ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IndiGo Flight: ಜೇನು ನೊಣಗಳ ಮುತ್ತಿಗೆ: ಜೈಪುರಕ್ಕೆ ತೆರಳುವ ವಿಮಾನ ಒಂದು ಗಂಟೆ ವಿಳಂಬ

ಜೇನು ನೊಣಗಳು ಮುತ್ತಿಗೆ ಹಾಕಿದ್ದರಿಂದ ವಿಮಾನ ಒಂದು ಗಂಟೆ ವಿಳಂಬಗೊಂಡ ಘಟನೆ ಸೂರತ್‌ನಲ್ಲಿ ನಡೆದಿದೆ. ಸೂರತ್‌ನಿಂದ ಜೈಪುರಕ್ಕೆ ಹೊರಟಿದ್ದ ವಿಮಾನದಲ್ಲಿ ಪ್ರಯಾಣಿಕರೆಲ್ಲರೂ ಬಂದು ಕುಳಿತಿದ್ದರೂ ವಿಮಾನ ಹಾರಾಟ ಒಂದು ಗಂಟೆ ವಿಳಂಬವಾಗಿದೆ. ಸದ್ಯ ಘಟನೆ ವಿಡಿಯೊ ವೈರಲ್‌ ಆಗಿದೆ.

ವಿಮಾನಕ್ಕೆ ಮುತ್ತಿಕ್ಕಿದ ಜೇನು ನೊಣ; ಪ್ರಯಾಣಕ್ಕೆ ಅಡ್ಡಿ

ಗಾಂಧಿನಗರ: ಜೇನು ನೊಣಗಳು (Bees) ಮುತ್ತಿಗೆ ಹಾಕಿದ್ದರಿಂದ ವಿಮಾನ ಹಾರಾಟ ಒಂದು ಗಂಟೆ ವಿಳಂಬಗೊಂಡ ಘಟನೆ ಗುಜರಾತ್‌ನ ಸೂರತ್ (Surat)ನಲ್ಲಿ ನಡೆದಿದೆ. ಸೂರತ್‌ನಿಂದ ಜೈಪುರಕ್ಕೆ (Surat-Jaipur) ಹೊರಟಿದ್ದ ವಿಮಾನದಲ್ಲಿ ಪ್ರಯಾಣಿಕರೆಲ್ಲರೂ ಬಂದು ಕುಳಿತಿದ್ದರೂ ಹಾರಾಟ ಒಂದು ಗಂಟೆ (Flight delay) ವಿಳಂಬವಾಗಿದೆ. ಇದಕ್ಕೆ ಕಾರಣವಾಗಿದ್ದು ಜೇನುನೊಣಗಳು. ಪ್ರಯಾಣಿಕರ ಲಗೇಜ್ ಇಡುವ ಸ್ಥಳದಲ್ಲಿ ಜೇನು ನೊಣಗಳು ಇದ್ದುದರಿಂದ ಅದನ್ನು ಹೊರ ತೆಗೆದು ಮತ್ತೆ ವಿಮಾನ ತೆರಳಲು ಸರಿಸುಮಾರು ಒಂದು ಗಂಟೆ ಬೇಕಾಯಿತು.

ಸೂರತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನ 6ಇ-7267 ಹತ್ತಿದ್ದ ಪ್ರಯಾಣಿಕರು ಸುಮಾರು ಒಂದು ಗಂಟೆ ಕಾಯಬೇಕಾಯಿತು. ಅದೂ ಜೇನು ನೊಣಗಳಿಂದಾಗಿ. ವಿಮಾನ ನಿಲ್ದಾಣದ ಸಿಬ್ಬಂದಿ ವಿಮಾನದ ಲಗೇಜ್ ಬಾಗಿಲು ತೆರೆಯುತ್ತಿದ್ದಾಗ ಅದರ ಒಂದು ಭಾಗದಲ್ಲಿ ಜೇನುನೊಣಗಳು ಸಿಲುಕಿಕೊಂಡಿರುವುದನ್ನು ನೋಡಿದರು. ಜೇನುನೊಣವನ್ನು ಅಲ್ಲಿಂದ ಹೊರ ತೆಗೆಯಲು ಸರಿಸುಮಾರು ಒಂದು ಗಂಟೆ ಬೇಕಾಯಿತು.

ವಿಮಾನದ ಲಗೇಜ್ ಬಾಗಿಲನ್ನು ಸುತ್ತುವರಿದಿದ್ದ ಜೇನುನೊಣಗಳ ಗುಂಪುನ್ನು ಓಡಿಸುವಲ್ಲಿ ವಿಮಾನದ ಅಧಿಕಾರಿ, ಸಿಬ್ಬಂದಿ ಹೈರಾಗಿದ್ದರು. ಇದರ ವಿಡಿಯೊಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿವೆ. ಈ ವಿಡಿಯೊಗಳಲ್ಲಿ ವಿಮಾನಕ್ಕೆ ಹಲವಾರು ಜೇನುನೊಣಗಳು ಮುತ್ತಿಗೆ ಹಾಕಿರುವುದನ್ನು ಕಾಣಬಹುದು.

ಪ್ರಯಾಣಿಕರು ವಿಮಾನ ಹತ್ತಿದ್ದರು. ಹೀಗಾಗಿ ಮುಂದೇನು ಮಾಡಬೇಕು ಎಂದು ನಿರ್ಧರಿಸಲು ಅಧಿಕಾರಿಗಳಿಗೆ ಕಷ್ಟವಾಗಿತ್ತು. ಕೊನೆಗೆ ಜೇನು ನೊಣಗಳನ್ನು ತೆಗೆದ ಬಳಿಕವೇ ವಿಮಾನವನ್ನು ಹಾರಾಟ ಮಾಡಲು ಅನುಮತಿ ನೀಡಲು ನಿರ್ಧರಿಸಲಾಯಿತು. ಇದರಿಂದ ವಿಮಾನ ವಿಳಂಬವಾಯಿತು.



ಇದನ್ನೂ ಓದಿ: Physical assault: ರೈಲಿನಲ್ಲಿ ಸಾಮೂಹಿಕ ಅತ್ಯಾಚಾರ ಮಾಡಿ ಹಳಿಗೆ ಎಸೆದ ಪಾಪಿಗಳು; ಮಹಿಳೆಯ ಕಾಲು ತುಂಡು

ಲಗೇಜ್ ಬಾಗಿಲಿನಲ್ಲಿ ಇದ್ದ ಜೇನುನೊಣಗಳನ್ನು ಓಡಿಸಲು ಮೊದಲು ಹೊಗೆಯನ್ನು ಬಳಸಲಾಯಿತು. ಆದರೆ ಅದರಿಂದ ಯಾವ ಪ್ರಯೋಜನವೂ ಆಗಲಿಲ್ಲ. ಕೊನೆಗೆ ಲಗೇಜ್ ಬಾಗಿಲಿನ ಮೇಲೆ ನೀರು ಸಿಂಪಡಿಸಲು ಅಗ್ನಿಶಾಮಕ ವಾಹನವನ್ನು ಸ್ಥಳಕ್ಕೆ ಕರೆಸಲಾಯಿತು. ಈ ಮೂಲಕ ಜೇನುನೊಣಗಳನ್ನು ಸಂಪೂರ್ಣ ತೆಗೆದುಹಾಕಲಾಯಿತು.

ಕೊನೆಗೆ ಪ್ರಮಾಣಿತ ಅನುಮತಿ ಪಡೆದ ಬಳಿಕ ಸುಮಾರು ಒಂದು ಗಂಟೆಯ ಅನಂತರ ವಿಮಾನ ಸೂರತ್ ವಿಮಾನ ನಿಲ್ದಾದಿಂದ ಹೊರಟಿತು. ಸೂರತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸಂಜೆ 4.20ಕ್ಕೆ ಜೈಪುರಕ್ಕೆ ಹಾರಬೇಕಿತ್ತು. ಆದರೆ ಜೇನು ನೊಣಗಳ ತೆರವಿನ ಬಳಿಕ ವಿಳಂಬವಾಗಿ ಸಂಜೆ 5.26ಕ್ಕೆ ಹೊರಟಿತು.