Viral Video: ನಟಿ ಫೋಟೋಗೆ ಲೈಕ್ ಕೊಟ್ಟ ವಿರಾಟ್ ಕೊಹ್ಲಿ ಮೇಲೆ ಅನುಷ್ಕಾ ಫುಲ್ ಗರಂ? ವಿಡಿಯೊದಲ್ಲಿ ಬಟಾಬಯಲಾಯ್ತು ಸ್ಟಾರ್ ಜೋಡಿಯ ಮುನಿಸು
ನಟಿ ಅವನೀತ್ ಕೌರ್ ಫೋಟೋ ಲೈಕ್ ಮಾಡಿ ವಿವಾದದಲ್ಲಿ ಸಿಕ್ಕಿಹಾಕಿಕೊಂಡ ಬಳಿಕ ಕ್ರಿಕೆಟಿಗ ವಿರಾಟ್ ಕೊಹ್ಲಿ ಮೊದಲ ಬಾರಿಗೆ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಜೊತೆಯಾಗಿ ಬೆಂಗಳೂರಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ವಿರುಷ್ಕಾ ಜೋಡಿ ಪರಸ್ಪರ ಕೈಹಿಡಿಯಲಿಲ್ಲ. ಇದು ಪಾಪರಾಜಿಗಳ ಕಣ್ಣಿಗೆ ಬಿದ್ದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದಕ್ಕೆ ಕಾಮೆಂಟ್ ಮಾಡಿರುವ ಅನೇಕ ನೆಟ್ಟಿಗರು ಕೌರ್ ಜೊತೆಗಿನ ವಿವಾದದ ಬಳಿಕ ವಿರಾಟ್ ಮೇಲೆ ಅನುಷ್ಕಾ ಕೋಪಗೊಂಡಿದ್ದಾರೆ ಎಂದು ಹೇಳಿದ್ದಾರೆ.


ಬೆಂಗಳೂರು: ನಟಿ ಅವನೀತ್ ಕೌರ್ ಜೊತೆಗಿನ ವಿವಾದದ ಬಳಿಕ ಮೊದಲ ಬಾರಿಗೆ ಕ್ರಿಕೆಟಿಗ ವಿರಾಟ್ ಕೊಹ್ಲಿ(Viral Kohli) ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ(Anushaka Sharma) ದಂಪತಿ ಜೊತೆಯಾಗಿ ಬೆಂಗಳೂರಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ವಿರುಷ್ಕಾ ಜೋಡಿ ಪರಸ್ಪರ ಕೈಹಿಡಿಯಲಿಲ್ಲ. ಇದು ಪಾಪರಾಜಿಗಳ ಕಣ್ಣಿಗೆ ಬಿದ್ದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral Video) ಆಗಿದೆ. ಇದಕ್ಕೆ ಕಾಮೆಂಟ್ ಮಾಡಿರುವ ಅನೇಕ ನೆಟ್ಟಿಗರು ಕೌರ್ ಜೊತೆಗಿನ ವಿವಾದದ ಬಳಿಕ ವಿರಾಟ್ ಮೇಲೆ ಅನುಷ್ಕಾ ಕೋಪಗೊಂಡಿದ್ದಾರೆ ಎಂದು ಹೇಳಿದ್ದಾರೆ.
ನಟಿ ಅವನೀತ್ ಕೌರ್ ಅವರ ಇನ್‌ಸ್ಟಾಗ್ರಾಂ ಪೋಸ್ಟ್‌ಗೆ ವಿರಾಟ್ ಕೊಹ್ಲಿ ನೀಡಿದ ಆಕಸ್ಮಿಕ ಲೈಕ್ ನಿಂದಾಗಿ ಕೇವಲ 48 ಗಂಟೆಗಳಲ್ಲಿ ಅವನೀತ್ ಕೌರ್ ಅವರ ಫಾಲೋವರ್ಸ್ ಸಂಖ್ಯೆ ಸುಮಾರು 2 ಮಿಲಿಯನ್ ಹೆಚ್ಚಳವಾಗಿತ್ತು. ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಬಳಿಕ ವಿರಾಟ್ ಸ್ವತಃ ಇದಕ್ಕೆ ಪ್ರತಿಕ್ರಿಯೆ ನೀಡಿ ಇದು ಆಕಸ್ಮಿಕ. ತಾಂತ್ರಿಕ ದೋಷದಿಂದ ಆಗಿದೆ ಎಂದು ಸ್ಪಷ್ಟನೆ ನೀಡಿದ್ದರು. ಆದರೂ ಕೊಹ್ಲಿಯ ಈ ನಡೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಯನ್ನು ಉಂಟು ಮಾಡಿತ್ತು. ಈ ಘಟನೆ ಬಳಿಕ ಬೆಂಗಳೂರಿನಲ್ಲಿ ಮೊದಲ ಬಾರಿಗೆ ವಿರುಷ್ಕಾ ದಂಪತಿ ಕಾಣಿಸಿಕೊಂಡಿದ್ದು, ಇದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಬೆಂಗಳೂರಿನಲ್ಲಿ ಮಂಗಳವಾರ ರಾತ್ರಿ ವಿಹಾರಕ್ಕೆ ಬಂದಿದ್ದ ವಿರಾಟ್ ಮತ್ತು ಅನುಷ್ಕಾ ಕ್ಯಾಶುಯಲ್ ಉಡುಪು ಧರಿಸಿದ್ದರು. ಇದರ ವಿಡಿಯೋವೊಂದನ್ನು ಅಭಿಮಾನಿಯೊಬ್ಬರು ರೆಡ್ಡಿಟ್‌ನಲ್ಲಿ ಪೋಸ್ಟ್ ಮಾಡಿ, ವಿರಾಟ್ ಮತ್ತು ಅನುಷ್ಕಾ ನಿನ್ನೆ ಬೆಂಗಳೂರಿನಲ್ಲಿ ಕಾಣಿಸಿಕೊಂಡರು ಎಂದು ಹೇಳಿಕೊಂಡಿದ್ದಾರೆ. ಇದು ಸಾಕಷ್ಟು ವೈರಲ್ ಆಗಿದ್ದು, ಈ ವಿಡಿಯೋದಲ್ಲಿ ವಿರಾಟ್ ಕೊಹ್ಲಿ ವಾಹನದಿಂದ ಇಳಿದು ಬರುವಾಗ ಅನುಷ್ಕಾ ಶರ್ಮಾಗೆ ಇಳಿಯಲು ಸಹಾಯವಾಗುವಂತೆ ಕೈ ನೀಡುತ್ತಾರೆ. ಆದರೆ ಅನುಷ್ಕಾ ಕಾರಿನ ಡೋರ್ ಬೆಂಬಲ ಪಡೆದು ಕೆಳಗೆ ಇಳಿಯುತ್ತಾರೆ. ಬಳಿಕ ಅವರಿಬ್ಬರೂ ಹತ್ತಿರದ ರೆಸ್ಟೋರೆಂಟ್‌ಗೆ ತೆರಳಿದರು. ವಿರಾಟ್ ರನ್ನು ನಿರ್ಲಕ್ಷಿಸಿ ಅನುಷ್ಕಾ ಮುಂದೆ ನಡೆಯುತ್ತಿರುವುದು ಸೆರೆಯಾಗಿದೆ. ಈ ವಿಡಿಯೋದಲ್ಲಿ ವಿರಾಟ್ ಟೀ ಶರ್ಟ್ ಮತ್ತು ಪ್ಯಾಂಟ್ ಧರಿಸಿದ್ದರೆ ಅನುಷ್ಕಾ ಸೊಗಸಾದ ಜಂಪ್‌ಸೂಟ್‌ನಲ್ಲಿ ಕಂಗೊಳಿಸುತ್ತಿದ್ದರು.
ಇದನ್ನೂ ಓದಿ: Operation Sindoor: ಜಮ್ಮು ಮತ್ತು ಕಾಶ್ಮೀರದ ಉರಿಯಲ್ಲಿ ಪಾಕ್ ದಾಳಿಗೆ ಮಾಜಿ ಸೇನಾ ಕಮಾಂಡೋ ಮನೆಗೆ ಹಾನಿ
ಈ ವೈರಲ್ ವಿಡಿಯೋಗೆ ಸಾಕಷ್ಟು ಮಂದಿ ಪ್ರತಿಕ್ರಿಯೆ ನೀಡಿದ್ದು, ಒಬ್ಬರು ಅನುಷ್ಕಾ ಕೈ ಹಿಡಿಯಲಿಲ್ಲ ಎಂದು ಬರೆದಿದ್ದಾರೆ. ಮತ್ತೊಬ್ಬರು, ನಾನು ಕೂಡ ನನ್ನ ಹೆಂಡತಿ ಕೈ ಹಿಡಿದು ಕೆಳಗೆ ಇಳಿಯುತ್ತಿರಲಿಲ್ಲ. ವಿಶಿಷ್ಟ ಗಂಡ- ಹೆಂಡತಿ ಎಂದು ಉಲ್ಲೇಖಿಸಿದ್ದಾರೆ. ಮತ್ತೊಬ್ಬರು, ಅವನೀತ್ ಕೌರ್ ಪೋಸ್ಟ್ ಗೆ ಲೈಕ್ ಕೊಟ್ಟ ಬಳಿಕ ಅನುಷ್ಕಾ ವಿರಾಟ್ ಮೇಲೆ ಸಿಟ್ಟಾಗಿದ್ದಾರೆ ಎಂದು ಹೇಳಿದ್ದಾರೆ. ಆದರೆ ಕೆಲವರು ಇದೊಂದು ದೊಡ್ಡ ವಿಷಯವಲ್ಲ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಈ ವೈರಲ್ ವಿಡಿಯೋ ಸಾಕಷ್ಟು ಕಾಮೆಂಟ್ ಗಳನ್ನೂ ಒಳಗೊಂಡಿದೆ. ಒಬ್ಬರು ಪಾಪ ಬಡ ವಿರಾಟ್ ಎಂದು ಉಲ್ಲೇಖಿಸಿದ್ದಾರೆ.
ಆಗಾಗ್ಗೆ ಸುದ್ದಿಯಲ್ಲಿರುವ ವಿರಾಟ್ ಕೊಹ್ಲಿ ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಅವನೀತ್ ಕೌರ್ ಅವರ ಪೋಸ್ಟ್ ಅನ್ನು ಇಷ್ಟಪಟ್ಟು ಸುದ್ದಿಯಾಗಿದ್ದರು. ಈ ಫೋಟೋದಲ್ಲಿ ಅವನೀತ್ ಕೌರ್ ಹಸಿರು ಟಾಪ್ ಮತ್ತು ಶಾರ್ಟ್ ಸ್ಕರ್ಟ್‌ನಲ್ಲಿ ಸುಂದರವಾಗಿ ಕಾಣುತ್ತಿದ್ದರು. ವಿರಾಟ್ ಈ ಫೋಟೋ ಲೈಕ್ ಮಾಡಿದ ಬಳಿಕ ಅವರ ಅಭಿಮಾನಿಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಯಿತು.