ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Delhi Stampede: ಒಂದೇ ಹೆಸರಲ್ಲಿ ಎರಡು ರೈಲು; ದೆಹಲಿ ಕಾಲ್ತುಳಿತಕ್ಕೆ ಇದೇ ಕಾರಣವಾಯ್ತಾ?

ಶನಿವಾರ ರಾತ್ರಿ ಪ್ರಯಾಗ್‌ರಾಜ್‌ಗೆ ಹೋಗುವ ವಿಶೇಷ ರೈಲಿನ ಕೊನೆಯ ಕ್ಷಣದ ಪ್ಲಾಟ್‌ಫಾರ್ಮ್ ಬದಲಾವಣೆಯ ಘೋಷಣೆಯು ಮಾರಕ ಕಾಲ್ತುಳಿತಕ್ಕೆ ಕಾರಣವಾಯ್ತು ಎಂಬ ಆರೋಪ ಕೇಳಿ ಬಂದಿತ್ತು. ಆದರೆ ಇದನ್ನು ರೈಲ್ವೆ ಇಲಾಖೆ ಇದನ್ನು ನಿರಾಕರಿಸಿದೆ. ಆದರೆ ದೆಹಲಿ ಪೊಲೀಸರು ಇದಕ್ಕೆ ಸ್ಪಷ್ಟನೆ ನೀಡಿದ್ದಾರೆ. ಪೊಲೀಸರ ಪ್ರಕಾರ, ಎರಡು ರೈಲುಗಳ ಹೆಸರು ಒಂದೇ ಆಗಿದ್ದೇ ಈ ದುರಂತಕ್ಕೆ ಕಾರಣವಾಗಿದೆ.

ದೆಹಲಿ ಕಾಲ್ತುಳಿತ ಕಾರಣ ಬಯಲು; ಪೊಲೀಸರು ಹೇಳಿದಿಷ್ಟು!

ದೆಹಲಿ ಕಾಲ್ತುಳಿತ

Profile Rakshita Karkera Feb 16, 2025 8:30 PM

ನವದೆಹಲಿ: ದೆಹಲಿಯ ರೈಲು ನಿಲ್ದಾಣದಲ್ಲಿ ನಿನ್ನೆ ರಾತ್ರಿ ನಡೆದ ಭೀಕರ ಕಾಲ್ತುಳಿತ(Delhi Stampede)ಕ್ಕೆ ಕಾರಣ ಏನೆಂಬ ಬಗ್ಗೆ ಹತ್ತು ಹಲವು ವಿಚಾರಗಳು ಬಯಲಾಗುತ್ತಿವೆ. ಶನಿವಾರ ರಾತ್ರಿ ಪ್ರಯಾಗ್‌ರಾಜ್‌ಗೆ ಹೋಗುವ ವಿಶೇಷ ರೈಲಿನ ಕೊನೆಯ ಕ್ಷಣದ ಪ್ಲಾಟ್‌ಫಾರ್ಮ್ ಬದಲಾವಣೆಯ ಘೋಷಣೆಯು ಮಾರಕ ಕಾಲ್ತುಳಿತಕ್ಕೆ ಕಾರಣವಾಯ್ತು ಎಂಬ ಆರೋಪ ಕೇಳಿ ಬಂದಿತ್ತು. ಆದರೆ ಇದನ್ನು ರೈಲ್ವೆ ಇಲಾಖೆ ಇದನ್ನು ನಿರಾಕರಿಸಿದೆ. ಆದರೆ ದೆಹಲಿ ಪೊಲೀಸರು ಇದಕ್ಕೆ ಸ್ಪಷ್ಟನೆ ನೀಡಿದ್ದಾರೆ. ಪೊಲೀಸರ ಪ್ರಕಾರ, ಎರಡು ರೈಲುಗಳ ಹೆಸರು ಒಂದೇ ಆಗಿದ್ದೇ ಈ ದುರಂತಕ್ಕೆ ಕಾರಣವಾಗಿದೆ.

ಪ್ರಯಾಗ್‌ರಾಜ್‌ಗೆ 2 ವಿಶೇಷ ರೈಲುಗಳು ಇದ್ದವು. ಒಂದು ವಿಶೇಷ ರೈಲಿಗಾಗಿ ಪ್ಲಾಟ್‌ಫಾರ್ಮ್ 14 ರಲ್ಲಿ ಕಾಯುತ್ತಿದ್ದರು. ಆಗ ಪ್ಲ್ಯಾಟ್‌ಫಾರ್ಮ್ ಸಂಖ್ಯೆ 16 ಕ್ಕೆ ಬಂದಿದ್ದ ಎರಡನೇ ರೈಲಿನ ಅನೌನ್ಸ್‌ಮೆಂಟನ್ನು ರೈಲ್ವೇ ಇಲಾಖೆ ಮಾಡಿತ್ತು. ಇದನ್ನು ಕೇಳಿದ ಪ್ರಯಾಣಿಕರು ಪ್ಲ್ಯಾಟ್‌ಫಾರ್ಮ್ ಬದಲಾಗಿದೆ ಎಂದು ಭಾವಿಸಿ ಅಲ್ಲಿಗೆ ದೌಡಾಯಿಸಿದ್ದಾರೆ. ಈ ವೇಳೆ ಕಾಲ್ತುಳಿತ ಸಂಭವಿಸಿದೆ. ಹೆಚ್ಚುವರಿಯಾಗಿ, ನಾಲ್ಕು ಇತರ ರೈಲುಗಳು ಪ್ರಯಾಗ್‌ರಾಜ್‌ಗೆ ಹೋಗುತ್ತಿದ್ದವು, ಅವುಗಳಲ್ಲಿ ಮೂರು ವಿಳಂಬವಾಗಿದ್ದು, ಅನಿರೀಕ್ಷಿತ ಜನದಟ್ಟಣೆ ಉಂಟಾಗಿದೆ. ಸಮೀಪದ ಮೆಟ್ಟಿಲುಗಳ ಮೇಲೆ ಪ್ರಯಾಣಿಕರೊಬ್ಬರು ಜಾರಿ ಬಿದ್ದ ಕಾರಣ ಈ ಘಟನೆ ಸಂಭವಿಸಿದೆ ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Delhi CM: ದೆಹಲಿಯ ಮುಂದಿನ ಸಿಎಂ ಯಾರು? ನಾಳೆ ಶಾಸಕಾಂಗ ಪಕ್ಷದ ಸಭೆ

ಯಾವುದೇ ರೈಲುಗಳನ್ನು ರದ್ದುಗೊಳಿಸಲಾಗಿಲ್ಲ ಮತ್ತು ಪ್ಲಾಟ್‌ಫಾರ್ಮ್ ಅನ್ನು ಬದಲಾಯಿಸಲಾಗಿಲ್ಲ. ಎಲ್ಲಾ ರೈಲುಗಳು ಅದರ ವೇಳಾಪಟ್ಟಿಯ ಪ್ರಕಾರ ಓಡುತ್ತಿವೆ" ಎಂದು ಉತ್ತರ ರೈಲ್ವೆಯ ಸಿಪಿಆರ್‌ಒ ಹಿಮಾಂಶು ಶೇಖರ್ ಉಪಾಧ್ಯಾಯ ತಿಳಿಸಿದ್ದಾರೆ.

ಘಟನೆಯ ತನಿಖೆಗಾಗಿ ರೈಲ್ವೆ ಇಬ್ಬರು ಸದಸ್ಯರ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ. ಉತ್ತರ ರೈಲ್ವೆಯ ಪ್ರಧಾನ ಮುಖ್ಯ ವಾಣಿಜ್ಯ ವ್ಯವಸ್ಥಾಪಕ ನರಸಿಂಗ್ ದಿಯೋ ಮತ್ತು ಉತ್ತರ ರೈಲ್ವೆಯ ಪ್ರಧಾನ ಮುಖ್ಯ ಭದ್ರತಾ ಆಯುಕ್ತ ಪಂಕಜ್ ಗಂಗ್ವಾರ್ ಸಮಿತಿಯ ಭಾಗವಾಗಿದ್ದಾರೆ. ತನಿಖೆಯನ್ನು ಪ್ರಾರಂಭಿಸಿರುವ ಸಮಿತಿಯು ನವದೆಹಲಿ ರೈಲು ನಿಲ್ದಾಣದ ಎಲ್ಲಾ ವೀಡಿಯೊ ದೃಶ್ಯಗಳನ್ನು ಪಡೆದುಕೊಳ್ಳಲು ಆದೇಶ ನೀಡಿದೆ.

ಘಟನೆಯಲ್ಲಿ ಬಲಿಯಾದ 18 ಜನರಲ್ಲಿ 11 ಮಹಿಳೆಯರು ಮತ್ತು ನಾಲ್ವರು ಮಕ್ಕಳು. ಇನ್ನೂ ಅನೇಕರು ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ. ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ.