ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

ಪದೇಪದೆ ಬಿಸಿ ಮಾಡಿದ ಅಡುಗೆ ಎಣ್ಣೆ ನಿರ್ಬಂಧಕ್ಕೆ ಹೊಸ ನಿಯಮ: ಅಡುಗೆ ಎಣ್ಣೆ ಬಳಕೆಗೂ ಮಾರ್ಗಸೂಚಿ ಪ್ರಕಟ

ಅಡುಗೆ ಎಣ್ಣೆ ಬಳಕೆಗೂ ಮಾರ್ಗಸೂಚಿ ಪ್ರಕಟ

ಪದೇಪದೆ ಬಿಸಿ ಮಾಡಿ ಬಳಸುವ ಅಡುಗೆ ಎಣ್ಣೆಯಿಂದ ಉಂಟಾಗಬಹುದಾದ ಆರೋಗ್ಯ ಮತ್ತು ಪರಿಸರ ಸಮಸ್ಯೆಗಳನ್ನು ನಿಯಂತ್ರಿಸಲು ರಾಜ್ಯ ಸರಕಾರ ಹೊಸ ಕ್ರಮಕ್ಕೆ ಮುಂದಾಗಿದೆ. ಹೋಟೆಲ್, ರೆಸ್ಟೋರೆಂಟ್, ಬೇಕರಿ ಸೇರಿದಂತೆ ಆಹಾರ ತಯಾರಿಕಾ ಘಟಕಗಳಲ್ಲಿ ಒಂದೇ ಎಣ್ಣೆಯನ್ನು ಹಲವು ಬಾರಿ ಬಳಸುವ ಪದ್ಧತಿಗೆ ನಿಯಂತ್ರಣ ಹೇರುವುದು ಇದರ ಪ್ರಮುಖ ಉದ್ದೇಶವಾಗಿದೆ.

ಕೋಲಾರದ ಕುರುಡುಮಲೈನಿಂದ ಆರಂಭ: ಇಂದಿನಿಂದ ಬಿಜೆಪಿ ಸೇವಾ ಸಂಕಲ್ಪ ಯಾತ್ರೆಗೆ ಚಾಲನೆ

ಇಂದಿನಿಂದ ಬಿಜೆಪಿ ಸೇವಾ ಸಂಕಲ್ಪ ಯಾತ್ರೆಗೆ ಚಾಲನೆ

ಪ್ರಧಾನಿ ಮೋದಿ ಅವರು ಸಾರ್ವಜನಿಕ ಸೇವೆಯಲ್ಲಿ ಸಾರ್ಥಕ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಇಂದಿನಿಂದ ಸೇವಾ ಸಂಕಲ್ಪ ಅಭಿಯಾನ ಹಾಗೆಯೇ ಮುಂದಿನ ಸ್ಥಳೀಯ ಸಂಸ್ಥೆ ಚುನಾವಣೆಗೆ ಕಾರ್ಯಕರ್ತರನ್ನು ಸಜ್ಜುಗೊಳಿಸಲು ವಿಜಯಸಂಕಲ್ಪ ಯಾತ್ರೆ ಒಟ್ಟೊಟ್ಟಿಗೆ ನಡೆಸಲಿದೆ.

ರಾಜ್ಯದ 12 ಜಿಲ್ಲೆಗಳಲ್ಲಿ ವರುಣನ ಆರ್ಭಟ: ಬೆಂಗಳೂರು ಸೇರಿ ಹಲವೆಡೆ ಯೆಲ್ಲೋ ಅಲರ್ಟ್‌ ಘೋಷಣೆ

ಬೆಂಗಳೂರು ಸೇರಿ ಹಲವೆಡೆ ಯೆಲ್ಲೋ ಅಲರ್ಟ್‌ ಘೋಷಣೆ

Karnataka Weather: ಅರಬ್ಬಿ ಸಮುದ್ರ ಮತ್ತು ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಹವಾಮಾನ ವೈಪರೀತ್ಯ ಹಾಗೂ ಸೈಕ್ಲೋನಿಕ್ ಪರಿಚಲನೆಯ ತೀವ್ರತೆಯಿಂದಾಗಿ ರಾಜ್ಯದಲ್ಲಿ ಅಕ್ಟೋಬರ್ ಮೊದಲ ವಾರದವರೆಗೆ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.

ಚಿಂತಾಮಣಿ ತಹಸೀಲ್ದಾರರಿಗೆ ಶಾಸಕ ಪ್ರದೀಪ್ ಈಶ್ವರ್ ಖಡಕ್ ಪತ್ರ: ದಲಿತರಿಗೆ ದೇವಾಲಯ ಪ್ರವೇಶ ಮತ್ತು ಅಂಬೇಡ್ಕರ್ ಪ್ರತಿಮೆ ಮರುನಿರ್ಮಾಣಕ್ಕೆ ಆಗ್ರಹ

ಚಿಂತಾಮಣಿ ತಹಸೀಲ್ದಾರರಿಗೆ ಶಾಸಕ ಪ್ರದೀಪ್ ಈಶ್ವರ್ ಖಡಕ್ ಪತ್ರ

ದಲಿತರ ಮೇಲಿನ ದೌರ್ಜನ್ಯ,ದೇವಾಲಯ ಪ್ರವೇಶ ನಿರಾಕರಣೆ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಯನ್ನು ರಾತ್ರೋರಾತ್ರಿ ತೆರವುಗೊಳಿಸಿರುವುದನ್ನು ಖಂಡಿಸಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್ ಅವರು ಚಿಂತಾಮಣಿ ತಾಲ್ಲೂಕು ದಂಡಾಧಿಕಾರಿಗಳಿಗೆ ತಹಸೀಲ್ದಾರ್ ಸುದೀರ್ಘ ಪತ್ರ ಬರೆದು ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.

Chikkaballapur News: ಕಾಂಗ್ರೆಸ್‌ನಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶ ನೀಡಬೇಕು: ಮಂಜುನಾಥ್

ಶಾಸಕ ಪ್ರದೀಪ್ ಈಶ್ವರ್ ನೇತೃತ್ವದಲ್ಲಿ ಪಕ್ಷ ಸಂಘಟನೆ ಬಲಪಡಿಸಲು ಒತ್ತು ಅಗತ್ಯ

ನಗರದ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದೊಳಗಿನ ಭಿನ್ನಾಭಿಪ್ರಾಯಗಳಿಗೆ ಕಡಿವಾಣ ಹಾಕಿ, ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಸಮನ್ವಯ ಸಾಧಿಸುವ ಅಗತ್ಯವಿದೆ ಎಂದು ಒತ್ತಿ ಹೇಳಿದರು.

B Y Vijayendra: ಹಂಡಿಗನಾಳದಿಂದ ಪಾದಯಾತ್ರೆ; ಅಕ್ಟೋಬರ್ 2ರಂದು ಶಿಡ್ಲಘಟ್ಟಕ್ಕೆ ಬಿ.ವೈ.ವಿಜಯೇಂದ್ರ

ಅಕ್ಟೋಬರ್ 2ರಂದು ಶಿಡ್ಲಘಟ್ಟಕ್ಕೆ ಬಿ.ವೈ.ವಿಜಯೇಂದ್ರ

ವಿಜಯೇಂದ್ರ ಅವರು ಶಿಡ್ಲಘಟ್ಟಕ್ಕೆ ಆಗಮಿಸುವ ಸಂದರ್ಭದಲ್ಲಿ ಹಂಡಿಗನಾಳ ಸಮೀಪದಲ್ಲಿ ಪಕ್ಷದ ವತಿಯಿಂದ ಸ್ವಾಗತ ಕೋರಲಾಗುವುದು. ಅಲ್ಲಿಂದ ಪಾದಯಾತ್ರೆಯ ಮೂಲಕ ನಗರದತ್ತ ತೆರಳಲಿದ್ದಾರೆ. ಬಳಿಕ ನಗರದ ಕೋಟೆ ವೃತ್ತದಲ್ಲಿರುವ ಶ್ರೀ ಸೋಮೇಶ್ವರ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಲಿದ್ದಾರೆ ಎಂದು ವಿವರಿಸಿದರು.

ಆಲಮಟ್ಟಿ ಡ್ಯಾಂ ಎತ್ತರ ಹೆಚ್ಚಳ: ಬಬಲೇಶ್ವರ ತಾಲೂಕಿನ 4 ಗ್ರಾಮಗಳಿಗೆ ತುರ್ತು ಪರಿಹಾರ ಒದಗಿಸಲು ಸಚಿವ ಎಂ.ಬಿ. ಪಾಟೀಲ್ ಪತ್ರ

ಆಲಮಟ್ಟಿ ಡ್ಯಾಂ ಎತ್ತರ ಹೆಚ್ಚಳ: ತುರ್ತು ಪರಿಹಾರಕ್ಕೆ ಎಂ.ಬಿ. ಪಾಟೀಲ್ ಪತ್ರ

MB Patil: ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳದಿಂದ ತಾವು ಪ್ರತಿನಿಧಿಸುತ್ತಿರುವ ಬಬಲೇಶ್ವರ ವಿಧಾನಸಭಾ ಕ್ಷೇತ್ರದ 15 ಗ್ರಾಮಗಳ 5,600 ಎಕರೆ ಮುಳುಗಡೆ ಆಗುತ್ತಿದೆ. ಈ ಪೈಕಿ ಮೊದಲ ಹಂತದಲ್ಲಿ 1,000 ಎಕರೆಗಾದರೂ ಪರಿಹಾರ‌ ಕೊಡಬೇಕು ಎಂದು ಬೃಹತ್ ಕೈಗಾರಿಕೆ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್ ಜಲಸಂಪನ್ಮೂಲ ಸಚಿವ ಎನ್. ಚೆಲುವರಾಯಸ್ವಾಮಿ ಅವರಿಗೆ ಪತ್ರ ಬರೆದಿದ್ದಾರೆ.

ಸದ್ಯದಲ್ಲೇ ಬಸ್ ಪ್ರಯಾಣ ದರ ಹೆಚ್ಚಳ ನಿರ್ಧಾರ: ಸಾರಿಗೆ ಸಚಿವ ಬೈರತಿ ಸುರೇಶ್ ಹೇಳಿಕೆ

ಸದ್ಯದಲ್ಲೇ ಬಸ್ ಪ್ರಯಾಣ ದರ ಹೆಚ್ಚಳ ನಿರ್ಧಾರ

ಮಹಿಳೆಯರಿಗೆ ಸಾರಿಗೆ ನಿಗಮಗಳ ಬಸ್ ಗಳಲ್ಲಿ ಉಚಿತ ಪ್ರಯಾಣ ಮಾಡುವ ಶಕ್ತಿ ಯೋಜನೆ ಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಲು ಸರ್ಕಾರ ನಿರ್ಧರಿಸಿದೆ. ಇದರನ್ವಯ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಆಶಯದಂತೆ ಎಲ್ಲಾ ಮಹಿಳೆಯರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡಲಾಗುತ್ತದೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ತಿಳಿಸಿದರು.

New Chapter for a 1,400-Year-Old Legacy: ಬೆಂಗಳೂರಿನಲ್ಲಿ ದಿ ಕಿಂಗ್ಸ್ ಸ್ಕೂಲ್ ಕ್ಯಾಂಟರ್ಬರಿ ಆರಂಭ: 1,400 ವರ್ಷಗಳ ಪರಂಪರೆಗೆ ಹೊಸ ಅಧ್ಯಾಯ

ಬೆಂಗಳೂರಿನಲ್ಲಿ ದಿ ಕಿಂಗ್ಸ್ ಸ್ಕೂಲ್ ಕ್ಯಾಂಟರ್ಬರಿ ಆರಂಭ

ಕ್ರಿ.ಶ. 597ರಲ್ಲಿ ಸ್ಥಾಪನೆಯಾದ ದಿ ಕಿಂಗ್ಸ್ ಸ್ಕೂಲ್ ಕ್ಯಾಂಟರ್ಬರಿ 1,400 ವರ್ಷಗಳಿಗೂ ಹೆಚ್ಚಿನ ಶೈಕ್ಷಣಿಕ ಪರಂಪರೆಯನ್ನು ಹೊಂದಿದೆ. ಹೊಸ ಶಾಲೆಯು ಈ ಐತಿಹಾಸಿಕ ಪರಂಪರೆ, ಸುದೀರ್ಘ ಶೈಕ್ಷಣಿಕ ಅನುಭವ ಮತ್ತು ಕಿಂಗ್ಸ್ನ ವಿಶಿಷ್ಟ ಶಿಕ್ಷಣ ಮೌಲ್ಯಗಳನ್ನು ಬೆಂಗಳೂರಿನ ಸಂಸ್ಕೃತಿ, ಚೈತನ್ಯ ಮತ್ತು ಸ್ಥಳೀಯ ಪರಿಸರದೊಂದಿಗೆ ಸಂಯೋಜಿಸಲಿದೆ.

Hospet News: ಜಿಲ್ಲಾ ಉಪ ಕಾರಾಗೃಹದಲ್ಲಿ ಬಂಧಿಗಳಿಗೆ ತಂಬಾಕು ಮತ್ತು ಧೂಮಪಾನದ ದುಷ್ಪರಿಣಾಮ ಕುರಿತು ಅರಿವು ಮತ್ತು ಜಾಗೃತಿ ಕಾರ್ಯಕ್ರಮ

ಉಪ ಕಾರಾಗೃಹದಲ್ಲಿ ಅರಿವು ಮತ್ತು ಜಾಗೃತಿ ಕಾರ್ಯಕ್ರಮ

ಶೈಕ್ಷಣಿಕ, ಧಾರ್ಮಿಕ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧ ಹಾಗೂ ಕಾನೂನಾತ್ಮಕ ದಂಡ-ಶಿಕ್ಷೆಗಳಿದ್ದರೂ ಸಮಾಜದಲ್ಲಿ ಜಾಗೃತಿಯ ಕೊರತೆಯಿಂದ ಜನರು ದುಷ್ಟ ಚಟಗಳಿಗೆ ದಾಸರಾಗು ತ್ತಿದ್ದಾರೆ. ಇದನ್ನು ತಡೆಯಲು ಮತ್ತು ತಂಬಾಕು ಹಾಗೂ ಮಾದಕ ವಸ್ತುಗಳ ಸೇವನೆಯಿಂದಾಗುವ ಅಡ್ಡಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಮತ್ತು ಬಂಧಿಗಳಲ್ಲಿ ಅರಿವು ಮೂಡಿಸಲಾಯಿತು.

KIA: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ದಿ ಫಿಲ್ಟರ್ ಕಾಫಿ

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ದಿ ಫಿಲ್ಟರ್ ಕಾಫಿ

ಪ್ರಯಾಣಿಕರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಮಳಿಗೆಯನ್ನು ವಿನ್ಯಾಸಗೊಳಿಸಲಾಗಿದ್ದು, ತ್ವರಿತ ಸೇವೆಯೊಂದಿಗೆ ವಿಮಾನ ಹೊರಡುವ ಮುನ್ನ ಸಮಯ ಹೊಂದಿರುವ ಪ್ರಯಾಣಿಕರಿಗೆ ಮುಕ್ತ ಆಸನ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ವೇಗದ ಸೇವೆ ಹಾಗೂ ದಿ ಫಿಲ್ಟರ್ ಕಾಫಿಯ ವಿಶಿಷ್ಟ ದಕ್ಷಿಣ ಭಾರತೀಯ ಆಹಾರ ಅನುಭವವನ್ನು ಒಂದೇ ಕಡೆ ಒದಗಿಸುವುದು ಇದರ ಉದ್ದೇಶವಾಗಿದೆ.

ಒಂದೇ ಮಳೆಗೆ ಜಲಾವೃತಗೊಂಡ ಕೋಟ್ಯಂತರ ರೂಪಾಯಿ ವೆಚ್ಚದ ತುಮಕೂರು ಸ್ಮಾರ್ಟ್ ಸಿಟಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ; ಅವೈಜ್ಞಾನಿಕ ಕಾಮಗಾರಿಗೆ ಆಕ್ರೋಶ

ಮಳೆಗೆ ತುಮಕೂರು ಸ್ಮಾರ್ಟ್‌ಸಿಟಿ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣ ಜಲಾವೃತ

Tumkur News: ತುಮಕೂರಿನಲ್ಲಿ ಮಂಗಳವಾರ ತಡರಾತ್ರಿ ಸುರಿದ ಭಾರಿ ಮಳೆಗೆ ಸ್ಮಾರ್ಟ್ ಸಿಟಿ ಯೋಜನೆಯಡಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ನಗರದ ನೂತನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣವು ಸಂಪೂರ್ಣವಾಗಿ ಜಲಾವೃತಗೊಂಡಿದೆ. ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

MLA KN Rajanna: ಸಿಂಹಾದ್ರಿ ಕುಟುಂಬಕ್ಕೆ ನ್ಯಾಯ, ಬದುಕಿಗೆ ಭರವಸೆ: ಮಾಜಿ ಸಚಿವ, ಶಾಸಕ ಕೆ.ಎನ್.ರಾಜಣ್ಣ ಹೇಳಿಕೆ

ಸಿಂಹಾದ್ರಿ ಕುಟುಂಬಕ್ಕೆ ನ್ಯಾಯ – ಬದುಕಿಗೆ ಭರವಸೆ: ಶಾಸಕ ಕೆ.ಎನ್.ರಾಜಣ್ಣ

ಇಲ್ಲಿಯವರೆಗೆ ದಲಿತರು ಸೇರಿದಂತೆ ಎಲ್ಲಾ ಜಾತಿಯ ಬಡವರು, ಅಸಹಾಯಕರು ಮತ್ತು ಶೋಷಿತ ವರ್ಗಗಳ ಕುಟುಂಬಗಳಿಗೆ ಧ್ವನಿಯಾಗಿ, ನನ್ನ ಕೈಲಾದ ಸಹಾಯವನ್ನು ಮಾಡಿಕೊಂಡು ಬಂದಿರು ತ್ತೇನೆ. ಎಲ್ಲಾ ಜಾತಿಯಲ್ಲಿರುವ ಬಡವರು ಸೇರಿದಂತೆ, ದುರ್ಬಲರು, ಶೋಷಿತ ವರ್ಗಗಳಿಗೆ ಯಾವುದೇ ಪಕ್ಷ ಭೇದವಿಲ್ಲದೆ ಸಹಾಯ ಮಾಡುವುದು ನನ್ನ ಆದ್ಯ ಕರ್ತವ್ಯವಾಗಿದೆ.

ವಾಹನ ಸವಾರರೇ ಗಮನಿಸಿ: ಇನ್ಮುಂದೆ ಸಂಚಾರ ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ; ಲೈಸನ್ಸ್‌ ಅಮಾನತು, ದಂಡ ಹೆಚ್ಚಳ

ಸಂಚಾರಿ ನಿಯಮ ಉಲ್ಲಂಘನೆಗೆ ಕಡಿವಾಣ ಹಾಕಲು ಕಠಿಣ ಕ್ರಮ

Bengaluru News: ಬೆಂಗಳೂರಿನ ಸಂಚಾರ ದಟ್ಟಣೆ ನಿಯಂತ್ರಣ, ರಸ್ತೆ ಸುರಕ್ಷತೆ ಹೆಚ್ಚಿಸುವುದು ಹಾಗೂ ಸಂಚಾರಿ ನಿಯಮಗಳ ಉಲ್ಲಂಘನೆಗೆ ಪರಿಣಾಮಕಾರಿಯಾಗಿ ಕಡಿವಾಣ ಹಾಕುವ ನಿಟ್ಟಿನಲ್ಲಿ ಗೃಹ ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳ ಜಂಟಿ ವಿಮರ್ಶಾ ಸಭೆಯು ಬುಧವಾರ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಸಾರಿಗೆ ಸಚಿವ ಭೈರತಿ ಸುರೇಶ್ ಅವರ ಉಪಸ್ಥಿತಿಯಲ್ಲಿ ವಿಕಾಸಸೌಧದಲ್ಲಿ ಜರುಗಿತು.

ಬಿಜೆಪಿ ಸರ್ಕಾರದ ಯಡವಟ್ಟಿನ ಕಾರಣಕ್ಕೆ ಆರ್ಥಿಕ ಇಲಾಖೆಯಿಂದ ಪತ್ರ: ಸಿಎಂ ಡಿ.ಕೆ. ಶಿವಕುಮಾರ್

ಬಿಜೆಪಿ ಸರ್ಕಾರಗಳ ಅನಾಹುತಗಳಿಂದಾಗಿಯೇ ಆರ್ಥಿಕ ಇಲಾಖೆಯಿಂದ ಪತ್ರ: ಡಿಕೆಶಿ

CM DK Shivakumar: 30 ಸಾವಿರ ಕೋಟಿ ರೂಪಾಯಿಗೂ ಅಧಿಕ ಹಣ ಬಿಡುಗಡೆಯಾಗಿಲ್ಲ ಎಂಬ ಗುತ್ತಿಗೆದಾರರ ಪತ್ರದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಿಎಂ ಡಿ.ಕೆ. ಶಿವಕುಮಾರ್‌, ಯಡಿಯೂರಪ್ಪ ಅವರ ಸರ್ಕಾರದ ಅವಧಿಯಲ್ಲಿ ಕೊಟ್ಟ ಕೆಲಸಗಳು ಮುಗಿಯುತ್ತಿದ್ದು, ಬಿಲ್ ನೀಡಬೇಕಾಗಿದೆ. ನಾನು ಅದರ ಬಗ್ಗೆ ಆಲೋಚನೆ ಮಾಡುವೆ. ಗುತ್ತಿಗೆದಾರರು ಉಳಿಯಬೇಕು. ಹೀಗಾಗಿ ಸಧ್ಯದಲ್ಲೇ ಆಲೋಚನೆ ಮಾಡುತ್ತೇನೆ ಎಂದು ಹೇಳಿದ್ದಾರೆ.

ಸರ್ಕಾರವೇ ಸ್ಟಾರ್ಟ್‌ಅಪ್‌ಗಳಿಗೆ ಮೊದಲ ಗ್ರಾಹಕ: ‘ಗೌರ್ನಮೆಂಟ್ ಫಸ್ಟ್ʼ ಉಪಕ್ರಮ ಜಾರಿ, ಪ್ರಿಯಾಂಕ್ ಖರ್ಗೆ

‘ಗೌರ್ನಮೆಂಟ್ ಫಸ್ಟ್ʼ ಉಪಕ್ರಮ ಜಾರಿ: ಪ್ರಿಯಾಂಕ್ ಖರ್ಗೆ

Priyank Kharge: ಸರ್ಕಾರಿ ಸೇವೆಗಳ ಗುಣಮಟ್ಟ ಮತ್ತು ದಕ್ಷತೆಯನ್ನು ಹೆಚ್ಚಿಸುವುದರ ಜತೆಗೆ, ರಾಜ್ಯದ ಸ್ಟಾರ್ಟ್‌ಅಪ್‌ಗಳಿಗೆ ಆರಂಭಿಕ ಮಾರುಕಟ್ಟೆ, ನೈಜ ಪರಿಸರದಲ್ಲಿ ಪರಿಹಾರಗಳನ್ನು ಪರೀಕ್ಷಿಸುವ ಅವಕಾಶ ಹಾಗೂ ದೊಡ್ಡ ಪ್ರಮಾಣದಲ್ಲಿ ವಿಸ್ತರಿಸುವ ಮಾರ್ಗವನ್ನು ಒದಗಿಸುವುದು ‘ಗವರ್ನಮೆಂಟ್ ಫಸ್ಟ್’ ಉಪಕ್ರಮದ ಉದ್ದೇಶವಾಗಿದೆ ಎಂದು ಗೃಹ, ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆಗೆ ಜನ ಜೀವನ ಅಸ್ತವ್ಯಸ್ತ; ನಾಳೆ 8 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

ಬೆಂಗಳೂರಿನಲ್ಲಿ ಧಾರಾಕಾರ ಮಳೆ; ನಾಳೆಯೂ ಸುರಿಯಲಿದೆ ವರ್ಷಧಾರೆ

Bengaluru Rains: ಕೆಲವು ದಿನಗಳಿಂದ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸುರಿಯುತ್ತಿರುವ ಮಳೆ ಬುಧವಾರವೂ ಮುಂದುವರಿದಿದೆ. ಬೆಂಗಳೂರಿನ ವಿವಿಧ ಭಾಗಗಳಲ್ಲಿ ಅಪರಾಹ್ನ ಭರ್ಜರಿ ಮಳೆ ಸುರಿದಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿತು. ರಿಚ್ಮಂಡ್​​ ಟೌನ್​​, ಶಾಂತಿನಗರ, ಎಂ.ಜಿ. ರೋಡ್​​, ಸರ್ಜಾಪುರ, ಕೆ. ಆರ್​​. ಮಾರುಕಟ್ಟೆ, ಕಾರ್ಪೊರೇಷನ್ ಸರ್ಕಲ್ ಸೇರಿ ಹಲವೆಡೆ ಉತ್ತಮ ಮಳೆಯಾಗಿದೆ.

ಬರ ಪರಿಹಾರ ನೀಡಿಲ್ಲ, ನಾವಿಟ್ಟ ಬೇಡಿಕೆ ಈಡೇರಿಸಿಲ್ಲ, ಜನತಾ ನ್ಯಾಯಾಲಯಕ್ಕೆ ಹೋಗುತ್ತೇವೆ: ಆರ್‌. ಅಶೋಕ್‌

ಬರ ಪರಿಹಾರ ನೀಡಿಲ್ಲ, ನಾವಿಟ್ಟ ಬೇಡಿಕೆ ಈಡೇರಿಸಿಲ್ಲ: ಆರ್‌. ಅಶೋಕ್‌

R Ashok: ಸಿಎಂ ಡಿ.ಕೆ.ಶಿವಕುಮಾರ್‌ ನಮಗೆ ಪತ್ರ ಬರೆದು ಕೇಂದ್ರಕ್ಕೆ ನಿಯೋಗ ಹೋಗೋಣ ಎಂದು ಮನವಿ ಮಾಡಿದ್ದಾರೆ. ನಾವು ಕೇಂದ್ರಕ್ಕೆ ಹೋಗಲು ಸಿದ್ಧವಿದ್ದೇವೆ. ಆದರೆ ಸರ್ಕಾರದಿಂದ ನಮ್ಮ ಬೇಡಿಕೆಗಳನ್ನು ಈಡೇರಿಸಿಯೇ ಇಲ್ಲ. ಕುಡಿಯುವ ನೀರಿಗೂ ಹಣ ಬಿಡುಗಡೆ ಮಾಡಿಲ್ಲ. ಸರ್ವಪಕ್ಷ ನಿಯೋಗ ಹೋಗಬೇಕೆಂದರೆ ಬರಗಾಲದ ಬಗ್ಗೆ ನಮ್ಮ ಜತೆ ಚರ್ಚಿಸಬೇಕಿತ್ತು. ಅದನ್ನು ಬಿಟ್ಟು ಏಕಪಕ್ಷೀಯವಾಗಿ ತೀರ್ಮಾನ ಕೈಗೊಂಡು ರಾಜಕೀಯ ಮಾಡಲಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್‌. ಅಶೋಕ್‌ ದೂರಿದ್ದಾರೆ.

ಮಂಗಳೂರು MRPLನಲ್ಲಿ ಭಾರಿ ಸ್ಫೋಟ; ಓರ್ವ ಸಾವು, 9 ಮಂದಿಗೆ ಗಾಯ

ಮಂಗಳೂರು MRPLನಲ್ಲಿ ಭಾರಿ ಸ್ಫೋಟ; ಓರ್ವ ಸಾವು

Loud blast at MRPL: ಮಂಗಳೂರು ನಗರದ ಹೊರವಲಯದಲ್ಲಿರುವ ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ಸಂಸ್ಥೆಯ ಸಿಎಚ್‌ಟಿ ಘಟಕದಲ್ಲಿ ಬುಧವಾರ (ಸೆಪ್ಟೆಂಬರ್‌ 30) ಸಂಭವಿಸಿದ ಭೀಕರ ಸ್ಫೋಟದಲ್ಲಿ ಓರ್ವ ಮೃತಪಟ್ಟಿರುವುದು ದೃಢವಾಗಿದ್ದು, 9 ಮಂದಿಗೆ ಗಾಯಾಗಿದೆ.

ರಾಜ್ಯದ 82 ವಿಧಾನಸಭಾ ಕ್ಷೇತ್ರಗಳಲ್ಲಿ ಯಾತ್ರೆ: ಭಾರತ್ ಜೋಡೋ 2.0

ರಾಜ್ಯದ 82 ವಿಧಾನಸಭಾ ಕ್ಷೇತ್ರಗಳಲ್ಲಿ ಯಾತ್ರೆ: ಭಾರತ್ ಜೋಡೋ 2.0

ನಾಲ್ಕು ವರ್ಷಗಳ ಹಿಂದೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಮುಖ ಏಳು ಅಂಶಗಳನ್ನು ಮುಂದಿಟ್ಟುಕೊಂಡು ಕನ್ಯಾಕುಮಾರಿಯಿಂದ ಪಾದಯಾತ್ರೆ ನಡೆಸಿದ್ದರು. ಅವರ ಪಾದಯಾತ್ರೆಯು ಸೆ.30ರಂದು ಚಾಮರಾಜನಗರದ ಗುಂಡ್ಲುಪೇಟೆ ಮೂಲಕ ಕರ್ನಾಟಕ ಪ್ರವೇಶಿಸಿ, ಸುಮಾರು ಒಂದು ವಾರ ಕಾಲ ರಾಜ್ಯದಲ್ಲಿ ಯಾತ್ರೆ ನಡೆದಿತ್ತು

ಮೊಮ್ಮಗಳ ಮೇಲೆಯೇ ಅತ್ಯಾಚಾರಕ್ಕೆ ಯತ್ನ: 75 ವರ್ಷದ ಅಜ್ಜನ ವಿರುದ್ಧ ಪೋಕ್ಸೋ ಕೇಸ್

ಮೊಮ್ಮಗಳ ಮೇಲೆಯೇ ಅತ್ಯಾಚಾರಕ್ಕೆ ಯತ್ನಿಸಿದ ಅಜ್ಜ

Yadagiri News: ಅಜ್ಜನೇ ಸ್ವಂತ ಮೊಮ್ಮಗಳ ಮೇಲೆಯೇ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ. ಆರೋಪಿಯನ್ನು 75 ವರ್ಷದ ಶರಣಪ್ಪ ಟಣಕೇದಾರ್ ಎಂದು ಗುರುತಿಸಲಾಗಿದೆ. ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಲ್ಲದೆ ಚೂರಿ ತೋರಿಸಿ ಬೆದರಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಕೇತನ್ ಅಗರ್ವಾಲ್ ಹತ್ಯೆಗೂ ಮುನ್ನ ಬೆಂಗಳೂರಿನಲ್ಲಿ ಕೈ-ಕಾಲು ಮುರಿಯುವ ಯೋಜನೆ ರೂಪಿಸಿದ್ದ ಹಂತಕರು; ತನಿಖೆ ವೇಳೆ ಬಯಲಾಗ್ತಿದೆ ಆಘಾತಕಾರಿ ಅಂಶ

ಬೆಂಗಳೂರಿನಲ್ಲಿ ಕೇತನ್ ಕೈ-ಕಾಲು ಮುರಿಯುವ ಯೋಜನೆ ರೂಪಿಸಿದ್ದ ಹಂತಕರು

Ketan Agarwal Murder Case: ಉದ್ಯಮಿ ಕೇತನ್ ಅಗರ್ವಾಲ್ ಕೊಲೆ ಪ್ರಕರಣದಲ್ಲಿ ಸಲ್ಲಿಸಲಾದ 5,300 ಪುಟಗಳ ಆರೋಪಪಟ್ಟಿಯಲ್ಲಿ, ಕೊಲೆಗೂ ಮುನ್ನ ಕೇತನ್‌ನನ್ನು ಬೆಂಗಳೂರಿಗೆ ಕರೆದೊಯ್ದು ಕೈಕಾಲು ಮುರಿಯುವ ಯೋಜನೆ ಇತ್ತು ಎನ್ನುವ ವಿಚಾರ ಬಹಿರಂಗಗೊಂಡಿದೆ. ಇಬ್ಬರು ಪ್ರಮುಖ ಆರೋಪಿಗಳು ಆರಂಭದಲ್ಲಿ ಕೇತನ್ ಅವರ ಕೈ-ಕಾಲುಗಳನ್ನು ಮುರಿಯುವ ಯೋಜನೆ ರೂಪಿಸಿದ್ದರು.

ಸೌಜನ್ಯ ಪ್ರಕರಣ: ತಂಡದ ಬದಲಾವಣೆ ಕಸರತ್ತು ಸಾಧ್ಯತೆ?: ಎಸ್‌ಐಟಿ ನೇತೃತ್ವದ ತನಿಖಾ ತಂಡ ರಾಥೋಡ್ ಹೆಸರು ಮುನ್ನೆಲೆಗೆ

ಎಸ್‌ಐಟಿ ನೇತೃತ್ವದ ತನಿಖಾ ತಂಡ ರಾಥೋಡ್ ಹೆಸರು ಮುನ್ನೆಲೆಗೆ

ತನಿಖೆಗೆ ಇಳಿದು ಇಲ್ಲಸಲ್ಲದ ಆರೋಪಗಳನ್ನು ಮೈಮೇಲೆ ಎಳೆದುಕೊಳ್ಳುವುದು, ಕೊನೆಗೆ ಕುಟುಂಬ ದವರ ಮೇಲೂ ಅಪಪ್ರಚಾರ ಬರುವ ವಾತಾವರಣದಲ್ಲಿ ವೃತ್ತಿಜೀವನಕ್ಕೆ ಕಳಂಕ ತಂದುಕೊಳ್ಳಲು ಇಷ್ಟವಿಲ್ಲ ಎಂದು ಅವರು ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ವೆಂಕಟೇಶ್ ಪ್ರಸನ್ನ ಅವರು ಮೇಲಾಧಿಕಾರಿಗಳನ್ನು ಭೇಟಿಯಾಗಿ ತಾನು ಈ ಎಸ್ಐಟಿ ತಂಡದ ಭಾಗವಾಗಲು ಬಯಸುವುದಿಲ್ಲ ಎಂದು ಲಿಖಿತವಾಗಿ ತಿಳಿಸಿದ್ದಾರೆ.

ನೈಸ್ ರಸ್ತೆ ವಿವಾದ: 3 ದಶಕ, 3 ನ್ಯಾಯಾಲಯ-ಯಾರ ವೈಫಲ್ಯ? 3 ದಶಕಗಳಲ್ಲಿ ಏನೆಲ್ಲ ಆಯ್ತು? ಇಲ್ಲಿದೆ ವಿವರ

ನೈಸ್ ರಸ್ತೆ ವಿವಾದ: 3 ದಶಕಗಳಲ್ಲಿ ಏನೆಲ್ಲ ಆಯ್ತು? ಇಲ್ಲಿದೆ ವಿವರ

NICE Road: ಸದ್ಯ ನೈಸ್ ರಸ್ತೆ ದೇಶಾದ್ಯಂತ ಚರ್ಚೆಯಲ್ಲಿದೆ. ರಾಜಕೀಯ, ಭೂಸ್ವಾಧೀನ, ಟೋಲ್ ಹಾಗೂ ನ್ಯಾಯಾಂಗ ಹೋರಾಟಗಳ ಕೇಂದ್ರಬಿಂದು ಎನಿಸಿಕೊಂಡಿದೆ. ಇತ್ತೀಚೆಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ನೈಸ್ ರಸ್ತೆಯಲ್ಲಿ ಟೋಲ್ ಪಾವತಿಸದಂತೆ ವಾಹನ ಸವಾರರಿಗೆ ಕರೆ ನೀಡಿರುವುದು, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಗೆ ಪತ್ರ ಬರೆದು ಟೋಲ್ ರದ್ದತಿಗೆ ಒತ್ತಾಯಿಸಿರುವುದು ಹಾಗೂ ನಿಖಿಲ್ ಕುಮಾರಸ್ವಾಮಿ ‘ನಥಿಂಗ್ ನೈಸ್’ ಅಭಿಯಾನ ಆರಂಭಿಸಿರುವುದು ವಿವಾದಕ್ಕೆ ಮತ್ತೊಮ್ಮೆ ಕಿಚ್ಚು ಹಚ್ಚಿದೆ. ಹಾಗಾದರೆ ಏನಿದು ವಿವಾದ? ಇಲ್ಲಿದೆ ವಿವರ.

Loading...