ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ED Raids: ಕೋಲ್ಡ್ರಿಫ್ ಕೆಮ್ಮಿನ ಸಿರಪ್ ತಯಾರಕರಿಗೆ ಶಾಕ್‌ ಮೇಲೆ ಶಾಕ್‌! ಮಾಲೀಕನ ಬಂಧನದ ಬೆನ್ನಲ್ಲೇ ಇಡಿ ರೇಡ್‌

Coldriff cough syrup: ಸುಮಾರು 21 ಮಕ್ಕಳ ಸಾವಿಗೆ ಕಾರಣವಾದ ಕೋಲ್ಡ್ರಿಫ್ ಕೆಮ್ಮಿನ ಸಿರಪ್ ತಯಾರಕ, ಔಷಧ ನಿಯಂತ್ರಣ ಅಧಿಕಾರಿಗಳಿಗೆ ಸೇರಿದ ಏಳು ಸ್ಥಳಗಳಿಗೆ ಇಡಿ ಸೋಮವಾರ ದಾಳಿ ನಡೆಸಿದೆ. ತಮಿಳುನಾಡು ಔಷಧ ನಿಯಂತ್ರಣ ಕಚೇರಿಯ ಉನ್ನತ ಅಧಿಕಾರಿಗಳ ನಿವಾಸಗಳಲ್ಲಿಯೂ ಶೋಧ ಕಾರ್ಯಾಚರಣೆ ನಡೆಸಲಾಯಿತು.

ಕೋಲ್ಡ್ರಿಫ್ ಕೆಮ್ಮಿನ ಸಿರಪ್ ತಯಾರಕರಿಗೆ ED ಶಾಕ್‌

-

ಚೆನ್ನೈ: ಕೋಲ್ಡ್ರಿಫ್ ಕೆಮ್ಮಿನ ಸಿರಪ್ (Coldrif cough syrup) ತಯಾರಕ, ಔಷಧ ನಿಯಂತ್ರಣ ಅಧಿಕಾರಿಗಳ ನಿವಾಸಗಳ ಮೇಲೆ ಸೋಮವಾರ ಜಾರಿ ನಿರ್ದೇಶನಾಲಯದ ಅಧಿಕಾರಿಗಳು (Enforcement Directorate) ದಾಳಿ ನಡೆಸಿದರು. ಮಧ್ಯಪ್ರದೇಶ (Madhya Pradesh) ಮತ್ತು ರಾಜಸ್ಥಾನದಲ್ಲಿ ( Rajasthan) ಮಕ್ಕಳ ಸಾವಿಗೆ ಕಾರಣವಾದ ಕೋಲ್ಡ್ರಿಫ್ ಕೆಮ್ಮಿನ ಸಿರಪ್ ಗೆ ಸಂಬಂಧಿಸಿದ ತನಿಖೆ ವೇಳೆ ಸ್ರೆಸನ್ ಫಾರ್ಮಾಸ್ಯುಟಿಕಲ್ಸ್ ಮಾಲೀಕರ ಮನೆ, ಕೋಲ್ಡ್ರಿಫ್ ತಯಾರಕ, ಔಷಧ ನಿಯಂತ್ರಣ ಅಧಿಕಾರಿಗಳಿಗೆ ಸೇರಿದ ಒಟ್ಟು 7 ನಿವಾಸಗಳ ಮೇಲೆ ಇಡಿ ದಾಳಿ ಮಾಡಿದೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಕೇಂದ್ರ ತನಿಖಾ ಸಂಸ್ಥೆಯ ಚೆನ್ನೈ ಘಟಕವು ಕೋಲ್ಡ್ರಿಫ್ ಕೆಮ್ಮಿನ ಸಿರಪ್ ತಯಾರಕ ತಮಿಳುನಾಡು ಮೂಲದ ಸ್ರೆಸನ್ ಫಾರ್ಮಾಸ್ಯುಟಿಕಲ್ಸ್‌ನ ಮಾಲೀಕ ಎಸ್. ರಂಗನಾಥನ್ ಅವರ ನಿವಾಸ ಸೇರಿದಂತೆ ನಗರದಲ್ಲಿ ಕಂಪೆನಿಗೆ ಸಂಬಂಧಿಸಿದ ಏಳು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿತ್ತು. ಇದರೊಂದಿಗೆ ತಮಿಳುನಾಡು ಔಷಧ ನಿಯಂತ್ರಣ ಕಚೇರಿಯ ಉನ್ನತ ಅಧಿಕಾರಿಗಳ ನಿವಾಸಗಳಲ್ಲಿಯೂ ಶೋಧ ನಡೆಸಲಾಯಿತು

ಕೋಲ್ಡ್ರಿಫ್ ಕೆಮ್ಮಿನ ಸಿರಪ್ ಸೇವಿಸಿ 21 ಮಕ್ಕಳು ಸಾವನ್ನಪ್ಪಿದ ಬಳಿಕ ರಂಗನಾಥನ್ ಅವರನ್ನು ಬಂಧಿಸಲಾಗಿತ್ತು. ಇದಾದ ಬಳಿಕ ಮಧ್ಯಪ್ರದೇಶ ಪೊಲೀಸರು ಅಕ್ಟೋಬರ್ 9 ರಂದು ಚೆನ್ನೈನಲ್ಲಿ ಶ್ರೀಸನ್ ಫಾರ್ಮಾ ಮಾಲೀಕನನ್ನು ಬಂಧಿಸಿತ್ತು. ಇವರ ವಿರುದ್ಧ ಭಾರತೀಯ ನ್ಯಾಯ ಸಂಹಿತ ಸೆಕ್ಷನ್ 105 ಮತ್ತು 276 ಮತ್ತು 27A ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಶ್ರೀಸನ್ ಫಾರ್ಮಾ ವಿರುದ್ಧ ಎಫ್‌ಐಆರ್ ದಾಖಲಿಸಿರುವ ಮಧ್ಯಪ್ರದೇಶ ಪೊಲೀಸರು, ಕೋಲ್ಡ್ರಿಫ್ ಸಿರಪ್ ಕಲಬೆರಕೆಯಾಗಿದ್ದು 21 ಮಕ್ಕಳ ಸಾವಿಗೆ ಇದುವೇ ಕಾರಣ ಎಂದು ಆರೋಪಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಔಷಧ ತಪಾಸಣೆ ಮಾಡಲು ನಿಯೋಜಿಸಿದ್ದ ಇಬ್ಬರು ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳನ್ನು ತಮಿಳುನಾಡು ಸರ್ಕಾರವು ಕಳೆದ ಎರಡು ವರ್ಷಗಳಲ್ಲಿ ಅಮಾನತುಗೊಳಿಸಿದೆ.

ಕಲಬೆರಕೆ ಕೆಮ್ಮಿನ ಸಿರಪ್ ಮಾರಾಟದಿಂದ ಬರುವ ಲಾಭವು ಅಪರಾಧದ ಆದಾಯವಾಗಿದೆ. ನಿಯಮಿತವಾಗಿ ತಪಾಸಣೆ ನಡೆಸದ ಮತ್ತು ಕಲಬೆರಕೆ ಕೆಮ್ಮಿನ ಸಿರಪ್ ಉತ್ಪಾದನೆಗೆ ಅವಕಾಶ ನೀಡಿದ ಔಷಧ ಅಧಿಕಾರಿಗಳು ತಮ್ಮ ಸಾರ್ವಜನಿಕ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ. ಇದಕ್ಕೆ ಸಂಬಂಧಿಸಿದ ಆರೋಪಿಗಳನ್ನು ಪತ್ತೆ ಹಚ್ಚಲು ಸ್ರೇಸನ್ ಫಾರ್ಮಾದ ಪ್ರಮುಖ ಉದ್ಯೋಗಿಗಳು ಮತ್ತು ಉಸ್ತುವಾರಿ ನಿರ್ದೇಶಕರು ಸೇರಿದಂತೆ ಔಷಧ ನಿಯಂತ್ರಣ ಇಲಾಖೆಯ ಕೆಲವು ಅಧಿಕಾರಿಗಳ ನಿವಾಸಗಳ ಮೇಲೆ ಇಡಿ ದಾಳಿ ನಡೆಸುತ್ತಿದೆ.

ಈ ನಡುವೆ ಮಕ್ಕಳ ಮೂತ್ರಪಿಂಡಗಳಿಗೆ ತೀವ್ರವಾಗಿ ಹಾನಿಯುಂಟು ಮಾಡುವ ಕೋಲ್ಡ್ರಿಫ್ ಸಿರಪ್ ನಲ್ಲಿ ವಿಷಕಾರಿ ರಾಸಾಯನಿಕಗಳಿವೆ ಎಂಬುದು ವೈದ್ಯಕೀಯ ವರದಿಗಳಿಂದ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಪಂಜಾಬ್, ಗೋವಾ, ಹರಿಯಾಣ, ಹಿಮಾಚಲ ಪ್ರದೇಶ, ಕರ್ನಾಟಕ, ಮಹಾರಾಷ್ಟ್ರ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಉತ್ತರಾಖಂಡಗಳಲ್ಲಿ ಇದನ್ನು ನಿಷೇಧಿಸಲಾಗಿದೆ.

ಇದನ್ನೂ ಓದಿ: ರಾಜ್ಯಕ್ಕೆ 40 ಕೋಟಿ ರು. ಪಟಾಕಿ ಆದಾಯ ಠುಸ್

ಚಿಂದ್ವಾರದಲ್ಲಿ ಜಿಲ್ಲಾಡಳಿತ ಐದು ವೈದ್ಯಕೀಯ ಅಂಗಡಿಗಳನ್ನು ಮುಚ್ಚಿದೆ. ಕೆಲವು ಹಳ್ಳಿಗಳಲ್ಲಿ ಸಾರ್ವಜನಿಕ ಘೋಷಣೆಗಳನ್ನು ಮಾಡಲಾಗುತ್ತಿದ್ದು ಮಕ್ಕಳಿಗೆ ಯಾವುದೇ ಕೆಮ್ಮಿನ ಸಿರಪ್‌ಗಳನ್ನು ನೀಡದಂತೆ ಪೋಷಕರಿಗೆ ಎಚ್ಚರಿಕೆ ನೀಡಲಾಗುತ್ತಿದೆ.