ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಹುಟ್ಟುಹಬ್ಬದ ದಿನವೇ ಅಭಿಷೇಕ್ ಬ್ಯಾನರ್ಜಿ ನಿವಾಸದ ಮೇಲೆ ದಾಳಿ; 6 ತಿಂಗಳಲ್ಲಿ 7ನೇ ಬಾರಿ ಹತ್ಯೆಯ ಯತ್ನ ಎಂದ ಸಂಸದ

ತೃಣಮೂಲ ಕಾಂಗ್ರೆಸ್ (TMC) ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ಕೋಲ್ಕತ್ತಾದ ನಿವಾಸದ ಮೇಲೆ ಶನಿವಾರ ನಡುರಾತ್ರಿ ಭೀಕರ ದಾಳಿ ನಡೆದಿದೆ. ತಮ್ಮ 39ನೇ ಹುಟ್ಟುಹಬ್ಬದ ಆಚರಣೆಯ ಸಿದ್ಧತೆಯಲ್ಲಿದ್ದ ವೇಳೆ ಈ ಘಟನೆ ನಡೆದಿದ್ದು, ಇದು ಕಳೆದ 6 ತಿಂಗಳ ಅವಧಿಯಲ್ಲಿ ತಮ್ಮ ಜೀವಕ್ಕೆ ನಡೆದ "7ನೇ ಹತ್ಯೆಯ ಯತ್ನ" ಎಂದು ಬ್ಯಾನರ್ಜಿ ಗಂಭೀರ ಆರೋಪ ಮಾಡಿದ್ದಾರೆ.

ಹುಟ್ಟುಹಬ್ಬದ ದಿನವೇ ಅಭಿಷೇಕ್ ಬ್ಯಾನರ್ಜಿ ನಿವಾಸದ ಮೇಲೆ ದಾಳಿ

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Nov 7, 2026 10:26 AM

ಕೊಲ್ಕತ್ತಾ: ತೃಣಮೂಲ ಕಾಂಗ್ರೆಸ್ (TMC) ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದ ಅಭಿಷೇಕ್ ಬ್ಯಾನರ್ಜಿ (Abhishek Banerjee) ಅವರ ಕೋಲ್ಕತ್ತಾದ ನಿವಾಸದ ಮೇಲೆ ಶನಿವಾರ (ನವೆಂಬರ್ 7, 2026) ನಡುರಾತ್ರಿ ಭೀಕರ ದಾಳಿ ನಡೆದಿದೆ. ತಮ್ಮ 39ನೇ ಹುಟ್ಟುಹಬ್ಬದ ಆಚರಣೆಯ ಸಿದ್ಧತೆಯಲ್ಲಿದ್ದ ವೇಳೆ ಈ ಘಟನೆ ನಡೆದಿದ್ದು, ಇದು ಕಳೆದ 6 ತಿಂಗಳ ಅವಧಿಯಲ್ಲಿ ತಮ್ಮ ಜೀವಕ್ಕೆ ನಡೆದ "7ನೇ ಹತ್ಯೆಯ ಯತ್ನ" ಎಂದು ಬ್ಯಾನರ್ಜಿ ಗಂಭೀರ ಆರೋಪ ಮಾಡಿದ್ದಾರೆ. ಈ ಘಟನೆಯು ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ಟಿಎಂಸಿ ಮತ್ತು ಬಿಜೆಪಿ ನಡುವೆ ತೀವ್ರ ರಾಜಕೀಯ ಜಟಾಪಟಿಗೆ ಕಾರಣವಾಗಿದೆ.

ಶನಿವಾರ ಮುಂಜಾನೆ ಸುಮಾರು 2:00 ಗಂಟೆಯ ಸುಮಾರಿಗೆ ದಕ್ಷಿಣ ಕೋಲ್ಕತ್ತಾದ ಕಾಳೀಘಾಟ್ ರಸ್ತೆಯಲ್ಲಿರುವ ಅಭಿಷೇಕ್ ಬ್ಯಾನರ್ಜಿ ಅವರ ನಿವಾಸದ ಹೊರಗೆ ಟಿಎಂಸಿ ಕಾರ್ಯಕರ್ತರು ಬ್ಯಾನರ್ಜಿ ಅವರ ಹುಟ್ಟುಹಬ್ಬಕ್ಕಾಗಿ ಬ್ಯಾನರ್‌ಗಳು ಮತ್ತು ಕಟೌಟ್‌ಗಳನ್ನು ಅಳವಡಿಸುತ್ತಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಬಿಜೆಪಿ ಬೆಂಬಲಿಗರು ಹಾಗೂ ಕಾರ್ಯಕರ್ತರು ಕಳ್ಳ ಕಳ್ಳ ಎಂದು ಕೂಗಿದ್ದಾರೆ ಎಂದು ಆರೋಪಿಸಲಾಗಿದೆ.

ಉಭಯ ಪಕ್ಷಗಳ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು, ಅದು ತೀವ್ರ ಸಂಘರ್ಷಕ್ಕೆ ತಿರುಗಿತು. ಬಿಜೆಪಿ ಕಾರ್ಯಕರ್ತರು ಹುಟ್ಟುಹಬ್ಬದ ಬ್ಯಾನರ್‌ಗಳನ್ನು ಹರಿದು ಹಾಕಿ, ಕಲ್ಲು ಹಾಗೂ ಇಟ್ಟಿಗೆಗಳಿಂದ ದಾಳಿ ನಡೆಸಿದರು ಎಂದು ಆರೋಪಿಸಲಾಗಿದೆ. ಗದ್ದಲ ಕೇಳಿ ಅಭಿಷೇಕ್ ಬ್ಯಾನರ್ಜಿ ಅವರು ಮನೆಯಿಂದ ಹೊರಬಂದು ಮಧ್ಯಪ್ರವೇಶಿಸಲು ಯತ್ನಿಸಿದರು. ಈ ಕಲ್ಲು ತೂರಾಟ ಮತ್ತು ಸಂಘರ್ಷದ ವೇಳೆ ಕನಿಷ್ಠ ಎಂಟು ಟಿಎಂಸಿ ಕಾರ್ಯಕರ್ತರು ಗಾಯಗೊಂಡಿದ್ದಾರೆ. ಈ ಪೈಕಿ ಮೂವರ ಸ್ಥಿತಿ ಗಂಭೀರವಾಗಿದೆ. "ನಮ್ಮ ಸಹೋದ್ಯೋಗಿ ತಪಸ್ ಎಂಬವರ ಹೆಬ್ಬೆರಳಿನ ಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಅವರಿಗೆ ಪ್ಲಾಸ್ಟಿಕ್ ಸರ್ಜರಿಯ ಅಗತ್ಯವಿದೆ. ಮತ್ತೊಬ್ಬ ಕಾರ್ಯಕರ್ತನ ಕಣ್ಣಿನ ಕೆಳಗಿನ ಮೂಳೆ ಮುರಿದಿದೆ" ಎಂದು ಅವರು ಆರೋಪಿಸಿದ್ದಾರೆ.

ಬೀದಿ ನಾಯಿಗಳ ದಾಳಿಗೆ ಸೇಡಂ ಜನ ತತ್ತರ: ಒಂದೇ ದಿನ ನಾಲ್ವರ ಮೇಲೆ ದಾಳಿ; ಗಾಯಾಳುಗಳು ಸರ್ಕಾರಿ ಆಸ್ಪತ್ರೆಗೆ ದಾಖಲು

ಪಶ್ಚಿಮ ಬಂಗಾಳದಲ್ಲಿ ಸಂಸದರಿಗೇ ರಕ್ಷಣೆ ಇಲ್ಲದಂತಾಗಿದೆ. ಕಲ್ಕತ್ತಾ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಈ ಗೂಂಡಾಗಿರಿಯನ್ನು ಕಣ್ಣುಮುಚ್ಚಿ ನೋಡುತ್ತಾ ಮೂಕಪ್ರೇಕ್ಷಕನಾಗಿ ಕುಳಿತಿವೆ ಎಂದು ಅಭಿಷೇಕ್‌ ಕಿಡಿ ಕಾರಿದ್ದಾರೆ. ದಾಳಿಕೋರರು ರೇವಲ್ವರ್‌ಗಳೊಂದಿಗೆ ಬಂದಿದ್ದರು ಮತ್ತು ನನ್ನನ್ನು ಕೊಲ್ಲುವ ಉದ್ದೇಶ ಹೊಂದಿದ್ದರು. ಕಳೆದ ಎರಡು ದಿನಗಳಿಂದ ನನ್ನ ಕಚೇರಿ ಹಾಗೂ ನಿವಾಸದ ಸುತ್ತ ಸಂಚು ನಡೆಸಿ ಈ ದಾಳಿ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.