ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Men Will Be Men: ಬರ್ತ್‌ಡೇ ದಿನ ಮೊದಲು ಬೆಸ್ಟ್ ಫ್ರೆಂಡ್‌ಗೆ ಕೇಕ್ ತಿನ್ನಿಸಿದ ಪ್ರಿಯತಮೆ; ಕೋಪದಿಂದ ಎಲ್ಲವನ್ನೂ ಧ್ವಂಸ ಮಾಡಿದ ಪ್ರಿಯತಮ

Viral Video: ಯುವಕನೊಬ್ಬ ತನ್ನ ಪ್ರಿಯತೆಮೆಯ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಣೆ ಮಾಡಲು ಮುಂದಾಗಿದ್ದಾನೆ. ಬಣ್ಣ ಬಣ್ಣದ ಬಲೂನ್‌ಗಳು, ವಿದ್ಯುತ್ ಆಲಂಕಾರಗಳು ಹಾಗೂ ಕೇಕ್‌ನೊಂದಿಗೆ ಸತ್‌ಪ್ರೈಸ್‌ ನೀಡಿದ್ದಾನೆ. ಆದರೆ ಈ ಸಂಭ್ರಮದ ಮಧ್ಯೆ ನಡೆದ ಒಂದು ಘಟನೆ ಇಡೀ ಖುಷಿಯನ್ನೇ ಹಾಳು ಮಾಡಿದೆ. ಯುವತಿಯು ಕೇಕ್ ಕತ್ತರಿಸಿದ ನಂತರ, ತನ್ನ ಪಕ್ಕದಲ್ಲಿ ನಿಂತಿದ್ದ ಆತ್ಮೀಯ ಗೆಳೆಯನಿಗೆ ಮೊದಲು ಕೇಕ್‌ ಅನ್ನು ತಿನ್ನಿಸಿದ್ದು ಈ ಅನಾಹುತಕ್ಕೆ ಕಾರಣ.

ಆತ್ಮೀಯ ಗೆಳೆಯನಿಗೆ ಕೇಕ್ ತಿನ್ನಿಸಿದ ಯುವತಿ: ಪ್ರಿಯತಮ ಕಿಡಿಕಿಡಿ

ಆತ್ಮೀಯ ಗೆಳೆಯನಿಗೆ ಕೇಕ್ ತಿನ್ನಿಸಿದ ಯುವತಿ -

Profile
Pushpa Kumari Dec 25, 2025 10:31 PM

ನವದೆಹಲಿ, ಡಿ.‌ 25: ಸಣ್ಣ ಪುಟ್ಟ ವಿಚಾರಕ್ಕೆ ಪ್ರೇಮಿಗಳ ನಡುವೆ ವಿರಸ, ಮುನಿಸು ಬರುವುದು ಸಾಮಾನ್ಯ. ಅದರಲ್ಲೂ ಪ್ರೇಮಿಗಳ ಜಗಳ, ಹೊಡೆದಾಟಕ್ಕೆ ಸಂಬಂಧಪಟ್ಟ ಅನೇಕ ವಿಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗುತ್ತವೆ. ಇದೀಗ ಬರ್ತ್‌ಡೇ ಸಂಭ್ರಮದ ಮಧ್ಯೆ ಪ್ರೇಮಿಗಳಿಬ್ಬರ ಜಗಳವಾಡಿದ ವಿಡಿಯೊ ಭಾರಿ ವೈರಲ್ ಆಗಿದೆ.‌ ತನ್ನ ಪ್ರೇಯಸಿಯ ಹುಟ್ಟುಹಬ್ಬಕ್ಕಾಗಿ ಪ್ರಿಯತಮ ಭರ್ಜರಿಯಾಗಿ ಸಿದ್ಧತೆ ನಡೆಸಿದ್ದ. ಆದರೆ ಅದೊಂದು ಘಟನೆ ಇಡೀ ಸಂಭ್ರಮವನ್ನೇ ಮಣ್ಣ ಪಾಲು ಮಾಡಿದೆ. ಅದೇನು ಎನ್ನುವ ವಿವರ ಇಲಲಿದೆ.

ಯುವಕನೊಬ್ಬ ತನ್ನ ಪ್ರಿಯತಮೆಯ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಣೆ ಮಾಡಲು ಮುಂದಾಗಿದ್ದಾನೆ. ಬಣ್ಣ ಬಣ್ಣದ ಬಲೂನ್‌ಗಳು, ವಿದ್ಯುತ್ ಆಲಂಕಾರಗಳು ಹಾಗೂ ಕೇಕ್‌ನೊಂದಿಗೆ ಸರ್‌ಪ್ರೈಸ್‌ ನೀಡಿದ್ದ. ಆದರೆ ಈ ಸಂಭ್ರಮದ ನಡುವೆ ಆ ಒಂದು ಘಟನೆ ಸಂಭವಿಸಿ ಕಾರ್ಯಕ್ರಮ, ಖುಷಿಯನ್ನೇ ಹಾಳು ಮಾಡಿದೆ. ಯುವತಿಯು ಕೇಕ್ ಕತ್ತರಿಸಿದ ನಂತರ, ತನ್ನ ಪಕ್ಕದಲ್ಲಿ ನಿಂತಿದ್ದ ತನ್ನ ಆತ್ಮೀಯ ಗೆಳೆಯನಿಗೆ ತಿನ್ನಿಸಿದ್ದು, ಪ್ರಿಯತಮನ ಕೋಪಕ್ಕೆ ಕಾರಣವಾಯಿತು.

ವಿಡಿಯೊ ನೋಡಿ:

ಪ್ರಿಯತಮೆ ತನ್ನನ್ನು ಬಿಟ್ಟು ಗೆಳೆಯನಿಗೆ ಮೊದಲು ಕೇಕ್‌ ತಿನ್ನಿಸಿದ್ದು ನೋಡಿ ಕೋಪಗೊಂಡ ಪ್ರಿಯತಮ ನಿಯಂತ್ರಣ ಕಳೆದುಕೊಂಡಿದ್ದಾನೆ. ತನ್ನ ಪ್ರೀತಿಗೆ ಬೆಲೆ ಇಲ್ಲ ಎಂದುಕೊಂಡ ಆತ ಕ್ಷಣವೇ ಅಲಂಕಾರಕ್ಕಾಗಿ ಕಟ್ಟಿದ್ದ ಬಲೂನ್‌ಗಳನ್ನು ಒಡೆದು, ಲೈಟ್‌ಗಳನ್ನು ಕಿತ್ತು ಎಸೆದಿದ್ದಾನೆ. ಅಷ್ಟೇ ಅಲ್ಲದೆ, ಇಡೀ ವೇದಿಕೆಯನ್ನು ಕೆಡವಿ ಸಂಭ್ರಮವನ್ನೇ ಹಾಳುಗೆಡವಿದ್ದಾನೆ. ಇದನ್ನು ಕಂಡು ಅಲ್ಲಿದ್ದ ಅತಿಥಿಗಳೇ ಕಂಗಾಲಾಗಿದ್ದಾರೆ.

ಗೃಹ ಪ್ರವೇಶ ಆಚರಣೆಯಲ್ಲಿ ಗೋಮಾತೆ ಬದಲಿಗೆ ಆಟಿಕೆ ಹಸು

ಈ ವಿಡಿಯೋ ಸೋಶಿಯಲ್ ಹರಿದಾಡುತ್ತಿದ್ದಂತೆ ನೆಟ್ಟಿಗರು ನಾನಾ ಬಗೆಯ ಪ್ರತಿಕ್ರಿಯೆ ನೀಡಿದ್ದಾರೆ. ಯುವಕನ ಪ್ರೀತಿ ಅತಿಯಾಗಿದೆ. ಇದೊಂದು 'ರೆಡ್ ಫ್ಲಾಗ್' ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಇದು ಯುವತಿಯದ್ದೆ ತಪ್ಪು. ಸಂಪೂರ್ಣ ಕಾರ್ಯಕ್ರಮವನ್ನು ಆಯೋಜಿಸಿದ್ದು ಆಕೆಯ ಲವರ್‌‌. ಅದನ್ನು ಬಿಟ್ಟು ಬೇರೆಯವರಿಗೆ ಮೊದಲ ಆದ್ಯತೆ ನೀಡುವುದು ಎಷ್ಟು ಸರಿ? ಎಂದು ಪ್ರಶ್ನಿಸಿದ್ದಾರೆ.