4 ತಿಂಗಳ ನಂತರ ಮನೆಗೆ ಮರಳಿದ ಮಗನಿಗೆ ತಾಯಿ ನೀಡಿದ ಸ್ವಾಗತ ಹೀಗಿತ್ತು; ಹೃದಯಸ್ಪರ್ಶಿ ವಿಡಿಯೊ ಇಲ್ಲಿದೆ
Mother-son reunion: 4 ತಿಂಗಳು ಹಾಸ್ಟೆಲ್ ವಾಸದ ನಂತರ ಮನೆಗೆ ಮರಳಿದ ಮಗನಿಗೆ ತಾಯಿಯು ಹೃದಯಸ್ಪರ್ಶಿ ಸ್ವಾಗತ ನೀಡಿದ್ದಾರೆ. ಅವರ ಭಾವನಾತ್ಮಕ ಪುನರ್ಮಿಲನವನ್ನು ಹಿಡಿದಿಟ್ಟಿರುವ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕುಟುಂಬದ ಸಂಬಂಧ ಮತ್ತು ಪಾಲಕರ ಪ್ರೀತಿಯ ಮಹತ್ವವನ್ನು ಇದು ಸಾರಿದೆ.
ಸಾಂದರ್ಭಿಕ ಚಿತ್ರ -
ನವದೆಹಲಿ, ಡಿ. 31: ನೀವು ಹಿಂದಿಯ 'ಕಭಿ ಖುಷ್ ಕಭಿ ಘಮ್' (Kabhi Khushi Kabhie Gham) ಸಿನಿಮಾವನ್ನು ನೋಡಿದ್ದೀರಾ? ಇದರಲ್ಲಿ ತಾಯಿ-ಮಗನ ಬಾಂಧವ್ಯವನ್ನು ಅದ್ಭುತವಾಗಿ ತೋರಿಸಲಾಗಿದೆ. ಕಾಲೇಜು ಮುಗಿಸಿ ಭಾರತಕ್ಕೆ ಮರಳುವ ಮಗನಿಗೆ (ಶಾರುಖ್ ಖಾನ್) ತಾಯಿ (ಜಯಾ ಬಚ್ಚನ್) ಬಾಗಿಲಿನಲ್ಲಿ ನಿಂತು ಕಾಯುತ್ತಿರುವ ಸುಂದರ ದೃಶ್ಯವಿದೆ. ಇದೀಗ ಇಂಥದ್ದೇ ಒಂದು ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (viral video) ಆಗಿದೆ.
ಹೌದು, ತಾಯಿ ಮತ್ತು ಮಗನ ನಡುವಿನ ಭಾವನಾತ್ಮಕ ಪುನರ್ಮಿಲನವನ್ನು ಸೆರೆಹಿಡಿದ ಹೃದಯಸ್ಪರ್ಶಿ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ವಿಶೇಷವಾಗಿ ಮನೆಯಿಂದ ದೂರ ವಾಸಿಸುವ ವಿದ್ಯಾರ್ಥಿಗಳು ಮತ್ತು ವೃತ್ತಿಪರ ಉದ್ಯೋಗಿಗಳಿಗೆ ಹೃದಯಸ್ಪರ್ಶಿ ವಿಡಿಯೊ ಮನಸ್ಸಿಗೆ ನಾಟಿದೆ. ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೊ, ಪೋಷಕರು-ಮಕ್ಕಳ ಬಾಂಧವ್ಯವನ್ನು ವ್ಯಾಖ್ಯಾನಿಸುವ ಸಂತೋಷ, ಪ್ರೀತಿ ಮತ್ತು ಹಂಬಲವನ್ನು ಸುಂದರವಾಗಿ ತೋರಿಸುತ್ತದೆ.
ಪ್ರಿಯತಮನ ವಿಚಾರಕ್ಕೆ ಜಡೆ ಜಗಳ; ನಡುರಸ್ತೆಯಲ್ಲೇ ಕಿತ್ತಾಡಿದ ಯುವತಿಯರ ವಿಡಿಯೊ ವೈರಲ್
ನಾಲ್ಕು ತಿಂಗಳು ಕಾಲೇಜಿನಲ್ಲಿ ಕಳೆದು ಮನೆಗೆ ಮರಳುತ್ತಿರುವ ಮಗನನ್ನು ಸ್ವಾಗತಿಸಲು ತಾಯಿಯೊಬ್ಬರು ಕಾತರದಿಂದ ತಯಾರಿ ನಡೆಸುತ್ತಿರುವುದನ್ನು ವಿಡಿಯೊ ತೋರಿಸುತ್ತದೆ. ಮನೆಯನ್ನು ಅಲಂಕರಿಸಿ, ಪ್ರವೇಶದ್ವಾರದ ಬಳಿ ವರ್ಣರಂಜಿತ ರಂಗೋಲಿ ಬಿಡಿಸಿ, ಮುಚ್ಚಿದ ಬಾಗಿಲಿನ ಹಿಂದೆ ಕೈಯಲ್ಲಿ ಕಾನ್ಫೆಟ್ಟಿ ಸ್ಟ್ರೀಮರ್‌ಗಳನ್ನು ಹಿಡಿದು ಆತಂಕ, ಖುಷಿಯಿಂದ ತಾಯಿ ಕಾದಿದ್ದಾಳೆ. ತನ್ನ ಮಗನನ್ನು ಅಚ್ಚರಿಗೊಳಿಸಲು ಸಿದ್ಧವಾಗಿ ಬಾಗಿಲಿನ ಬಳಿ ಅಡಗಿ ನಿಂತಾಗ ಆಕೆಯಲ್ಲಿ ಉತ್ಸಾಹ ಕಂಡುಬಂದಿದೆ.
ವಿಡಿಯೊ ವೀಕ್ಷಿಸಿ:
కొన్ని నెలల తర్వాత కొడుకు కళాశాల నుండి ఇంటికి తిరిగి రావడంతో తల్లి మరియు కొడుకుల మధ్య భావోద్వేగ పునఃకలయిక.#mothersons #viralvideo pic.twitter.com/a5HqsPPMo4
— Telugu Stride (@TeluguStride) December 31, 2025
ಬಾಗಿಲು ತೆರೆಯುತ್ತಿದ್ದಂತೆ, ಮಗ ತನ್ನ ತಂದೆಯ ಮುಂದೆ ನಿಂತು ಹೆಜ್ಜೆ ಹಾಕಿದ್ದಾನೆ. ಅವನಿಗೆ ಏನಾಗುತ್ತಿದೆ ಎಂಬುದು ತಿಳಿದಿಲ್ಲ. ಈ ವೇಳೆ ತಾಯಿ ಕಾನ್ಫೆಟ್ಟಿಯನ್ನು ಸಿಡಿಸಿದ್ದಾಳೆ. ಈ ವೇಳೆ ಅಚ್ಚರಿ ಹಾಗೂ ಆನಂದ ಎರಡೂ ಒಟ್ಟಿಗೆ ಸಂಭವಿಸಿದೆ. ಆತನ ಮುಖವು ಭಾವಾನಾತ್ಮಕವಾಗಿ ಬದಲಾಯಿತು. ತಾಯಿ-ಮಗ ಇಬ್ಬರೂ ಒಬ್ಬರಿಗೊಬ್ಬರು ಅಪ್ಪಿಕೊಂಡಿದ್ದಾರೆ.
ಹತ್ತಿರದಲ್ಲಿ ನಿಂತಿದ್ದ ತಂದೆ, ಹೆಮ್ಮೆ ಮತ್ತು ಸಂತೋಷದಿಂದ ನಗುತ್ತ, ಹೃದಯಸ್ಪರ್ಶಿ ದೃಶ್ಯವನ್ನು ವೀಕ್ಷಿಸಿದ್ದಾರೆ. ಕಣ್ಣೀರು ಸುರಿಸುತ್ತ, ತಾಯಿ ತನ್ನ ಮಗನನ್ನು ಹತ್ತಿರದಿಂದ ಹಿಡಿದು, ಅವನ ಕೆನ್ನೆಗೆ ಮುತ್ತಿನ ಮಳೆಯನ್ನೇ ಸುರಿಸಿದ್ದಾರೆ. ತಿಂಗಳುಗಳ ಅಗಲಿಕೆಯ ಭಾರವನ್ನು ಅಪ್ಪುಗೆಯಲ್ಲಿ ಕಂಡು ಬಂದಿದೆ. ಅವರು ತಿಂಗಳುಗಳ ಬದಲು ವರ್ಷಗಳ ಕಾಲ ದೂರವಿದ್ದರು ಎಂಬ ಭಾವನೆ ಮೂಡಿಸುತ್ತದೆ.
ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಕಮೆಂಟ್‍ಗಳ ಸುರಿಮಳೆಗೈದಿದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿಯು ಹಾಸ್ಟೆಲ್‌ನಿಂದ ಹಿಂದಿರುಗುವಾಗ ಈ ರೀತಿಯ ಸ್ವಾಗತಕ್ಕೆ ಕನಸು ಕಾಣುತ್ತಾರೆ ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. ಈ ವಿಡಿಯೊ, ಪೋಷಕರು ಮನೆಯಲ್ಲಿ ಕಾಯುತ್ತ, ತಮ್ಮ ಮಕ್ಕಳ ಮರಳುವಿಕೆಗಾಗಿ ದಿನಗಳನ್ನು ಎಣಿಸುತ್ತಿರುವುದನ್ನು ನೆನಪಿಸುತ್ತದೆ ಎಂದು ಮತ್ತೊಬ್ಬ ಬಳಕೆದಾರರು ಹೇಳಿದರು. ಕುಟುಂಬದಿಂದ ದೂರ ವಾಸಿಸುವ ವಿದ್ಯಾರ್ಥಿಗಳು ಮತ್ತು ಕೆಲಸ ಮಾಡುವ ವೃತ್ತಿಪರ ಉದ್ಯೋಗಿಗಳು ಈ ವಿಡಿಯೊ ನೋಡಿ ಕಣ್ತುಂಬಿಕೊಂಡರು. ದೀರ್ಘಾವಧಿಯ ದೂರದ ನಂತರ ಇಂತಹ ಸ್ವಾಗತವು ಮನಸ್ಸಿಗೆ ಎಷ್ಟು ಖುಷಿ ನೀಡುತ್ತದೆ ಎಂಬುದನ್ನು ವಿವರಿಸಿದರು.