Toll Pass: 3 ಸಾವಿರ ರೂ ಪಾವತಿಸಿದರೆ ವರ್ಷಪೂರ್ತಿ ಟೋಲ್ ಫ್ರೀ ಪ್ರಯಾಣ- ಕೇಂದ್ರದಿಂದ ಬಂಪರ್ ಆಫರ್
ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾರ್ಷಿಕ ಅಥವಾ ಜೀವಿತಾವಧಿಯ ಟೋಲ್ ಪಾಸ್‌ಗಳನ್ನು ಪರಿಚಯಿಸಲು ಕೇಂದ್ರ ಸರ್ಕಾರ ಸಜ್ಜಾಗಿದೆ. ಈ ಪಾಸ್‌ಗಳ ಮೂಲಕ 3000 ಸಾವಿರ ಪಾವತಿ ಮಾಡಿದರೆ ವಾರ್ಷಿಕ ಟೋಲ್ ಪಾಸ್‌ಗಳು ದೊರೆಯಲಿವೆ. 30,000 ಮುಂಗಡ ಪಾವತಿಯೊಂದಿಗೆ 15 ವರ್ಷಗಳವರೆಗೆ 'ಜೀವಮಾನದ ಪಾಸ್' ಖರೀದಿಸುವ ಆಯ್ಕೆಯೂ ಕೂಡ ಇರಲಿದೆ.
ನವದೆಹಲಿ: ಈ ಬಾರಿಯ ಬಜೆಟ್ ಮೂಲಕ ಮಧ್ಯಮ ವರ್ಗದವರಿಗೆ ಸಿಹಿ ಸುದ್ದಿ ನೀಡಿದ್ದ ಕೇಂದ್ರ ಸರ್ಕಾರ (Central Government) ವಾಹನ ಸವಾರರಿಗೆ ಮತ್ತೊಂದು ಬಂಪರ್ ಕೊಡುಗೆಯನ್ನು ನೀಡಿದೆ. ಶೀಘ್ರದಲ್ಲಿಯೇ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾರ್ಷಿಕ ಅಥವಾ ಜೀವಿತಾವಧಿಯ ಟೋಲ್ ಪಾಸ್‌ಗಳನ್ನು (Toll Pass) ಪರಿಚಯಿಸಲು ಕೇಂದ್ರ ಸರ್ಕಾರ ಸಜ್ಜಾಗಿದೆ. ಈ ಪಾಸ್‌ಗಳ ಮೂಲಕ 3000 ಸಾವಿರ ಪಾವತಿ ಮಾಡಿದರೆ ವಾರ್ಷಿಕ ಟೋಲ್ ಪಾಸ್‌ಗಳು ದೊರೆಯಲಿವೆ. 30,000 ಮುಂಗಡ ಪಾವತಿಯೊಂದಿಗೆ 15 ವರ್ಷಗಳವರೆಗೆ 'ಜೀವಮಾನದ ಪಾಸ್' ಖರೀದಿಸುವ ಆಯ್ಕೆಯೂ ಕೂಡ ಇರಲಿದೆ.
ಈ ರೀತಿಯ ಟೋಲ್ ಪಾಸ್‌ಗಳಿಂದ ಲಕ್ಷಾಂತರ ಜನ ಪ್ರಯೋಜನ ಪಡೆದುಕೊಳ್ಳಲಿದ್ದಾರೆ. ವರದಿಗಳ ಪ್ರಕಾರ ಈ ಪ್ರಸ್ತಾಪವು ರಸ್ತೆ ಸಾರಿಗೆ ಸಚಿವಾಲಯದೊಂದಿಗೆ ಅಂತಿಮ ಹಂತದಲ್ಲಿದೆ. ಇದಕ್ಕೆ ಸಂಬಂಧಿಸಿದಂತೆ ಸಚಿವಾಲಯವು ಪ್ರತಿ ಕಿ.ಮೀ ಗೆ ಟೋಲ್ ದರವನ್ನು ಕಡಿಮೆ ಮಾಡುವ ಬಗ್ಗೆ ಮಾತುಕತೆ ನಡೆದಿದೆ ಎನ್ನಲಾಗಿದೆ. ಪ್ರಸ್ತುತ, ಒಂದೇ ಟೋಲ್ ಪ್ಲಾಜಾವನ್ನು ದಾಟಲು ಸ್ಥಳೀಯ ಮತ್ತು ಆಗಾಗ್ಗೆ ಪ್ರಯಾಣಿಸುವವರಿಗೆ ಮಾಸಿಕ ಪಾಸ್‌ಗಳನ್ನು ಮಾತ್ರ ನೀಡಲಾಗುತ್ತದೆ. ಅಂತಹ ಪಾಸ್‌ಗಳಿಗೆ, ಅವರು ವಿಳಾಸ ಪುರಾವೆ ಮತ್ತು ಇತರ ವಿವರಗಳನ್ನು ಒದಗಿಸಬೇಕಾಗುತ್ತದೆ. ಈ ಪಾಸ್‌ಗೆ ತಿಂಗಳಿಗೆ 340 ರೂ. ಬೆಲೆಯಿದ್ದು, ಅದು ವರ್ಷಕ್ಕೆ 4,080 ರೂ. ಗಳಾಗುತ್ತದೆ. ಇದೀಗ 3000 ಸಾವಿರ ರೂ. ಗಳಿಗೆ ಪಾಸ್ ದೊರೆತರೆ ಅನುಕೂಲಕರವಾಗಲಿದೆ.
ಈ ಸುದ್ದಿಯನ್ನೂ ಓದಿ: Union Budget 2025: ಕರ್ನಾಟಕದ ರೈಲ್ವೆ ಯೋಜನೆಗಳಿಗೆ 7,564 ಕೋಟಿ ರೂ. ಮೀಸಲು
ಇತ್ತೀಚೆಗೆ ಈ ಬಗ್ಗೆ ಮಾಹಿತಿ ನೀಡಿದ್ದ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ತಮ್ಮ ಸಚಿವಾಲಯವು ಕಾರು ಮಾಲೀಕರಿಗೆ ಪಾಸ್‌ಗಳನ್ನು ನೀಡುವ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದ್ದರು. 60 ಕಿ.ಮೀ ಗಿಂತ ಕಡಿಮೆ ಅಂತರದಲ್ಲಿ ಟೋಲ್ ಗೇಟ್‌ಗಳನ್ನು ನಿರ್ಮಿಸುತ್ತಿರುವುದು ಹಾಗೂ ಅನೇಕ ಸಮಸ್ಯೆಗಳನ್ನು ಸಚಿವಾಲಯ ಗಮನಿಸಿದೆ. ಇದೀಗ ಈ ಪಾಸ್‌ಗಳನ್ನು ನೀಡಿವುದರ ಮೂಲಕ ಹಲವು ಸಮಸ್ಯೆಗಳನ್ನು ಬಗೆ ಹರಿಸಲು ಸಜ್ಜಾಗಿದೆ. 2023- 24 ರ ವಾರ್ಷಿಕ ದತ್ತಾಂಶದ ಪ್ರಕಾರ ಒಟ್ಟು 55,000 ಕೋಟಿ ರೂ.ಗಳ ಟೋಲ್ ಆದಾಯದಲ್ಲಿ, 8,000 ಕೋಟಿ ರೂ. ಕೇವಲ ಖಾಸಗಿ ಕಾರಿನಿಂದ ಬಂದ ಆದಾಯವಾಗಿದೆ ಎಂದು ಸಚಿವಾಲಯ ತಿಳಿಸಿತ್ತು.