ಕೆಡವಿದ ಅಕ್ರಮ ಮಸೀದಿ ಅವಶೇಷಗಳಡಿ ಪತ್ತೆಯಾಯ್ತು ಪುರಾತನ ಬಾವಿ: ಈ ಪಾತಾಳ ದಾರಿಯ ರಹಸ್ಯವೇನು?
Ancient Well Found: ತೆರವುಗೊಳಿಸಿದ ಅಕ್ರಮ ಮಸೀದಿಯ ಅವಶೇಷಗಳನ್ನು ಕಾರ್ಮಿಕರು ಸ್ವಚ್ಛಗೊಳಿಸುತ್ತಿದ್ದಾಗ, ಅದರ ತಳಭಾಗದಲ್ಲಿ 20 ಅಡಿ ಆಳ ಹಾಗೂ 1.5 ಮೀಟರ್ ಅಗಲದ ಇಟ್ಟಿಗೆಯ ಪುರಾತನ ಬಾವಿಯೊಂದು ಪತ್ತೆಯಾಗಿದೆ. ಸದ್ಯ ಸುರಕ್ಷತೆಯ ದೃಷ್ಟಿಯಿಂದ ಈ ಬಾವಿಯನ್ನು ಕಬ್ಬಿಣದ ಶೀಟ್‌ಗಳಿಂದ ಮುಚ್ಚಲಾಗಿದೆ.
ಉತ್ತರ ಪ್ರದೇಶದಲ್ಲಿ ಮಸೀದಿ ಅವಶೇಷಗಳಡಿ ಪತ್ತೆಯಾಯ್ತು ಪುರಾತನ ಬಾವಿ -
ಲಖನೌ, ಸೆ. 6: ತೆರವುಗೊಳಿಸಿದ ಅಕ್ರಮ ಮಸೀದಿಯ ಅವಶೇಷಗಳನ್ನು ಕಾರ್ಮಿಕರು ಸ್ವಚ್ಛಗೊಳಿಸುತ್ತಿದ್ದಾಗ, ಅದರ ತಳಭಾಗದಲ್ಲಿ 20 ಅಡಿ ಆಳ ಹಾಗೂ 1.5 ಮೀಟರ್ ಅಗಲದ ಇಟ್ಟಿಗೆಯ ಪುರಾತನ ಬಾವಿಯೊಂದು (Ancient Well) ಪತ್ತೆಯಾಗಿದೆ. ಉತ್ತರ ಪ್ರದೇಶದ (Uttar Pradesh) ಸಹರಾನ್‌ಪುರ ಕಲೆಕ್ಟರೇಟ್ ಆವರಣದಲ್ಲಿ ಈ ಕುತೂಹಲದ ಘಟನೆ ನಡೆದಿದೆ. ಮಸೀದಿಯ ಒಳಗಡೆ ಭಾರಿ ಕಾಂಕ್ರೀಟ್ ಸ್ಲ್ಯಾಬ್‌ನಿಂದ ಮುಚ್ಚಿ ರಹಸ್ಯವಾಗಿಡಲಾಗಿದ್ದ ಈ ಬಾವಿ ಪತ್ತೆಯಾಗಿದ್ದು ಇತಿಹಾಸಕಾರರಲ್ಲಿ ಕುತೂಹಲ ಮೂಡಿಸಿದೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಅದನ್ನು ಪರಿಶೀಲಿಸುವ ಸಾಧ್ಯತೆಯಿದೆ.
ಕೆಡವಿದ್ದ ಮಸೀದಿಯ ಅವಶೇಷಗಳನ್ನು ಕಾರ್ಮಿಕರು ತೆರವುಗೊಳಿಸುತ್ತಿದ್ದಾಗ ಈ ಬಾವಿ ಪತ್ತೆಯಾಗಿದೆ. ಬಾವಿ ಎಷ್ಟು ಹಳೆಯದು? ಯಾರು ಅದನ್ನು ನಿರ್ಮಿಸಿದರು? ಮತ್ತು ಅದನ್ನು ಏಕೆ ಮುಚ್ಚಲಾಯಿತು? ಎಂಬುದು ಸದ್ಯದ ಪ್ರಶ್ನೆ. ಸದ್ಯ ಸುರಕ್ಷತೆಯ ದೃಷ್ಟಿಯಿಂದ ಈ ಬಾವಿಯನ್ನು ಕಬ್ಬಿಣದ ಶೀಟ್‌ಗಳಿಂದ ಮುಚ್ಚಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಆವರಣದಲ್ಲಿ ಬಿಗಿ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದೆ.
ಉತ್ತರ ಪ್ರದೇಶದಲ್ಲಿ ಮಸೀದಿ ಅಡಿ ಪತ್ತೆಯಾಯ್ತು ಬಾವಿ:
#WATCH | Saharanpur, Uttar Pradesh: A well has been discovered at the demolition site where a mosque inside the Saharanpur Collectorate was demolished yesterday.
— ANI (@ANI) September 6, 2026
SDM Sadar Subodh Kumar stated that technical teams and concerned agencies will investigate to determine the scale… https://t.co/YKwKgKQeCj pic.twitter.com/YC2oHUSGlz
ಮಸೀದಿ ನಿರ್ಮಾಣವಾಗುವ ಮೊದಲು ಆ ಸ್ಥಳದಲ್ಲಿ ಏನಿತ್ತು ಎಂಬುದು ಈಗ ಸ್ಥಳೀಯರು ಹಾಗೂ ಅಧಿಕಾರಿಗಳಲ್ಲಿ ಪ್ರಶ್ನೆ ಮೂಡಿದೆ. ಮಸೀದಿ ನಿರ್ಮಾಣವಾದಾಗ ಆ ಬಾವಿ ಅದಾಗಲೇ ಅಲ್ಲಿತ್ತೆ? ಅದನ್ನು ನಂತರ ನಿರ್ಮಿಸಿ, ತದನಂತರ ಮುಚ್ಚಲಾಗಿತ್ತೆ? ಎಂಬಂತಹ ಪ್ರಶ್ನೆಗಳು ಎದುರಾಗಿವೆ.
ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಪರಿಶೀಲನೆಯು ಬಾವಿಯ ಇಟ್ಟಿಗೆ ಕೆಲಸ, ನಿರ್ಮಾಣ ತಂತ್ರಜ್ಞಾನ, ಬಳಸಲಾದ ಸಾಮಗ್ರಿಗಳು ಮತ್ತು ಅದರ ಇತರ ಭೌತಿಕ ಗುಣಲಕ್ಷಣಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡುವ ಸಾಧ್ಯತೆ ಇದೆ. ಬಾವಿಯ ಸುತ್ತಮುತ್ತ ಅಥವಾ ಅದರ ಒಳಗಡೆ ಯಾವುದಾದರೂ ಐತಿಹಾಸಿಕ ವಸ್ತುಗಳ ಅವಶೇಷಗಳು ಪತ್ತೆಯಾದರೆ, ಅವು ತಜ್ಞರಿಗೆ ಅದರ ಸಂಭಾವ್ಯ ಕಾಲಾನುಕ್ರಮವನ್ನು ನಿರ್ಧರಿಸಲು ನೆರವಾಗಲಿದೆ. ಸದ್ಯ ಈ ಬಾವಿಯ ಪತ್ತೆ ಸಾರ್ವಜನಿಕರಲ್ಲಿ ಕುತೂಹಲವನ್ನು ಹುಟ್ಟುಹಾಕಿದೆ.
ಮಸೀದಿ ಆಡಳಿತ ಮಂಡಳಿ ಹೇಳಿದ್ದೇನು?
ಇನ್ನು ಕೆಡವಲಾದ ಈ ಮಸೀದಿ ಶತಮಾನಗಳಷ್ಟು ಹಳೆಯದು ಎನ್ನಲಾಗಿದೆ. ಜಿಲ್ಲಾಡಳಿತವು ಇದನ್ನು ಸರ್ಕಾರಿ ಜಮೀನಿನಲ್ಲಿರುವ ಅನಧಿಕೃತ ಕಟ್ಟಡ ಎಂದೇ ಪರಿಗಣಿಸಿದೆ. ಅಂದಹಾಗೆ, ಮಸೀದಿಯು ಸರ್ಕಾರಿ ಭೂಮಿಯಲ್ಲಿ ನಿರ್ಮಿಸಲಾದ ಅನಧಿಕೃತ ಕಟ್ಟಡ ಎಂಬುದು ಸ್ಥಳೀಯಾಡಳಿತದ ನಿಲುವು. ಕಾನೂನು ವಿವಾದದ ನಂತರ ಜಿಲ್ಲಾ ನ್ಯಾಯಾಲಯವು ಹಿಂದಿನ ತೆರವು ಆದೇಶವನ್ನು ಎತ್ತಿಹಿಡಿದ ನಂತರ ಮಸೀದಿಯನ್ನು ಕೆಡವಲಾಯಿತು.