ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿಎಂ, ಪಿಎಂ ಆಗಿ 25 ವರ್ಷಗಳ ಆಡಳಿತ ಪೂರೈಸಿದ ಪ್ರಧಾನಿ ನರೇಂದ್ರ ಮೋದಿ; ಹುಟ್ಟುಹಬ್ಬ ಪ್ರಯುಕ್ತ ಸೆಪ್ಟೆಂಬರ್ 17ರಿಂದ ಬಿಜೆಪಿಯಿಂದ ಸೇವಾ ಪಖ್ವಾಡ: ಏನೆಲ್ಲ ಇರಲಿದೆ?

BJP to celebrate Seva Pakhwada: ಪ್ರಧಾನಿ ನರೇಂದ್ರ ಮೋದಿ ಸಾಂವಿಧಾನಿಕ ಸಾರ್ವಜನಿಕ ಹುದ್ದೆಯಲ್ಲಿ 25 ವರ್ಷಗಳನ್ನು ಪೂರೈಸಿದ ಸ್ಮರಣಾರ್ಥವಾಗಿ ಬಿಜೆಪಿಯು ಸೆಪ್ಟೆಂಬರ್ 17ರಿಂದ ಅಕ್ಟೋಬರ್ 2ರವರೆಗೆ ಸೇವಾ ಪಖ್ವಾಡ ಎಂಬ ಸೇವಾ ಅಭಿಯಾನವನ್ನು ಆಚರಿಸಲಿದೆ.

ಪ್ರಧಾನಿ ಮೋದಿಯ 25 ವರ್ಷಗಳ ಆಡಳಿತಕ್ಕೆ ಬಿಜೆಪಿಯಿಂದ ಸೇವಾ ಪಖ್ವಾಡ

ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ) -

Priyanka P
Priyanka P Aug 22, 2026 7:19 PM

ನವದೆಹಲಿ, ಆ. 22: ಪ್ರಧಾನಿ ನರೇಂದ್ರ ಮೋದಿ (PM Narendra Modi) ಸಾಂವಿಧಾನಿಕ ಸಾರ್ವಜನಿಕ ಹುದ್ದೆಯಲ್ಲಿ 25 ವರ್ಷಗಳನ್ನು ಪೂರೈಸಿದ ಸ್ಮರಣಾರ್ಥವಾಗಿ ಬಿಜೆಪಿಯು ಸೆಪ್ಟೆಂಬರ್ 17ರಿಂದ ಅಕ್ಟೋಬರ್ 2ರವರೆಗೆ ಸೇವಾ ಪಖ್ವಾಡ (Seva Pakhwada) ಎಂಬ ಸೇವಾ ಅಭಿಯಾನವನ್ನು ಆಚರಿಸಲಿದೆ ಎಂದು ನಾಯಕರು ತಿಳಿಸಿದ್ದಾರೆ. ಶನಿವಾರ (ಆಗಸ್ಟ್‌ 22) ಪಕ್ಷದ ಅಧ್ಯಕ್ಷ ನಿತಿನ್ ನಬಿನ್ (Nithin Nabin) ಅಧ್ಯಕ್ಷತೆಯಲ್ಲಿ ನಡೆದ ಹೊಸ ರಾಷ್ಟ್ರೀಯ ತಂಡದ ಮೊದಲ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಈ ಅಭಿಯಾನವು ಸಾರ್ವಜನಿಕ ಸೇವೆ ಮತ್ತು ಕಲ್ಯಾಣ ಚಟುವಟಿಕೆಗಳಾದ ನೈರ್ಮಲ್ಯ ಅಭಿಯಾನಗಳು, ರಕ್ತದಾನ ಶಿಬಿರಗಳು ಮತ್ತು ಆರೋಗ್ಯ ಶಿಬಿರಗಳನ್ನು ಒಳಗೊಂಡಿರುತ್ತದೆ. ಮೋದಿ ಪ್ರಧಾನಿಯಾಗಿ ಘೋಷಿಸಿದ ಕಲ್ಯಾಣ ಕ್ರಮಗಳು ಮತ್ತು ಯೋಜನೆಗಳನ್ನು ಇದು ಒಳಗೊಂಡಿರುತ್ತದೆ. ಮೋದಿ 2001ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. 2014ರಿಂದ ಪ್ರಸ್ತುತ ಪ್ರಧಾನ ಮಂತ್ರಿ ಸ್ಥಾನದಲ್ಲಿದ್ದಾರೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಏಳು ಸದಸ್ಯರ ತಂಡದ ಸಂಚಾಲಕರಾಗಿ ಈ ಯೋಜನೆಯನ್ನು ರೂಪಿಸಲಿದ್ದಾರೆ. ಕಾರ್ಯಕ್ರಮಗಳನ್ನು ಸಂಘಟಿಸಲು ಪ್ರತಿ ರಾಜ್ಯದಲ್ಲೂ ಓರ್ವ ಸಚಿವರು, ಓರ್ವ ಸಂಘಟನಾ ಪ್ರಧಾನ ಕಾರ್ಯದರ್ಶಿ ಮತ್ತು ಐದು ಹಿರಿಯ ನಾಯಕರನ್ನು ಒಳಗೊಂಡ ತಂಡವನ್ನು ರಚಿಸಲಾಗುವುದು.

ಆಧುನಿಕ ಭದ್ರತಾ ಸವಾಲು ಎದುರಿಸಲು ಬೃಹತ್ ಸಿವಿಲ್ ಡಿಫೆನ್ಸ್ ಪಡೆ: ನರೇಂದ್ರ ಮೋದಿ ಘೋಷಣೆ

ಪಕ್ಷವು ಉತ್ತಮ ಆಡಳಿತ, ಅಭಿವೃದ್ಧಿ ಮತ್ತು ಅಂತ್ಯೋದಯ ವಿಷಯಗಳ ಕುರಿತು ಬೌದ್ಧಿಕ ಸಮಾವೇಶಗಳು ಮತ್ತು ವಿಚಾರಗೋಷ್ಠಿಗಳನ್ನು ಹಾಗೂ ಯುವಜನರೊಂದಿಗೆ ಸಂವಾದಾತ್ಮಕ ಗೋಷ್ಠಿಗಳನ್ನು ಆಯೋಜಿಸಲಿದೆ. ನವೀನ್, ತಾವ್ಡೆ, ಸ್ಮೃತಿ ಇರಾನಿ, ಗುಜರಾತ್ ಸಚಿವ ಹರ್ಷ್ ಸಾಂಘವಿ, ಛತ್ತೀಸ್‌ಗಢ ಸಚಿವ ಒ.ಪಿ. ಚೌಧರಿ ಮತ್ತಿತರರನ್ನು ಒಳಗೊಂಡ ತಂಡವು ಜೆನ್ ಝೀ ತಲೆಮಾರಿನ ಯುವಜನರನ್ನು ತಲುಪುವ ಅಭಿಯಾನವನ್ನು ಮತ್ತಷ್ಟು ಬಲಪಡಿಸಲಿದೆ.

ಜೆನ್ ಝೀ ಮನ ಗೆಲ್ಲಲು ಬಿಜೆಪಿಯಿಂದ ಸರ್ಕಸ್‌

ಜೆನ್ ಝೀಗಳನ್ನು ಮನಸ್ಸು ಅರ್ಥ ಮಾಡಿಕೊಳ್ಳುವ ಸಲುವಾಗಿ ಬಿಜೆಪಿ ಇದೀಗ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್, ಹೊಸದಾಗಿ ನೇಮಕಗೊಂಡ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಮೃತಿ ಇರಾನಿ ಸೇರಿ ಹಲವು ಹಿರಿಯ ಬಿಜೆಪಿ ನಾಯಕರನ್ನು ಒಳಗೊಂಡ ವಿಶೇಷ ತಂಡವನ್ನು ರಚಿಸಿದೆ. ಇದರ ಮುಖ್ಯ ಉದ್ದೇಶ ಜೆನ್‌ ಝೀ ಸಮುದಾಯದ ಜತೆ ಸಂಪರ್ಕ ಸಾಧಿಸುವುದಾಗಿದೆ. ಈ ನಿಟ್ಟಿನಲ್ಲಿ ಶನಿವಾರ ನಿತಿನ್ ನಬಿನ್ ಅವರ ಅಧ್ಯಕ್ಷತೆಯಲ್ಲಿ ನವದೆಹಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ಉನ್ನತ ಮಟ್ಟದ ಸಭೆ ನಡೆದಿದೆ.