ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕುಣಿಗಲ್ ಶಾಸಕ ರಂಗನಾಥ್ ವಿರುದ್ಧ ಸಿಡಿದ ಹೇಮಾವತಿ ಹೋರಾಟಗಾರರು..!!.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿದ ಲಿಂಕ್ ಕೆನಾಲ್ ವಿರೋಧಿ ಹೋರಾಟ ಸಮಿತಿಯ ರೈತ ಮುಖಂಡರು ನ್ಯಾಯಾಲಯ ಕಾಮಗಾರಿ ಬಗ್ಗೆ ಆದೇಶ ನೀಡಿಲ್ಲ. ಸರ್ಕಾರದ ಅಧಿಕಾರ ದುರುಪಯೋಗ ಮಾಡಿಕೊಂಡು ರೈತರ ಹೋರಾಟ ಹತ್ತಿಕ್ಕುವ ಪ್ರಯತ್ನ ಮಾಡಿದರೆ ಸಾವಿರ ಸಂಖ್ಯೆ ಲಕ್ಷಕ್ಕೆ ತಿರುಗಿ ಉಗ್ರ ಹೋರಾಟ ಮಾಡಲು ಇಲ್ಲಿನ ರೈತರು ಸಜ್ಜಾಗಿದ್ದಾರೆ. ಇಡೀ ಜಿಲ್ಲೆಯ ರೈತರಿಗೆ ನಿಮ್ಮ ಆಟ ತಿಳಿದಿದೆ. ದುಡ್ಡು ಹೊಡೆಯುವ ಕಾಮಗಾರಿ ಅದು ಅವೈಜ್ಞಾನಿಕ ಎಂಬುದು ತಿಳಿದಿದೆ. ಯಾವುದೇ ಕಾರಣಕ್ಕೂ ಹೇಮಾವತಿ ನೀರು ಪೈಪ್ ಲೈನ್ ಮೂಲಕ ಹರಿಯಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಕುಣಿಗಲ್ ಶಾಸಕ ರಂಗನಾಥ್ ವಿರುದ್ಧ ಸಿಡಿದ ಹೇಮಾವತಿ ಹೋರಾಟಗಾರರು..!!.

-

Profile
Ashok Nayak Nov 16, 2026 11:56 PM

ಗುಬ್ಬಿ: ಹೈಕೋರ್ಟ್(High Court) ಆದೇಶ ಬರುವ ಮುನ್ನವೇ ಲಿಂಕ್ ಕೆನಾಲ್ ಕಾಮಗಾರಿ ಮಾಡುವ ಬಗ್ಗೆ ಮಾತನಾಡಿರುವ ಕುಣಿಗಲ್ ಶಾಸಕ ರಂಗನಾಥ್(MLA Ranganath) ಅವರು ಹೈಕೋರ್ಟ್ ನಲ್ಲಿ ಈ ಕಾಮಗಾರಿ ಕುರಿತ ಎಷ್ಟು ಕೇಸ್ ಗಳು ಇವೆ ಎನ್ನುವ ಬಗ್ಗೆ ತಿಳಿದುಕೊಳ್ಳಬೇಕು. ಭೂ ಸ್ವಾಧೀನ ಕೇಸ್ ಬಗ್ಗೆ ಆದೇಶ ಸಿಗುವ ಮುನ್ನವೇ ಪತ್ರಿಕಾ ಹೇಳಿಕೆ ನೀಡಿ ರೈತರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿರುವುದು ಸರಿಯಲ್ಲ. ಕುಣಿಗಲ್ ತಾಲ್ಲೂಕಿಗೆ ಹಂಚಿಕೆ ನೀರು ಮುಖ್ಯ ನಾಲೆ ಮೂಲಕ ಹರಿಸಿಕೊಳ್ಳಲು ತಕರಾರಿಲ್ಲ. ಆದರೆ ಯಾವುದೇ ಕಾರಣಕ್ಕೂ ಹೇಮಾವತಿ ನೀರು ಮಾಗಡಿ ರಾಮನಗರಕ್ಕೆ ನೀಡುವುದಿಲ್ಲ ಎಂದು ಖಡಕ್ ಎಚ್ಚರಿಕೆಯನ್ನು ಹೇಮಾವತಿ ಹೋರಾಟಗಾರರು ರವಾನಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿದ ಲಿಂಕ್ ಕೆನಾಲ್ ವಿರೋಧಿ ಹೋರಾಟ ಸಮಿತಿಯ ರೈತ ಮುಖಂಡರು ನ್ಯಾಯಾಲಯ ಕಾಮಗಾರಿ ಬಗ್ಗೆ ಆದೇಶ ನೀಡಿಲ್ಲ. ಸರ್ಕಾರದ ಅಧಿಕಾರ ದುರುಪಯೋಗ ಮಾಡಿಕೊಂಡು ರೈತರ ಹೋರಾಟ ಹತ್ತಿಕ್ಕುವ ಪ್ರಯತ್ನ ಮಾಡಿದರೆ ಸಾವಿರ ಸಂಖ್ಯೆ ಲಕ್ಷಕ್ಕೆ ತಿರುಗಿ ಉಗ್ರ ಹೋರಾಟ ಮಾಡಲು ಇಲ್ಲಿನ ರೈತರು ಸಜ್ಜಾಗಿದ್ದಾರೆ. ಇಡೀ ಜಿಲ್ಲೆಯ ರೈತರಿಗೆ ನಿಮ್ಮ ಆಟ ತಿಳಿದಿದೆ. ದುಡ್ಡು ಹೊಡೆಯುವ ಕಾಮಗಾರಿ ಅದು ಅವೈಜ್ಞಾನಿಕ ಎಂಬುದು ತಿಳಿದಿದೆ. ಯಾವುದೇ ಕಾರಣಕ್ಕೂ ಹೇಮಾವತಿ ನೀರು ಪೈಪ್ ಲೈನ್ ಮೂಲಕ ಹರಿಯಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ ಜಿಲ್ಲೆಯ ರೈತರ ಬದುಕು ಹೇಮಾವತಿ ನೀರಿನ ಮೇಲೆ ಅವಲಂಬಿತವಾಗಿದೆ. ಲಿಂಕ್ ಕೆನಾಲ್ ಬಗ್ಗೆ ಮಾತನಾಡಿದ ರಂಗನಾಥ್ ಅವರ ಹೇಳಿಕೆ ಬಗ್ಗೆ ಕುಣಿಗಲ್ ವಿರೋಧ ಪಕ್ಷವೇ ಒಪ್ಪುತ್ತಿಲ್ಲ. ಕುಣಿಗಲ್ ಹೆಸರಿನಲ್ಲಿ ಮಾಗಡಿ ರಾಮನಗರ ದತ್ತ ನೀರು ಹರಿಸುವ ಹುನ್ನಾರ ಎಂದು ಅಲ್ಲಿನ ರೈತರಿಗೂ ತಿಳಿದಿದೆ. ಕುಣಿಗಲ್ ತಾಲ್ಲೂಕಿನ ಕೆರೆಗಳಿಗೆ ನೀರು ಕೊಡಲು ನಮ್ಮ ತಕರಾರಿಲ್ಲ. ಈಗಾಗಲೇ ಮುಖ್ಯ ನಾಲೆ ಮೂಲಕವೇ ಹಂಚಿಕೆ ಯಷ್ಟು ನೀರು ಹರಿದಿದೆ. ಎಲ್ಲವೂ ತಿಳಿದು ಕೂಡಾ ನೀವು ಮಾಡುವ ಪ್ರಯತ್ನ ಫಲ ಸಿಗೋಲ್ಲ ಎಂದು ಗುಡುಗಿದರು.

ಇದನ್ನೂ ಓದಿ: Gubbi News: ಕೊಪ್ಪ ವಿಎಸ್ಎಸ್ಎನ್ ಪ್ರತಿಷ್ಠೆಯ ಚುನಾವಣೆ : ಅಧ್ಯಕ್ಷರಾಗಿ ಕೆ.ಎಸ್.ರಮೇಶ್, ಉಪಾಧ್ಯಕ್ಷರಾಗಿ ನಟರಾಜ್ ಆಯ್ಕೆ

ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್ ಮಾತನಾಡಿ ಸ್ವಾಭಾವಿಕವಾಗಿ ನಾಲೆಯ ಮೂಲಕ ನೀರು ಹರಿಸಿಕೊಳ್ಳಲು ಯಾರ ವಿರೋಧವಿಲ್ಲ. ಮೊದಲು ಕುಣಿಗಲ್ ತಾಲ್ಲೂಕಿನಲ್ಲಿ ಬಾಕಿ ಇರುವ 40 ಕಿಮೀ ನಾಲೆ ಕಾಮಗಾರಿ ಪೂರ್ಣಗೊಳಿಸಿ 8 ಸಾವಿರ ಎಕರೆ ಅಚ್ಚುಕಟ್ಟು ಘೋಷಣೆ ಮಾಡಿ. ತದ ನಂತರ ಹೇಮಾವತಿ ನಿಮ್ಮ ಹಂಚಿಕೆಯಷ್ಟು ಹರಿಯಲಿದೆ. ಆದರೆ ಪೈಪ್ ಲೈನ್ ಕಾಮಗಾರಿ ಮೇಲಿನ ವ್ಯಾಮೋಹ ಎಲ್ಲರಿಗೂ ತಿಳಿದಿದೆ.

ಪ್ರತಿ ವರ್ಷ ನೂರು ಕೋಟಿಯಂತೆ ಏರಿಕೆ ಮಾಡುತ್ತಾ ಕಾಮಗಾರಿ ಕೈಗೆತ್ತಿಕೊಂಡು 300 ಕೋಟಿ ಕಿಕ್ ಬ್ಯಾಕ್ ಪಡೆದು ನೇರ ಮಾಗಡಿ ರಾಮನಗರದ ನೆಂಟರ ಊರಿಗೆ ಹೇಮಾವತಿ ಹರಿಸುವ ಹುನ್ನಾರ ಸ್ಥಳೀಯ ರೈತರಿಗೆ ತಿಳಿದಿದೆ. ಬೆಕ್ಕು ಕಣ್ಮುಚ್ಚಿ ಹಾಲು ಕುಡಿದಂತೆ ವಿರೋಧಿಸುವ ಮುಖಂಡರ ಮನೆ ಮುಂದೆ ಧರಣಿ ಮಾಡಲಿ. ನಾವೇ ಶಾಮಿಯಾನ ಹಾಕಿಸಿ ಊಟ ತಿಂಡಿ ವ್ಯವಸ್ಥೆ ಮಾಡುತ್ತೇವೆ. ಕುಣಿಗಲ್ ಕೆರೆಗಳಿಗೆ ನೀರಿಗೆ ನಾವು ಹೋರಾಟ ಮಾಡುತ್ತೇವೆ. ಅಕ್ರಮಕ್ಕೆ ಬಲಿಯಾಗುವ ರೈತರು ನಾವಲ್ಲ. ತಿರುಕನ ಕನಸು ಕಾಣಬೇಡಿ ಎಂದು ಕುಣಿಗಲ್ ರಂಗನಾಥ್ ಅವರಿಗೆ ಟಾಂಗ್ ನೀಡಿದರು.

ರೈತ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಎನ್. ವೆಂಕಟೇಗೌಡ ಮಾತನಾಡಿ ಕುಣಿಗಲ್ ರೈತರು ನಮ್ಮವರೇ. ಹೇಮಾವತಿ ಬರಲು ಕಾರಣರಾದ ವೈ.ಕೆ.ರಾಮಯ್ಯ, ಹುಚ್ಛಮಾಸ್ತಿಗೌಡ ಇವರನ್ನು ಸ್ಮರಿಸಿ ಕೃಷಿ ಮಾಡುತ್ತಿದ್ದೇವೆ. ಆದರೆ ತಾವು ಜಿಲ್ಲೆಯ ಹೇಮಾವತಿ ನೀರು ರಾಮನಗರಕ್ಕೆ ಹರಿಸಲು ಮುಂದಾಗಿರುವುದು ಎಲ್ಲರಿಗೂ ಅರ್ಥವಾಗಿದೆ. ನೀರಿನಲ್ಲಿ ರಾಜಕಾರಣ ಮಾಡುವ ರಂಗನಾಥ್ ಅವರು ಈ ಭಾಗದ ರೈತರನ್ನು ಕೆಣಕಬೇಡಿ. ನಮ್ಮ ಪಾಲಿನ ನೀರು ಕಿತ್ತುಕೊಳ್ಳುವ ಹಕ್ಕು ನಿಮಗಿಲ್ಲ. ಹೀಗೆ ಸುಖಾಸುಮ್ಮನೆ ಹೇಳಿಕೆ ನೀಡಿದರೆ ಈ ಹಿಂದೆ ನಡೆದ ಸಾವಿರಾರು ರೈತರ ಸಾಂಕೇತಿಕ ಹೋರಾಟ ಲಕ್ಷಾಂತರ ರೈತರ ಉಗ್ರ ಹೋರಾಟಕ್ಕೆ ತಿರುಗಲಿದೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ರೈತಸಂಘದ ಶಿವಕುಮಾರ್, ಬಿ.ಲೋಕೇಶ್, ತಿರುಮಲೇಶ್, ಜಯಣ್ಣ, ಶಿವಾನಂದ್, ಹೊಸಕೆರೆ ಬಸವರಾಜು, ಪತ್ರೆ ದಿನೇಶ್, ಹೇರೂರು ರಮೇಶ್, ಹೊಸಹಳ್ಳಿ ರೇಣುಕಾ ಪ್ರಸಾದ್ ಇನ್ನಿತರರು ಇದ್ದರು.

image

ಸ್ಥಳೀಯ ಚುನಾವಣೆ ಚಿಂತೆ ಬಿಡಿ ಶಾಸಕರೇ..: ಹೈಕೋರ್ಟ್ ಮೆಟ್ಟಿಲೇರಿ ನೀರಿಗಾಗಿ ಹೋರಾಟ ರೈತರು ನಡೆಸಿದ್ದರೆ ಸ್ಥಳೀಯ ಶಾಸಕರು ಜಿಪಂ ತಾಪಂ ಚುನಾವಣೆ ಬಗ್ಗೆ ಚಿಂತೆ ಮಾಡುತ್ತಿದ್ದಾರೆ. ಎಲ್ಲಿ ವೀಕ್, ಸ್ಟ್ರಾಂಗ್ ಕ್ಯಾಂಡಿಡೇಟ್ ಹಾಕಬೇಕು ಎನ್ನುವ ಲೆಕ್ಕಾಚಾರದಲ್ಲಿ ಮುಳುಗಿದ್ದಾರೆ. ರಾಜಕಾರಣದ ರೂಟ್ ಕೆನಾಲ್ ಮಾಡುವ ಬದಲು ನೀರಿನ ರೂಟ್ ಕೆನಾಲ್ ಮಾಡಿ. ಮೊದಲು ಸ್ಥಳೀಯ ಚುನಾವಣೆ ಚಿಂತೆ ಬಿಟ್ಟು ನೀರಿಗಾಗಿ ನಡೆದಿರುವ ರೈತರ ಹೋರಾಟಕ್ಕೆ ಕೈಜೋಡಿಸಿ.

-ಬಿ.ಎಸ್.ನಾಗರಾಜು ಜೆಡಿಎಸ್ ಮುಖಂಡರು, ಗುಬ್ಬಿ.
image

ಶಿರಾ ಜಯಚಂದ್ರ ಮೌನ ಮುರಿಯಬೇಕು: ಗುಬ್ಬಿ ತಾಲ್ಲೂಕಿನ ಮೂಲಕ ಕುಡಿಯುವ ನೀರು ಹೇಮಾವತಿ ಹರಿಸಿಕೊಳ್ಳುತ್ತಿದ್ದ ಶಿರಾ ಭಾಗದ ರೈತರು ಹಾಗೂ ಶಾಸಕ, ಮಾಜಿ ಕಾನೂನು ಸಚಿವ ಜಯಚಂದ್ರ ಜಾಣ ಮೌನ ತೋರುತ್ತಿರುವುದು ಅರ್ಥವಾಗುತ್ತಿಲ್ಲ. ರಂಗನಾಥ್ ಅವರ ಈ ಹಠದ ಕಾಮಗಾರಿ ಹಣ ಹೊಡೆಯಲು ಎಂಬುದು ತಿಳಿದಿದೆ. ಆದರೂ ಶಿರಾ ರೈತರ ಮೌನ ಸರಿಯಲ್ಲ. ಈ ಜೊತೆಗೆ ಕಾಮಗಾರಿ ಬಾಕಿ ಇರುವ ಸ್ಥಳದಲ್ಲಿ ರೈತರಿಗೆ ಹಣ ಹಂಚಲು ಇಂಜಿನಿಯರ್ ಓಡಾಡುತ್ತಿರು ವುದು ಅಪಾಯದ ಉಪಾಯ ಎಂಬುದು ರೈತರು ತಿಳಿಯಬೇಕಿದೆ.

-ಪಿ.ಬಿ.ಚಂದ್ರಶೇಖರಬಾಬು ಜಿಪಂ ಮಾಜಿ ಸದಸ್ಯ, ಗುಬ್ಬಿ.
image

ಶಿರಾ ಜಯಚಂದ್ರ ಮೌನ ಮುರಿಯಬೇಕು ಗುಬ್ಬಿ ತಾಲ್ಲೂಕಿನ ಮೂಲಕ ಕುಡಿಯುವ ನೀರು ಹೇಮಾವತಿ ಹರಿಸಿಕೊಳ್ಳುತ್ತಿದ್ದ ಶಿರಾ ಭಾಗದ ರೈತರು ಹಾಗೂ ಶಾಸಕ, ಮಾಜಿ ಕಾನೂನು ಸಚಿವ ಜಯಚಂದ್ರ ಜಾಣ ಮೌನ ತೋರುತ್ತಿರುವುದು ಅರ್ಥವಾಗುತ್ತಿಲ್ಲ. ರಂಗನಾಥ್ ಅವರ ಈ ಹಠದ ಕಾಮಗಾರಿ ಹಣ ಹೊಡೆಯಲು ಎಂಬುದು ತಿಳಿದಿದೆ. ಆದರೂ ಶಿರಾ ರೈತರ ಮೌನ ಸರಿಯಲ್ಲ. ಈ ಜೊತೆಗೆ ಕಾಮಗಾರಿ ಬಾಕಿ ಇರುವ ಸ್ಥಳದಲ್ಲಿ ರೈತರಿಗೆ ಹಣ ಹಂಚಲು ಇಂಜಿನಿಯರ್ ಓಡಾಡುತ್ತಿರುವುದು ಅಪಾಯದ ಉಪಾಯ ಎಂಬುದು ರೈತರು ತಿಳಿಯಬೇಕಿದೆ.

-ಪಿ.ಬಿ.ಚಂದ್ರಶೇಖರಬಾಬು ಜಿಪಂ ಮಾಜಿ ಸದಸ್ಯ, ಗುಬ್ಬಿ.
image

ಸ್ಥಳೀಯ ಚುನಾವಣೆ ಚಿಂತೆ ಬಿಡಿ ಶಾಸಕರೇ.. ಹೈಕೋರ್ಟ್ ಮೆಟ್ಟಿಲೇರಿ ನೀರಿಗಾಗಿ ಹೋರಾಟ ರೈತರು ನಡೆಸಿದ್ದರೆ ಸ್ಥಳೀಯ ಶಾಸಕರು ಜಿಪಂ ತಾಪಂ ಚುನಾವಣೆ ಬಗ್ಗೆ ಚಿಂತೆ ಮಾಡುತ್ತಿದ್ದಾರೆ. ಎಲ್ಲಿ ವೀಕ್, ಸ್ಟ್ರಾಂಗ್ ಕ್ಯಾಂಡಿಡೇಟ್ ಹಾಕಬೇಕು ಎನ್ನುವ ಲೆಕ್ಕಾಚಾರದಲ್ಲಿ ಮುಳುಗಿದ್ದಾರೆ. ರಾಜಕಾರಣದ ರೂಟ್ ಕೆನಾಲ್ ಮಾಡುವ ಬದಲು ನೀರಿನ ರೂಟ್ ಕೆನಾಲ್ ಮಾಡಿ. ಮೊದಲು ಸ್ಥಳೀಯ ಚುನಾವಣೆ ಚಿಂತೆ ಬಿಟ್ಟು ನೀರಿಗಾಗಿ ನಡೆದಿರುವ ರೈತರ ಹೋರಾಟಕ್ಕೆ ಕೈಜೋಡಿಸಿ.

-ಬಿ.ಎಸ್.ನಾಗರಾಜು ಜೆಡಿಎಸ್ ಮುಖಂಡರು, ಗುಬ್ಬಿ.