ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮುಂಬೈಯ ಮುಂದಿನ ಮೇಯರ್ ಪಟ್ಟ ಮಹಿಳೆಗೆ: ಕೋಟಾ ಲಾಟರಿ ಹೇಗೆ ಕೆಲಸ ಮಾಡುತ್ತದೆ? ಇಲ್ಲಿದೆ ಮಾಹಿತಿ

Mumbai Mayor: ಮುುಂಬೈ ಮಹಾನಗರ ಪಾಲಿಕೆಯ ಮುಂದಿನ ಮೇಯರ್ ಆಗಿ ಸಾಮಾನ್ಯ ವರ್ಗದ ಮಹಿಳೆಯನ್ನು ಆಯ್ಕೆ ಮಾಡಲು ನಿರ್ಧರಿಸಲಾಗಿದೆ. ಗುರುವಾರ (ಜನವರಿ 22) ಲಾಟರಿ ಆಯ್ಕೆ ನಡೆಯಿತು. ಮಹಾರಾಷ್ಟ್ರದಲ್ಲಿ ಮಹಾನಗರಪಾಲಿಕೆಯ ಮೇಯರ್ ಸ್ಥಾನಕ್ಕಾಗಿ ಡ್ರಾ / ಲಾಟರಿ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ:

ಮುಂಬೈ ಮೇಯರ್ ಆಗಿ ಆಯ್ಕೆಯಾಗಲಿದ್ದಾರೆ ಮಹಿಳೆ

ಮುಂಬೈಯ ಮುಂದಿನ ಮೇಯರ್ ಆಗಿ ಮಹಿಳೆ ಆಯ್ಕೆ -

Priyanka P
Priyanka P Jan 22, 2026 6:58 PM

ಮುಂಬೈ, ಜ. 22: ಗುರುವಾರ (ಜನವರಿ 22) ನಡೆದ ಲಾಟರಿ ವಿಧಾನದ ಪ್ರಕಾರ ಮುಂಬೈ ನಗರದ ಮುಂದಿನ ಮಹಾಪೌರ (Mayor) ಆಗಿ ಸಾಮಾನ್ಯ ವರ್ಗದ ಮಹಿಳೆ ಆಯ್ಕೆಯಾಗಲಿದ್ದಾರೆ. ರಾಜ್ಯದ ಆಡಳಿತಾರೂಢ ಪಕ್ಷಗಳಾದ ಬಿಜೆಪಿ (BJP) ಮತ್ತು ಶಿವಸೇನೆಗೆ (Shiva Sena) ಅನುಕೂಲವಾಗುವಂತೆ ಪ್ರಕ್ರಿಯೆಯನ್ನು ಫಿಕ್ಸ್‌ ಮಾಡಲಾಗಿದೆ ಎಂದು ವಿಪಕ್ಷಗಳು ಆರೋಪಿಸಿವೆ.

ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಶಿವಸೇನೆ (ಯುಬಿಟಿ) ಈ ಪ್ರಕ್ರಿಯೆಗೆ ಆಕ್ಷೇಪ ವ್ಯಕ್ತಪಡಿಸಿ, ಮೀಸಲಾತಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದೆ. ಪರಿಶಿಷ್ಟ ಪಂಗಡ (ಎಸ್‌ಟಿ) ವರ್ಗದಲ್ಲಿ ಅರ್ಹ ಅಭ್ಯರ್ಥಿಗಳು ಇಬ್ಬರೂ ಉದ್ಧವ್ ಠಾಕ್ರೆ ಅವರ ಪಕ್ಷಕ್ಕೆ ಸೇರಿದವರಾಗಿರುವುದರಿಂದ ಈ ಹುದ್ದೆಯನ್ನು ಪರಿಶಿಷ್ಟ ಪಂಗಡಗಳಿಗೆ (ಎಸ್‌ಟಿ) ಮೀಸಲಿಡಬೇಕು ಎಂದು ಶಿವಸೇನೆ-ಯುಬಿಟಿ ಆಗ್ರಹಿಸಿದೆ.

ಮುಂಬೈ ಮಹಾನಗರ ಪಾಲಿಕೆಯಲ್ಲಿ ಗೆದ್ದ ಶಿವಸೇನೆಯ ಎಲ್ಲ ಕಾರ್ಪೋರೇಟರ್‌ಗಳು ಫೈವ್‌ ಸ್ಟಾರ್‌ ಹೋಟೆಲ್‌ಗೆ ಶಿಫ್ಟ್

ಮಹಾರಾಷ್ಟ್ರದಲ್ಲಿ ಮಹಾನಗರ ಪಾಲಿಕೆಯ ಮೇಯರ್ ಸ್ಥಾನಕ್ಕಾಗಿ ಡ್ರಾ / ಲಾಟರಿ ಪ್ರಕ್ರಿಯೆ ಹೇಗೆ ನಡೆಯುತ್ತದೆ?

ಮಹಾರಾಷ್ಟ್ರದಲ್ಲಿ ಮೇಯರ್‌ಗಳನ್ನು ನಗರಸಭೆಯ ಕಾರ್ಪೊರೇಟರ್‌ಗಳು ಆಯ್ಕೆ ಮಾಡುತ್ತಾರೆ. ಅರ್ಹತೆಯನ್ನು ಲಾಟರಿ ಆಧಾರಿತ ಮೀಸಲಾತಿ ವ್ಯವಸ್ಥೆ ಮೂಲಕ ನಿರ್ಧರಿಸಲಾಗುತ್ತದೆ. ಸಾಮಾನ್ಯ ಮತ್ತು ಮೀಸಲು ವರ್ಗಗಗಳಿಗೆ ಲಾಟರಿ ಮೂಲಕ ಪ್ರತಿ ಎರಡೂವರೆ ವರ್ಷಗಳಿಗೊಮ್ಮೆ ಮೇಯರ್ ಹುದ್ದೆಯನ್ನು ಮರು ಹಂಚಿಕೆ ಮಾಡಲಾಗುತ್ತದೆ.

ಕಾನೂನಿನ ಪ್ರಕಾರ, ಮೇಯರ್ ಹುದ್ದೆಯನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರ ಹಿಂದುಳಿದ ವರ್ಗಗಳು ಮತ್ತು ಮಹಿಳೆಯರಿಗೆ ಡ್ರಾ ಆಧಾರಿತ ಆವರ್ತನದ ಮೂಲಕ ಮೀಸಲಿಡಬೇಕು. ಮೀಸಲಾತಿ ವರ್ಗವನ್ನು ಘೋಷಿಸಿದ ನಂತರ, ಆಡಳಿತ ಮತ್ತು ವಿರೋಧ ಪಕ್ಷಗಳು ತಮ್ಮ ಮೇಯರ್ ನಾಮಪತ್ರಗಳನ್ನು ಸಲ್ಲಿಸುತ್ತವೆ.

ಬಹು ಅಭ್ಯರ್ಥಿಗಳು ಸ್ಪರ್ಧಿಸಬಹುದಾದರೂ, ಒಬ್ಬ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಕನಿಷ್ಠ 114 ಮತಗಳು ಬೇಕಾಗುತ್ತವೆ. 227 ಸದಸ್ಯರ ಸದನದಲ್ಲಿ ಇದು ಸಂಪೂರ್ಣ ಬಹುಮತ. ಚುನಾವಣೆಯನ್ನು ಸಭೆಯ ಹಿರಿಯ ಸದಸ್ಯರು ಮೇಲ್ವಿಚಾರಣೆ ಮಾಡುತ್ತಾರೆ. ಅವರು ಅಧ್ಯಕ್ಷತೆ ವಹಿಸುವ ಅಧಿಕಾರಿಯಾಗಿಯೂ ಕಾರ್ಯನಿರ್ವಹಿಸುತ್ತಾರೆ.

ನಾಮಪತ್ರ ಸಲ್ಲಿಕೆಯ ನಂತರ, ಅಭ್ಯರ್ಥಿಗಳು ತಮ್ಮ ನಾಮಪತ್ರವನ್ನು ಹಿಂಪಡೆಯಲು 15 ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ. ಮೇಯರ್ ಚುನಾವಣಾ ಪ್ರಕ್ರಿಯೆಯನ್ನು ಬಹಿರಂಗವಾಗಿ ನಡೆಸಲಾಗುತ್ತದೆ. ಇದರಲ್ಲಿ ಎಲ್ಲ ಕಾರ್ಪೊರೇಟರ್‌ಗಳು ತಾವು ಯಾರಿಗೆ ಮತ ಹಾಕುತ್ತಿದ್ದೇವೆಂದು ಸಾರ್ವಜನಿಕವಾಗಿ ಘೋಷಿಸುತ್ತಾರೆ.

ಈ ವರ್ಷ ಮುಂಬೈ ಮೇಯರ್ ಆಯ್ಕೆಯಾದಾಗ ಮುಂದಿನ ಮೇಯರ್ ಸಾಮಾನ್ಯ ವರ್ಗದ ಮಹಿಳೆಯಾಗಿರುತ್ತಾರೆ ಎಂದು ನಿರ್ಧರಿಸಲಾಯಿತು. ಪುಣೆ, ಧುಲೆ, ನಾಂದೇಡ್-ವಾಘಲಾ ಮತ್ತು ನವಿ ಮುಂಬೈ ಸೇರಿದಂತೆ ಇತರೆ ಎಂಟು ಕಡೆಗಳಲ್ಲಿ ಸಾಮಾನ್ಯ ವರ್ಗದ ಮಹಿಳಾ ಮೇಯರ್‌ಗಳಿರುತ್ತಾರೆ.

ಥಾಣೆಯಲ್ಲಿ ಪರಿಶಿಷ್ಟ ಜಾತಿ ವರ್ಗದಿಂದ ಮೇಯರ್ ಆಯ್ಕೆಯಾದರೆ, ಜಲಗಾಂವ್, ಚಂದ್ರಾಪುರ ಮತ್ತು ಅಹಲ್ಯಾನಗರಗಳಲ್ಲಿ ಒಬಿಸಿ ವರ್ಗದಿಂದ ಮಹಿಳಾ ಮೇಯರ್ ಆಯ್ಕೆಯಾಗಲಿದ್ದಾರೆ.

ಜನವರಿ 15ರಂದು ನಡೆದ ಚುನಾವಣೆಯಲ್ಲಿ, ಬಿಜೆಪಿ ಬಿಎಂಸಿಯಲ್ಲಿ 89 ಸ್ಥಾನಗಳನ್ನು ಗೆದ್ದರೆ, ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ 29 ಸ್ಥಾನಗಳನ್ನು ಗಳಿಸಿದೆ.