Vivek Agnihotri: ದಿ ಬೆಂಗಾಲ್ ಫೈಲ್ಸ್ ವಿವಾದ- ಮಮತಾ ಬ್ಯಾನರ್ಜಿಗೆ ನಿರ್ದೇಶಕ ವಿವೇಕ್ ಅಗ್ನಿ ಹೋತ್ರಿ ವಿಶೇಷ ಮನವಿ
Vivek Agnihotri: ಬೆಂಗಾಲ್ ಫೈಲ್ಸ್ ಹೆಸರಿನಲ್ಲಿ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ಸಿನಿಮಾ ಮಾಡಿದ್ದು ಈಗಾಗಲೇ ಈ ಸಿನಿಮಾದ ಟ್ರೇಲರ್ ಕೂಡ ಬಿಡುಗಡೆಯಾಗಿದೆ. ಇದೀಗ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿಯವರಿಗೆ ಚಲನಚಿತ್ರ ನಿರ್ಮಾಪಕ ವಿವೇಕ್ ರಂಜನ್ ಅಗ್ನಿಹೋತ್ರಿ ಅವರು ವಿಶೇಷ ಮನವಿಯನ್ನು ಮಾಡಿದ್ದಾರೆ. ಈ ಮೂಲಕ ರಾಜಕೀಯ ಹಸ್ತಕ್ಷೇಪವಿಲ್ಲದೆ ಸಿನಿಮಾ ತೆರೆ ಮೇಲೆ ತಂದು ಪ್ರೇಕ್ಷಕರಿಗೆ ಈ ಸಿನಿಮಾ ತಲುಪುವಂತೆ ಮಾಡಲು ಅವಕಾಶ ನೀಡಬೇಕು ಎಂದು ಅವರು ವಿನಂತಿಸಿದ್ದಾರೆ.

-

ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ನಡೆದ ಹತ್ಯಾಕಾಂಡವನ್ನು ತೆರೆ ಮೇಲೆ ತರುವ ಸಲುವಾಗಿ ಬಾಲಿವುಡ್ ನ ಖ್ಯಾತ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ಅವರು ಮುಂದಾ ಗಿದ್ದಾರೆ. ದಿ ಬೆಂಗಾಲ್ ಫೈಲ್ಸ್ ಹೆಸರಿನಲ್ಲಿ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ಸಿನಿಮಾ ಮಾಡಿದ್ದು ಈಗಾಗಲೇ ಈ ಸಿನಿಮಾದ ಟ್ರೇಲರ್ ಕೂಡ ಬಿಡುಗಡೆಯಾಗಿದೆ. ಸತ್ಯ ಘಟನೆಗಳನ್ನು ಆಧರಿಸಿ ಸಿನಿಮಾ ಮಾಡಲಾಗಿದ್ದು ಪ್ರೇಕ್ಷಕರಿಗೆ ಕುತೂಹಲ ಕೆರಳಿಸುವಂತಿದೆ. ಹಿಂದುಗಳ ಮೇಲೆ ನಡೆದ ದೌರ್ಜನ್ಯವನ್ನು ತೆರೆ ಮೇಲೆ ತಂದು ಪ್ರೇಕ್ಷಕರ ಮುಂದೆ ನೈಜ ಘಟನೆ ಅನಾವರಣ ಮಾಡಬೇಕು ಎಂಬುದು ಸಿನಿಮಾ ತಂಡದ ಆಶಯವಾಗಿದ್ದು, ಈ ಸಿನಿಮಾ ಮೇಲೆ ಯಾವುದೆ ನಿಷೇಧ ಹೇರದಂತೆ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿಯವರಿಗೆ ಚಲನಚಿತ್ರ ನಿರ್ಮಾಪಕ ವಿವೇಕ್ ರಂಜನ್ ಅಗ್ನಿಹೋತ್ರಿ ಅವರು ವಿಶೇಷ ಮನವಿಯನ್ನು ಮಾಡಿದ್ದಾರೆ. ಈ ಮೂಲಕ ರಾಜಕೀಯ ಹಸ್ತಕ್ಷೇಪವಿಲ್ಲದೆ ಸಿನಿಮಾ ತೆರೆ ಮೇಲೆ ತಂದು ಪ್ರೇಕ್ಷಕರಿಗೆ ಈ ಸಿನಿಮಾ ತಲುಪುವಂತೆ ಮಾಡಲು ಅವಕಾಶ ನೀಡಬೇಕು ಎಂದು ಅವರು ವಿನಂತಿಸಿದ್ದಾರೆ.
URGENT: An open appeal to Hon’ble CM @MamataOfficial. Please listen till the end and share widely as your protest against banning of a film on Hindu Genocide. #TheBengalFiles
— Vivek Ranjan Agnihotri (@vivekagnihotri) September 2, 2025
In cinemas 05 September 2025 pic.twitter.com/AvDuVlixmx
ದಿ ಕಾಶ್ಮಿರ್ ಫೈಲ್ಸ್ ಸಿನಿಮಾ ಮೂಲಕ ಖ್ಯಾತಿ ಪಡೆದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ತಮ್ಮ ಹೊಸ ಸಿನಿಮಾ ದಿ ಬೆಂಗಾಲ್ ಫೈಲ್ಸ್ ಬಗ್ಗೆ ಮಾತನಾಡಿದ್ದು, ಈ ವಿಚಾರ ಸೋಶಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ. ಈ ಸಿನಿಮಾವು ಐತಿಹಾಸಿಕ ಕಥೆ ಹೇಳುವ ಕೃತಿಯಾಗಿದ್ದು, ಇಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವು ಪ್ರಜಾಪ್ರಭುತ್ವದ ಮೂಲಾಧಾರವಾಗಿದೆ. ಇಂತಹ ಅಭಿವ್ಯಕ್ತಿ ಸ್ವಾತಂತ್ರ್ಯ ವನ್ನು ಪ್ರೇಕ್ಷಕರಿಗೆ ನೀಡಿ ಸ್ವತಃ ನಿರ್ಧರಿಸುವ ಹಕ್ಕನ್ನು ನೀಡಬೇಕು ಎಂದು ಅವರು ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಮನವಿ ಮಾಡಿದ್ದಾರೆ.
ಇದನ್ನು ಓದಿ:Mangalapuram Movie: ರಿಷಿ ಅಭಿನಯದ 'ಮಂಗಳಾಪುರಂ' ಚಿತ್ರಕ್ಕೆ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಮುಹೂರ್ತ
ಈ ಸಿನಿಮಾದಲ್ಲಿ ಪಶ್ಚಿಮ ಬಂಗಾಳದ ಅನೇಕ ನೈಜ ಸಂಗತಿ ಗಳಿದ್ದು ಅದನ್ನು ಮುಖ್ಯ ಮಂತ್ರಿ ಯವರು ಓರ್ವ ಬಂಗಾಳಿಯಾಗಿ ಮಾತ್ರ ನೋಡದೆ ಭಾರತೀಯ ಪ್ರಜೆಯಾಗಿ ಈ ಸಿನಿಮಾ ನೋಡ ಬೇಕಾಗಿ ವಿನಂತಿಸುತ್ತೇನೆ. ಈ ಸಿನಿಮಾ ಮೇಲೆ ರಾಜಕೀಯ ಅಥವಾ ಇತರ ಪ್ರೇರಿತ ವಿರೋಧ ಗಳಿದ್ದರೆ ಅವುಗಳಿಂದ ರಕ್ಷಿಸಿ ಯಾವುದೇ ನಿಷೇಧ ಹೇರದಂತೆ ಮನವಿ ಮಾಡುವೆ ಎಂದು ವಿಡಿಯೋ ದಲ್ಲಿ ನಿರ್ದೇಶಕ, ನಿರ್ಮಾಪಕ ವಿವೇಕ್ ಅಗ್ನಿಹೋತ್ರಿ ಅವರು ಮನವಿ ಮಾಡಿದ್ದು ಈ ವಿಡಿಯೋ ಕೂಡ ವೈರಲ್ ಆಗಿದೆ.
ದಿ ಬೆಂಗಾಲ್ ಫೈಲ್ಸ್ ನಲ್ಲಿ ಪಶ್ಚಿಮ ಬಂಗಾಳದ ವಿಚಾರವನ್ನು ನೆಗೆಟಿವ್ ಆಗಿ ಹೈಲೈಟ್ ಮಾಡಿ ದ್ದಾರೆ. ಹೀಗಾಗಿ ಈ ಸಿನಿಮಾ ತೆರೆಮೇಲೆ ಬರದಂತೆ ತಡೆಹಿಡಿಯಬೇಕೆಂದು ಅನೇಕರು ಸಿನಿಮಾದ ವಿರುದ್ಧ ಪ್ರತಿಭಟನೆ ಮಾಡಿದ್ದರು. ಆದರೆ ಈ ಬಗ್ಗೆ ಪಶ್ಚಿಮ ಬಂಗಾಳದ ಸರಕಾರ ಮಾತ್ರ ಯಾವುದೆ ಪ್ರತಿಕ್ರಿಯೆ ನೀಡಿಲ್ಲ ಎನ್ನಬಹುದು.
ಈ ಸಿನಿಮಾಗೆ ಸೆನ್ಸಾರ್ ಮಂಡಳಿಯಿಂದ ‘ಎ’ ಪ್ರಮಾಣಪತ್ರ ಸಿಕ್ಕಿದ್ದು ಈ ಸಿನಿಮಾದಲ್ಲಿ ಅನುಪಮ್ ಖೇರ್, ಪಲ್ಲವಿ ಜೋಶಿ, ಮಿಥುನ್ ಚಕ್ರವರ್ತಿ, ದರ್ಶನ್ ಕುಮಾರ್, ಸಿಮ್ರತ್ ಕೌರ್ ಮುಂತಾದವರು ‘ದಿ ಬೆಂಗಾಲ್ ಫೈಲ್ಸ್’ ಸಿನಿಮಾದಲ್ಲಿ ನಟಿಸಿದ್ದಾರೆ. ಅಲ್ಲದೇ, ಚಿತ್ರದಲ್ಲಿನ ಹಲವು ದೃಶ್ಯಗಳಲ್ಲಿ ಒಂದಷ್ಟು ಬದಲಾವಣೆ ಮಾಡುವಂತೆ ಸೆನ್ಸಾರ್ ಮಂಡಳಿ ಸೂಚಿಸಿದೆ. ಈ ಮೂಲಕ ಸೆಪ್ಟೆಂಬರ್ 5ರಂದು ಈ ಸಿನಿಮಾ ಬಿಡುಗಡೆ ಆಗಲಿದ್ದು ಸಿನಿಮಾ ಮೇಲೆ ನಿರೀಕ್ಷೆ ಕೂಡ ಹೆಚ್ಚಾಗಿದೆ.