ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Operation Sindoor: ಜಮ್ಮು ಮತ್ತು ಕಾಶ್ಮೀರದ ಉರಿಯಲ್ಲಿ ಪಾಕ್ ದಾಳಿಗೆ ಮಾಜಿ ಸೇನಾ ಕಮಾಂಡೋ ಮನೆಗೆ ಹಾನಿ

Operation Sindoor: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಉರಿಯಲ್ಲಿ ಮಾಜಿ ಸೇನಾ ಕಮಾಂಡೋ ಹವಿಲ್ದಾರ್ ಮೊಹ್ದ್ ಖಾನ್ ಅವರ ಮನೆಗೆ ಬುಧವಾರ ಮುಂಜಾನೆ ಪಾಕಿಸ್ತಾನದ ಗಡಿರೇಖೆಯಾಚೆಗೆ ಫಿರಂಗಿ ಗುಂಡುಗಳಿಂದ ದಾಳಿ ನಡೆದಿದ್ದು, ಮನೆಗೆ ಹಾನಿಯಾಗಿದೆ. ಪಾಕ್ ಸೇನೆಯ ಗುಂಡಿನ ದಾಳಿಯಲ್ಲಿ ಮೂವರು ನಾಗರಿಕರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಹವಿಲ್ದಾರ್ ಖಾನ್ ತಮ್ಮ ವೃತ್ತಿಜೀವನದಲ್ಲಿ 6 ಪ್ಯಾರಾ ಸ್ಪೆಷಲ್ ಫೋರ್ಸ್ ಘಟಕದಲ್ಲಿ ಸೇವೆ ಸಲ್ಲಿಸಿದ್ದರು.

ಪಾಕ್‌ ನಡೆಸಿದ ಸೆಲ್ ದಾಳಿಗೆ ಮಾಜಿ ಸೇನಾ ಕಮಾಂಡೋ ಮನೆಗೆ ಹಾನಿ

ಮಾಜಿ ಸೇನಾ ಕಮಾಂಡೋ ಹವಿಲ್ದಾರ್ ಮೊಹ್ದ್ ಖಾನ್

Profile Sushmitha Jain May 8, 2025 1:39 PM

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಬಾರಾಮುಲ್ಲಾ (Baramulla) ಜಿಲ್ಲೆಯ ಉರಿಯಲ್ಲಿ ಮಾಜಿ ಸೇನಾ ಕಮಾಂಡೋ (Former Army commando) ಹವಿಲ್ದಾರ್ ಮೊಹ್ದ್ ಖಾನ್ (Havildar Mohd Khan) ಅವರ ಮನೆಗೆ ಬುಧವಾರ ಮುಂಜಾನೆ ಪಾಕಿಸ್ತಾನದ ಗಡಿರೇಖೆಯಾಚೆಗೆ ಫಿರಂಗಿ ಗುಂಡುಗಳಿಂದ ದಾಳಿ ನಡೆದಿದ್ದು, ಮನೆಗೆ ಹಾನಿಯಾಗಿದೆ. ಪಾಕ್ ಸೇನೆಯ ಗುಂಡಿನ ದಾಳಿಯಲ್ಲಿ ಮೂವರು ನಾಗರಿಕರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಹವಿಲ್ದಾರ್ ಖಾನ್ ತಮ್ಮ ವೃತ್ತಿಜೀವನದಲ್ಲಿ 6 ಪ್ಯಾರಾ ಸ್ಪೆಷಲ್ ಫೋರ್ಸ್ ಘಟಕದಲ್ಲಿ ಸೇವೆ ಸಲ್ಲಿಸಿದ್ದರು.

"ಮೊದಲಿಗೆ ಸ್ವಲ್ಪ ಗುಂಡಿನ ಶಬ್ದ ಕೇಳಿತು, ಮಧ್ಯರಾತ್ರಿ 1 ಗಂಟೆಯಿಂದ ಆರಂಭವಾಯಿತು. ಆರಂಭದಲ್ಲಿ ಅದು ದೂರದಿಂದ ಕೇಳುತ್ತಿತ್ತು ಆದರೆ, ಬೆಳಗ್ಗೆ 2:30ರ ವೇಳೆಗೆ ಶಬ್ದ ಜೋರಾಗಿ, ಫಿರಂಗಿ ದಾಳಿ ಆರಂಭವಾಯಿತು," ಎಂದು ಹವಿಲ್ದಾರ್ ಖಾನ್ ತಿಳಿಸಿದ್ದಾರೆ. "ನನ್ನ ಮನೆಗೆ ಹಾನಿಯಾದಾಗ, ನಾನು ನನ್ನ ಮಕ್ಕಳು ಮತ್ತು ಪತ್ನಿಯನ್ನು ಕರೆದುಕೊಂಡು ಹೊರಗೆ ಓಡಿದೆ. ಗುಂಡಿನ ದಾಳಿ ಇನ್ನೂ ನಡೆಯುತ್ತಿತ್ತು, ಆದ್ದರಿಂದ ಅವರಿಗೆ ನೆಲದ ಮೇಲೆ ಮಲಗಿಕೊಳ್ಳಲು ಹೇಳಿದೆ. ನಾನೂ ಮಲಗಿದೆ. ಆಗ ಇಡೀ ಮನೆ ಕಂಪಿಸತೊಡಗಿತು," ಎಂದು ಅವರು ಹಾನಿಗೊಳಗಾದ ಮನೆಯ ಭಾಗಗಳನ್ನು ತೋರಿಸುತ್ತಾ ಹೇಳಿದ್ದಾರೆ.

ಈ ದಾಳಿಯು, ಭಾರತೀಯ ಸೇನೆಯು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) 9 ಭಯೋತ್ಪಾದಕ ಶಿಬಿರಗಳ ಮೇಲೆ ನಡೆಸಿದ ದಾಳಿಗೆ ಪಾಕ್ ಸೇನೆಯ ತಕ್ಷಣದ ಪ್ರತಿಕ್ರಿಯೆಯಾಗಿತ್ತು. 'ಆಪರೇಷನ್ ಸಿಂಧೂರ್’ ಎಂಬ ಈ ದಾಳಿಯು, ಕಳೆದ ತಿಂಗಳು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆಸಿದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿತ್ತು. ಆ ದಾಳಿಯಲ್ಲಿ 26 ಜನರು ಮೃತಪಟ್ಟಿದ್ದರು.

ಈ ಸುದ್ದಿಯನ್ನು ಓದಿ:Operation Sindoor: ಭಾರತ - ಪಾಕಿಸ್ತಾನ ಗಡಿ ರಾಜ್ಯಗಳಲ್ಲಿ ಕಟ್ಟೆಚ್ಚರ; ಪೊಲೀಸರ ರಜೆ ರದ್ದು, ಶಾಲಾ ಕಾಲೇಜಿಗೆ ರಜೆ

ಮೂಲಗಳ ಪ್ರಕಾರ ಈ ಕಾರ್ಯಾಚರಣೆಯಲ್ಲಿ 70 ಭಯೋತ್ಪಾದಕರು ಕೊಲ್ಲಲ್ಪಟ್ಟು, 60 ಮಂದಿ ಗಾಯಗೊಂಡಿದ್ದಾರೆ. ಈ ದಾಳಿಯಲ್ಲಿ ಲಷ್ಕರ್, ಜೈಷ್-ಎ-ಮೊಹಮ್ಮದ್, ಮತ್ತು ಹಿಜ್ಬುಲ್ ಮುಜಾಹಿದ್ದೀನ್‌ಗೆ ಸಂಬಂಧಿಸಿದ ಶಿಬಿರಗಳು ನಾಶವಾಗಿದ್ದಾವೆ. ಪಾಕಿಸ್ತಾನವು ಕೆಲವು ನಾಗರಿಕರ ಸಾವನ್ನು ದೃಢಪಡಿಸಿದೆ. ಭಾರತವು ನಾಗರಿಕರ ಸಾವಿಗೆ ವಿಷಾದ ವ್ಯಕ್ತಪಡಿಸಿದರೂ, ವಿಶ್ವಾಸಾರ್ಹ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಗುರಿಗಳನ್ನು ಆಯ್ಕೆ ಮಾಡಲಾಗಿದ್ದು, ನಾಗರಿಕರ ಸಂಚಾರ ಕಡಿಮೆ ಇರುವ ವೇಳೆ ದಾಳಿ ನಡೆಸಲಾಗಿದೆ ಎಂದು ಸ್ಪಷ್ಟಪಡಿಸಿದೆ.

ಭಾರತದ ಸೇನಾ ದಾಳಿಯು ಮಧ್ಯರಾತ್ರಿ 1:15ಕ್ಕೆ ಆರಂಭವಾಗಿ 25 ನಿಮಿಷಗಳ ಕಾಲ ನಡೆಯಿತು. ಈ ವೇಳೆ SCALP ಕ್ಷಿಪಣಿ ಮತ್ತು HAMMER ಬಾಂಬ್‌ನಂತಹ ನಿಖರ ಶಸ್ತ್ರಾಸ್ತ್ರಗಳನ್ನು ಬಳಸಲಾಗಿತ್ತು. ಈ ದಾಳಿ ನಡೆದ ಕೆಲ ಗಂಟೆಗಳ ನಂತರವೇ ಪಾಕಿಸ್ತಾನ ಗಡಿಯಾಚೆಗೆ ಗುಂಡಿನ ದಾಳಿ ನಡೆಸಲು ಮುಂದಾಯಿತು.