ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದೇಶೀಯ, ಅಂತಾರಾಷ್ಟ್ರೀಯ ವಿಮಾನಗಳಿಗೆ ಇಂಧನ ಸರ್ಚಾರ್ಜ್ ಪರಿಷ್ಕರಿಸಿದ ಏರ್ ಇಂಡಿಯಾ

Air India revises fuel surcharge: ಜಾಗತಿಕ ಇಂಧನ ಬೆಲೆಗಳು ಏರುತ್ತಿರುವ ಹಿನ್ನೆಲೆಯಲ್ಲಿ, ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರ್ಗಗಳ ವಿಮಾನಗಳ ಇಂಧನ ಸರ್‌ಚಾರ್ಜ್ ಪರಿಷ್ಕರಿಸುವುದಾಗಿ ಏರ್ ಇಂಡಿಯಾ ಘೋಷಿಸಿದೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಗಳು ಸೇರಿದಂತೆ ಹೆಚ್ಚಿನ ಮಾರ್ಗಗಳಿಗೆ ಪರಿಷ್ಕೃತ ಸರ್‌ಚಾರ್ಜ್‌ ಬುಧವಾರದಿಂದ (ಏಪ್ರಿಲ್ 8) ಜಾರಿಗೆ ಬರಲಿದೆ.

ಇಂಧನ ಸರ್ಚಾರ್ಜ್ ಪರಿಷ್ಕರಿಸಿದ ಏರ್ ಇಂಡಿಯಾ

ಸಾಂದರ್ಭಿಕ ಚಿತ್ರ -

Priyanka P
Priyanka P Apr 7, 2026 6:33 PM

ನವದೆಹಲಿ, ಏ. 7: ಜಾಗತಿಕ ಇಂಧನ ಬೆಲೆಗಳು ಏರುತ್ತಿರುವ ಹಿನ್ನೆಲೆಯಲ್ಲಿ, ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರ್ಗಗಳ ವಿಮಾನಗಳ ಇಂಧನ ಸರ್‌ಚಾರ್ಜ್ ರಚನೆಯನ್ನು ಪರಿಷ್ಕರಿಸುವುದಾಗಿ ಏರ್ ಇಂಡಿಯಾ (Air India) ಘೋಷಿಸಿದೆ. ದೇಶೀಯ ಪ್ರಯಾಣಕ್ಕಾಗಿ ದೂರ ಆಧಾರಿತ ವ್ಯವಸ್ಥೆಯನ್ನು ಮತ್ತು ವಿದೇಶಿ ವಲಯಗಳಿಗೆ ಹೆಚ್ಚಿನ ಶುಲ್ಕವನ್ನು ಪರಿಚಯಿಸಿದೆ.

ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಗಳು ಸೇರಿ ಹೆಚ್ಚಿನ ಮಾರ್ಗಗಳಿಗೆ ಪರಿಷ್ಕೃತ ಸರ್‌ಚಾರ್ಜ್‌ಗಳು ಬುಧವಾರದಿಂದ (ಏಪ್ರಿಲ್ 8) ಜಾರಿಗೆ ಬರಲಿವೆ. ದೇಶೀಯ ಮಾರ್ಗಗಳಿಗೆ ಸಂಬಂಧಿಸಿದಂತೆ, ಏರ್ ಇಂಡಿಯಾವು ಫ್ಲಾಟ್ ಸರ್‌ಚಾರ್ಜ್ ಮಾದರಿಯಿಂದ ದೂರ-ಆಧಾರಿತ ಗ್ರಿಡ್‌ಗೆ ಬದಲಾಗಿದೆ. ಇದು ಏವಿಯೇಷನ್ ​​ಟರ್ಬೈನ್ ಇಂಧನ (ATF) ಬೆಲೆ ಏರಿಕೆಯನ್ನು ಶೇ. 25ಕ್ಕೆ ಮಿತಿಗೊಳಿಸುವ ಸರ್ಕಾರದ ನಿರ್ಧಾರಕ್ಕೆ ಅನುಗುಣವಾಗಿದೆ.

ಪರಿಷ್ಕೃತ ದರದ ಪ್ರಕಾರ ಪ್ರಯಾಣಿಕರು 500 ಕಿ.ಮೀ.ವರೆಗಿನ ವಿಮಾನಗಳಿಗೆ 299 ರುಪಾಯಿಯಿಂದ 2,000 ಕಿ.ಮೀ.ಗಿಂತ ಹೆಚ್ಚಿನ ವಲಯಗಳಿಗೆ 899 ರುಪಾಯಿವರೆಗೆ ಇಂಧನ ಸರ್‌ಚಾರ್ಜ್ ಪಾವತಿಸಬೇಕಾಗುತ್ತದೆ. ಪರಿಷ್ಕೃತ ದೇಶೀಯ ಸರ್‌ಚಾರ್ಜ್ ಏಪ್ರಿಲ್ 8ರ ಬೆಳಗ್ಗೆ 9:01ರಿಂದ ಅನ್ವಯವಾಗುತ್ತದೆ.

ಗಲ್ಫ್ ರಾಷ್ಟ್ರಗಳಿಗೆ ಪ್ರಯಾಣಿಸುವವರಿಗೆ ಏರ್ ಇಂಡಿಯಾ, ಇಂಡಿಗೋ ವಿಮಾನಯಾನ ಸಂಸ್ಥೆಯಿಂದ ಮಹತ್ವದ ಸೂಚನೆ

ವಿಮಾನಯಾನ ಸಂಸ್ಥೆ ಉಲ್ಲೇಖಿಸಿದ ಮಾಹಿತಿಯ ಪ್ರಕಾರ, ಜಾಗತಿಕ ಜೆಟ್ ಇಂಧನ ಬೆಲೆಗಳು ಒಂದು ತಿಂಗಳೊಳಗೆ ದುಪ್ಪಟ್ಟಾಗಿದ್ದು, ಮಾರ್ಚ್ ಅಂತ್ಯದ ವೇಳೆಗೆ ಪ್ರತಿ ಬ್ಯಾರೆಲ್‌ಗೆ 195.19 ಡಾಲರ್‌ಗಳನ್ನು ತಲುಪಿದೆ. ಸಂಸ್ಕರಣಾ ಲಾಭಾಂಶಗಳು ಸಹ ಗಮನಾರ್ಹವಾಗಿ ಏರಿವೆ.

ಪರಿಷ್ಕೃತ ಸರ್‌ಚಾರ್ಜ್ ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುತ್ತದೆ. ಸಾರ್ಕ್ ತಾಣಗಳಿಗೆ USD 24ರಿಂದ ಪ್ರಾರಂಭವಾಗಿ ಉತ್ತರ ಅಮೆರಿಕ ಮತ್ತು ಆಸ್ಟ್ರೇಲಿಯಾ ಮಾರ್ಗಗಳಿಗೆ USD 280 ವರೆಗೆ ಇರುತ್ತದೆ. ಇಂಗ್ಲೆಂಡ್‌ ಸೇರಿ ಯುರೋಪ್‌ಗೆ ಹೊಸ ಸರ್‌ಚಾರ್ಜ್ ಏಪ್ರಿಲ್ 10ರಿಂದ ಜಾರಿಗೆ ಬರಲಿದೆ.

ಪರಿಷ್ಕೃತ ಅಂತಾರಾಷ್ಟ್ರೀಯ ಸರ್‌ಚಾರ್ಜ್‌ಗಳು ಇಂಧನ ವೆಚ್ಚದಲ್ಲಿನ ತೀವ್ರ ಹೆಚ್ಚಳವನ್ನು ಸಂಪೂರ್ಣವಾಗಿ ಸರಿದೂಗಿಸುವುದಿಲ್ಲ. ವಿಮಾನಯಾನ ಸಂಸ್ಥೆಯ ಮೇಲಿನ ಹೊರೆ ಮುಂದುವರಿಯಲಿದೆ ಎಂದು ಏರ್ ಇಂಡಿಯಾ ಹೇಳಿದೆ.