ಸಹಜ ಸ್ಥಿತಿಯತ್ತ ಇಂಡಿಗೋ ಕಾರ್ಯಾಚರಣೆ; ಇಂದು 2,050ಕ್ಕೂ ಹೆಚ್ಚು ವಿಮಾನಗಳ ಹಾರಾಟ
IndiGo Flight operations: ಇಂಡಿಗೋ ಸಂಸ್ಥೆಯ ವಿಮಾನ ಕಾರ್ಯಾಚರಣೆ 1 ವಾರಗಳ ವ್ಯತ್ಯಯದ ನಂತರ ಸಹಜ ಸ್ಥಿತಿಗೆ ಬಂದಿದೆ. ಡಿಸೆಂಬರ್ 13ರಂದು ಸಂಸ್ಥೆಯ 2,050ಕ್ಕೂ ಹೆಚ್ಚು ವಿಮಾನಗಳು ಕಾರ್ಯ ನಿರ್ವಹಿಸಿದವು. ಪ್ರಯಾಣಿಕರಿಗೆ ಮರುಪಾವತಿ ಹಾಗೂ ಪರಿಹಾರ ನೀಡುವ ಮೂಲಕ ಗ್ರಾಹಕ ಸೇವೆಯನ್ನು ಸುಧಾರಿಸುವ ಮೇಲೆ ಗಮನಹರಿಸಲಾಗಿದೆ.
ಇಂಡಿಗೋ ವಿಮಾನ (ಸಂಗ್ರಹ ಚಿತ್ರ) -
ನವದೆಹಲಿ, ಡಿ. 13: ಕಳೆದ ಕೆಲವು ದಿನಗಳಿಂದ ವಿಮಾನ ರದ್ದು, ವಿಳಂಬ ಇತ್ಯಾದಿ ಕಾರಣಕ್ಕೆ ಸುದ್ದಿಯಲ್ಲಿದ್ದ ಇಂಡಿಗೋ ಸಂಸ್ಥೆ (IndiGo) ಇದೀಗ ಸಹಜ ಸ್ಥಿತಿಯತ್ತ ಮರಳುವ ಸೂಚನೆ ನೀಡಿದೆ. ಡಿಸೆಂಬರ್ 13ದಂದು ಇಂಡಿಗೋದ 2,050ಕ್ಕೂ ಹೆಚ್ಚು ವಿಮಾನಗಳು ಹಾರಾಟ ನಡೆಸಿವೆ. ಇದು ವಾರಪೂರ್ತಿ ಅಡಚಣೆಗಳ ನಂತರ ಸಾಮಾನ್ಯ ಸ್ಥಿತಿಗೆ ಮರಳುವ ಸೂಚನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ವಿಮಾನ ವ್ಯತ್ಯಯದಿಂದಾಗಿ ಪ್ರಯಾಣಿಕರಿಗೆ ತೊಂದರೆ ಉಂಟು ಮಾಡಿದ್ದರಿಂದ ಇಂಡಿಗೋ ವಿಮಾನಯಾನ ಸಂಸ್ಥೆಗೆ ಸುಮಾರು 59 ಕೋಟಿ ರೂ. ದಂಡ ವಿಧಿಸಲಾಗಿದೆ. ಈ ಆದೇಶವನ್ನು ಪ್ರಶ್ನಿಸಲು ವಿಮಾನಯಾನ ಸಂಸ್ಥೆ ಮುಂದಾಗಿದೆ ಎನ್ನಲಾಗಿದೆ.
ಕಳೆದ ಐದು ದಿನಗಳಿಂದ ಕಾರ್ಯಾಚರಣೆ ಸಾಮಾನ್ಯ ಸ್ಥಿತಿಗೆ ಮರಳಿದೆ ಎಂದು ಹೇಳುತ್ತಿರುವ ಇಂಡಿಗೋ ಸರ್ಕಾರದ ನಿರ್ದೇಶನಕ್ಕೆ ಅನುಗುಣವಾಗಿ ಕಡಿಮೆ ಮಾಡಲಾದ ಪುನರ್‌ನಿಗದಿತ ವೇಳಾಪಟ್ಟಿಯ ಪ್ರಕಾರ ಇಂದು 2,050ಕ್ಕಿಂತ ಹೆಚ್ಚು ವಿಮಾನಗಳನ್ನು ಹಾರಾಟ ನಡೆಸುತ್ತಿದೆ. ʼʼನಮ್ಮ ಸಕಾಲಿಕ ನಿರ್ವಹಣೆ ಸಾಮಾನ್ಯವಾಗಿದೆʼʼ ಎಂದು ಇಂಡಿಗೋ ವಕ್ತಾರರು ಹೇಳಿದ್ದಾರೆ.
ಇಂಡಿಗೋ ವಿಮಾನಗಳ ಹಾರಾಟದಲ್ಲಿ ಅಡಚಣೆ; 11 ಏರ್‌ಪೋರ್ಟ್ ತಕ್ಷಣ ಪರಿಶೀಲಿಸಲು ಕೇಂದ್ರದ ಆದೇಶ
ಡಿಸೆಂಬರ್ 12ರಂದು ಇಂಡಿಗೋ ಸಂಸ್ಥೆಯ ಕಾರ್ಯಾಚರಣೆ ಸಾಮಾನ್ಯ ಸ್ಥಿತಿಗೆ ಮರಳಿದ್ದು, 2,050 ವಿಮಾನಗಳು ಹಾರಿದವು ಮತ್ತು ರದ್ದುಪಡಿಸಿದ ವಿಮಾನಗಳ ಸಂಖ್ಯೆಯೂ ಕಡಿಮೆ ಆಗಿದೆ.
ಇಂಡಿಗೋ ವಿಮಾನ ಕಾರ್ಯಾಚರಣೆಗಳ ಕುರಿತು ಬೆಳವಣಿಗೆಗಳು
- ತೊಂದರೆಗೊಳಪಟ್ಟ ಎಲ್ಲ ಪ್ರಯಾಣಿಕರಿಗೆ ಮರುಪಾವತಿ ಮಾಡಲಾಗುವುದು. ತ್ವರಿತವಾಗಿ ಮತ್ತು ಅತ್ಯಂತ ತುರ್ತಾಗಿ ಪ್ರಕ್ರಿಯೆಗೊಳಿಸಲಾಗಿದೆಯೆ ಎಂಬುದನ್ನು ಖಚಿತಪಡಿಸಿಕೊಳ್ಳಲಾಗುವುದು ಎಂದು ಇಂಡಿಗೋ ತಿಳಿಸಿದೆ.
- ಇಂಡಿಗೋ ವಿಮಾನಯಾನ ಸಂಸ್ಥೆಯು ಬಹುತೇಕ ಪ್ರಯಾಣಿಕರಿಗೆ ಮರುಪಾವತಿಯನ್ನು ನೀಡಲಾಗಿದೆ ಮತ್ತು ಉಳಿದವರಿಗೆ ಶೀಘ್ರದಲ್ಲೇ ಖಾತೆಗೆ ಜಮೆಯಾಗಲಿವೆ ಎಂದು ಹೇಳಿದೆ. ವಿಮಾನಯಾನ ಸಂಸ್ಥೆಯು ತೀವ್ರವಾಗಿ ಬಾಧಿತರಾದ ಪ್ರಯಾಣಿಕರನ್ನು ಗುರುತಿಸಿ, ಅವರಿಗೆ ಪರಿಹಾರ ನೀಡಲು ಜನವರಿಯಲ್ಲಿ ಅವರನ್ನು ಸಂಪರ್ಕಿಸಲಾಗುವುದು ಎಂದು ತಿಳಿಸಿದೆ.
- ಇಂಡಿಗೋ ವಿಮಾನಯಾನ ಸಂಸ್ಥೆಯು ಪರಿಹಾರದ ಮೊತ್ತವು 500 ಕೋಟಿ ರೂ.ಗೂ ಹೆಚ್ಚಾಗಬಹುದು ಎಂದು ಅಂದಾಜಿಸಿದೆ. ವಿಮಾನ ಹಾರಾಟದ ಸಮಯಕ್ಕೆ 24 ಗಂಟೆಗಳ ಒಳಗೆ ವಿಮಾನಗಳು ರದ್ದುಗೊಂಡ ಗ್ರಾಹಕರಿಗೆ ಮತ್ತು ಕೆಲವು ವಿಮಾನ ನಿಲ್ದಾಣಗಳಲ್ಲಿ ಸಿಲುಕಿಕೊಂಡ ಪ್ರಯಾಣಿಕರಿಗೆ ಈ ಮೊತ್ತವನ್ನು ನೀಡಲಾಗುವುದು ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
- ʼʼಶುಕ್ರವಾರದ ಕಾರ್ಯಾಚರಣೆಗೆ ಅನುಗುಣವಾಗಿ 2,050ಕ್ಕೂ ಹೆಚ್ಚು ವಿಮಾನಗಳು ಹಾರಾಡಿವೆ ಮತ್ತು ತಾಂತ್ರಿಕ ಸಮಸ್ಯೆಗಳಿಂದಾಗಿ ಕೇವಲ ಎರಡು ವಿಮಾನಗಳನ್ನು ಮಾತ್ರ ರದ್ದುಗೊಳಿಸಲಾಯಿತು. ಎಲ್ಲ ಗ್ರಾಹಕರಿಗೆ ತಕ್ಷಣವೇ ಪರ್ಯಾಯ ವಿಮಾನಗಳಲ್ಲಿ ಪುನಃ ಅವಕಾಶ ಕಲ್ಪಿಸಲಾಗಿದೆʼʼ ಎಂದು ಇಂಡಿಗೋ ವಕ್ತಾರರು ಹೇಳಿದರು.
- ಇಂಡಿಗೋ ಸಂಸ್ಥೆ ಪರಿಹಾರದ ಮೊತ್ತವು 500 ಕೋಟಿ ರೂ.ಗಿಂತ ಹೆಚ್ಚು ಇರಲಿದೆ ಎಂದು ತಿಳಿಸಿದೆ. ಪ್ರಯಾಣಿಕರ ವಿಮಾನಗಳು 24 ಗಂಟೆ ಒಳಗೆ ರದ್ದಾಗಿದ್ದರೆ ಈ ಮೊತ್ತ ನೀಡಲಾಗುತ್ತದೆ.