ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Yash: ʻಟಾಕ್ಸಿಕ್‌ʼ ಚಿತ್ರದಲ್ಲಿ ಕಿಯಾರಾ ಅಡ್ವಾಣಿ ಪಾತ್ರವೇನು? ಪಡೆದ ಸಂಭಾವನೆ ಎಷ್ಟು? ಹೊರಬಿತ್ತು ಅಚ್ಚರಿಯ ವಿಚಾರ!

Toxic Movie Updates: ಗೀತು ಮೋಹನ್‌ದಾಸ್ ನಿರ್ದೇಶನದ 'ಟಾಕ್ಸಿಕ್' ಚಿತ್ರದ ಮೊದಲ ಹಾಡು ಬಿಡುಗಡೆಗೆ ಸಜ್ಜಾಗಿರುವ ಬೆನ್ನಲ್ಲೇ, ನಟಿ ಕಿಯಾರಾ ಅಡ್ವಾಣಿ ಅವರ ಪಾತ್ರದ ಕುರಿತು ಕುತೂಹಲಕಾರಿ ವಿಚಾರಗಳು ಹೊರಬಿದ್ದಿವೆ. ಜೊತೆಗೆ ಅವರು ಈ ಚಿತ್ರಕ್ಕಾಗಿ ದುಬಾರಿ ಸಂಭಾವನೆ ಪಡೆದಿದ್ದಾರೆ ಎಂಬ ಸುದ್ದಿ ವೈರಲ್‌ ಆಗಿದೆ.

ಯಶ್ ಎದುರು ಸಖತ್‌ ಸವಾಲಿನ ಪಾತ್ರವನ್ನ ನಿಭಾಯಿಸಿದ್ರಾ ಕಿಯಾರಾ ಅಡ್ವಾಣಿ?

-

Avinash GR
Avinash GR Mar 2, 2026 12:41 PM

ʻರಾಕಿಂಗ್‌ ಸ್ಟಾರ್‌ʼ ಯಶ್‌ ಅಭಿನಯದ‌, ಗೀತು ಮೋಹನ್‌ದಾಸ್‌ ನಿರ್ದೇಶನದ ʻಟಾಕ್ಸಿಕ್ʼ‌ ಸಿನಿಮಾದ ಮೊದಲ ಹಾಡು ರಿಲೀಸ್‌ ಆಗಲು ಕ್ಷಣಗಣನೆ ಶುರುವಾಗಿದೆ. ಈ ಮಧ್ಯೆ ಚಿತ್ರದಲ್ಲಿನ ಕಲಾವಿದರ ಬಗ್ಗೆ ಭಾರಿ ಚರ್ಚೆಗಳು ಶುರುವಾಗಿವೆ. ಈ ಚಿತ್ರದಲ್ಲಿ ನಟಿಸಲು ಪಡೆದ ಸಂಭಾವನೆ ಎಷ್ಟು? ಪಾತ್ರವೇನು ಎಂಬೆಲ್ಲಾ ಮಾಹಿತಿಗಳ ಬಗ್ಗೆ ಫ್ಯಾನ್ಸ್‌ ಕುತೂಹಲಿಗಳಾಗಿದ್ದಾರೆ. ಸದ್ಯ ನಟಿ ಕಿಯಾರಾ ಅಡ್ವಾಣಿ ಅವರ ಪಾತ್ರದ ಬಗ್ಗೆ ಮತ್ತು ಸಂಭಾವನೆ ಬಗ್ಗೆ ಒಂದಷ್ಟು ಆಸಕ್ತಿಕರ ವಿಚಾರಗಳು ಸಿಕ್ಕಿವೆ.

ಅಂಧಳಾಗಿ ನಟಿಸಿದ್ರಾ ಕಿಯಾರಾ ಅಡ್ವಾಣಿ?

ಹೌದು, ಟಾಕ್ಸಿಕ್‌ ಚಿತ್ರದಲ್ಲಿನ ನಟಿ ಕಿಯಾರಾ ಅಡ್ವಾಣಿ ಪಾತ್ರದ ಕುರಿತಾದ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಈ ಚಿತ್ರದಲ್ಲಿ ಅವರದ್ದು ಅಂಧ ಹುಡುಗಿಯ ಪಾತ್ರ ಎಂದು ಊಹಿಸಲಾಗುತ್ತಿದೆ. ಇದಕ್ಕೆ ಕಾರಣ, ಇದುವರೆಗೆ ಬಿಡುಗಡೆಯಾದ ಪೋಸ್ಟರ್‌ಗಳನ್ನು ನೋಡಿ ಅಭಿಮಾನಿಗಳು ಈ ರೀತಿಯ ಅರ್ಥೈಸಿಕೊಂಡಿದ್ದಾರೆ.

ಒಂದು ಪೋಸ್ಟರ್‌ನಲ್ಲಿ ಕಿಯಾರಾ ಅವರನ್ನು ಯಶ್‌ ಎತ್ತಿಕೊಂಡು ಹೋಗುತ್ತಿದ್ದಾರೆ. ನಾಯಕಿ ಅಂಧಳಾಗಿರುವ ಕಾರಣಕ್ಕೆ ಆ ರೀತಿ ಹೀರೊ ಎತ್ತಿಕೊಂಡು ಹೋಗುತ್ತಿರುವುದು ಎಂಬ ವ್ಯಾಖ್ಯಾನವನ್ನು ಕೂಡ ಫ್ಯಾನ್ಸ್‌ ನೀಡಿದ್ದಾರೆ. ಆದರೆ, ಇಂದು ಬಿಡುಗಡೆಯಾಗುತ್ತಿರುವ ಯಶ್ ಮತ್ತು ಕಿಯಾರಾ ಅಡ್ವಾಣಿ ಅವರ ಹಾಡು ಈ ಕುರಿತು ಹೆಚ್ಚಿನ ಸ್ಪಷ್ಟತೆ ನೀಡುವ ನಿರೀಕ್ಷೆಯಿದೆ ಮತ್ತು ಈ ವದಂತಿಗಳಿಗೆ ತೆರೆ ಎಳೆಯುವ ಸಾಧ್ಯತೆಯಿದೆ.

Toxic Movie: ಯಶ್‌ ಹೊತ್ತು ಸಾಗುತ್ತಿರುವ ಈ ಚೆಲುವೆ ಯಾರು? ಸೋಶಿಯಲ್‌ ಮೀಡಿಯಾದಲ್ಲಿ ಕಿಡಿ ಹೊತ್ತಿಸಿದ ಹೊಸ ರೊಮ್ಯಾಂಟಿಕ್ ಪೋಸ್ಟರ್

ಕಿಯಾರಾ ಅಡ್ವಾಣಿ ಪಡೆದ ಸಂಭಾವನೆ ಎಷ್ಟು?

ಇನ್ನು, ಬಾಲಿವುಡ್‌ನ ದುಬಾರಿ ನಟಿಯರಲ್ಲಿ ಕಿಯಾರಾ ಅಡ್ವಾಣಿ ಕೂಡ ಒಬ್ಬರು. ಈ ಹಿಂದೆ ತೆರೆಕಂಡಿದ್ದ ವಾರ್‌ 2 ಸಿನಿಮಾಕ್ಕಾಗಿ 13 ಕೋಟಿ ರೂ. ಸಂಭಾವನೆಯನ್ನು ಬಾಚಿಕೊಂಡಿದ್ದ ಕಿಯಾರಾ ಅವರು ಇದೀಗ ಟಾಕ್ಸಿಕ್‌ ಚಿತ್ರಕ್ಕಾಗಿ ದಾಖಲೆ ಪ್ರಮಾಣದ ಹಣವನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದಾರಂತೆ. ಯಶ್‌ ಎದುರು ಜೋಡಿಯಾಗಿ ನಟಿಸಲು ಬರೋಬ್ಬರಿ 15 ಕೋಟಿ ರೂ. ದುಡ್ಡನ್ನು ಕಿಯಾರಾ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಆ ಬಗ್ಗೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ʻಟಾಕ್ಸಿಕ್ʼ ಸಿನಿಮಾದಿಂದ ಯಶ್‌ಗೆ ಸಿಗುವ ಹಣವೆಷ್ಟು? ರಾಕಿ ಭಾಯ್‌ಗೆ ಸಿಕ್ತಿರುವ ಪಾಲು ಎಷ್ಟು ಎಂಬುದು ಗೊತ್ತಾದ್ರೆ ಅಚ್ಚರಿಯಾಗೋದು ಖಚಿತ!

ಈ ಚಿತ್ರದಲ್ಲಿ ಯಶ್ ಮತ್ತು ಕಿಯಾರಾ ಅಡ್ವಾಣಿ ಅವರಲ್ಲದೆ, ನಯನತಾರಾ, ರುಕ್ಮಿಣಿ ವಸಂತ್, ಹುಮಾ ಖುರೇಷಿ ಮತ್ತು ತಾರಾ ಸುತಾರಿಯಾ, ಸುದೇವ್‌ ನಾಯರ್‌, ಬಾಲಾಜಿ ಮನೋಹರ್ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ (KVN Productions) ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ (Monster Mind Creations) ಬ್ಯಾನರ್‌ಗಳ ಅಡಿಯಲ್ಲಿ ವೆಂಕಟ್ ಕೆ. ನಾರಾಯಣ ಮತ್ತು ಯಶ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ರವಿ ಬಸ್ರೂರು ಅವರು ಈ ಚಿತ್ರಕ್ಕೆ ಸಂಗೀತ ಮತ್ತು ಹಿನ್ನೆಲೆ ಸಂಗೀತವನ್ನು ಸಂಯೋಜಿಸಿದ್ದಾರೆ.