ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bigg Boss Kannada 13: ಸೌಂದರ್ಯ ಕಾಲು ಹಿಡಿದ ಯಶಸ್; ಜಗದೀಶ್, ಪ್ರಶಾಂತ್ ಅಸಮಾಧಾನ

Bigg Boss Kannada 13: ಯಶಸ್ ಅವರ ನಡವಳಿಕೆ ʻಬಿಗ್ ಬಾಸ್ʼ ಮನೆಯಲ್ಲಿ ಇತರ ಸ್ಪರ್ಧಿಗಳ ಟೀಕೆಗೆ ಕಾರಣವಾಗಿದೆ. ಜಗದೀಶ್ ಹಾಗೂ ಪ್ರಶಾಂತ್ ಕೂಡ ಯಶಸ್ ಬಗ್ಗೆ ಮಾತನಾಡಿಕೊಂಡಿದ್ದಾರೆ. ಕಾವ್ಯಾ, ಸೌಂದರ್ಯಾ ಶೆಟ್ಟಿ ಹಾಗೂ ಯಶಸ್ ಅವರು ಕುಳಿತು ಮಾತನಾಡುತ್ತಿದ್ದರು. ಕಾಲು ಇಟ್ಟುಕೊಳ್ಳಲು ಜಾಗ ಇಲ್ಲ ಎಂದು ಸೌಂದರ್ಯಾ ಅವರು ಹೇಳಿದರು. ಆಗ ಸೌಂದರ್ಯಾ ಅವರ ಕಾಲನ್ನು ಯಶಸ್ ಅವರು ತಮ್ಮ ಅಂಗೈಯಲ್ಲಿ ಹಿಡಿದುಕೊಂಡರು.

ಸೌಂದರ್ಯ ಕಾಲು ಹಿಡಿದ ಯಶಸ್; ಜಗದೀಶ್, ಪ್ರಶಾಂತ್ ಅಸಮಾಧಾನ

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Oct 14, 2026 10:13 AM

ಯಶಸ್ ಅವರ ನಡವಳಿಕೆ ʻಬಿಗ್ ಬಾಸ್ʼ ಮನೆಯಲ್ಲಿ (Bigg Boss kannada 13) ಇತರ ಸ್ಪರ್ಧಿಗಳ ಟೀಕೆಗೆ ಕಾರಣವಾಗಿದೆ. ಜಗದೀಶ್ ಹಾಗೂ ಪ್ರಶಾಂತ್ (Prashanth) ಕೂಡ ಯಶಸ್ ಬಗ್ಗೆ ಮಾತನಾಡಿಕೊಂಡಿದ್ದಾರೆ. ಕಾವ್ಯಾ, ಸೌಂದರ್ಯಾ ಶೆಟ್ಟಿ (Soundary shetty) ಹಾಗೂ ಯಶಸ್ ಅವರು ಕುಳಿತು ಮಾತನಾಡುತ್ತಿದ್ದರು. ಕಾಲು ಇಟ್ಟುಕೊಳ್ಳಲು ಜಾಗ ಇಲ್ಲ ಎಂದು ಸೌಂದರ್ಯಾ ಅವರು ಹೇಳಿದರು. ಆಗ ಸೌಂದರ್ಯಾ ಅವರ ಕಾಲನ್ನು ಯಶಸ್ (Yashas) ಅವರು ತಮ್ಮ ಅಂಗೈಯಲ್ಲಿ ಹಿಡಿದುಕೊಂಡರು. ಅದನ್ನು ಕಂಡು ಜಗದೀಶ್ ಹಾಗೂ ಪ್ರಶಾಂತ್ ಮಾತನಾಡಿಕೊಂಡರು.

ಇದನ್ನೇ ಹೆಮ್ಮೆ ಎಂದುಕೊಂಡಿದ್ದಾನಾ?

ಅವಳ ಕಾಲು ಹಿಡಿದುಕೊಂಡಿದ್ದಾನೆ ನೋಡು ಎಂದು ಜಗದೀಶ್‌ ಹೇಳಿದ್ರೆ, ಯಶಸ್​ಗೆ ಏನಾಗಿದೆ? ಇದನ್ನೇ ಅವನು ಹೆಮ್ಮೆ ಎಂದುಕೊಂಡಿದ್ದಾನಾ? ಎರಡು ವಾರ ಆದ್ಮೇಲೆ ಆಟ ತೋರಿಸುತ್ತೇನೆ ಎಂದು ಹೇಳುತ್ತಿದ್ದ ಎಂದು ಪ್ರಶಾಂತ್‌ ಹೇಳಿದ್ದಾರೆ.

ಇದನ್ನೂ ಓದಿ: Bigg Boss Kannada 13: ಮಂಜನ ಜೊತೆಗೆ ಇನ್ನೂ ಇಬ್ಬರನ್ನು ನಾನು ಹೊರಗೆ ಕಳಿಸುತ್ತಿದ್ದೆ; ಸುದೀಪ್‌



‘ನನಗೆ ಅನುಮಾನ ಆಗುತ್ತಿದೆ. ಆಸಿಯಾನ ಯಶಸ್ ಇಷ್ಟಪಡುತ್ತಿದ್ದಾನಾ ಅಥವಾ ಸೌಂದರ್ಯಾನ ಇಷ್ಟಪಡುತ್ತಿದ್ದಾನಾ’ ಎಂದು ಪ್ರಶಾಂತ್ ಅವರು ಅನುಮಾನ ವ್ಯಕ್ತಪಡಿಸಿದರು.ಒಟ್ಟಿನಲ್ಲಿ ಯಶಸ್ ಅವರು ಆಟದ ಮೇಲೆ ಹೆಚ್ಚು ಗಮನ ಹರಿಸುವುದರ ಬದಲು ಸೌಂದರ್ಯಾ ಜೊತೆ ಸಮಯ ಕಳೆಯುತ್ತಿರುವುದು ದೊಡ್ಮನೆಯಲ್ಲಿ ಚರ್ಚೆಯ ವಿಷಯ ಆಗುತ್ತಿದೆ.

ಇದನ್ನೂ ಓದಿ: Bigg Boss Kannada 13: ಸಾಮರ್ಥ್ಯಕ್ಕೆ ಒಂದು ಸವಾಲ್; ಈ ತಂಡಕ್ಕೆ ಸಪೋರ್ಟ್‌ ಮಾಡಿದ ಕುಮಾರಿ!

ಮನೆಯ ಕ್ಯಾಪ್ಟನ್ ಧನುಷ್ ಕೂಡ ಸೌಂದರ್ಯ ಅವರಿಗೆ ಒಬ್ಬಂಟಿಯಾಗಿ ಆಟವಾಡುವ ಸಾಮರ್ಥ್ಯವಿಲ್ಲ ಯಶಸ್ ಅವರಿಗೂ ಒಬ್ಬರ ಬೆಂಬಲ ಬೇಕಾಗುತ್ತೆ ಎಂದಿದ್ದಾರೆ. ಈ ವಾರ ಎರಡು ತಂಡಗಳಲ್ಲಿ ಟಾಸ್ಕ್ ಆಡಬೇಕು ಎಂದು ನಿರ್ಧರಿಸಲಾಗಿದೆ. ಒಬ್ಬಂಟಿಯಾಗಿ, ಹಾಗೂ ಗ್ರೂಪ್‌ಗಳಾಗಿ. ಯಶಸ್‌ ಸೌಂದರ್ಯ ಅವರೊಂದಿಗಿನ ಭಾರೀ ಆಪ್ತತೆ ಈಗ ಬಿಗ್ ಬಾಸ್ ಮನೆಯಲ್ಲಿ ಸದ್ಯಕ್ಕೆ ಚರ್ಚೆ ಶುರುವಾಗಿದೆ.