ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ವಿಜಯ್ ದೇವರಕೊಂಡ (Vijay Devarkonda) ಅವರ ಹೊಸ ಸಿನಿಮಾ ‘ರಣಬಾಲಿ’ ಅಕ್ಟೋಬರ್ 16ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಮದುವೆಯಾದ ನಂತರ ಇಬ್ಬರೂ ಒಟ್ಟಿಗೆ ನಟಿಸುವ ಮೊದಲ ಸಿನಿಮಾ ಇದು.ಬಿಡುಗಡೆಗೆ ಮುನ್ನ ಇಬ್ಬರೂ ಪ್ರಖರ್ ಗುಪ್ತಾ ಅವರ ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡಿದರು.
ಪ್ರೀತಿಯ ಬಗ್ಗೆ ಮಾತಾಡುವಾಗ ಪಾಡ್‌ಕ್ಯಾಸ್ಟರ್ ಹೇಳಿದರು: “ಪ್ರೀತಿ ನೀವು ಓಡಿಸದ ಕಾರಿನಂತೆ ಇರಬೇಕು. ನೀವು ಪ್ರಯಾಣವನ್ನು ಆನಂದಿಸುತ್ತಿರುವಾಗ ಅದು ತಾನಾಗಿಯೇ ಚಲಿಸಬೇಕು.”ಇದಕ್ಕೆ ರಶ್ಮಿಕಾ ಹೇಳಿದರು: “ನಾನು ನಿಮ್ಮೊಂದಿಗೆ ಒಪ್ಪುತ್ತೇನೆ. ನೀವು ಚಾಲಕರಾಗಬಾರದು. ಅದು ಕಾರಿನಂತೆ ಇರಬೇಕು. ಆದರೆ ನಾವು ಮನುಷ್ಯರು ನಾವು ಪ್ರೀತಿಸುವವರಿಗಾಗಿ ಯಾವಾಗಲೂ ಪ್ರಯತ್ನ ಮಾಡುತ್ತಲೇ ಇರಬೇಕು ಎಂದರು..
ಇದನ್ನೂ ಓದಿ: Bigg Boss Kannada 13: ಆಸಿಯಾ, ಯಶಸ್, ಸೌಂದರ್ಯಾ ನಡುವೆ ಟ್ರಯಾಂಗಲ್ ಲವ್‌ಸ್ಟೋರಿ? ಮಂಜನ ಕವಿತೆ ಹೀಗಿದೆ
ಏಕೆಂದರೆ ಹೆಚ್ಚಾಗಿ ನಾವು ಹೊರಗಿನವರಿಗೆ ಹೆಚ್ಚು ಪ್ರಯತ್ನ ಮಾಡುತ್ತೇವೆ, ಮನೆಯಲ್ಲಿರುವವರಿಗೆ ಕಡಿಮೆ ಮಾಡುತ್ತೇವೆ.ಮದುವೆಯಾದ ಕೂಡಲೇ ‘ಶುಭೋದಯ’, ‘ನೀವು ಹೇಗಿದ್ದೀರಿ?’, ‘ನಿಮ್ಮ ದಿನ ಹೇಗಿತ್ತು?’ ಎಂದು ಹೇಳುವುದನ್ನು ನಿಲ್ಲಿಸಿಬಿಡುತ್ತೇವೆ. ಜೀವನದ ಕೆಲಸಗಳು ನಮ್ಮನ್ನು ಬೇರೆ ಬೇರೆ ಕಡೆಗೆ ಎಳೆಯುತ್ತವೆ.ಆದ್ದರಿಂದ ಸಂಬಂಧದಲ್ಲಿದ್ದರೂ, ಮದುವೆಯಲ್ಲಿದ್ದರೂ ಅಥವಾ ಮಕ್ಕಳಿದ್ದರೂ ಸಹ ಆ ಸಣ್ಣ ಪ್ರಯತ್ನಗಳನ್ನು ಪರಸ್ಪರ ಮಾಡುತ್ತಿರಬೇಕು. ಅದೇ ಪ್ರೀತಿ. ಅದು ಸುಲಭವಾಗಿರಬೇಕು ಎಂದರು..”
ವಿಜಯ್ ಹೇಳಿದರು: “ರಶ್ಮಿಕಾ ದಿನಕ್ಕೆ ಕನಿಷ್ಠ 10-15 ಬಾರಿ ‘ಐ ಲವ್ ಯು’ ಎನ್ನುತ್ತಾಳೆ. ಅವಳು ನನಗೆ ಹೇಳುತ್ತಾಳೆ – ಭಾವನೆಗಳನ್ನು ಹೇಳುವುದು ಮುಖ್ಯ. ನಾನು ಅದನ್ನು ಯಾವಾಗಲೂ ಅನುಭವಿಸುತ್ತೇನೆ.”ಎಂದರು.
ವಿಜಯ್ ಮತ್ತು ರಶ್ಮಿಕಾ ನಟನೆಯ 'ರಣಬಾಲಿ' ಸಿನಿಮಾದ ಶೂಟಿಂಗ್ ಅಧಿಕೃತವಾಗಿ ಮುಕ್ತಾಯಗೊಂಡಿದೆ. 2026ರ ಅಕ್ಟೋಬರ್ 16ರಂದು ವಿಶ್ವಾದ್ಯಂತ ಈ ಸಿನಿಮಾ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಚಿತ್ರದಲ್ಲಿ 'ಜಯಮ್ಮ' ಎಂಬ ಪ್ರಮುಖ ಪಾತ್ರದಲ್ಲಿ ನಟಿಸಿರುವ ರಶ್ಮಿಕಾ ಮಂದಣ್ಣ, ಕೊನೆಯ ದಿನದ ಶೂಟಿಂಗ್ ಮುಗಿಸಿ ಭಾವುಕರಾಗಿ ಸೆಟ್‌ನಿಂದ ವಿದಾಯ ಹೇಳಿದರು. ಚಿತ್ರೀಕರಣ ಮುಗಿದಿರುವುದು ಇಡೀ ಚಿತ್ರತಂಡಕ್ಕೆ ಒಂದು ವಿಶೇಷ ಕ್ಷಣವಾಗಿತ್ತು.
ಇದನ್ನೂ ಓದಿ: Bigg Boss Kannada 13: `ಹೊರಡೋದಾದ್ರೆ ಹೊರಡಿ'; ಗಾನವಿಯ ಬಾಯಿ ಬಂದ್ ಮಾಡಿದ ಸುದೀಪ್!
ಈ ಜೋಡಿಯ ಕೆಮಿಸ್ಟ್ರಿ ಎತ್ತಿ ತೋರಿಸುವ "ಎಂದಯ್ಯ ಸಾಮಿ" ಎಂಬ ಸುಂದರ ಹಾಡನ್ನು ಕೂಡ ಚಿತ್ರತಂಡ ಇತ್ತೀಚೆಗೆ ರಿಲೀಸ್ ಮಾಡಿದ್ದು, ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ಪಡೆದುಕೊಂಡಿದೆ. 1854 ರಿಂದ 1878ರ ಕಾಲಘಟ್ಟದಲ್ಲಿ ನಡೆಯುವ ಕಥೆ ಈ ಸಿನಿಮಾದಲ್ಲಿದೆ. 'ರಣಬಾಲಿ' ಒಂದು ಪಿರಿಯಾಡಿಕ್ ಆಕ್ಷನ್ ಡ್ರಾಮಾ ಆಗಿದ್ದು, ಹೋರಾಟ ಮತ್ತು ಭರ್ಜರಿ ಆಕ್ಷನ್ ದೃಶ್ಯಗಳಿಂದ ಕೂಡಿದೆ.