Illegal Gold: ಗುಜರಾತ್‌ನ ಫ್ಲ್ಯಾಟ್‌ನಲ್ಲಿ 90 ಕೆಜಿ ಚಿನ್ನ ಪತ್ತೆ
ಗುಜರಾತ್‌ನ ಫ್ಲ್ಯಾಟ್‌ನಲ್ಲಿ ಮಾ. 17ರಂದು ಶೋಧ ನಡೆಸಿದ ಅಧಿಕಾರಿಗಳ ತಂಡವು ಸುಮಾರು 88 ಕಿಲೋ ಚಿನ್ನದ ಗಟ್ಟಿ ಹಾಗೂ 19.66 ಕಿಲೋ ಚಿನ್ನಾಭರಣಗಳು ಪತ್ತೆ ಹಚ್ಚಿದೆ. ಇದರ ಜತೆಗೆ 11 ಐಷಾರಾಮಿ ವಾಚುಗಳು ಕಂಡುಬಂದಿವೆ. ಇದರಲ್ಲಿ ಜೇಕಬ್ & ಕಂಪನಿ ಟೈಮ್‌ಪೀಸ್‌ನ ವಜ್ರ ಖಚಿತ ಪಟೇಕ್ ಫಿಲಿಪ್ ವಾಚ್, ಫ್ರಾಂಕ್ ಮುಲ್ಲರ್ ವಾಚ್‌ಗಳೂ ಇವೆ.

gold bars

ಗಾಂಧಿನಗರ: ನಟಿ ರನ್ಯಾ ರಾವ್ ಚಿನ್ನ ಕಳ್ಳಸಾಗಾಟ ಪ್ರಕರಣದ ಬೆನ್ನಲ್ಲೇ ಬಹುಕೋಟಿ ರೂ. ಮೌಲ್ಯದ ಚಿನ್ನಾಭರಣಗಳನ್ನು ಗುಜರಾತಿನ ಫ್ಲ್ಯಾಟ್ ಒಂದರಲ್ಲಿ ಡಿಆರ್‌ಐ ತಂಡ ವಶಪಡಿಸಿಕೊಂಡಿದೆ. ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಹಾಗೂ ಗುಜರಾತ್ ಉಗ್ರ ನಿಗ್ರಹ ತಂಡ (ಗುಜರಾತ್ ಎಟಿಎಸ್) ಜಂಟಿಯಾಗಿ ಶೋಧ ನಡೆಸಿ ಚಿನ್ನದ ಕಳ್ಳಸಾಗಣೆ ಕಾರ್ಯಾಚರಣೆಯನ್ನು ಭೇದಿಸಿದ್ದು, ಗುಜರಾತ್‌ನ ಅಹಮದಾಬಾದ್‌ನ ಅಪಾರ್ಟ್‌ಮೆಂಟ್‌ನಿಂದ 80 ಕೋಟಿ ರೂ. ಮೌಲ್ಯದ ಚಿನ್ನದ ಗಟ್ಟಿ (Gold bars), 1.37 ಕೋಟಿ ರೂ. ನಗದು ಮತ್ತು ಐಷಾರಾಮಿ ವಾಚ್‌ಗಳನ್ನು ಜಪ್ತಿ ಮಾಡಿದೆ. ಈ ಚಿನ್ನದ ಗಟ್ಟಿಗಳನ್ನು ವಿದೇಶದಿಂದ ಕಳ್ಳ ಸಾಗಾಣಿಕೆ ಮಾಡಲಾಗಿದೆ ಎಂದು ಗೃಹ ಸಚಿವಾಲಯ ದೃಢೀಕರಿಸಿದೆ.
ಅಹಮದಾಬಾದ್‌ನ ಪ್ಲ್ಯಾಟ್‌ವೊಂದರಲ್ಲಿ ಮಾ. 17ರಂದು ಶೋಧ ನಡೆಸಿದ ಅಧಿಕಾರಿಗಳ ತಂಡಕ್ಕೆ ಸುಮಾರು 88 ಕಿಲೋ ಚಿನ್ನದ ಗಟ್ಟಿ ಹಾಗೂ 19.66 ಕಿಲೋ ಚಿನ್ನಾಭರಣಗಳು ಪತ್ತೆಯಾಗಿದೆ. ಇದರ ಜತೆ 11 ಐಷಾರಾಮಿ ವಾಚುಗಳು ಕಂಡುಬಂದಿವೆ. ಇದರಲ್ಲಿ ಜೇಕಬ್ & ಕಂಪನಿ ಟೈಮ್‌ಪೀಸ್‌ನ ವಜ್ರ ಖಚಿತ ಪಟೇಕ್ ಫಿಲಿಪ್ ವಾಚ್, ಫ್ರಾಂಕ್ ಮುಲ್ಲರ್ ವಾಚ್‌ಗಳೂ ಇವೆ. ಇದಲ್ಲದೆ 19.66 ಕಿಲೋ ತೂಕದ ವಜ್ರದ ಗಟ್ಟಿ ಹಾಗೂ ಇತರ ಚಿನ್ನಾಭರಣಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಅಹಮದಾಬಾದ್‌ನ ಸ್ಟಾಕ್ ಬ್ರೋಕರ್ ಮಹೇಂದ್ರ ಶಾ ಅವರ ಪುತ್ರ ಮೇಘ ಶಾಗೆ ಸೇರಿದ ಫ್ಲ್ಯಾಟ್‌ನಿಂದ ಈ ಚಿನ್ನವನ್ನು ವಶ ಪಡಿಸಿಕೊಳ್ಳಲಾಗಿದೆ ಎಂದು ಡಿಆರ್‌ಐ ಮೂಲಗಳು ದೃಢಪಡಿಸಿವೆ. ಎಟಿಎಸ್‌ಡಿಎಸ್ ಪಿಎಸ್. ಎಲ್.ಚೌಧರಿ ಅವರಿಗೆ ಲಭಿಸಿದ ಗುಪ್ತಚರ ಮಾಹಿತಿ ಮೇರೆಗೆ ಅಧಿಕಾರಿಗಳು ಕಾರ್ಯಾಚರಣೆಯನ್ನು ಆರಂಭಿಸಿದರು. ಅಧಿಕಾರಿಗಳು ದಾಳಿ ಮಾಡುವ ಸಂದರ್ಭ ಫ್ಲ್ಯಾಟ್‌ಗೆ ಬೀಗ ಹಾಕಲಾಗಿದ್ದು, ಚಿನ್ನವನ್ನು ವಿದೇಶದಿಂದ ಭಾರತಕ್ಕೆ ಕಳ್ಳಸಾಗಣೆ ಮಾಡಿರುವ ಬಗ್ಗೆ ತನಿಖಾಧಿಕಾರಿಗಳು ಶಂಕಿಸಿದ್ದಾರೆ. ಗುಜರಾತ್ ಎಟಿಎಸ್ ಈ ಪ್ರಕರಣವನ್ನು ಡಿಆರ್‌ಐಗೆ ಹಸ್ತಾಂತರಿಸಿದ್ದು, ಚಿನ್ನ, ಐಷಾರಾಮಿ ಕೈಗಡಿಯಾರಗಳು ಮತ್ತು ನಗದು ಹೇಗೆ ಅಮದು ಮಾಡಿಕೊಳ್ಳಲಾಯಿತು ಎಂದು ಈ ಬಗ್ಗೆ ತನಿಖೆ ಮಾಡುತ್ತಿದ್ದಾರೆ.
ಇದನ್ನು ಓದಿ: Robbery Case: ರಿವಾಲ್ವರ್ ತೋರಿಸಿ ಚಿನ್ನದದಂಗಡಿ ಲೂಟಿ ಮಾಡಿ ದರೋಡೆಕೋರರು! ವಿಡಿಯೊ ವೈರಲ್
ದುಬೈಯಿಂದ ಬೆಂಗಳೂರಿಗೆ ಸುಮಾರು 14.56 ಕೋಟಿ ರೂ. ಮೌಲ್ಯದ 14.2 ಕೆಜಿ ಚಿನ್ನ ಕಳ್ಳಸಾಗಣೆ ಮಾಡಿದ ಆರೋಪದ ಮೇಲೆ ಇತ್ತೀಚೆಗೆ ನಟಿ ರನ್ಯಾ ರಾವ್ ಅವರನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಬಂಧಿಸಿತ್ತು. ನಟಿ ರನ್ಯಾ ರಾವ್ ವಿರುದ್ಧದ ಪ್ರಕರಣ ಬಗೆದಷ್ಟು ಹೆಚ್ಚುತ್ತಿ ದ್ದಂತೆ ಇಡಿ ಅಧಿಕಾರಿಗಳು ರಾಜ್ಯದ ಹಲವೆಡೆ ದಾಳಿ ನಡೆಸಿದ್ದಾರೆ.