ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ವಿಮಾನ ಅಪಘಾತಕ್ಕೀಡಾಗುವ ಮುನ್ನ ಎಡಕ್ಕೆ ವಾಲಿದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ

CCTV footage of plane crash: ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ವಿಮಾನ ಅಪಘಾತಕ್ಕೀಡಾಗುವ ಮುನ್ನ ಎಡಕ್ಕೆ ವಾಲಿದ ಕ್ಷಣ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೊವು ಅಪಘಾತದ ಕುರಿತು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಘಟನೆಗೆ ಕಾರಣಗಳ ಬಗ್ಗೆ ತನಿಖೆ ಮುಂದುವರಿದಿದೆ.

ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ವಿಮಾನ ಅಪಘಾತಕ್ಕೀಡಾಗುವ ಮುನ್ನ ಎಡಕ್ಕೆ ವಾಲಿದ ದೃಶ್ಯ

ಮುಂಬೈ, ಜ. 29: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ (Maharashtra DCM Ajit Pawar) ಮತ್ತು ಇತರ ನಾಲ್ವರು ಪ್ರಯಾಣಿಸುತ್ತಿದ್ದ ಲಿಯರ್‌ಜೆಟ್ 45 ವಿಮಾನ ಮಹಾರಾಷ್ಟ್ರದ ಬಾರಾಮತಿ ವಿಮಾನ ನಿಲ್ದಾಣದ ರನ್‌ವೇ ಬಳಿ ಅಪಘಾತಕ್ಕೀಡಾಗುವ (Baramati Plane Crash) ಮೊದಲು ಎಡಕ್ಕೆ ಓರೆಯಾಗಿರುವ ಚಲಿಸಿರುವ ಸಿಸಿಟಿವಿ ದೃಶ್ಯಾವಳಿ ಹೊರಬಂದಿದೆ.

ವಿಮಾನವು ವೇಗವಾಗಿ ಇಳಿಯುವುದನ್ನು ಮತ್ತು ನೆಲಕ್ಕೆ ಹತ್ತಿರದಲ್ಲಿರುವಾಗಲೇ ಎಡಕ್ಕೆ ವಾಲಿರುವುದನ್ನು ವಿಡಿಯೊದಲ್ಲಿ ಕಂಡು ಬಂದಿದೆ. ವಿಮಾನವು ಲ್ಯಾಂಡಿಂಗ್‌ಗೆ ಮುನ್ನ ಈ ರೀತಿಯಾಗಿ ವಾಲುವುದು ಅಸಾಮಾನ್ಯ ಘಟನೆ ಎಂದು ವಾಯುಯಾನ ತಜ್ಞರು ತಿಳಿಸಿದ್ದಾರೆ. ಇದು ತಾಂತ್ರಿಕ ದೋಷದ ಪರಿಣಾಮವಾಗಿರಬಹುದು ಅಥವಾ ಪೈಲಟ್‌ಗಳು ವಿಮಾನದಲ್ಲಿನ ಕೆಲವು ರೀತಿಯ ಒತ್ತಡಗಳನ್ನು ಸರಿದೂಗಿಸಲು ಪ್ರಯತ್ನಿಸುತ್ತಿರಬಹುದು ಎಂದು ಹೇಳಿದ್ದಾರೆ.

ಹುಟ್ಟೂರು ಬಾರಾಮತಿಯಲ್ಲಿಂದು ಅಜಿತ್‌ ಪವಾರ್‌ ಅಂತ್ಯಕ್ರಿಯೆ; ಪ್ರಧಾನಿ ಸೇರಿ ಹಲವರು ಭಾಗಿ ಸಾಧ್ಯತೆ

ವಿಎಸ್‌ಆರ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ಒಡೆತನದ ಮತ್ತು VT-SSK ನೋಂದಣಿ ಹೊಂದಿರುವ ಲಿಯರ್‌ಜೆಟ್ 45 ವಿಮಾನವು, ಪವಾರ್ ಹಾಗೂ ಅವರ ವೈಯಕ್ತಿಕ ಭದ್ರತಾ ಅಧಿಕಾರಿ ವಿದೀಪ್ ಜಾಧವ್, ಕ್ಯಾಪ್ಟನ್ ಸುಮಿತ್ ಕಪೂರ್, ಸಹ ಪೈಲಟ್ ಶಾಂಭವಿ ಪಾಠಕ್ ಮತ್ತು ಫ್ಲೈಟ್ ಅಟೆಂಡೆಂಟ್ ಪಿಂಕಿ ಮಾಲಿ ಅವರೊಂದಿಗೆ ಮುಂಬೈಯೊಂದ ಬೆಳಗ್ಗೆ 8.10ಕ್ಕೆ ಹೊರಟಿತು. ಬಾರಾಮತಿಯಿಂದ ಸುಮಾರು 30 ಮೈಲುಗಳಷ್ಟು ದೂರದಲ್ಲಿ, ಪೈಲಟ್‌ಗಳಿಗೆ ಹವಾಮಾನ ಪರಿಸ್ಥಿತಿಗಳ ಬಗ್ಗೆ ತಿಳಿಸಲಾಯಿತು. ಗೋಚರತೆ ಸುಮಾರು 3 ಕಿ.ಮೀ. ದೂರದಲ್ಲಿದೆ. ಇದನ್ನು ಲ್ಯಾಂಡಿಂಗ್‌ಗೆ ಸುರಕ್ಷಿತವೆಂದು ಪರಿಗಣಿಸಲಾಗಿದೆ ಎಂದು ತಿಳಿಸಲಾಯಿತು.

ವಿಡಿಯೊ ವೀಕ್ಷಿಸಿ:



ವಿಮಾನವು ಲ್ಯಾಂಡಿಂಗ್‌ಗೆ ಸಮೀಪಿಸುತ್ತಿದ್ದ ವೇಳೆ, ಪೈಲಟ್‌ಗಳಿಗೆ ರನ್‌ವೇ ಸ್ಪಷ್ಟವಾಗಿ ಕಾಣುತ್ತಿಲ್ಲವೆಂದು ತಿಳಿಸಿದ್ದು, ಇದರಿಂದ ಅವರಿಗೆ ಒಂದೆರಡು ರೌಂಡ್ ಸುತ್ತಾಡುವಂತೆ ಕೇಳಲಾಯಿತು. ಬೆಳಗ್ಗೆ ಸುಮಾರು 8.34ರ ವೇಳೆಗೆ ವಿಮಾನವು ಮತ್ತೆ ರನ್‌ವೇಗೆ ಸಮೀಪಿಸಿದಾಗ, ಲ್ಯಾಂಡಿಂಗ್‌ಗೆ ಅನುಮತಿ ನೀಡಲಾಯಿತು. ಆದರೆ ಕೆಲವು ನಿಮಿಷಗಳ ನಂತರ, ವಿಮಾನವು ನಿಶ್ಯಬ್ಧವಾಯಿತು, ಸಂಕೇತಗಳನ್ನು ಕಳುಹಿಸುವುದನ್ನು ನಿಲ್ಲಿಸಿತು. ಈ ವೇಳೆಗಾಗಲೇ ವಿಮಾನ ನಿಲ್ದಾಣದ ರನ್‌ವೇ ಬಳಿ ಬೆಂಕಿಯ ಜ್ವಾಲೆ ಹಬ್ಬಿತು.

ರಕ್ಷಣಾ ಕಾರ್ಯಕರ್ತರು ಸ್ಥಳಕ್ಕೆ ತಲುಪುವ ಹೊತ್ತಿಗೆ ವಿಮಾನದಲ್ಲಿದ್ದ ಎಲ್ಲ ಐವರು ಮೃತಪಟ್ಟರು. ಮೂಲಗಳ ಪ್ರಕಾರ, ಪವಾರ್ ಧರಿಸಿದ್ದ ಕೈಗಡಿಯಾರದಿಂದ ಅವರ ಮೃತದೇಹವನ್ನು ಗುರುತಿಸಲಾಯಿತು ಎನ್ನಲಾಗಿದೆ.

2023ರಲ್ಲೂ ಪತನಗೊಂಡಿತ್ತು ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಸಂಚರಿಸಿದ್ದ ವಿಮಾನ

ಆರು ಬಾರಿ ಉಪಮುಖ್ಯಮಂತ್ರಿಯಾಗಿದ್ದ 66 ವರ್ಷದ ಎನ್‌ಸಿಪಿ ಮುಖ್ಯಸ್ಥ ಅಜಿತ್‌ ಪವಾರ್‌ ನಿಧನವು ಮಹಾರಾಷ್ಟ್ರ ರಾಜಕೀಯದಲ್ಲಿ ದೊಡ್ಡ ಶೂನ್ಯತೆಯನ್ನು ಉಂಟು ಮಾಡಿದೆ. ಇದು ಬಿಜೆಪಿ ಹಾಗೂ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯೊಂದಿಗೆ ಎನ್‌ಸಿಪಿ ಮೈತ್ರಿ ಹೊಂದಿರುವ ಆಡಳಿತಾರೂಢ ಮಹಾಯುತಿ ಸಮೀಕರಣಗಳ ಮೇಲೂ ಇದರ ಪರಿಣಾಮ ಬೀರುವ ಸಾಧ್ಯತೆ ಇದೆ.

2023ರಲ್ಲಿ ಅಜಿತ್ ಪವಾರ್ ಪಕ್ಷವನ್ನು ವಿಭಜಿಸಿದ ಬಳಿಕ, ಎನ್‌ಸಿಪಿಯ ಶರದ್ ಪವಾರ್ ಬಣದೊಂದಿಗೆ ಪುನರ್ಮಿಲನವಾಗುವ ಸಾಧ್ಯತೆ ಕುರಿತು ಸಾಕಷ್ಟು ಚರ್ಚೆಯಾಗುತ್ತಿತ್ತು. ಆದರೆ ಈ ಬೆಳವಣಿಗೆಯಿಂದ ಆ ಪ್ರಕ್ರಿಯೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ. ಅಜಿತ್ ಪವಾರ್ ಅವರಿಗೆ ಗೌರವ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ, ಅವರನ್ನು ಜನರ ನಾಯಕ ಎಂದು ಬಣ್ಣಿಸಿದ್ದಾರೆ.