ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Toxic Movie: ʻಟಾಕ್ಸಿಕ್ʼ ಸಿನಿಮಾದಿಂದ ಹೊರ ಬಿತ್ತು ಎಕ್ಸಕ್ಲೂಸಿವ್‌ ಅಪ್‌ಡೇಟ್‌! ಇದೇ ತಿಂಗಳಲ್ಲಿ ಗುಡ್ ನ್ಯೂಸ್

Yash Toxic: ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್’ ಇದೀಗ ಭಾರತದ ಅತ್ಯಂತ ನಿರೀಕ್ಷಿತ ಸಿನಿಮಾ ಎನಿಸಿಕೊಂಡಿದೆ. ‘ಟಾಕ್ಸಿಕ್’ ಸಿನಿಮಾವು ಮಾರ್ಚ್ 19 ರಂದು ಬಿಡುಗಡೆ ಆಗಲಿದೆ. ಅದೇ ದಿನ ‘ಧುರಂಧರ್ 2’ ಸಿನಿಮಾ ಸಹ ಬಿಡುಗಡೆ ಆಗಲಿದೆ. ಯಶ್ ಟಾಕ್ಸಿಕ್ ಸಿನಿಮಾಗಾಗಿ ಕಾಯುತ್ತಿರುವ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌ ಸಿಗಲಿದೆ ಎನ್ನಲಾಗುತ್ತಿದೆ. ಮುನ್ನ ಫೆಬ್ರವರಿ ಅಂತ್ಯದ ವೇಳೆಗೆ ಸಿಹಿ ಸುದ್ದಿ ನೀಡೋದು ಗ್ಯಾರಂಟಿ ಎನ್ನಲಾಗುತ್ತಿದೆ.

ಟಾಕ್ಸಿಕ್ ಸಿನಿಮಾದಿಂದ ಹೊರ ಬಿತ್ತು ಎಕ್ಸಕ್ಲೂಸಿವ್‌ ಅಪ್‌ಡೇಟ್‌!

ಟಾಕ್ಸಿಕ್‌ ಸಿನಿಮಾ -

Yashaswi Devadiga
Yashaswi Devadiga Feb 16, 2026 8:15 PM

ರಾಕಿಂಗ್ ಸ್ಟಾರ್ ಯಶ್ (Yash) ನಟನೆಯ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್’ (Toxic Cinema) ಇದೀಗ ಭಾರತದ ಅತ್ಯಂತ ನಿರೀಕ್ಷಿತ ಸಿನಿಮಾ ಎನಿಸಿಕೊಂಡಿದೆ. ‘ಟಾಕ್ಸಿಕ್’ ಸಿನಿಮಾವು ಮಾರ್ಚ್ 19 ರಂದು ಬಿಡುಗಡೆ ಆಗಲಿದೆ. ಅದೇ ದಿನ ‘ಧುರಂಧರ್ 2’ ಸಿನಿಮಾ ಸಹ ಬಿಡುಗಡೆ ಆಗಲಿದೆ. ಯಶ್ ಟಾಕ್ಸಿಕ್ ಸಿನಿಮಾಗಾಗಿ ಕಾಯುತ್ತಿರುವ ಫ್ಯಾನ್ಸ್‌ಗೆ (Fans Good News) ಗುಡ್‌ ನ್ಯೂಸ್‌ ಸಿಗಲಿದೆ ಎನ್ನಲಾಗುತ್ತಿದೆ. ಮುನ್ನ ಫೆಬ್ರವರಿ ಅಂತ್ಯದ ವೇಳೆಗೆ ಸಿಹಿ ಸುದ್ದಿ ನೀಡೋದು ಗ್ಯಾರಂಟಿ ಎನ್ನಲಾಗುತ್ತಿದೆ.

ಫೆಬ್ರವರಿ ಅಂತ್ಯದ ವೇಳೆಗೆ ಟೀಸರ್

ಬಹು ನಿರೀಕ್ಷಿತ ಟ್ರೇಲರ್ ಬಿಡುಗಡೆಗೆ ಮುನ್ನ ಫೆಬ್ರವರಿ ಅಂತ್ಯದ ವೇಳೆಗೆ ಟೀಸರ್ ಅನ್ನು ಅನಾವರಣಗೊಳಿಸಲು ತಯಾರಕರು ಸಜ್ಜಾಗುತ್ತಿದ್ದಾರೆ ಎಂದು ವರದಿಯಾಗಿದೆ. ಫೆಬ್ರವರಿ ಕೊನೆಯವಾರದಲ್ಲಿ ಟಾಕ್ಸಿಕ್ ಸಿನಿಮಾ ಟೀಸರ್ ಬಿಡುಗಡೆಯಾಗಲಿದೆ. ಫೆಬ್ರವರಿ ಅಂತ್ಯದಲ್ಲಿ ಮತ್ತೆ ಟಾಕ್ಸಿಕ್ ಅಬ್ಬರ ದೇಶ ವಿದೇಶದಲ್ಲಿ ನಡೆಯಲಿದೆ. ಮಾರ್ಚ್ ತಿಂಗಳ ಮೊದಲ ಅಥವಾ 2ನೇ ವಾರದಲ್ಲಿ ಟಾಕ್ಸಿಕ್ ಸಿನಿಮಾದ ಟ್ರೇಲರ್ ಬಿಡುಗಡೆಯಾಗಲಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: Darshan Birthday: ಉಸಿರಿರುವವರೆಗೂ ನಿಮ್ಮ ಹಿಂದೆ ಇರ್ತೀವಿ ಅಣ್ಣ! ದರ್ಶನ್‌ಗೆ ಧನ್ವೀರ್‌ ವಿಶ್‌

ಟಾಕ್ಸಿಕ್ ಸುತ್ತಮುತ್ತಲಿನ ನಿರೀಕ್ಷೆಯನ್ನು ಗಮನಿಸಿದರೆ, ಟೀಸರ್ ಮತ್ತು ಟ್ರೇಲರ್ ಎರಡೂ ಹೊಸ ಸಂಭಾಷಣೆಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ನಾಂದಿ ಹಾಡುವ ಸಾಧ್ಯತೆಯಿದೆ. ಆದಾಗ್ಯೂ, ಪ್ರೇಕ್ಷಕರಿಗೆ ಏನಾಗಲಿದೆ ಎಂಬುದನ್ನು ಕಾಲವೇ ಹೇಳುತ್ತದೆ.

ಟಾಕ್ಸಿಕ್ ಚಿತ್ರದ ಮೇಲೆ ಈಗ ಎಲ್ಲರ ಕಣ್ಣು

ಕ್ಷಣಗಣನೆ ಆರಂಭವಾಗುತ್ತಿದ್ದಂತೆ, ಧುರಂಧರ್ 2 ರೊಂದಿಗೆ ದೊಡ್ಡ ಬಾಕ್ಸ್ ಆಫೀಸ್ ಘರ್ಷಣೆಗೆ ಸಜ್ಜಾಗುತ್ತಿರುವ ಯಶ್ ಅವರ ಟಾಕ್ಸಿಕ್ ಚಿತ್ರದ ಮೇಲೆ ಈಗ ಎಲ್ಲರ ಕಣ್ಣುಗಳಿವೆ.

ಗೀತು ಮೋಹನ್ ದಾಸ್ ನಿರ್ದೇಶನದ ಟಾಕ್ಸಿಕ್ ಚಿತ್ರದಲ್ಲಿ ಒಬ್ಬರಲ್ಲ, ಐದು ಜನ ನಾಯಕಿಯರು - ಕಿಯಾರಾ ಅಡ್ವಾಣಿ, ನಯನತಾರಾ , ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್.

ಈ ಚಿತ್ರವನ್ನು ವೆಂಕಟ್ ಕೆ. ನಾರಾಯಣ ಮತ್ತು ಯಶ್ ಅವರು ತಮ್ಮ ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಬ್ಯಾನರ್‌ಗಳ ಅಡಿಯಲ್ಲಿ ಜಂಟಿಯಾಗಿ ನಿರ್ಮಿಸಿದ್ದಾರೆ. ತಮಿಳು, ತೆಲೆಗು, ಹಿಂದಿ ಸೇರಿದಂತೆ ಭಾರತೀಯ ಭಾಷೆಗಳಿಗೆ ಡಬ್ ಮಾಡಲಾಗುತ್ತಿದೆ. ಹೀಗಾಗಿ ಹಲವು ಭಾಷೆಗಳಲ್ಲಿ ಟಾಕ್ಕಿಸ್ ಸಿನಿಮಾ ರಿಲೀಸ್ ಆಗುತ್ತಿದೆ.

ಇದನ್ನೂ ಓದಿ: Amruthadhaare Serial: ಡುಮ್ಮ ಸರ್ -ಭೂಮಿ ಟೀಚರ್ ಬಾಳಲ್ಲಿ ನಿತ್ಯ ಪ್ರೇಮೋತ್ಸವ!

ಉತ್ತರ ಭಾರತ ಮತ್ತು ನೇಪಾಳದಲ್ಲಿ ‘ಟಾಕ್ಸಿಕ್’ ಸಿನಿಮಾವನ್ನು ಎಎ ಫಿಲ್ಮ್ಸ್ ನ ಅನಿಲ್ ತಡಾನಿ ಮಾಡಲಿದ್ದಾರೆ. ತೆಲುಗು ರಾಜ್ಯಗಳಾದ ಆಂಧ್ರ ಮತ್ತು ತೆಲಂಗಾಣದಲ್ಲಿ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ನ ದಿಲ್ ರಾಜು ವಿತರಣೆ ಮಾಡಲಿದ್ದಾರೆ. ಇನ್ನು ವಿದೇಶದ ವಿತರಣೆ ಹಕ್ಕನ್ನು ಫಾರ್ಸ್ ಫಿಲ್ಮ್ಸ್ ಗೆ ಮಾರಾಟ ಮಾಡಲಾಗಿದೆ. ಮೂರು ಕಡೆಯು ದಾಖಲೆಯ ಮೊತ್ತಕ್ಕೆ ಸಿನಿಮಾದ ವಿತರಣೆ ಹಕ್ಕುಗಳನ್ನು ಮಾರಾಟ ಮಾಡಲಾಗಿದೆ ಎನ್ನಲಾಗುತ್ತಿದೆ.