#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Gaurav Gogoi: ಕಾಂಗ್ರೆಸ್‌ ನಾಯಕ ಗೊಗೊಯ್‌ ಪತ್ನಿಗೆ ಪಾಕ್‌-ಐಎಸ್‌ಐ ಜೊತೆ ನಂಟು- ಬಿಜೆಪಿ ಆರೋಪ!

ಕಾಂಗ್ರೆಸ್ ಮುಖಂಡ ಗೌರವ್ ಗೊಗೊಯ್ ಅವರ ಪತ್ನಿಗೆ ಪಾಕಿಸ್ತಾನ ಮತ್ತು ಐಎಸ್‌ಐ ಜೊತೆ ನಂಟಿದೆ ಎಂದು ಬಿಜೆಪಿ ಬುಧವಾರ(ಫೆ.13) ಗಂಭೀರ ಆರೋಪ ಮಾಡಿದೆ. ಆರೋಪವನ್ನು ಗೊಗೊಯ್‌ ತಳ್ಳಿಹಾಕಿದ್ದು, ಇದು ನಗೆಪಾಟಲಿನ ವಿಷಯ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ ನಾಯಕನ ಪತ್ನಿಗೆ ಐಎಸ್‌ಐ ಜೊತೆ ನಂಟು?

ಗೌರವ್‌ ಗೊಗಾಯ್

Profile Deekshith Nair Feb 13, 2025 11:35 AM

ನವದೆಹಲಿ: ಕಾಂಗ್ರೆಸ್ ಮುಖಂಡ(Congress Leader) ಗೌರವ್ ಗೊಗೊಯ್(Gaurav Gogoi) ಅವರ ಪತ್ನಿಗೆ ಪಾಕಿಸ್ತಾನ(Pakistan) ಮತ್ತು ಐಎಸ್‌ಐ(Inter-Services Intelligence) ಜೊತೆ ನಂಟಿದೆ ಎಂದು ಬಿಜೆಪಿ(BJP) ಬುಧವಾರ(ಫೆ.13) ಗಂಭೀರವಾಗಿ ಆರೋಪ ಮಾಡಿದೆ. ಆರೋಪವನ್ನು ಗೊಗೊಯ್‌ ತಳ್ಳಿಹಾಕಿದ್ದು, ಇದು ನಗೆಪಾಟಲಿನ ವಿಷಯ ಎಂದು ಹೇಳಿದ್ದಾರೆ. ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಅವರು ಗೊಗೊಯ್‌ ಪತ್ನಿ ವಿರುದ್ಧ ಆರೋಪಿಸಿದ್ದಾರೆ.

ಬಿಜೆಪಿಯ ಆರೋಪವೇನು?

ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಅವರು ಗೊಗೊಯ್‌ ಪತ್ನಿ ವಿರುದ್ಧ ಗಂಭೀರವಾಗಿ ಆರೋಪಿಸಿದ್ದು "ಲೋಕಸಭೆಯ ವಿರೋಧ ಪಕ್ಷದ ಉಪ ನಾಯಕ ಗೌರವ್ ಗೊಗೊಯ್ ಅವರ ಪತ್ನಿ ಎಲಿಜಬೆತ್ ಕೋಲ್ಬರ್ನ್ ಅವರು ಪಾಕಿಸ್ತಾನದ ಯೋಜನಾ ಆಯೋಗದ ಸಲಹೆಗಾರ ಅಲಿ ತೌಕೀರ್ ಶೇಖ್ ಮತ್ತು ಐಎಸ್ಐ ಜೊತೆಗೆ ನಂಟು ಹೊಂದಿರುವುದು ಗೊತ್ತಾಗಿದೆ. ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದಂತೆ ಇದು ಅತ್ಯಂತ ಆತಂಕಕಾರಿ ಬೆಳವಣಿಗೆ. ಕಾಂಗ್ರೆಸ್ ಹೈಕಮಾಂಡ್​ ಈ ಬಗ್ಗೆ ಗೊಗೊಯ್ ಬಳಿ ಸ್ಪಷ್ಟೀಕರಣ ಕೇಳಬೇಕು" ಎಂದು ಒತ್ತಾಯಿಸಿದ್ದಾರೆ. ಗೊಗೊಯ್ ಅವರ ಪತ್ನಿ ವಿದೇಶಿ ಪ್ರಜೆಯಾಗಿದ್ದಾರೆ. ಅವರು ಕೆಲಸ ಮಾಡುವ ಸಂಸ್ಥೆಗೆ ಭಾರತ ವಿರೋಧ ಅಮೆರಿಕದ ಉದ್ಯಮಿ ಜಾರ್ಜ್ ಸೊರೊಸ್ ಹಣಕಾಸು ನೆರವು ನೀಡಿದ್ದಾರೆ. ಹೀಗಾಗಿ, ಈ ಪ್ರಶ್ನೆ ಹುಟ್ಟುಕೊಂಡಿದೆ. ವಿಪಕ್ಷ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಮತ್ತು ಸಂಸದ ಗೌರವ್ ಗೊಗೊಯ್ ಅವರು ಈ ಬಗ್ಗೆ ಸ್ಪಷ್ಟನೆ ನೀಡಬೇಕಿದೆ ಎಂದು ಹೇಳಿದ್ದಾರೆ.



ಕುಟುಂಬಸ್ಥರೇ ಪಾಕಿಸ್ತಾನದ ಜೊತೆಗೆ ನಂಟು ಹೊಂದಿರುವ ಕಾರಣ, ಗೊಗೊಯ್​ ಅವರು ಭಾರತದ ಭದ್ರತೆ ದೃಷ್ಟಿಯಿಂದ ಉಪ ನಾಯಕನ ಸ್ಥಾನದಲ್ಲಿ ಮುಂದುವರಿಯುವುದು ಸೂಕ್ತವೇ? ಎಂದು ಪ್ರಶ್ನಿಸಿದ್ದಾರೆ.

ಆರೋಪವನ್ನು ನಿರಾಕರಿಸಿದ ಗೊಗೊಯ್

ತಮ್ಮ ಪತ್ಮಿಯ ವಿರುದ್ಧ ಬಿಜೆಪಿ ಮಾಡಿರುವ ಗಂಭೀರ ಆರೋಪವನ್ನು ಕಾಂಗ್ರೆಸ್​ ನಾಯಕ ಗೊಗೊಯ್​ ತಳ್ಳಿ ಹಾಕಿದ್ದಾರೆ. ಇದೊಂದು ನಗೆಪಾಟಲಿನ ವಿಷಯ. ಬಿಜೆಪಿ ನನ್ನನ್ನು ಎದುರಿಸಲಾಗದೆ ಕುಟುಂಬದ ಮೇಲೆ ಆಧಾರರಹಿತ ಆರೋಪಗಳನ್ನು ಹೊರಿಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಲೋಕಸಭಾ ಚುನಾವಣೆಗೂ ಮೊದಲು ನನ್ನ ಮತ್ತು ಕುಟುಂಬದ ವಿರುದ್ಧ ಇದೇ ರೀತಿಯ ಅಪಪ್ರಚಾರ ನಡೆಸಲಾಗಿತ್ತು. ಆದರೆ ಜನರು ನನ್ನನ್ನು ಸಂಸತ್ತಿಗೆ ಆಯ್ಕೆ ಮಾಡಿ ಕಳುಹಿಸುವ ಮೂಲಕ ಸರಿಯಾದ ಉತ್ತರ ನೀಡಿದರು.

ಈ ಸುದ್ದಿಯನ್ನೂ ಓದಿ:Modi US Visit : ಅಮೆರಿಕದಲ್ಲಿ ಮೋದಿ; ಡಿಎನ್‌ಐ ಮುಖ್ಯಸ್ಥೆ ತುಳಸಿ ಗಬ್ಬಾರ್ಡ್ ಜೊತೆ ಮಾತುಕತೆ

ಇನ್ನು ಮುಂದುವರೆದು ಮಾತನಾಡಿರುವ ಗೊಗೊಯ್‌ "ನನ್ನ ಹೆಂಡತಿ ಪಾಕಿಸ್ತಾನದ ಐಎಸ್ಐ ಏಜೆಂಟ್ ಆಗಿದ್ದರೆ, ನಾನು ಭಾರತದ ರಾ & ಎಡಬ್ಲ್ಯೂ ಏಜೆಂಟ್. ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿ ಸಾಕಷ್ಟು ಆರೋಪಗಳನ್ನು ಎದುರಿಸುತ್ತಿರುವ ವ್ಯಕ್ತಿಗಳು ನಮ್ಮ ಕುಟುಂಬದ ವಿರುದ್ಧ ಆರೋಪ ಮಾಡುತ್ತಿರುವುದು ಹಾಸ್ಯಸ್ಪದ. ಅಸ್ಸಾಂ ಮುಖ್ಯಮಂತ್ರಿ ತಮ್ಮ ವಿರುದ್ಧದ ಆರೋಪಗಳಿಂದ ತಪ್ಪಿಸಿಕೊಳ್ಳಲು ಈ ಆರೋಪಗಳನ್ನು ಮಾಡುತ್ತಿದ್ದಾರೆ" ಎಂದು ಕಿಡಿಕಾರಿದ್ದಾರೆ.