ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Operation Sindoor: ರಾತ್ರಿಯಾಗುತ್ತಿದ್ದಂತೆ ಪಾಕಿಸ್ತಾನದಿಂದ ದಾಳಿ; ಪಂಜಾಬ್‌ನಲ್ಲಿ ಡ್ರೋನ್‌ ಸ್ಫೋಟಗೊಂಡು ಮೂವರಿಗೆ ಗಾಯ

ಹಿಂದಿನೆರಡು ದಿನಗಳಂತೆ ಕತ್ತಲಾಗುತ್ತಿದ್ದಂತೆ ಬಾಲ ಬಿಚ್ಚಿದ ಹೇಡಿ ಪಾಕಿಸ್ತಾನ ಶುಕ್ರವಾರ ಭಾರತದ ವಿವಿಧ ನಗರಗಳನ್ನು ಗುರಿಯಾಗಿಸಿಕೊಂಡು ಡ್ರೋನ್‌ ಮೂಲಕ ದಾಳಿ ನಡೆಸಿದೆ. ಸುಮಾರು 36 ಕಡೆ, 100ಕ್ಕೂ ಹೆಚ್ಚು ಡ್ರೋನ್‌ ದಾಳಿ ನಡೆದಿದ್ದು, ಭಾರತೀಯ ಸೇನೆ ದಿಟ್ಟ ಪ್ರತ್ಯುತ್ತರ ನೀಡಿ ಅವುಗಳನ್ನು ಹೊಡೆದುರುಳಿಸಿದೆ. ಈ ಮಧ್ಯೆ ಪಂಜಾಬ್‌ನಲ್ಲಿ ಡ್ರೋನ್‌ ಸ್ಫೋಟಗೊಂಡು ಮೂವರು ನಾಗರಿಕರು ಗಾಯಗೊಂಡಿದ್ದಾರೆ.

ಪಂಜಾಬ್‌ನಲ್ಲಿ ಡ್ರೋನ್‌ ಸ್ಫೋಟಗೊಂಡು ಮೂವರಿಗೆ ಗಾಯ

Profile Ramesh B May 9, 2025 10:27 PM

ಹೊಸದಿಲ್ಲಿ: ಭಾರತದಿಂದ ಬಲವಾದ ಪಟ್ಟು ಬಿದ್ದ ಮೇಲೂ ಬುದ್ಧಿ ಕಲಿಯದ ಪಾಕಿಸ್ತಾನ ಶುಕ್ರವಾರ (ಮೇ 9) ಮತ್ತೆ ಭಾರತದ ಮೇಲೆ ದಾಳಿ ನಡೆಸಿದೆ (Operation Sindoor). ಹಿಂದಿನೆರಡು ದಿನಗಳಂತೆ ಕತ್ತಲಾಗುತ್ತಿದ್ದಂತೆ ಬಾಲ ಬಿಚ್ಚಿದ ಹೇಡಿ ಪಾಕಿಸ್ತಾನ ಶುಕ್ರವಾರ ಭಾರತದ ವಿವಿಧ ನಗರಗಳನ್ನು ಗುರಿಯಾಗಿಸಿಕೊಂಡು ಡ್ರೋನ್‌ ಮೂಲಕ ದಾಳಿ ನಡೆಸಿದೆ. ಸುಮಾರು 36 ಕಡೆ, 100ಕ್ಕೂ ಹೆಚ್ಚು ಡ್ರೋನ್‌ ದಾಳಿ ನಡೆದಿದ್ದು, ಭಾರತೀಯ ಸೇನೆ ದಿಟ್ಟ ಪ್ರತ್ಯುತ್ತರ ನೀಡಿ ಅವುಗಳನ್ನು ಹೊಡೆದುರುಳಿಸಿದೆ. ಈ ಮಧ್ಯೆ ಪಂಜಾಬ್‌ನಲ್ಲಿ ಡ್ರೋನ್‌ ಸ್ಫೋಟಗೊಂಡು ಮೂವರು ನಾಗರಿಕರು ಗಾಯಗೊಂಡಿದ್ದಾರೆ. ಸದ್ಯ ಅವರನ್ನು ಸೈನಿಕರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಪಂಜಾಬ್‌ನ ಫಿರೋಜ್‌ಪುರದ ಮನೆ ಮೇಲೆ ಡ್ರೋನ್‌ ಅಪ್ಪಳಿಸಿದ್ದು, ಮೂವರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಗಡಿ ಹಂಚಿಕೊಂಡಿರುವ ಜಮ್ಮು ಕಾಶ್ಮೀರ, ರಾಜಸ್ತಾನ, ಪಂಜಾಬ್‌ಗಳಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ. ವಿವಿಧ ನಗರಗಳನ್ನು ಬ್ಲ್ಯಾಕ್‌ಔಟ್‌ ಮಾಡಲಾಗಿದ್ದು, ಮನೆಯಿಂದ ಹೊರ ಬರದಂತೆ ನಾಗರಿಕರಿಗೆ ಎಚ್ಚರಿಕೆ ನೀಡಲಾಗಿದೆ.

ಈ ಮಧ್ಯೆ ಹೊಸದಿಲ್ಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ನಿವಾಸದಲ್ಲಿ ಹೈವೋಲ್ಟೇಜ್‌ ಸಭೆ ನಡೆಯುತ್ತಿದ್ದು, ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಲ್ಲ ಸಾಧ್ಯತೆ ಇದೆ. ಸಚಿವರಾದ ಜೈಶಂಕರ್‌, ರಾಜನಾಥ್‌ ಸಿಂಗ್‌ ಈ ಸಭೆಯಲ್ಲಿ ಭಾಗವಹಿಸಿದ್ದಾರೆ.



ಈ ಸುದ್ದಿಯನ್ನೂ ಓದಿ: India-Pak Conflict: ಇಂದು ನಿನ್ನೆಯದ್ದಲ್ಲ ಇಂಡಿಯಾ-ಪಾಕ್‌ ಸಂಘರ್ಷ; ಇಲ್ಲಿದೆ ಸಂಪೂರ್ಣ ಮಾಹಿತಿ

ಶುಕ್ರವಾರ ಡ್ರೋನ್‌ ದಾಳಿ ನಡೆದ ಸ್ಥಳಗಳು

ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ, ಶ್ರೀನಗರ, ಅವಾಂತಿಪೊರ, ನಾಗ್ರೋಟಾ ಮತ್ತು ಜಮ್ಮು, ಪಂಜಾಬ್‌ನ ಫಿರೋಜ್‌ಪುರ, ಪಠಾಣ್‌ಕೋಟ್‌ ಮತ್ತು ಫಜಿಕ್ಲಾ, ರಾಜಸ್ಥಾನದ ಲಾಲ್‌ಗಢ್ ಜತ್ತಾ, ಜೈಸಲ್ಮೇರ್‌ ಮತ್ತು ಬರಮರ್ ಹಾಗೂ ಗುಜರಾತ್‌ನ ಭುಜ್ ಮತ್ತು ಕುವಾರ್ ಬೆಟ್‌ನಲ್ಲಿ ಪಾಕಿಸ್ತಾನದ ಡ್ರೋನ್‌ ಕಂಡು ಬಂದಿದ್ದು, ಅದನ್ನು ಹೊಡೆದುರುಳಿಸಲಾಗಿದೆ.