ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dhruv Rathee: ಹಿಂದಿವಾಲಾಗಳ ಪರ ವಹಿಸಿ ಕನ್ನಡಿಗರನ್ನು ಕೆಣಕಿದ ಧ್ರುವ್‌ ರಾಠೀ; ನಿರ್ದೇಶಕ ಮಂಸೋರೆ ಕಿಡಿ

ಲೋಕಸಭಾ ಚುನಾವಣೆಯ ಸಮಯದಲ್ಲಿ ಮೋದಿ ಸರ್ಕಾರವನ್ನು ಟೀಕಿಸಿ ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ಚರ್ಚೆಯಲ್ಲಿದ್ದ ಯೂಟ್ಯೂಬರ್‌ ಧ್ರುವ್‌ ರಾಠೀ ವಿವಾದವೊಂದನ್ನು ಸೃಷ್ಟಿಸಿದ್ದಾರೆ. ಅದಕ್ಕೆ ಕಾರಣ ಅವರು ಇತ್ತೀಚೆಗೆ ಮಾಡಿದ್ದ ಒಂದು ವಿಡಿಯೋದಲ್ಲಿ ಕನ್ನಡಿಗರ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದರು. ವಿಡಿಯೋದಲ್ಲಿ ಅವರು ಕನ್ನಡ ಭಾಷೆಯ ಉಳಿವಿಗಾಗಿ ಕನ್ನಡಿಗರು ನಡೆಸುವ ಹೋರಾಟವನ್ನು ಪ್ರಶ್ನಿಸಿದ್ದಾರೆ.

ಹಿಂದಿವಾಲಾಗಳ ಪರ  ವಹಿಸಿ ಕನ್ನಡಿಗರನ್ನು ಕೆಣಕಿದ ಧ್ರುವ್‌ ರಾಠೀ

Profile Vishakha Bhat Apr 30, 2025 12:05 PM

ನವದೆಹಲಿ: ಲೋಕಸಭಾ ಚುನಾವಣೆಯ ಸಮಯದಲ್ಲಿ ಮೋದಿ ಸರ್ಕಾರವನ್ನು ಟೀಕಿಸಿ ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ಚರ್ಚೆಯಲ್ಲಿದ್ದ ಯೂಟ್ಯೂಬರ್‌ ಧ್ರುವ್‌ ರಾಠೀ ವಿವಾದವೊಂದನ್ನು ಸೃಷ್ಟಿಸಿದ್ದಾರೆ. ಧ್ರುವ್‌ ರಾಠೀ ದೇಶದಲ್ಲಿ ನಡೆಯುತ್ತಿರುವ ಆಗುಹೋಗುಗಳ ಕುರಿತು ತಮ್ಮ ಯೂಟ್ಯೂಬ್‌ನಲ್ಲಿ ಸಂಪೂರ್ಣವಾಗಿ ಮಾಹಿತಿ ನೀಡುತ್ತಾರೆ. ಸೋಶಿಯಲ್‌ ಮೀಡಿಯಾದಲ್ಲಿ ಇವರನ್ನು ಫಾಲೋ ಮಾಡುವ ಜನರು ಸಾಕಷ್ಟಿದ್ದಾರೆ. ಇತ್ತೀಚೆಗೆ ವಿಡಿಯೋ ಒಂದರಲ್ಲಿ ಧ್ರುವ್‌ ರಾಠೀ ಮಾತನಾಡಿದ್ದು, ಕನ್ನಡಿಗರನ್ನು ಕೆರಳಿಸಿದೆ. ಅವರ ಆ ಒಂದು ಮಾತಿಗೆ ಕನ್ನಡಿಗರು ರಾಠೀ ಮೇಲೆ ಕಿಡಿ ಕಾರಿದ್ದಾರೆ.

ಸದ್ಯ ಯೂಟ್ಯೂಬರ್ ಧ್ರುವ್ ರಾಠೀ ವಿರುದ್ಧ ಕನ್ನಡ ಚಿತ್ರ ನಿರ್ದೇಶಕ ಮಂಸೋರೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಕಾರಣ ಅವರು ಇತ್ತೀಚೆಗೆ ಮಾಡಿದ್ದ ಒಂದು ವಿಡಿಯೋದಲ್ಲಿ ಕನ್ನಡಿಗರ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದರು. ವಿಡಿಯೋದಲ್ಲಿ ಅವರು ಕನ್ನಡ ಭಾಷೆಯ ಉಳಿವಿಗಾಗಿ ಕನ್ನಡಿಗರು ನಡೆಸುವ ಹೋರಾಟವನ್ನು ಪ್ರಶ್ನಿಸಿದ್ದಾರೆ. ಪಹಲ್ಗಾಮ್ ದಾಳಿಯ ವಾಸ್ತವ ಏನು? ಭಾರತವನ್ನು ವಿಫಲಗೊಳಿಸುತ್ತಿರುವವರು ಯಾರು? ಎನ್ನುವ ಶೀರ್ಷಿಕೆಯಡಿಯಲ್ಲಿ ವಿಡಿಯೋ ಒಂದನ್ನು ಮಾಡಿದ್ದಾರೆ. ಅದರಲ್ಲಿ ರಾಠೀ ನಮ್ಮ ದೇಶದಲ್ಲಿ ನಡೆಯುತ್ತಿರುವ ಆತಂಕರಿಕ ಜಗಳ ಹಾಗೂ ಕಲಹಗಳ ಕುರಿತು ಮಾತನಾಡಿದ್ದಾರೆ.



ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿ ಸಂಘರ್ಷ ಮತ್ತು ಕರ್ನಾಟಕದಲ್ಲಿ ಹಿಂದಿ ಭಾಷಿಕರಿಗೆ ಅನ್ಯಾಯವಾಗುತ್ತಿದೆ ಎಂಬ ರೀತಿಯಲ್ಲಿ ಅವರು ಮಾತನಾಡಿದ್ದಾರೆ. ಅಷ್ಟೇ ಅಲ್ಲದೆ ಇತ್ತೀಚೆಗೆ ವಿಂಗ್‌ ಕಮಾಂಡರ್‌ ಶಿಲಾದಿತ್ಯ ಬೋಸ್‌, ಕನ್ನಡಿಗನ ಮೇಲೆ ಹಲ್ಲೆ ಮಾಡಿದ್ದ ಪ್ರಕರಣ ಭಾರೀ ಸದ್ದು ಮಾಡಿತ್ತು. ಕ್ಷುಲ್ಲಕ ಕಾರಣಕ್ಕೆ ಕನ್ನಡಿಗನ ಮೇಲೆ ವಿಂಗ್ ಕಮಾಂಡರ್ ಹಲ್ಲೆ ನಡೆಸಿದ್ದರು. ಬಳಿಕ ಕರ್ನಾಟಕ ಹಾಗೂ ಕನ್ನಡಿಗರ ಬಗ್ಗೆ ಸುಳ್ಳು ಅಪ್ರಚಾರ ಮಾಡಿದ್ದು ಗೊತ್ತೇಯಿದೆ. ಬಳಿಕ ಸಿಸಿಟಿವಿ ಫುಟೇಜ್‌ನಲ್ಲಿ ಅಸಲಿ ಸಂಗತಿ ಬಯಲಾಗಿತ್ತು ಎಂದಿದ್ದಾರೆ.

ಈ ಸುದ್ದಿಯನ್ನೂ ಓದಿ: Congress Poster: ʻಗಾಯಾಬ್ʼ ಪೋಸ್ಟರ್ ಶೇರ್‌... ಮೋದಿಯನ್ನು ದೂಷಿಸಲು ಹೋಗಿ ಮತ್ತೆ ವಿವಾದಕ್ಕೆ ಸಿಲುಕಿದ ಕಾಂಗ್ರೆಸ್

ಕನ್ನಡ ಚಿತ್ರ ನಿರ್ದೇಶಕ ಮಂಸೋರೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ನಿರ್ದೇಶಕ ಮಂಸೋರೆ ಟ್ವೀಟ್ ಮಾಡಿ ಅಸಮಾಧಾನ ಹೊರ ಹಾಕಿದ್ದಾರೆ. "ಧ್ರುವ್ ರಾಠೀ ನಿಮ್ಮ ಹೊಸ ವಿಡಿಯೋದಲ್ಲಿ ಕನ್ನಡ ಭಾಷೆಗಾಗಿ ನಡೆಸುವ ಹೋರಾಟವನ್ನು ತಪ್ಪಾಗಿ ಅರ್ಥೈಸಿ ಉಗ್ರವಾದಕ್ಕೆ ಸಮ ಎಂಬ ಅರ್ಥದಲ್ಲಿ ಹೇಳಿರುವುದು, ಭಾಷೆಯ ಉಳಿವಿಗಾಗಿ ಕನ್ನಡಿಗರು ಮಾಡುತ್ತಿರುವ ಹೋರಾಟಕ್ಕೆ ಅವಮಾನ ಮಾಡಿದಂತೆ. ನಿಮ್ಮಹಿಂದಿ ಗೋದಿ ಮೀಡಿಯಾ ಹೇಳುವ ಸುಳ್ಳನ್ನೇ ನಿಜ ಎಂದು ನಂಬುವ ದಡ್ಡ ನೀವು ಎಂದು ಗೊತ್ತಿರಲಿಲ್ಲ" ಎಂದು ಬರೆದುಕೊಂಡಿದ್ದಾರೆ.

ನಿರ್ದೇಶಕ ಮಂಸೋರೆ ಅವರು ಈ ಪೋಸ್ಟ್‌ ಮಾಡುತ್ತಿದ್ದಂತೆ ಹಲವರು ನಿರ್ದೇಶಕರ ಬೆಂಬಲಕ್ಕೆ ನಿಂತಿದ್ದಾರೆ. ಅಷ್ಟೇ ಅಲ್ಲದೆ ಧ್ರುವ್‌ ರಾಠೀ ವಿರುದ್ಧ ಕಿಡಿಕಾರಿದ್ದಾರೆ. ಕನ್ನಡಿಗರ ಸ್ವಾಭಿಮಾನವನ್ನು ಕಣಕಿ ಯಾರಿಂದಲೂ ಉಳಿಯಲು ಸಾಧ್ಯವಿಲ್ಲ. ನಮಗೆ ಬುದ್ಧಿ ಹೇಳುವ ಬದಲು ನಮ್ಮದೇ ನೆಲದಲ್ಲಿ ಬಂದು ರೌಂಡಿಸಂ ನಡೆಸುವ ಹಿಂದಿ ಭಾಷಿಕರಿಗೆ ನಿನ್ನ ಉಪದೇಶ ಮಾಡು ಎಂದು ಹಲವರು ಕಿಡಿ ಕಾರಿದ್ದಾರೆ.