UPSC Coaching: 'ಯುಪಿಎಸ್ಸಿ' ಸುಳ್ಳು ಜಾಹೀರಾತು ನೀಡಿದ ಕೋಚಿಂಗ್ ಸೆಂಟರ್‌ಗೆ 7 ಲಕ್ಷ ದಂಡ
ಯುಪಿಎಸ್ಸಿ ಅಭ್ಯರ್ಥಿಗಳ ಕೋರ್ಸ್‌ಗಳ ಸ್ವರೂಪದ ಬಗ್ಗೆ ತರಬೇತಿ ಸಂಸ್ಥೆ ವಾಸ್ತವ ಮರೆಮಾಚಿ ದಾರಿ ತಪ್ಪಿಸುವ ಜಾಹೀರಾತು ಪ್ರಕಟಿಸುತ್ತ ಗ್ರಾಹಕ ರಕ್ಷಣಾ ಕಾಯ್ದೆ 2019ರ ಉಲ್ಲಂಘಿಸಿದ ಕಾರಣ CCPA, ವಾಜಿರಾಮ್ ಮತ್ತು ರವಿ ಐಎಎಸ್ ಕೋಚಿಂಗ್ ಸೆಂಟರ್‌ಗೆ ಈ ದಂಡ ವಿಧಿಸಿ ಆದೇಶ ಹೊರಡಿಸಿದೆ.
ಯುಪಿಎಸ್ಸಿ -
ನವದೆಹಲಿ, ಜೂ 1: ಯುಪಿಎಸ್‌ಸಿ ನಾಗರಿಕ ಸೇವೆಗಳ ಪರೀಕ್ಷೆ-2023ರ (UPSC) ಫಲಿತಾಂಶ ಬಗ್ಗೆ ಸುಳ್ಳು ಹಾಗೂ ದಾರಿ ತಪ್ಪಿಸುವ ಜಾಹೀರಾತು ಪ್ರಕಟಿಸಿದ್ದಕ್ಕಾಗಿ ಖಾಸಗಿ ಕೋಚಿಂಗ್ ಸಂಸ್ಥೆಯೊಂದಕ್ಕೆ 'ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ' (CCPA) ₹ 7 ಲಕ್ಷ ದಂಡ ವಿಧಿಸಿದೆ. ಯುಪಿಎಸ್ಸಿ ಅಭ್ಯರ್ಥಿಗಳ ಕೋರ್ಸ್‌ಗಳ ಸ್ವರೂಪದ ಬಗ್ಗೆ ತರಬೇತಿ ಸಂಸ್ಥೆ ವಾಸ್ತವ ಮರೆಮಾಚಿ ದಾರಿ ತಪ್ಪಿಸುವ ಜಾಹೀರಾತು ಪ್ರಕಟಿಸುತ್ತ ಗ್ರಾಹಕ ರಕ್ಷಣಾ ಕಾಯ್ದೆ 2019ರ ಉಲ್ಲಂಘಿಸಿದ ಕಾರಣ CCPA, ವಾಜಿರಾಮ್ ಮತ್ತು ರವಿ ಐಎಎಸ್ ಕೋಚಿಂಗ್ ಸೆಂಟರ್‌ಗೆ ಈ ದಂಡ ವಿಧಿಸಿ ಆದೇಶ ಹೊರಡಿಸಿದೆ.
ಈ ಕೋಚಿಂಗ್ ಸಂಸ್ಥೆ ಯುಪಿಎಸ್‌ಸಿ ನಾಗರಿಕ ಸೇವೆಗಳ ಪರೀಕ್ಷೆ (ಸಿಎಸ್‌ಇ) 2023ರ ಯಶಸ್ವಿ ಅಭ್ಯರ್ಥಿಗಳ ಹೆಸರು, ಪೋಟೋ ಬಳಸಿಕೊಂಡಿದ್ದಲ್ಲದೆ, ಅಭ್ಯರ್ಥಿಗಳು ಆಯ್ಕೆ ಮಾಡಿಕೊಂಡ ನಿರ್ದಿಷ್ಟ ಕೋರ್ಸ್‌ಗಳ ಮಾಹಿತಿ ಮರೆಮಾಚಿರುವುದು ಗೊತ್ತಾಗಿದೆ.
ಹೇಗೆ ವಂಚನೆ?
UPSC CSE 2023ರ ಘೋಷಣೆ ನಂತರ ಸಂಸ್ಥೆಯ ಅಧಿಕೃತ ವೆಬ್‌ಸೈಟ್ (www.vajiramandravi.com) ನಲ್ಲಿ ʼಟಾಪ್ 10ರಲ್ಲಿ 8 ಶ್ರೇಯಾಂಕ ಪಡೆದವರು ವಾಜಿರಾಮ್ ಮತ್ತು ರವಿಯವರಿಂದ ಬಂದವರುʼ, ʼಟಾಪ್ 50ರಲ್ಲಿ 37 ರ‍್ಯಾಂಕ್ ಹೊಂದಿರುವವರು ವಾಜಿರಾಮ್ ಮತ್ತು ರವಿಯವರಿಂದ ಬಂದವರುʼ ಎಂದು ಪ್ರಕಟಿಸಲಾಗಿತ್ತು. ಆದರೆ, ವಾಸ್ತವವಾಗಿ ಪ್ರತಿ ವರ್ಷ, UPSC ನಾಗರಿಕ ಸೇವಾ ಪರೀಕ್ಷೆ ಮೂಲಕ ಆಯ್ಕೆಯಾಗುವ ಅಧಿಕಾರಿಗಳಲ್ಲಿ ಶೇ.30ಕ್ಕಿಂತ ಹೆಚ್ಚು ಜನರು ವಾಜಿರಾಮ್ ಮತ್ತು ರವಿ ಅವರ ವಿದ್ಯಾರ್ಥಿಗಳಾಗಿದ್ದರು. ಅಲ್ಲದೆ, 37 ಶ್ರೇಯಾಂಕಿತರಲ್ಲಿ 29 ಅಭ್ಯರ್ಥಿಗಳು ಮಾತ್ರ ಉಚಿತ ಸಂದರ್ಶನ ಮಾರ್ಗದರ್ಶನಕ್ಕೆ ದಾಖಲಾಗಿದ್ದರು. ಆದರೆ, ಈ ಸಂಸ್ಥೆಗಳು ಆಕ್ಷೇಪಾರ್ಹ ಜಾಹೀರಾತು ಮತ್ತು ಗ್ರಾಹಕ ಸಂರಕ್ಷಣಾ ಕಾಯ್ದೆ 2019ರ ಸೆಕ್ಷನ್ 2(28) (iv) ಅಡಿಯಲ್ಲಿ "ದಾರಿ ತಪ್ಪಿಸುವ ಜಾಹೀರಾತು" ಎಂದು CCPA ಅಭಿಪ್ರಾಯಪಟ್ಟಿದೆ, ಇದು ಪ್ರಮುಖ ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ಮರೆಮಾಚುವುದನ್ನು ನಿಷೇಧಿಸುತ್ತದೆ. ಈ ನಡವಳಿಕೆಯು ಗ್ರಾಹಕರಿಗೆ ಮಾಹಿತಿ ಪಡೆಯುವ ಹಕ್ಕನ್ನು ನೀಡುವ ಕಾಯಿದೆಯ ಸೆಕ್ಷನ್ 2(9)ರ ಉಲ್ಲಂಘನೆಯಾಗಿರುವುದು ಕಂಡುಬಂದಿದೆ.
60ಕ್ಕೂ ಹೆಚ್ಚು ಸಂಸ್ಥೆಗಳಿಗೆ ನೋಟಿಸ್
ದಾರಿ ತಪ್ಪಿಸುವ ಜಾಹೀರಾತು ಮತ್ತು ಅನ್ಯಾಯದ ವ್ಯಾಪಾರ ಪದ್ಧತಿಗಳಿಗಾಗಿ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ ಈವರೆಗೆ 60ಕ್ಕೂ ಹೆಚ್ಚು ತರಬೇತಿ ಸಂಸ್ಥೆಗಳಿಗೆ ನೋಟಿಸ್ ನೀಡಿದ್ದು, UPSC ನಾಗರಿಕ ಸೇವಾ ಪರೀಕ್ಷೆ (CSE), IIT-JEE, NEET, RBI ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳಂತಹ ಪರೀಕ್ಷೆಗಳಿಗೆ ತರಬೇತಿ ನೀಡುವ ತರಬೇತಿ ಸಂಸ್ಥೆಗಳ ಮೇಲೆ ₹1.46 ಕೋಟಿಗೂ ಹೆಚ್ಚು ದಂಡ ವಿಧಿಸಿದೆ.
ಯಶವಂತಪುರ-ವಿಜಯಪುರ ದ್ವೈಸಾಪ್ತಾಹಿಕ ವಿಶೇಷ ರೈಲು ಸಂಚಾರಕ್ಕೆ ಕೇಂದ್ರ ಅಸ್ತು
ಪರಿಶೀಲನೆಗೆ ಸೂಚಿಸಿದ್ದ ಸಚಿವ ಜೋಶಿ
ಕೋಚಿಂಗ್ ಸೆಂಟರ್‌ಗಳ ಅನ್ಯಾಯದ ವಿರುದ್ಧ ವ್ಯಾಪಕ ದೂರುಗಳು ಕೇಳಿ ಬಂದ ಹಿನ್ನಲೆಯಲ್ಲಿ ಕೇಂದ್ರ ಗ್ರಾಹಕ ವ್ಯವಹಾರ ಇಲಾಖೆ ಸಚಿವ ಪ್ರಲ್ಹಾದ್ ಜೋಶಿ ಅವರು ಪರಿಶೀಲನೆಗೆ ಸೂಚಿಸಿದ್ದರು. ಅಭ್ಯರ್ಥಿಗಳ ಹಿತ ಕಾಪಾಡುವ ನಿಟ್ಟಿನಲ್ಲಿ ಸಚಿವರು ಅಗತ್ಯ ಮಾರ್ಗದರ್ಶನ ಸಹ ನೀಡಿದ್ದರು. ಅದರಂತೆ ಇಲಾಖೆ ಮುಖ್ಯ ಆಯುಕ್ತೆ ನಿಧಿ ಖರೆ ಮತ್ತು ಆಯುಕ್ತೆ ಅನುಪಮ್ ಮಿಶ್ರಾ ನೇತೃತ್ವದಲ್ಲಿ ಪರಿಶೀಲನೆ ಕೈಗೆತ್ತಿಕೊಂಡ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (CCPA), ವಾಜಿರಾಮ್ ಮತ್ತು ರವಿ ಐಎಎಸ್ ಸ್ಟಡಿ ಸೆಂಟರ್ ಎಲ್‌ಎಲ್‌ಪಿ ಲೋಪ ಮನಗಂಡು ದಂಡ ವಿಧಿಸಿ ಆದೇಶ ಹೊರಡಿಸಿದೆ.