ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

JD Vance: ಜೈಪುರದಲ್ಲಿ ವ್ಯಾನ್ಸ್ ಕುಟುಂಬಕ್ಕೆ ಗಜರಾಜನ ಅದ್ದೂರಿ ಸ್ವಾಗತ

ಅಮೆರಿಕದ ಉಪಾಧ್ಯಕ್ಷ ( US Vice President) ಜೆ.ಡಿ. ವ್ಯಾನ್ಸ್ (JD Vance) ಅವರು ತಮ್ಮ ಪತ್ನಿ ಉಷಾ ವ್ಯಾನ್ಸ್ , ಮಕ್ಕಳಾದ ಇವಾನ್, ವಿವೇಕ್ ಮತ್ತು ಮೀರಾಬೆಲ್ ಅವರೊಂದಿಗೆ ಜೈಪುರದ ಐಕಾನಿಕ್ ಕೋಟೆಯನ್ನು ತಲುಪಿದಾಗ ಅವರಿಗೆ ವಿಶೇಷ ಸ್ವಾಗತ ನೀಡಲಾಯಿತು. ಸಾಂಪ್ರದಾಯಿಕ ರಾಜಸ್ಥಾನಿ ಶೈಲಿಯಲ್ಲಿ ವ್ಯಾನ್ಸ್ ಅವರ ಕುಟುಂಬವನ್ನು ಸ್ವಾಗತಿಸಲಾಯಿತು. ಇವರ ಸ್ವಾಗತಕ್ಕಾಗಿ ಅಂಬರ್ ಬಳಿಯ ಹಾಥಿ ಗಾಂವ್‌ನಲ್ಲಿ ಎರಡು ಆನೆಗಳಿಗೆ ತರಬೇತಿ ನೀಡಲಾಗಿತ್ತು.

ಅಂಬರ್ ಕೋಟೆಗೆ ಆಗಮಿಸಿದ ವ್ಯಾನ್ಸ್ ಕುಟುಂಬಕ್ಕೆ ಅದ್ದೂರಿ ಸ್ವಾಗತ

ಜೈಪುರ: ಭಾರತಕ್ಕೆ ಮೊದಲ ಬಾರಿಗೆ ಭೇಟಿ ನೀಡಿದ ಅಮೆರಿಕದ ಉಪಾಧ್ಯಕ್ಷ (US Vice President) ಜೆ.ಡಿ. ವ್ಯಾನ್ಸ್ (JD Vance) ಮತ್ತು ಅವರ ಕುಟುಂಬವನ್ನು ಮಂಗಳವಾರ ಜೈಪುರದಲ್ಲಿ (Jaipur)ಅದ್ದೂರಿ ಸ್ವಾಗತ ನೀಡಿ ಬರಮಾಡಿಕೊಳ್ಳಲಾಯಿತು. ಜೆ.ಡಿ. ವ್ಯಾನ್ಸ್ ಅವರೊಂದಿಗೆ ಅವರ ಪತ್ನಿ ಉಷಾ ವ್ಯಾನ್ಸ್ ಮಕ್ಕಳಾದ ಇವಾನ್, ವಿವೇಕ್ ಮತ್ತು ಮೀರಾಬೆಲ್ ಇದ್ದರು. ಸೋಮವಾರ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು ಭೇಟಿ ಮಾಡಿದ ವ್ಯಾನ್ಸ್ ಮತ್ತು ಅವರ ಕುಟುಂಬ ಸದಸ್ಯರು ಮಂಗಳವಾರ ಜೈಪುರದ ಅಂಬರ್ ಕೋಟೆಗೆ ಭೇಟಿ ನೀಡಿದರು.

ಜೆ.ಡಿ. ವ್ಯಾನ್ಸ್ , ತಮ್ಮ ಪತ್ನಿ ಉಷಾ ವ್ಯಾನ್ಸ್ , ಮಕ್ಕಳಾದ ಇವಾನ್, ವಿವೇಕ್ ಮತ್ತು ಮೀರಾಬೆಲ್ ಅವರೊಂದಿಗೆ ಜೈಪುರದ ಐಕಾನಿಕ್ ಕೋಟೆಯನ್ನು ತಲುಪಿದಾಗ ಅವರಿಗೆ ವಿಶೇಷ ಸ್ವಾಗತ ನೀಡಲಾಯಿತು. ಸಾಂಪ್ರದಾಯಿಕ ರಾಜಸ್ಥಾನಿ ಶೈಲಿಯಲ್ಲಿ ವ್ಯಾನ್ಸ್ ಅವರ ಕುಟುಂಬವನ್ನು ಸ್ವಾಗತಿಸಲಾಯಿತು. ಇವರ ಸ್ವಾಗತಕ್ಕಾಗಿ ಅಂಬರ್ ಬಳಿಯ ಹಾಥಿ ಗಾಂವ್‌ನಲ್ಲಿ ಎರಡು ಆನೆಗಳಿಗೆ ತರಬೇತಿ ನೀಡಲಾಗಿತ್ತು. ರಾಜಸ್ಥಾನ ಸಿಎಂ ಭಜನ್‌ಲಾಲ್ ಶರ್ಮಾ ಅವರು ವ್ಯಾನ್ಸ್ ಅವರ ಭೇಟಿಗೆ ಮುಂಚಿತವಾಗಿ ಅಂಬರ್ ಕೋಟೆಗೆ ಆಗಮಿಸಿದರು.

ಅತ್ಯಂತ ಸುಂದರವಾದ ವಾಸ್ತುಶಿಲ್ಪದ ರಚನೆಯನ್ನು ಹೊಂದಿರುವ ಅಂಬರ್ ಕೋಟೆ ಯುನೆಸ್ಕೋ ವಿಶ್ವ ಪರಂಪರೆ ತಾಣದ ಪಟ್ಟಿಯಲ್ಲಿ ಸೇರಿಕೊಂಡಿದೆ. ವ್ಯಾನ್ಸ್ ಕುಟುಂಬ ಇಲ್ಲಿಗೆ ಭೇಟಿ ನೀಡುತ್ತಿರುವ ಸೂಚನೆ ಹಿನ್ನಲೆಯಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಯಿಂದ 24 ಗಂಟೆಗಳ ಕಾಲ ಸಂದರ್ಶಕರಿಗೆ ಅಂಬರ್ ಕೋಟೆಗೆ ಪ್ರವೇಶ ನಿಷೇಧಿಸಲಾಗಿತ್ತು ಎಂದು ರಾಜ್ಯದ ಪುರಾತತ್ವ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.



ಪಿಂಕ್ ಸಿಟಿಯ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾದ ಅಂಬರ್ ಕೋಟೆಯು ಒಂದು ಸಣ್ಣ ಬೆಟ್ಟದ ಮೇಲಿದ್ದು, ಮುಖ್ಯ ನಗರದಿಂದ ಸುಮಾರು 11 ಕಿ.ಮೀ. ದೂರದಲ್ಲಿದೆ.

ಇದನ್ನೂ ಓದಿ: CM Siddaramaiah: ಮಾಡಬಾರದ್ದನ್ನೆಲ್ಲಾ ಮಾಡಿ ದೇವರ ಪೂಜೆ ಮಾಡಿದ ತಕ್ಷಣ ಪಾಪಕಾರ್ಯ ಹೋಗಲ್ಲ: ಸಿದ್ದರಾಮಯ್ಯ

ಅಂಬರ್ ನ ಭವ್ಯವಾದ ಕೋಟೆಯು ಮಸುಕಾದ ಹಳದಿ, ಗುಲಾಬಿ ಮರಳುಗಲ್ಲು ಮತ್ತು ಬಿಳಿ ಅಮೃತಶಿಲೆಯಿಂದ ನಿರ್ಮಿಸಲಾಗಿದೆ. ಇದು ವಿಸ್ತಾರವಾದ ಅರಮನೆ ಸಂಕೀರ್ಣವಾಗಿದೆ. ಕೋಟೆಯನ್ನು ನಾಲ್ಕು ಮುಖ್ಯ ವಿಭಾಗಗಳಾಗಿ ವಿಂಗಡಿಸಲಾಗಿದ್ದು, ಪ್ರತಿಯೊಂದು ವಿಭಾಗವೂ ಅಂಗಳವನ್ನು ಹೊಂದಿದೆ.

ಅಮೆರಿಕದ ಉಪಾಧ್ಯಕ್ಷ ವ್ಯಾನ್ಸ್ ಅವರು ಬುಧವಾರ ಬೆಳಗ್ಗೆ ವಿಶೇಷ ವಿಮಾನದಲ್ಲಿ ಜೈಪುರದಿಂದ ಆಗ್ರಾಗೆ ತೆರಳಲಿದ್ದಾರೆ. ಮಧ್ಯಾಹ್ನ ಜೈಪುರಕ್ಕೆ ಹಿಂದಿರುಗಿದ ಅನಂತರ ಅವರು ಸಿಟಿ ಪ್ಯಾಲೇಸ್‌ಗೆ ಭೇಟಿ ನೀಡಲಿದ್ದು, ಗುರುವಾರ ಮುಂಜಾನೆ ಅಮೆರಿಕಕ್ಕೆ ಮರಳಲಿದ್ದಾರೆ.