ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bihar Election Result 2025: ಅಂಚೆ ಮತ ಎಣಿಕೆ ಪ್ರಾರಂಭ; ಭಾರೀ ಮುನ್ನಡೆ ಕಾಯ್ದುಕೊಂಡ ಎನ್‌ಡಿಎ

ಬಿಹಾರ ವಿಧಾನಸಭಾ ಚುನಾವಣಾ (Bihar Election Result 2025) ಫಲಿತಾಂಶ ಇಂದು ಹೊರ ಬೀಳಲಿದೆ. ಈಗಾಗಲೇ ಮತ ಎಣಿಕೆ ಕಾರ್ಯ ಪ್ರಾರಂಭವಾಗಿದ್ದು, ಅಂಚೆ ಮತವನ್ನು ಎಣಿಸಲಾಗುತ್ತಿದೆ. ಆರಂಭಿಕ ಹಂತದಲ್ಲಿ ಎನ್‌ಡಿಎ 75 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

ಬಿಹಾರ ಚುನಾವಣೆ ಫಲಿತಾಂಶ; ಎನ್‌ಡಿಎ ಭಾರೀ ಮುನ್ನಡೆ;

ಸಂಗ್ರಹ ಚಿತ್ರ -

Vishakha Bhat
Vishakha Bhat Nov 14, 2025 8:46 AM

ಪಟನಾ: ಬಿಹಾರ ವಿಧಾನಸಭಾ ಚುನಾವಣಾ (Bihar Election Result 2025) ಫಲಿತಾಂಶ ಇಂದು ಹೊರ ಬೀಳಲಿದೆ. ಈಗಾಗಲೇ ಮತ ಎಣಿಕೆ ಕಾರ್ಯ ಪ್ರಾರಂಭವಾಗಿದ್ದು, ಅಂಚೆ ಮತವನ್ನು ಎಣಿಸಲಾಗುತ್ತಿದೆ. ಆರಂಭಿಕ ಹಂತದಲ್ಲಿ ಎನ್‌ಡಿಎ 101 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಮಹಾಘಟಬಂಧನ್‌ 63 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ. ಜೆಸ್‌ಪಿ 3 ಕ್ಷೇತ್ರದಲ್ಲಿ ಮುಂದಿದೆ. ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ರಾಘೋಪೋರ್‌ನಲ್ಲಿ ಭಾರೀ ಮುನ್ನಡೆಯನ್ನು ಸಾಧಿಸಿದ್ದಾರೆ. ಇನ್ನು ಸಹೋದರ ತೇಜ್‌ ಪ್ರತಾಪ್‌ ಸಹ ಮುನ್ನಡೆಯನ್ನು ಸಾಧಿಸಿದ್ದಾರೆ.

ಗಾಯಕಿ ಮೈಥಿಲಿ ಠಾಕೂರ್‌ ಸಹ ಮುನ್ನಡೆಯಲ್ಲಿದ್ದಾರೆ. ರಘುನಾಥಪುರದ ಆರ್‌ಜೆಡಿ ಅಭ್ಯರ್ಥಿ ಒಸಾಮಾ ಶಹಾಬ್ ಮುನ್ನಡೆಯಲ್ಲಿದ್ದಾರೆ. ಭೋಜ್‌ಪುರಿ ಗಾಯಕ ರಿತೇಶ್ ರಂಜನ್ ಪಾಂಡೆ ಮತ್ತು ಜನಪ್ರಿಯ ಪ್ರಭಾವಿ ಮನೀಶ್ ಕಶ್ಯಪ್ ಕ್ರಮವಾಗಿ ಕಾರ್ಗಹರ್ ಮತ್ತು ಚನ್ಪಾಟಿಯಾ ಸ್ಥಾನಗಳಿಂದ ಮುನ್ನಡೆ ಸಾಧಿಸಿದ್ದಾರೆ.

ಹಿನ್ನಡೆಯ ಬಳಿಕ ಲಾಲು ಯಾದವ್ ಅವರ ಮಗ ತೇಜ್ ಪ್ರತಾಪ್ ಮಹುವಾ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದು, ಹೊಸದಾಗಿ ಸ್ಥಾಪನೆಯಾದ ಜನ ಶಕ್ತಿ ಜನತಾದಳ (ಜೆಎಸ್‌ಜೆಡಿ) ಆರಂಭಿಕ ಸಂಖ್ಯೆಗಳು ನಿಧಾನವಾಗಿ ಏರುತ್ತಿವೆ.

ಪ್ರಶಾಂತ್ ಕಿಶೋರ್ ಅವರ ಹೊಸ ಪಕ್ಷ ಜನ್ ಸುರಾಜ್ ಪಕ್ಷ (ಜೆಎಸ್‌ಪಿ) ನಾಲ್ಕು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದರೆ, ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಒಂದು ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ.