ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

2023ರಲ್ಲೂ ಪತನಗೊಂಡಿತ್ತು ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಸಂಚರಿಸಿದ್ದ ವಿಮಾನ

Maharashtra Plane Crash: ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ವಿಮಾನವು ಇದಕ್ಕೂ ಮೊದಲು 2023ರಲ್ಲೇ ಒಂದು ಬಾರಿ ಅಪಘಾತಕ್ಕೀಡಾಗಿದ್ದ ವಿಚಾರ ಇದೀಗ ಬೆಳಕಿಗೆ ಬಂದಿದೆ. ಈ ವಿಮಾನದ ಹಿಂದಿನ ಸುರಕ್ಷತಾ ದಾಖಲೆಗಳು ಮತ್ತು ಹಿಂದಿನ ಅಪಘಾತಗಳ ಬಗ್ಗೆ ಗಂಭೀರ ಚರ್ಚೆ ಆರಂಭವಾಗಿದೆ.

2023ರಲ್ಲೂ ಪತನಗೊಂಡಿತ್ತು ಪವಾರ್ ದುರ್ಮರಣಕ್ಕೀಡಾದ ವಿಮಾನ

ವಿಮಾನ ಅಪಘಾತ ಮತ್ತು ಅಜಿತ್ ಪವಾರ್ -

Priyanka P
Priyanka P Jan 28, 2026 5:37 PM

ಮುಂಬೈ, ಜ. 28: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ (Ajit Pawar) ಬುಧವಾರ (ಜನವರಿ 28) ಬೆಳಗ್ಗೆ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅವರು ಪ್ರಯಾಣಿಸುತ್ತಿದ್ದ ಅದೇ ಖಾಸಗಿ ವಿಮಾನವು 2023ರಲ್ಲಿಯೂ ಪತನಗೊಂಡಿತ್ತು ಎನ್ನುವ ವಿಚಾರ ಬೆಳಕಿಗೆ ಬಂದಿದೆ. 2023ರ ಸೆಪ್ಟೆಂಬರ್‌ನಲ್ಲಿ ಮುಂಬೈ ವಿಮಾನ ನಿಲ್ದಾಣದಲ್ಲಿ (Mumbai Airport) ಭಾರಿ ಮಳೆಯ ನಡುವೆ ಇಳಿಯಲು ಪ್ರಯತ್ನಿಸುವಾಗ ಈ ಖಾಸಗಿ ವಿಮಾನವು ರನ್‌ವೇಯಿಂದ ಜಾರಿ ಅಪಘಾತಕ್ಕೀಡಾಯಿತು.

ಬುಧವಾರ ಬೆಳಗ್ಗೆ ಪುಣೆ ಜಿಲ್ಲೆಯಲ್ಲಿ ಎನ್‌ಸಿಪಿ ಮುಖ್ಯಸ್ಥ ಅಜಿತ್ ಪವಾರ್, ಪೈಲಟ್ ಹಾಗೂ ಸಿಬ್ಬಂದಿ ಸೇರಿದಂತೆ ಐವರು ಇದ್ದ ವಿಮಾನವು ಅಪಘಾತಕ್ಕೀಡಾಗಿದ್ದು, ಎಲ್ಲರೂ ಮೃತಪಟ್ಟಿದ್ದಾರೆ. ಲಿಯರ್‌ಜೆಟ್ 45 ವಿಮಾನವು ವಿಎಸ್ಆರ್ ವೆಂಚರ್ಸ್ ಒಡೆತನದಲ್ಲಿದೆ ಮತ್ತು ಅದೇ ಕಂಪನಿ ನಿರ್ವಹಿಸುತ್ತಿತ್ತು. ಮುಂಬೈಯಿಂದ ಬೆಳಗ್ಗೆ 8 ಗಂಟೆ ಸುಮಾರಿಗೆ ಹೊರಟಿದ್ದ ಸಣ್ಣ ವಿಮಾನವು 45 ನಿಮಿಷಗಳ ನಂತರ ಲ್ಯಾಂಡಿಂಗ್ ಸಮಯದಲ್ಲಿ ನಿಯಂತ್ರಣ ಕಳೆದುಕೊಂಡ ನಂತರ ಬಾರಾಮತಿ ವಿಮಾನ ನಿಲ್ದಾಣದ ಬಳಿ ಪತನಗೊಂಡಿತು. ಅಪಘಾತದ ನಂತರ ವಿಮಾನವು ಬೆಂಕಿಗೆ ಆಹುತಿಯಾಯಿತು.

ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಪುಣೆಯ ಬಾರಾಮತಿಗೆ ಹೊರಟಿದ್ದೇಕೆ? ಹುಟ್ಟೂರಲ್ಲೇ ಅಂತ್ಯ ಕಂಡ ನಾಯಕ

ಹವಾಮಾನ ವೈಪರೀತ್ಯದಿಂದಾಗಿ ಗೋಚರತೆ ಕಡಿಮೆ ಇದ್ದುದರಿಂದ ಈ ಅಪಘಾತ ಸಂಭವಿಸಿದೆ ಎಂದು ವಿಎಸ್ಆರ್ ಏವಿಯೇಷನ್‌ನ ಕ್ಯಾಪ್ಟನ್ ವಿಕೆ ಸಿಂಗ್ ಹೇಳಿದ್ದಾರೆ. ಪ್ರಸ್ತುತ ಇದಕ್ಕಿಂತ ಹೆಚ್ಚಿನ ಮಾಹಿತಿ ನಮಗೆ ತಿಳಿದಿಲ್ಲ ಎಂದು ಅವರು ಹೇಳಿದರು.

ವರದಿಗಳ ಪ್ರಕಾರ, ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮುನ್ನ ಪವಾರ್ ನಾಲ್ಕು ಪ್ರಮುಖ ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಬೇಕಿತ್ತು.

ಸೆಪ್ಟೆಂಬರ್ 2023ರ ಅಪಘಾತ

2023ರ ಸೆಪ್ಟೆಂಬರ್ 14 ರಂದು, ವಿಎಸ್ಆರ್ ವೆಂಚರ್ಸ್ ಒಡೆತನದ ಮತ್ತು ಲಿಯರ್‌ಜೆಟ್ 45 ಎಕ್ಸ್‌ಆರ್ ಮುಂಬೈಯ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರಿ ಮಳೆ ಮತ್ತು ಕಳಪೆ ಗೋಚರತೆಯ ನಡುವೆ ಲ್ಯಾಂಡಿಂಗ್ ಮಾಡುವಾಗ ಅಪಘಾತಕ್ಕೀಡಾಯಿತು.

ಈ ವಿಮಾನವು ವಿಶಾಖಪಟ್ಟಣಂನಿಂದ ಮುಂಬೈಗೆ, ಪೈಲಟ್ ಇನ್ ಕಮಾಂಡ್ ನೇತೃತ್ವದಲ್ಲಿ, ವಿಮಾನ ಸಾರಿಗೆ ಪೈಲಟ್ ಪರವಾನಗಿ (ATPL) ಮತ್ತು ವಾಣಿಜ್ಯ ಪೈಲಟ್ ಪರವಾನಗಿ (CPL) ಹೊಂದಿರುವ ಸಹ-ಪೈಲಟ್ ನೇತೃತ್ವದಲ್ಲಿ ಹಾರಾಟನಡೆಸುತ್ತಿತ್ತು. ವಿಮಾನದಲ್ಲಿ ಆರು ಪ್ರಯಾಣಿಕರಿದ್ದರು.

ನಾಗರಿಕ ವಿಮಾನಯಾನ ಸಚಿವಾಲಯದ ವರದಿಯ ಪ್ರಕಾರ, ವಿಮಾನವು ವಿಶಾಖಪಟ್ಟಣಂನಿಂದ ಹೊರಟಿತ್ತು. ಮಾರ್ಗಮಧ್ಯೆ ಹಾರಾಟಕ್ಕೆ ಯಾವುದೇ ತೊಂದರೆಯಿರಲಿಲ್ಲ. ವಿಮಾನವು ಮುಂಬೈ ಟವರ್‌ನೊಂದಿಗೆ ಸಂಪರ್ಕವನ್ನು ಸಾಧಿಸಿತು. ಲ್ಯಾಂಡಿಂಗ್‌ಗೆ ಸಿದ್ಧವಾಗುವಂತೆ ಸೂಚಿಸಲಾಯಿತು. ವಿಮಾನವನ್ನು ರನ್‌ವೇ 27ರಲ್ಲಿ ಇಳಿಸಲು ಅನುಮತಿ ನೀಡಲಾಯಿತು. 113109 ಯುಟಿಸಿಯಲ್ಲಿ ಲ್ಯಾಂಡಿಂಗ್ ಕ್ಲಿಯರೆನ್ಸ್ ನೀಡಲಾಯಿತು. ಲ್ಯಾಂಡಿಂಗ್ ಸಮಯದಲ್ಲಿ, ಮುಂಬೈ ವಿಮಾನ ನಿಲ್ದಾಣದಲ್ಲಿ ಭಾರಿ ಮಳೆಯಾಗುತ್ತಿತ್ತು. ಇದರಿಂದ ಗೋಚರತೆ ಕಡಿಮೆಯಾಗಿತ್ತು.

ಲ್ಯಾಂಡಿಂಗ್ ವೇಳೆ ವಿಮಾನವು ನಿರಂತರವಾಗಿ ರನ್‌ವೇ 27ರ ಬಲಭಾಗಕ್ಕೆ ಜಾರುತ್ತಿತ್ತು. ಏಪ್ರಾನ್ ಸಿ ಕಡೆಗೆ ಚಲಿಸಿತು. ಆಟೋಪೈಲಟ್ ಅನ್ನು ಸಂಪರ್ಕದಿಂದ ಬೇರ್ಪಡಿಸಿದ ಸುಮಾರು 40 ಸೆಕೆಂಡುಗಳ ನಂತರ, ಕಾಕ್‍ಪಿಟ್‍ನಲ್ಲಿ ಸ್ಟಿಕ್ ಶೇಕರ್ ಹಾಗೂ ಸ್ಟಾಲ್ ವಾರ್ನಿಂಗ್ ಅಲರ್ಟ್ ಮೊಳಗಿತು. ಇದಾದ ಬಳಿಕ ಎನ್‌ಹಾನ್ಸ್ಡ್ ಗ್ರೌಂಡ್ ಪ್ರಾಕ್ಸಿಮಿಟಿ ವಾರ್ನಿಂಗ್ ಸಿಸ್ಟಮ್ (EGPWS) ನಿಂದ ಅನೇಕ ಎಚ್ಚರಿಕೆಗಳು ಕೇಳಿಬಂದವು.

ನಂತರ ವಿಮಾನವು ಎರಡು ಟ್ಯಾಕ್ಸಿವೇಗಳು - W ಮತ್ತು N - ಛೇದಕ ಬಳಿ ಕ್ರ್ಯಾಶ್ ಲ್ಯಾಂಡಿಂಗ್ ಆಯಿತು. ಡಿಕ್ಕಿಯ ಪರಿಣಾಮವಾಗಿ ವಿಮಾನವು ಎರಡು ಭಾಗಗಳಾಗಿ ಮುರಿದು, ಸ್ವಲ್ಪ ದೂರ ಜಾರಿ ಬಳಿಕ ನಿಂತಿತು. ಘಟನೆಯಲ್ಲಿ ಎಲ್ಲರೂ ಗಾಯಗೊಂಡರೂ, ಪ್ರಯಾಣಿಕರು ಹಾಗೂ ಪೈಲಟ್–ಇನ್–ಕಮಾಂಡ್ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಬಿಡುಗಡೆ ಮಾಡಲಾಯಿತು. ಆದರೆ, ಸಹ ಪೈಲಟ್‌ಗೆ ಗಂಭೀರ ಗಾಯಗಳಾಗಿತ್ತು. ಹೀಗಾಗಿ ಅವರಿಗೆ ಹೆಚ್ಚಿನ ಚಿಕಿತ್ಸೆ ನೀಡಲಾಯಿತು.

ವಿಮಾನ ಅಪಘಾತದ ನಂತರ ಅಜಿತ್ ಪವಾರ್ ಮೃತದೇಹವನ್ನು ಗುರುತಿಸಿದ್ದು ಹೇಗೆ?

ಮತ್ತೊಂದು ಅಪಘಾತದಲ್ಲಿ, ಮೆಕ್ಸಿಕನ್ ವಾಯುಪಡೆಯು ನಡೆಸುತ್ತಿದ್ದ ಲಿಯರ್‌ಜೆಟ್ 45ಎಕ್ಸ್‌ಆರ್ (ನೋಂದಣಿ ಸಂಖ್ಯೆ 3912) ವಿಮಾನವು ಜಲಾಪಾ–ಎಲ್ ಲೆನ್ಸೆರೊ ವಿಮಾನ ನಿಲ್ದಾಣದಿಂದ ಟೇಕ್‌ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿತ್ತು. 2021ರ ಫೆಬ್ರವರಿಯಲ್ಲಿ ನಡೆದ ಈ ಅಪಘಾತದಲ್ಲಿ ವಿಮಾನದಲ್ಲಿದ್ದ ಆರು ಜನರೂ ಮೃತಪಟ್ಟಿದ್ದರು.

ವಿ.ಎಸ್.ಆರ್. ವೆಂಚರ್ಸ್ ಬಗ್ಗೆ ಮಾಹಿತಿ

ವಿಎಸ್‌ಆರ್ ಏವಿಯೇಷನ್ ಎಂಬ ಕಂಪನಿಯ ಕಾನೂನುಬದ್ಧ ನೋಂದಾಯಿತ ಹೆಸರು ವಿಎಸ್‌ಆರ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ಆಗಿದ್ದು, ಇದು ನವದೆಹಲಿಯನ್ನು ಕೇಂದ್ರವಾಗಿಟ್ಟುಕೊಂಡಿರುವ ನಾನ್–ಶೆಡ್ಯೂಲ್ಡ್ ಏರ್ ಟ್ರಾನ್ಸ್‌ಪೋರ್ಟ್ ಆಪರೇಟರ್ ಆಗಿದೆ. ಖಾಸಗಿ ಜೆಟ್ ಚಾರ್ಟರ್ ಸೇವೆಗಳು, ವೈದ್ಯಕೀಯ ತುರ್ತು ವಿಮಾನ ಸೇವೆಗಳು ಹಾಗೂ ವಿಮಾನಯಾನ ಸಲಹಾ ಸೇವೆಗಳಲ್ಲಿ ಈ ಸಂಸ್ಥೆ ಪರಿಣತಿ ಹೊಂದಿದೆ.

ಅಪಘಾತಕ್ಕೀಡಾದ VT-SSK ಲಿಯರ್‌ಜೆಟ್ 45XR ಅನ್ನು 1990ರ ದಶಕದಲ್ಲಿ ಸೂಪರ್–ಲೈಟ್ ಬಿಸಿನೆಸ್ ಜೆಟ್ ವಿಭಾಗದಲ್ಲಿ ಸೆಸ್ನಾ ಸಿಟೇಶನ್ ಎಕ್ಸೆಲ್‌ಗೆ ಸ್ಪರ್ಧಿಯಾಗಿ ಅಭಿವೃದ್ಧಿಪಡಿಸಲಾಗಿತ್ತು.