Bigg Boss Kannada 13: ಆಸಿಯಾ, ಯಶಸ್, ಸೌಂದರ್ಯಾ ನಡುವೆ ಟ್ರಯಾಂಗಲ್ ಲವ್‌ಸ್ಟೋರಿ? ಮಂಜನ ಕವಿತೆ ಹೀಗಿದೆ
Bigg Boss Kannada 13: ಬಿಗ್ ಬಾಸ್ ಈ ಸೀಸನ್‌ನಲ್ಲಿ (Bigg boss Kannada 13) ಯಶಸ್ ಅವರು ಫ್ಲರ್ಟ್ ಮಾಡುವುದರಲ್ಲೇ ಹೆಚ್ಚು ಕಾಲ ಕಳೆಯುತ್ತಿದ್ದಾರೆ. ಆಸಿಯಾ (Asia), ಸೌಂದರ್ಯಾ ಶೆಟ್ಟಿ ಜೊತೆ ಯಶಸ್ ಹೆಚ್ಚು ಆಪ್ತವಾಗಿದ್ದಾರೆ. ಈ ಬಗ್ಗೆ ಕಿಚ್ಚ ಈಗ ತಮಾಷೆ ಕೂಡ ಮಾಡಿದ್ದಾರೆ. ಈ ಹೊಸ ಪ್ರೋಮೋ ಔಟ್ ಆಗಿದೆ.
ಬಿಗ್ ಬಾಸ್ ಕನ್ನಡ -
ಬಿಗ್ ಬಾಸ್ ಈ ಸೀಸನ್‌ನಲ್ಲಿ (Bigg boss Kannada 13) ಯಶಸ್ ಅವರು ಫ್ಲರ್ಟ್ ಮಾಡುವುದರಲ್ಲೇ ಹೆಚ್ಚು ಕಾಲ ಕಳೆಯುತ್ತಿದ್ದಾರೆ. ಆಸಿಯಾ (Asia), ಸೌಂದರ್ಯಾ ಶೆಟ್ಟಿ ಜೊತೆ ಯಶಸ್ ಹೆಚ್ಚು ಆಪ್ತವಾಗಿದ್ದಾರೆ. ಈ ಬಗ್ಗೆ ಕಿಚ್ಚ ಈಗ ತಮಾಷೆ ಕೂಡ ಮಾಡಿದ್ದಾರೆ. ಈ ಹೊಸ ಪ್ರೋಮೋ ಔಟ್ ಆಗಿದೆ.
ಯಶಸ್ ಅವರು ಆಸಿಯಾ ಹಾಗೂ ಸೌಂದರ್ಯ ಬಿಟ್ಟು ಮಹಿಳಾ ಸ್ಪರ್ಧಿಗಳನ್ನು ಅವರು ಅಕ್ಕ-ತಂಗಿ ಎಂದು ಕರೆದಿದ್ದಾರೆ. ಈ ವಿಷಯವನ್ನು ಇಟ್ಟುಕೊಂಡು ಭಾನುವಾರದ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ತಮಾಷೆ ಮಾಡಿದ್ದಾರೆ. ‘ಆಸಿ ಆ ಸೌಂದರ್ಯಾ ಅವರಿಗಿಂತ ನೀವೇ ವಾಸಿ. ಆದ್ರೆ ಏನ್ ಮಾಡೋದು ನೀವು ಯಶಸ್ ಅವರ ಮನದರಸಿ’ ಎಂದು ಮಂಜು ಅವರು ಕವಿತೆ ಹೇಳಿದ್ದಾರೆ. ಇದನ್ನು ಕೇಳಿದ ಕಿಚ್ಚ ಸುದೀಪ್ ಅವರು ಬಿದ್ದು ಬಿದ್ದು ನಕ್ಕಿದ್ದಾರೆ.
ಕನ್ನಡದ ಬಿಗ್ ಬಾಸ್ ಸೀಸನ್ 13ರಲ್ಲಿ ಈ ವಾರದ ನಾಮಿನೇಷನ್ ಪ್ರಕ್ರಿಯೆ ಪೂರ್ಣಗೊಂಡಿದೆ. ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗಲು ಕಿರಣ್ ಶಾಸ್ತ್ರಿ, ಧನುಷ್, ಲಿಖಿತ್, ಮಂಜ, ಯಶಸ್ ಹಾಗೂ ಸಂಗೀತಾ ಭಟ್ ಸೇರಿ ಒಟ್ಟು ಆರು ಮಂದಿ ನಾಮಿನೇಟ್ ಆಗಿದ್ದಾರೆ.
ಇದನ್ನೂ ಓದಿ: Bigg Boss Kannada 13: ಎಲ್ಲರೂ ಮನೆ ಬಿಟ್ಟು ಹೊರಡಿ, ವೀಕ್ಷಕರನ್ನು ನಾನು ರಂಜಿಸುವೆ ಎಂದ ಕಿಚ್ಚ
ಕಳೆದ ವಾರ ಬಿಗ್ ಬಾಸ್ ಮನೆಯಿಂದ ಅವಿನಾಶ್ ಹಾಗೂ ವೈಷ್ಣವಿ ಹೊರಬಂದಿದ್ದರು. ಈ ವಾರ ನಾಮಿನೇಟ್ ಆಗಿರುವ6 ಸ್ಪರ್ಧಿಗಳಲ್ಲಿ ಯಾರು ಹೊರ ಬರಲಿದ್ದಾರೆ ಎಂದು ಭಾನುವಾರದ ಸಂಚಿಕೆಯಲ್ಲಿ ತಿಳಿಯಲಿದೆ.