ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Karna Serial: ಕರ್ಣನಿಗೆ ಸಿಕ್ಕೇ ಬಿಟ್ಟಳು ನಾಯಕಿ?: ಯಾರು ನೋಡಿ

ಪ್ರೊಮೋ ಬಿಡುಗಡೆ ಆದಾಗಿನಿಂದ ಈ ಧಾರಾವಾಹಿಗೆ ನಾಯಕಿ ಯಾರು?, ಕಿರಣ್ ರಾಜ್ಗೆ ಜೋಡಿ ಯಾರು? ಎಂಬ ಕುರಿತು ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಈ ಲಿಸ್ಟ್ನಲ್ಲಿ ಬಿಗ್ ಬಾಸ್ ಖ್ಯಾತಿಯ ಭವ್ಯಾ ಗೌಡ ಹಾಗೂ ಮೋಕ್ಷಿತಾ ಪೈ ಹೆಸರು ಕೇಳಿಬಂದಿತ್ತು.

ಕರ್ಣನಿಗೆ ಸಿಕ್ಕೇ ಬಿಟ್ಟಳು ನಾಯಕಿ?: ಯಾರು ನೋಡಿ

Karna Serial

Profile Vinay Bhat Apr 2, 2025 7:42 AM

ಝೀ ಕನ್ನಡ ವಾಹಿನಿಯು ಕರ್ಣ ಎಂಬ ಹೊಸ ಧಾರಾವಾಹಿಯೊಂದನ್ನು (Karna Serial) ಶೀಘ್ರದಲ್ಲೇ ಪ್ರಸಾರ ಮಾಡಲಿದೆ. ಈಗಾಗಲೇ ಹೊಸ ಧಾರಾವಾಹಿಯ ಪ್ರೋಮೋ ಬಿಡುಗಡೆಯಾಗಿದ್ದು, ದಾಖಲೆಯ ವೀಕ್ಷಣೆ ಕಂಡಿದೆ. ಕನ್ನಡ ಕಿರುತೆರೆಯಲ್ಲಿ ಹೊಸ ಅಲೆ ಸೃಷ್ಟಿ ಮಾಡಿರುವಂತಹ ಕನ್ನಡತಿ ಧಾರಾವಾಹಿಯ ನಾಯಕ ಕಿರಣ್ ರಾಜ್ ಈ ಧಾರಾವಾಹಿಯ ನಾಯಕನಾಗಿದ್ದಾರೆ. ಈ ಮೂಲಕ ಕಿರಣ್ ರಾಜ್ ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಝೀ ಕನ್ನಡ ಇನ್​ಸ್ಟಾಗ್ರಾಮ್​ನಲ್ಲಿ ಈ ಧಾರಾವಾಹಿಯ ಪ್ರೊಮೋಗೆ 10 ಮಿಲಿಯನ್​ಗೂ ಅಧಿಕ ವೀವ್ಸ್ ಆಗಿದೆ. ಹೀಗೆ ಸಾಕಷ್ಟು ಕುತೂಹಲ ಕೆರಳಿಸಿರುವ ಈ ಧಾರಾವಾಹಿಗೆ ನಾಯಕಿ ಯಾರು ಎಂಬ ವಿಚಾರವನ್ನು ತಂಡ ಬಿಟ್ಟುಕೊಟ್ಟಿಲ್ಲ.

ಪ್ರೊಮೋ ಬಿಡುಗಡೆ ಆದಾಗಿನಿಂದ ಈ ಧಾರಾವಾಹಿಗೆ ನಾಯಕಿ ಯಾರು?, ಕಿರಣ್ ರಾಜ್​ಗೆ ಜೋಡಿ ಯಾರು? ಎಂಬ ಕುರಿತು ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಈ ಲಿಸ್ಟ್​ನಲ್ಲಿ ಬಿಗ್ ಬಾಸ್ ಖ್ಯಾತಿಯ ಭವ್ಯಾ ಗೌಡ ಹಾಗೂ ಮೋಕ್ಷಿತಾ ಪೈ ಹೆಸರು ಕೇಳಿಬಂದಿತ್ತು. ಅಲ್ಲದೆ ಕನ್ನಡತಿ ಧಾರಾವಾಹಿಯಲ್ಲಿ ಕಿರಣ್ ರಾಜ್​ಗೆ ಜೋಡಿಯಾಗಿದ್ದ ರಂಜನಿ ರಾಘವನ್ ಹೆಸರು ಮುನ್ನಲೆಗೆ ಬಂದಿತ್ತು. ಆದರೆ, ಈ ಧಾರಾವಾಹಿಗೆ ಇವರು ಯಾರೂ ನಾಯಕಿ ಅಲ್ವಂತೆ.

ಇದೀಗ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ಲಕ್ಷ್ಮೀ ಬಾರಮ್ಮ ಧಾರಾವಾಹಿಯ ನಾಯಕಿ ಲಕ್ಷ್ಮೀ ಅಂದರೆ ಭೂಮಿಕಾ ರಮೇಶ್ ಈ ಧಾರಾವಾಹಿಗೆ ನಾಯಕಿಯಾಗಿ ಆಯ್ಕೆ ಆಗಲಿದ್ದಾರಂತೆ. ನಟಿ ಭೂಮಿಕಾ, ಲಕ್ಷ್ಮೀ ಪಾತ್ರದ ಮೂಲಕ ಅದ್ಭುತವಾಗಿ ನಟಿಸಿದ್ದರು, ಅವರೇ ಕರ್ಣನಿಗೆ ನಾಯಕಿಯಾಗಲಿದ್ದಾರೆ ಎನ್ನುವ ಸುದ್ದಿ ಕೇಳಿ ಬಂದಿದೆ. ಭೂಮಿಕಾ ರಮೇಶ್ ಈಗಾಗಲೇ ಝೀ ತೆಲುಗಿನ ಸೂಪರ್ ಹಿಟ್ ಸೀರಿಯಲ್ ಮೇಘ ಸಂದೇಶಂನಲ್ಲಿ ಕೂಡ ನಾಯಕಿಯಾಗಿ ನಟಿಸುತ್ತಿದ್ದಾರೆ.

ಇನ್ನು ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಶೂಟಿಂಗ್ ಈಗಾಗಲೇ ಮುಗಿದಿದ್ದು, ಈ ವಾರಾಂತ್ಯದಲ್ಲಿ ಅಂತಿಮ ಸಂಚಿಕೆ ಪ್ರಸಾರವಾಗಲಿದೆ. ಈ ಸೀರಿಯಲ್ ಮುಗಿದ ಬಳಿಕ ಲಕ್ಷ್ಮೀ ಅಂದ್ರೆ ಭೂಮಿಕಾ ಕರ್ಣ ಸೀರಿಯಲ್ ನಲ್ಲಿ ನಟಿಸಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಆದರೆ, ಮತ್ತೊಂದೆಡೆ ಶ್ರುತಿ ನಾಯ್ಡು ಅವರ ನಿರ್ಮಾಣ ಸಂಸ್ಥೆಯಲ್ಲಿ ಮೂಡಿ ಬರ್ತಿರುವ ಕರ್ಣ ಧಾರಾವಾಹಿಗೆ ನಾಯಕಿಯಾಗಿ ಹೊಸ ಮುಖವನ್ನು​ ಹುಡುಕುತ್ತಿದೆ ಎನ್ನಲಾಗಿದೆ.

Vinay Gowda: ಇನ್ಮುಂದೆ ರಜತ್ ಜೊತೆ ರೀಲ್ಸ್ ಮಾಡಲ್ಲ: ವಿನಯ್ ಗೌಡ ಖಡಕ್ ನಿರ್ಧಾರ

ನಾಯಕಿ ಇನ್ನು ಫೈನಲ್​ ಆಗಿಲ್ಲ. ನಾಯಕಿ ಪಾತ್ರಕ್ಕೆ ಹೊಸ ಮುಖ ಬೇಕು ಎಂದು ಆಡಿಷನ್ ಮೇಲೆ ಆಡಿಷನ್ ಅನ್ನು ನಡೆಸುತ್ತಿದ್ದಾರಂತೆ. ನಾಯಕಿಯೇ ಸಿಗದೇ ಕರ್ಣ ಧಾರಾವಾಹಿಯ ಪ್ರೊಮೋ ಪ್ರಸಾರವಾಗಿದ್ದು, ಇನ್ನೂ ಸೀರಿಯಲ್ ಶೂಟಿಂಗ್ ಕೂಡ ಶುರುವಾಗಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ, ನಿಜಕ್ಕೂ ನಾಯಕಿ ಇನ್ನೂ ಸಿಕ್ಕಿಲ್ವಾ..? ಶೂಟಿಂಗ್ ಶುರುವೇ ಆಗಿಲ್ವಾ ಎಂಬ ಪ್ರಶ್ನೆಗೆ ಧಾರಾವಾಹಿಯ ತಂಡವೇ ಉತ್ತರ ಕೊಡಬೇಕಿದೆ.