ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

TVK Vijay: ಜನರಿಗೆ ಮೋಸ ಮಾಡುವುದೇ ಡಿಎಂಕೆ ಕೆಲಸ; ಪುದುಚೇರಿಯಲ್ಲಿ ವಿಜಯ್‌ ವಾಗ್ದಾಳಿ

ಕರೂರು ದುರಂತದ ಬಳಿಕ ಮೊದಲ ಬಾರಿಗೆ ನಟ ವಿಜಯ್‌ ಸಾರ್ವಜನಿಕ ರ್ಯಾಲಿಯಲ್ಲಿ ಇಂದು (ಮಂಗಳವಾರ) ಭಾಗವಹಿಸಿದ್ದರು. ಬೃಹತ್ ರ‍್ಯಾಲಿಯಲ್ಲಿ ವಿಜಯ್‌ ತಮ್ಮ ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿ, ವಿಪಕ್ಷಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದರು. ಪುದುಚೇರಿ ಸರ್ಕಾರ ಪಕ್ಷಪಾತವಿಲ್ಲದೆ ನಮಗೆ ಭದ್ರತೆ ನೀಡಿದೆ. ತಮಿಳುನಾಡಿನ ಡಿಎಂಕೆ ಸರ್ಕಾರ ಇದನ್ನು ನೋಡಿ ಕಲಿಯಬೇಕು ಎಂದು ಅವರು ಹೇಳಿದ್ದಾರೆ.

ಜನರಿಗೆ ಮೋಸ ಮಾಡುವುದೇ ಡಿಎಂಕೆ ಕೆಲಸ; ಪುದುಚೇರಿಯಲ್ಲಿ ವಿಜಯ್‌ ವಾಗ್ದಾಳಿ

ಟಿವಿಕೆ ರ್ಯಾಲಿ -

Vishakha Bhat
Vishakha Bhat Dec 9, 2025 5:16 PM

ಪುದುಚೇರಿ: ಕರೂರು ದುರಂತದ ಬಳಿಕ ಮೊದಲ (TVK Vijay) ಬಾರಿಗೆ ನಟ ವಿಜಯ್‌ ಸಾರ್ವಜನಿಕ ರ್ಯಾಲಿಯಲ್ಲಿ ಇಂದು (ಮಂಗಳವಾರ) ಭಾಗವಹಿಸಿದ್ದರು. ಬೃಹತ್ ರ‍್ಯಾಲಿಯಲ್ಲಿ ವಿಜಯ್‌ ತಮ್ಮ ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿ, ವಿಪಕ್ಷಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದರು. 'ಪುದುಚೇರಿ ಮಕ್ಕಳ್ ಸಂತಿಪ್ಪು ನೀದಿ ಪಯಣಂ' ರ‍್ಯಾಲಿ ಉಪ್ಪಲಂನ ಎಕ್ಸ್‌ಪೋ ಮೈದಾನದಲ್ಲಿ ಯಾರ್ಲಿಯನ್ನು ಆಯೋಜಿಸಲಾಗಿತ್ತು. ವೇದಿಕೆಯಲ್ಲಿ ಮಾತನಾಡಿದ ವಿಜಯ್‌ ಡಿಎಂಕೆ ಮೇಲೆ ಕಿಡಿ ಕಾರಿದರು.

ಪುದುಚೇರಿ ಸರ್ಕಾರ ಪಕ್ಷಪಾತವಿಲ್ಲದೆ ನಮಗೆ ಭದ್ರತೆ ನೀಡಿದೆ. ತಮಿಳುನಾಡಿನ ಡಿಎಂಕೆ ಸರ್ಕಾರ ಇದನ್ನು ನೋಡಿ ಕಲಿಯಬೇಕು.ಎಂದು ಪುದುಚೇರಿ ಮುಖ್ಯಮಂತ್ರಿ ಎನ್. ರಂಗಸ್ವಾಮಿ ಅವರ ಆಡಳಿತವನ್ನು ವಿಜಯ್‌ ಹಾಡಿ ಹೊಗಳಿದರು. ಮುಂದುರೆದು, ಡಿಎಂಕೆ ಸರ್ಕಾರ ಈಗ ಬುದ್ಧಿ ಕಲಿಯುವುದಿಲ್ಲ, 2026ರ ಚುನಾವಣೆಯಲ್ಲಿ ಜನರೇ ಅವರಿಗೆ ಪಾಠ ಕಲಿಸುತ್ತಾರೆ. ವಿಜಯ್‌ ತಮಿಳುನಾಡಲ್ಲಿ ಮಾತ್ರ ಮಾತನಾಡುತ್ತಾರೆ ಎಂದು ಭಾವಿಸಬೇಡಿ. ನಾನು ಪುದುಚೇರಿ ಪರವಾಗಿಯೂ ಇದ್ದೇನೆ ಎಂದು ವಿಜಯ್‌ ಹೇಳಿದ್ದಾರೆ. ಜನರು ಡಿಎಂಕೆ ಸರ್ಕಾರವನ್ನು ನಂಬಬಾರದು, ಅವರು ಜನರನ್ನು ಮೋಸಗೊಳಿಸುತ್ತಾರೆ ಎಂದು ಅವರು ಹೇಳಿದ್ದಾರೆ.

ತಮಿಳಿನ ಡಿಎಂಕೆ ಆಡಳಿತವು ನಿಷ್ಪಕ್ಷಪಾತ ಪುದುಚೇರಿ ಸರ್ಕಾರದಿಂದ ಕಲಿತರೆ ಒಳ್ಳೆಯದು, ಆದರೆ ಅವರು ಈಗ ಕಲಿಯುವುದಿಲ್ಲ. ಕೇಂದ್ರವನ್ನು ಗುರಿಯಾಗಿಸಿಕೊಂಡು ಮಾತನಾಡಿದ ವಿಜಯ್, ಪುದುಚೇರಿಗೆ ರಾಜ್ಯ ಸ್ಥಾನಮಾನ ನೀಡಬೇಕೆಂಬ ದೀರ್ಘಕಾಲದ ಬೇಡಿಕೆಯನ್ನು ಒತ್ತಿ ಹೇಳಿದರು. "ಪುದುಚೇರಿಯ ಅಭಿವೃದ್ಧಿಯಲ್ಲಿ ಕೇಂದ್ರವು ಬೆಂಬಲವಾಗಿ ನಿಂತಿಲ್ಲ ಎಂದು ಹೇಳಿದ್ದಾರೆ.

"ನಾನು ನಿನ್ನ ಮಗನಿದ್ದಂತೆ"; ಸಂತ್ರಸ್ತರ ಕುಟುಂಬಸ್ಥರಿಗೆ ವಿಡಿಯೋ ಕಾಲ್‌ ಮಾಡಿದ ವಿಜಯ್‌

ಗನ್‌ ಹಿಡಿದು ಬಂದ ವ್ಯಕ್ತಿ!

ಟಿವಿಕೆ ರ್ಯಾಲಿ ವೇಳೆ ಭದ್ರತಾ ಲೋಪವಾಗಿದ್ದು, ಹ್ಯಾಂಡ್‌ಗನ್ ಹಿಡಿದು ನಟನ ಬಳಿ ತೆರಳಲು ಯತ್ನಿಸಿದ ತಮಿಳುನಾಡಿನ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿ ತಮಿಳುನಾಡಿನ ಶಿವಗಂಗಾ ಜಿಲ್ಲೆಯವನೆಂದು ಮತ್ತು ತಾನು ಖಾಸಗಿ ಭದ್ರತಾ ಅಧಿಕಾರಿಯಾಗಿದ್ದು, ಸಮಯಕ್ಕೆ ಸರಿಯಾಗಿ ತನ್ನ ತಂಡವನ್ನು ಸೇರಲು ಸಾಧ್ಯವಾಗಲಿಲ್ಲ ಎಂದು ಹೇಳಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತನ್ನ ಬಳಿ ಪರವಾನಗಿ ಪಡೆದ ರಿವಾಲ್ವರ್ ಇದೆ ಎಂದು ಆ ವ್ಯಕ್ತಿ ಹೇಳಿಕೊಂಡಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಆ ವ್ಯಕ್ತಿಯನ್ನು ಬಂಧಿಸಲಾಗಿದೆ.