ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻಒಬ್ಬೊಬ್ರೇ ಬರ್ತಿರಾ? ಒಟ್ಟಿಗೆ ಬರ್ತಿರಾ?ʼ; ʻಟಾಕ್ಸಿಕ್‌ʼನ ಮಾನ್‌ಸ್ಟರ್‌ ಮಹಿಳೆಯರ ಜೊತೆ ಯಶ್‌ ಕುಸ್ತಿ!

ʻರಾಕಿಂಗ್ ಸ್ಟಾರ್ʼ ಯಶ್ ನಟನೆಯ 'ಟಾಕ್ಸಿಕ್' ಚಿತ್ರದ 'ಲೇಡೀಸ್ & ಲೇಡೀಸ್' ಟೀಸರ್‌ ಬಿಡುಗಡೆಯಾಗಿದ್ದು, ನಯನತಾರಾ, ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್, ತಾರಾ ಸುತಾರಿಯಾ ಹಾಗೂ ಹುಮಾ ಖುರೇಷಿ ಅವರ ರಗಡ್ ಲುಕ್‌ ಅನಾವರಣಗೊಂಡಿದೆ. ಈ ಸಿನಿಮಾವು ಆಗಸ್ಟ್‌ 26ರಂದು ತೆರೆಗೆ ಬರಲಿದೆ.

Toxic: ಮಕ್ಕಳಿಗೆ ಎಚ್ಚರಿಕೆ ಕೊಟ್ಟು ʻಲೇಡೀಸ್ʼ ಟೀಸರ್‌ ರಿಲೀಸ್‌ ಮಾಡಿದ ಯಶ್

-

Avinash GR
Avinash GR Jul 1, 2026 12:29 PM

ʻರಾಕಿಂಗ್ ಸ್ಟಾರ್ʼ ಯಶ್ ಹಾಗೂ ಗೀತು ಮೋಹನ್ ದಾಸ್ ಕಾಂಬಿನೇಷನ್‌ನ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್’ (Toxic: A Fairytale for Grown-Ups) ಚಿತ್ರದ ಕಡೆಯಿಂದ ಬಿಗ್ ಅಪ್ಡೇಟ್ ಹೊರಬಿದ್ದಿದೆ. ‘ಲೇಡೀಸ್ & ಲೇಡೀಸ್’ (Ladies & Ladies) ಹೆಸರಿನ ಅತ್ಯಂತ ಬೋಲ್ಡ್ ಹಾಗೂ ಸ್ಟೈಲಿಶ್ ವೀಡಿಯೊವೊಂದನ್ನು ಟಾಕ್ಸಿಕ್‌ ಟೀಮ್ ಅನಾವರಣಗೊಳಿಸಿದ್ದು, ಈ ಸಿನಿಮಾದ ಕತ್ತಲೆಯ ಜಗತ್ತನ್ನು ಮುನ್ನಡೆಸುವ ಪ್ರಬಲ ಮಹಿಳಾ ಪಾತ್ರಗಳ ಝಲಕ್ ತೋರಿಸಿದೆ.

ಕಣ್ಣು ಕೋರೈಸುವ ತಾರಾಗಣ, ವಿಭಿನ್ನ ಆಟಿಟ್ಯೂಡ್!

ಈಗಾಗಲೇ ಸಿನಿವಲಯದಲ್ಲಿ ಭಾರಿ ಕುತೂಹಲ ಮೂಡಿಸಿರುವ 'ಟಾಕ್ಸಿಕ್' ಪ್ರಪಂಚದ ಹೊಸ ವಿಡಿಯೋದಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ, ರುಕ್ಮಿಣಿ ವಸಂತ್ ಮತ್ತು ಹುಮಾ ಖುರೇಷಿ ಅಬ್ಬರಿಸಿದ್ದಾರೆ. ಶಕ್ತಿ, ರಹಸ್ಯ ಮತ್ತು ಬಂಡಾಯದ ಸಂಕೇತವಾಗಿ ಮೂಡಿಬಂದಿರುವ ಈ ವಿಡಿಯೋದಲ್ಲಿ ಈ ನಟಿಯರು ಯಾರ ನಿಯಮಗಳಿಗೂ ತಲೆಬಾಗದ ಖಡಕ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

Toxic movie: ‘ಟಾಕ್ಸಿಕ್’ ಬಾಕ್ಸ್ ಆಫೀಸ್​​ನಲ್ಲಿ ಎದುರಾಗುತ್ತಿರುವ ಸಿನಿಮಾಗಳು ಇವು

ತೀಕ್ಷ್ಣ ನೋಟದ ನಯನತಾರಾ, ಮಂತ್ರಮುಗ್ಧಗೊಳಿಸುವ ಕಿಯಾರಾ, ಸಖತ್‌ ಆಕ್ಟೀವ್‌ ಆಗಿರುವ ತಾರಾ ಸುತಾರಿಯಾ, ಇಂಟೆನ್ಸ್‌ ಲುಕ್‌ನ ರುಕ್ಮಿಣಿ ವಸಂತ್ ಹಾಗೂ ದೃಢ ನಿಲುವಿನ ಹುಮಾ ಖುರೇಷಿ ತಮ್ಮ ಅದ್ಭುತ ಸ್ಕ್ರೀನ್ ಪ್ರೆಸೆನ್ಸ್ ಮೂಲಕ ಗಮನ ಸೆಳೆದಿದ್ದಾರೆ. ಇದರೊಂದಿಗೆ ಹಿನ್ನೆಲೆಯಲ್ಲಿ ಕೇಳಿಬರುವ ಮಹಿಳೆಯೊಬ್ಬರ ಆಕರ್ಷಕ ವಾಯ್ಸ್-ಓವರ್ ಚಿತ್ರದ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಈ ಟೀಸರ್‌ನಲ್ಲಿದೆ ಎಚ್ಚರಿಕೆ!

ಈ ಟೀಸರ್‌ನ ಆರಂಭದಲ್ಲೇ ಚಿತ್ರದ ಬಂಡಾಯದ ಧಾಟಿ ಹಾಗೂ ಕಥೆಯ ಗಾಂಭೀರ್ಯವನ್ನು ಬಿಂಬಿಸುವ ವಿಶಿಷ್ಟ ಎಚ್ಚರಿಕೆಯೊಂದನ್ನು ನೀಡಲಾಗಿದೆ. "ಮಕ್ಕಳೇ… ದೂರವಿರಿ. ಪೋಷಕರೇ… ನಿಮ್ಮ ಮಕ್ಕಳು ದೂರವಿರುವಂತೆ ನೋಡಿಕೊಳ್ಳಿ. ಅಜ್ಜಿ-ಅಜ್ಜಂದಿರೇ… ನಿಮ್ಮ ಮಕ್ಕಳ ಮಕ್ಕಳು ದೂರವಿರುವುದನ್ನು ಖಚಿತಪಡಿಸಿಕೊಳ್ಳಿ.. ಮುತ್ತಜ್ಜಿ-ಮುತ್ತಜ್ಜಂದಿರೇ… ನಿಮ್ಮ ಸ್ವಂತ ರಿಸ್ಕ್‌ ಮೇಲೆ ಇದನ್ನು ವೀಕ್ಷಿಸಿ.."

- ಹೀಗೆ ಯಾವುದೇ ಫಿಲ್ಟರ್ ಇಲ್ಲದ ಈ ನೇರ ಎಚ್ಚರಿಕೆಯು, ಸಿನಿಮಾವು ಯಾವುದೇ ಚೌಕಟ್ಟಿಗೆ ಸೀಮಿತವಾಗದ, ಕಣ್ಣು ಮಿಟುಕಿಸದಂತೆ ನೋಡಬೇಕಾದ ಹಾಗೂ ವಿಭಿನ್ನ ಸಿನಿಮಾ ಅನುಭವ ನೀಡಲಿದೆ ಎಂಬುದನ್ನು ಸೂಕ್ಷ್ಮವಾಗಿ ಹೇಳಿದೆ.‌

Actor Yash: ಜೂನ್ 8ಕ್ಕೆ ಸಿಗಲಿದೆ ‘ಟಾಕ್ಸಿಕ್’ನಿಂದ ಬಿಗ್‌ ಸರ್‌ಪ್ರೈಸ್‌? ವಿಶೇಷ ಏನು?

ಆಗಸ್ಟ್ 26ಕ್ಕೆ ವಿಶ್ವಾದ್ಯಂತ ರಿಲೀಸ್

ಗೀತು ಮೋಹನ್ ದಾಸ್ ನಿರ್ದೇಶನದಲ್ಲಿ, ಯಶ್ ನಟಿಸಿರುವ ಟಾಕ್ಸಿಕ್ ಚಿತ್ರವು ಏಕಕಾಲದಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಚಿತ್ರೀಕರಣಗೊಂಡಿದೆ. ಜೊತೆಗೆ ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಿಗೂ ಡಬ್ ಆಗಿ ಬಿಡುಗಡೆಯಾಗಲಿದೆ.

ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಅತ್ಯಂತ ಅದ್ಧೂರಿಯಾಗಿ ತೆರೆಗೆ ಬರುತ್ತಿರುವ 'ಟಾಕ್ಸಿಕ್' ಸಿನಿಮಾವು ಆಗಸ್ಟ್ 26ರ ಬುಧವಾರದಂದು ವಿಶ್ವಾದ್ಯಂತ ಭರ್ಜರಿಯಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.