#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Bryan Johnson: ನಿಖಿಲ್ ಕಾಮತ್ ಪಾಡ್‌ಕಾಸ್ಟ್‌ನಿಂದ ಬ್ರಿಯಾನ್ ಜಾನ್ಸನ್ ಹೊರ ನಡೆದಿದ್ಯಾಕೆ?

ಅಮೆರಿಕದ ಮಿಲಿಯನೇರ್ ಬ್ರಿಯಾನ್ ಜಾನ್ಸನ್‌ ಅವರು ಖ್ಯಾತ ಉದ್ಯಮಿ ನಿಖಿಲ್ ಕಾಮತ್ ಅವರ ಪಾಡ್​​ಕಾಸ್ಟ್‌ ಸಂದರ್ಶನ ನೀಡಲು ಭಾರತಕ್ಕೆ ಆಗಮಿಸಿದ್ದರು. ಆದರೆ ಸಂದರ್ಶನದ ಮಧ್ಯೆಯೇ ಬ್ರಿಯಾನ್‌ ಎದ್ದು ಹೊರ ನಡೆದಿದ್ದಾರೆ ಎಂದು ತಿಳಿದು ಬಂದಿದೆ. ನಿಖಿಲ್‌ ಕಾಮತ್‌ ತಮ್ಮ ಪಾಡ್‌ಕ್ಯಾಸ್ಟ್‌ನಿಂದಲೇ ಹೆಚ್ಚು ಹೆಸರುವಾಸಿಯಾಗಿದ್ದಾರೆ. ನರೇಂದ್ರ ಮೋದಿ ಸೇರಿದಂತೆ ದೇಶ ಮತ್ತು ವಿದೇಶದ ಹಲವು ಗಣ್ಯರನ್ನು ಅವರು ಸಂದರ್ಶನ ಮಾಡಿದ್ದಾರೆ. ನಿಖಿಲ್ ಈ ಬಾರಿ ಅಮೆರಿಕದ‌ ಖ್ಯಾತ ವಾಣಿಜೋದ್ಯಮಿಯಾದ ಬ್ರಿಯಾನ್‌ ಜಾನ್ಸನ್‌ ಅವರನ್ನು ಸಂದರ್ಶನಕ್ಕೆ ಆಹ್ವಾನಿಸಿದ್ದರು. ಆದರೆ ಅವರು ಸಂದರ್ಶನದ ನಡುವೆಯೇ ಎದ್ದು ಹೊರ ನಡೆದಿದ್ದಾರೆ.

ಪಾಡ್‌ಕ್ಯಾಸ್ಟ್‌ನಿಂದ ಮಿಲಿಯನೇರ್ ಬ್ರಿಯಾನ್‌ ಜಾನ್ಸನ್ ವಾಕೌಟ್‌!

Bryan Johnson

Profile Deekshith Nair Feb 4, 2025 5:07 PM

ವಾಷಿಂಗ್ಟನ್:‌ ಅಮೆರಿಕದ ಮಿಲಿಯನೇರ್ ಬ್ರಿಯಾನ್ ಜಾನ್ಸನ್‌ (Bryan Jhonson) ಅವರು ಖ್ಯಾತ ಉದ್ಯಮಿ ನಿಖಿಲ್ ಕಾಮತ್(Nilkhil Kamat) ಅವರ ಪಾಡ್​​ಕ್ಯಾಸ್ಟ್​ಗೆ(Podcast) ಸಂದರ್ಶನ ನೀಡಲು ಭಾರತಕ್ಕೆ ಆಗಮಿಸಿದ್ದರು. ಆದರೆ ಸಂದರ್ಶನದ ಮಧ್ಯೆಯೇ ಬ್ರಿಯಾನ್‌ ಎದ್ದು ಹೊರ ನಡೆದಿದ್ದಾರೆ ಎಂದು ತಿಳಿದು ಬಂದಿದೆ. ನಿಖಿಲ್‌ ಕಾಮತ್‌ ತಮ್ಮ ಪಾಡ್‌ಕಾಸ್ಟ್‌ನಿಂದಲೇ ಹೆಚ್ಚು ಹೆಸರುವಾಸಿಯಾಗಿದ್ದಾರೆ. ನರೇಂದ್ರ ಮೋದಿ ಸೇರಿದಂತೆ ದೇಶ ಮತ್ತು ವಿದೇಶದ ಹಲವು ಗಣ್ಯರನ್ನು ಅವರು ಸಂದರ್ಶನ ಮಾಡಿದ್ದಾರೆ. ನಿಖಿಲ್ ಈ ಬಾರಿ ಅಮೆರಿಕದ‌ ಖ್ಯಾತ ವಾಣಿಜ್ಯೋದ್ಯಮಿಯಾದ ಬ್ರಿಯಾನ್‌ ಜಾನ್ಸನ್‌ ಅವರನ್ನು ಸಂದರ್ಶನಕ್ಕೆ ಆಹ್ವಾನಿಸಿದ್ದರು. ಆದರೆ ಅವರು ಸಂದರ್ಶನದ ನಡುವೆಯೇ ಎದ್ದು ಹೊರ ನಡೆದಿದ್ದಾರೆ.

ನಿಖಿಲ್‌ ಕಾಮತ್‌ ಅವರಿಗೆ ನೀಡಿದ ಸಂದರ್ಶನ ಕುರಿತು ಬ್ರಿಯಾನ್ ಜಾನ್ಸನ್‌ ಮಾತನಾಡಿದ್ದು ತಮ್ಮ ಅನುಭವಗಳನ್ನು ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ."ಕಳಪೆ ಗುಣಮಟ್ಟ ಗಾಳಿಯಿಂದಾಗಿ ನಾನು ಪಾಡ್‌ಕಾಸ್ಟ್‌ ಮುಗಿಯುವ ಮೊದಲೇ ಎದ್ದು ಹೊರಬರಬೇಕಾಯಿತು. ನಿಖಿಲ್ ಕಾಮತ್ ನಿಜಕ್ಕೂ ಒಳ್ಳೆಯ ಆತಿಥ್ಯವನ್ನು ನೀಡಿದರು. ಅವರು ಸೌಜನ್ಯದ ವ್ಯಕ್ತಿ. ನಾವಿಬ್ಬರೂ ಒಳ್ಳೆಯ ಸಮಯವನ್ನು ಕಳೆಯುತ್ತಿದ್ದೆವು. ಸಮಸ್ಯೆಯೆಂದರೆ ನಾವು ಇದ್ದ ಕೋಣೆಯ ಹೊರಗೆ ಕಳಪೆ ಗುಣಮಟ್ಟದ ಗಾಳಿಯಿಂದ ನನಗೆ ತೀರಾ ಇರುಸುಮುರುಸಾಯಿತು. ನಾನು ನನ್ನೊಂದಿಗೆ ಕೊಂಡೊಯ್ದಿದ್ದ ಏರ್ ಪ್ಯೂರಿಫೈಯರ್ ಕೂಡ ಪ್ರಯೋಜನಕ್ಕೆ ಬರಲಿಲ್ಲ. ಒಳಗೆ ಬರುತ್ತಿದ್ದ ಗಾಳಿಯು AQI 130 ಮತ್ತು PM2.5 75 µg/m³ ಆಗಿತ್ತು. ಆ ಕೆಟ್ಟ ಗಾಳಿ 3.4 ಸಿಗರೇಟ್ ಸೇದುವುದಕ್ಕೆ ಸಮಾನವಾಗಿತ್ತು" ಎಂದು ಜಾನ್ಸನ್ ಹೇಳಿದ್ದಾರೆ.



ಭಾರತದಲ್ಲಿ ನಾನು ಮೂರು ದಿನ ಕಳೆದೆ. ಆದರೆ ತುಂಬಾ ತೊಂದರೆಯಾಯಿತು. ವಾಯು ಮಾಲಿನ್ಯದಿಂದಾಗಿ ನನ್ನ ಚರ್ಮದಲ್ಲಿ ಗಾಯಗಳಾದವು. ಕಣ್ಣುಗಳು ಮತ್ತು ಗಂಟಲು ಉರಿಯುತ್ತಿದ್ದವು. ಭಾರತದಲ್ಲಿ ಗಾಳಿಯ ಗುಣಮಟ್ಟ ಎಷ್ಟು ಕಳಪೆಯಾಗಿದೆ ಎಂದರೆ ಅದರ ದುಷ್ಪರಿಣಾಮಗಳ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ. ಜನರು ತಮ್ಮ ಪಾಡಿಗೆ ಆರಾಮವಾಗಿ ಓಡಾಡುತ್ತಿದ್ದಾರೆ. ಆದರೆ ಹುಟ್ಟಿನಿಂದಲೇ ಶಿಶುಗಳು ಮತ್ತು ಚಿಕ್ಕ ಮಕ್ಕಳು ಸೋಂಕಿಗೆ ಒಳಗಾಗಿದ್ದಾರೆ ಎಂದು ಬ್ರಿಯಾನ್‌ ತಮ್ಮ ಎಕ್ಸ್‌ ನಲ್ಲಿ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: UP Horror: ಸರಸವಾಡುತ್ತಲೇ ಉಸಿರುಗಟ್ಟಿಸಿ ಕೊಲೆ; ವಿಚಾರಣೆ ವೇಳೆ ಬಯಲಾಯ್ತು ಭೀಕರ ಸತ್ಯ!

ಬ್ರಿಯಾನ್‌ ಜಾನ್ಸನ್‌ ಉದ್ಯಮದ ಜೊತೆಗೆ ಆರೋಗ್ಯದ ಕುರಿತಾಗಿಯೂ ಸಲಹೆಗಳನ್ನು ನೀಡುತ್ತಾರೆ.