ.
ಇದನ್ನೂ ಓದಿ: Hansika Motwani: ಡಿವೋರ್ಸ್ ಬಗ್ಗೆ ಕೊನೆಗೂ ಮುಕ್ತವಾಗಿ ಮಾತನಾಡಿದ ಹನ್ಸಿಕಾ ಮೋಟ್ವಾನಿ
ಕಿಟಾವೊ ಸಕುರೈ ನಿರ್ದೇಶನದ ‘ಸ್ಟ್ರೀಟ್ ಫೈಟರ್’ ಚಿತ್ರದಲ್ಲಿ ನೋವಾ ಸೆಂಟಿನಿಯೊ, ಜೇಸನ್ ಮೊಮೊವಾ, ಅಂಡ್ರ್ಯೂ ಕೋಜಿ ಮತ್ತು ಕುರ್ಟಿಸ್ ’50 ಸೆಂಟ್’ ಜಾಕ್ಸನ್ ಅಂತಹ ಘಟಾನುಘಟಿ ಕಲಾವಿದರು ನಟಿಸಿದ್ದಾರೆ. ಅಕ್ಟೋಬರ್ 16 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.