ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Manipur Unrest: ರಾಷ್ಟ್ರಪತಿ ಆಳ್ವಿಕೆ ಜಾರಿ ಬೆನ್ನಲ್ಲೇ ಮಣಿಪುರದಲ್ಲಿ ಕುಕಿ ಉಗ್ರರು ಅರೆಸ್ಟ್‌

ಮಣಿಪುರದಲ್ಲಿ(Manipur Unrest) ಕಳೆದ ಎರಡು ದಿನಗಳಲ್ಲಿ ಹನ್ನೊಂದು ಉಗ್ರರನ್ನು ಬಂಧಿಸಲಾಗಿದೆ. ಇದರಲ್ಲಿ ಕುಕಿ ರಾಷ್ಟ್ರೀಯ ಸೇನೆಯ (KNA)ಏಳು ಶಂಕಿತ ಉಗ್ರರು ಸೇರಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಶುಕ್ರವಾರ ಚುರಾಚಂದ್‌ಪುರದ ಓಲ್ಡ್ ಖೌಕುವಾಲ್ ಪ್ರದೇಶದಿಂದ ಶಂಕಿತ ಕೆಎನ್‌ಎ ಉಗ್ರರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಣಿಪುರದಲ್ಲಿ 11 ಕುಕಿ ಉಗ್ರರು ಅರೆಸ್ಟ್‌

ಬಂಧಿತ ಕುಕಿ ಉಗ್ರರು

Profile Rakshita Karkera Feb 16, 2025 7:08 PM

ಇಂಫಾಲ: ರಾಷ್ಟ್ರಪತಿ ಆಳ್ವಿಕೆ ಹೇರಿದ ನಂತರ ಮಣಿಪುರದಲ್ಲಿ(Manipur Unrest) ಕಳೆದ ಎರಡು ದಿನಗಳಲ್ಲಿ ಹನ್ನೊಂದು ಉಗ್ರರನ್ನು ಬಂಧಿಸಲಾಗಿದೆ, ಇದರಲ್ಲಿ ಕುಕಿ ರಾಷ್ಟ್ರೀಯ ಸೇನೆಯ (KNA)ಏಳು ಶಂಕಿತ ಉಗ್ರರು ಸೇರಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಶುಕ್ರವಾರ ಚುರಾಚಂದ್‌ಪುರದ ಓಲ್ಡ್ ಖೌಕುವಾಲ್ ಪ್ರದೇಶದಿಂದ ಶಂಕಿತ ಕೆಎನ್‌ಎ ಉಗ್ರರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಂಫಾಲ ಪೂರ್ವ ಜಿಲ್ಲೆಯ ಹುಯಿಕಾಪ್ ಗ್ರಾಮದಲ್ಲಿ ಶನಿವಾರ ನಡೆದ ಮತ್ತೊಂದು ಕಾರ್ಯಾಚರಣೆಯಲ್ಲಿ, ಇಬ್ಬರು ಮಹಿಳೆಯರು ಸೇರಿದಂತೆ ಮೈತೈ ಉಗ್ರಗಾಮಿ ಗುಂಪು ಕಾಂಗ್ಲೈಪಾಕ್ ಕಮ್ಯುನಿಸ್ಟ್ ಪಾರ್ಟಿ (ಪೀಪಲ್ಸ್ ವಾರ್ ಗ್ರೂಪ್) ಅಥವಾ ಕೆಸಿಪಿ (ಪಿಡಬ್ಲ್ಯೂಜಿ) ಯ ನಾಲ್ವರು ಸದಸ್ಯರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.



ಅವರ ಬಳಿಯಿಂದ ಎರಡು ಎಕೆ ಅಸಾಲ್ಟ್ ರೈಫಲ್‌ಗಳು, ಪಿಸ್ತೂಲ್‌ಗಳು, ಮದ್ದುಗುಂಡುಗಳು, ಅಪರಾಧ ದಾಖಲೆಗಳು ಮತ್ತು ಕಿರುಪುಸ್ತಕಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ರಾಷ್ಟ್ರಪತಿ ಆಳ್ವಿಕೆಯನ್ನು ಹೇರಿದ ನಂತರ (ಅಸೆಂಬ್ಲಿ ವಿಸರ್ಜಿಸಲಾಗಿಲ್ಲ), ಭದ್ರತಾ ಪಡೆಗಳು ಬಂಕರ್‌ಗಳನ್ನು ಕೆಡವಲು ಮತ್ತು ಗ್ರಾಮ ಸ್ವಯಂಸೇವಕರು ಎಂದು ಕರೆದುಕೊಳ್ಳುವ ಎರಡೂ ಕಡೆಯ ಜನರನ್ನು ನಿಶಸ್ತ್ರಗೊಳಿಸಲು ರಾಜ್ಯಾದ್ಯಂತ ಕಾರ್ಯಾಚರಣೆ ನಡೆಸುತ್ತಿವೆ. ಕುಕಿ ಬುಡಕಟ್ಟು ಜನಾಂಗದವರು ಅರಾಂಬೈ ಟೆಂಗೋಲ್ ಮುಖ್ಯಸ್ಥ ಕೊರೌಂಗನ್ಬಾ ಖುಮಾನ್‌ನನ್ನು ಬಂಧಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.

ಮಣಿಪುರ ಮುಖ್ಯಮಂತ್ರಿ ಎನ್‌.ಬಿರೇನ್‌ ಸಿಂಗ್‌ (N. Biren Singh) ರಾಜೀನಾಮೆ ನೀಡಿದ 5 ದಿನಗಳ ಬಳಿಕ ಗುರುವಾರ (ಫೆ. 13) ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ (President's Rule) ಜಾರಿಗೊಳಿಸಲಾಗಿದೆ. ಮಣಿಪುರದಲ್ಲಿ ಜನಾಂಗೀಯ ಘರ್ಷಣೆ ನಡೆದು ಸುಮಾರು 250 ಮಂದಿ ಮೃತಪಟ್ಟ 21 ತಿಂಗಳ ಬಳಿಕ ಫೆ. 9ರಂದು ಅವರು ರಾಜೀನಾಮೆ ಸಲ್ಲಿಸಿದ್ದರು. ಬಿರೇನ್‌ ಸಿಂಗ್‌ ರಾಜೀನಾಮೆ ನೀಡಿ ಇಷ್ಟು ದಿನವಾದರೂ ಮತ್ತೊಬ್ಬ ಮುಖ್ಯಮಂತ್ರಿಯನ್ನು ಬಿಜೆಪಿ (BJP) ಸೂಚಿಸದ ಹಿನ್ನೆಲೆಯಲ್ಲಿ ಇದೀಗ ರಾಷ್ಟ್ರಪತಿ ಆಡಳಿತ ಜಾರಿಗಳಿಸಲಾಗಿದೆ.

ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಕುರಿತು ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಸುತ್ತೋಲೆ ಹೊರಡಿಸಿದ್ದಾರೆ. ಮಣಿಪುರ ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ ಅವರು ನೀಡಿದ ವರದಿ ಪ್ರಕಾರ, ರಾಜ್ಯದಲ್ಲಿ ಉದ್ಭವಿಸಿದ ರಾಜಕೀಯ ಬೆಳವಣಿಗೆಯಿಂದ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಇನ್ನುಮುಂದೆ ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ ಅವರಿಗೆ ಪರಮಾಧಿಕಾರ ಇರಲಿದೆ. 1951ರ ಬಳಿಕ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗುತ್ತಿರುವುದು ಇದು 11ನೇ ಬಾರಿ ಎನ್ನುವುದು ವಿಶೇಷ.

ಈ ಸುದ್ದಿಯನ್ನೂ ಓದಿ: President's Rule: ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ

ಗಲಭೆ ಬಳಿಕ ಮಣಿಪುರ ಮೇಲ್ನೋಟಕ್ಕೆ ಶಾಂತವಾಗಿದ್ದರೂ ಒಳಗೊಳಗೆ ಬೇಗುದಿಗಳು ಹಾಗೇ ಇದೆ. ಸಂಘರ್ಷದ ಬಳಿಕವೂ ಅಲ್ಲೊಂದು ಇಲ್ಲೊಂದು ಎಂಬಂತೆ ಹಿಂಸಾಚಾರ ಘಟನೆಗಳು ನಡೆಯುತ್ತಿದ್ದು, ಇದು ಮತ್ತೆ ಹಿಂಸಾಚಾರ ಭುಗಿಲೇಳುವ ಸೂಚನೆಗಳು ಎಂದು ಹೇಳಲಾಗಿತ್ತು.