ISRO EOS-09: ಅದಮ್ಯ ಕನಸು ಹೊತ್ತಿದ್ದ ಇಸ್ರೋದ EOS-09 ಉಪಗ್ರಹ ಉಡಾವಣೆ ವಿಫಲ
EOS-09 mission unsuccessful: :ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (PSLV-C61) ನಲ್ಲಿರುವ EOS-09 ಉಪಗ್ರಹವನ್ನು ಭಾನುವಾರ ಉಡಾವಣೆ ಮಾಡಲಾಯಿತು. ಇದು ಇಸ್ರೋದ 101 ನೇ ಉಡಾವಣೆಯಾಗಿತ್ತು. ಆದರೆ ತಾಂತ್ರಿಕ ಸಮಸ್ಯೆಯಿಂದ ಉಡಾವಣೆ ಯಶಸ್ವಿಯಾಗಿಲ್ಲ ಎಂಬುದು ತಿಳಿದುಬಂದಿದೆ.


ನವದೆಹಲಿ: ಇಸ್ರೋ ಸಾಧನೆಗೆ ಮತ್ತೊಂದು ಗರಿ ಎಂಬಂತಿದ್ದ ISRO EOS-09 ರಾತ್ರಿ ಕಣ್ಗಾವಲು ಉಪಗ್ರಹ ಉಡಾವಣೆ ಇಂದು ವಿಫಲವಾಗಿದೆ. ಆ ಮೂಲಕ ಈ ಉಪಗ್ರಹದ ಬಗ್ಗೆ ಅದಮ್ಯ ಕನಸು ಹೊತ್ತಿದ್ದ ಇಸ್ರೋಗೆ ಭಾರೀ ಹಿನ್ನಡೆಯಾಗಿದೆ. ಇಂದು ಬೆಳ್ಳಂ ಬೆಳಗ್ಗೆ EOS-09 ಉಪಗ್ರಹವನ್ನು ಹೊತ್ತ PSLV-C61 ಉಡಾವಣೆ ವಿಫಲಗೊಂಡಿದೆ. ಮೂರನೇ ಹಂತದ ಹಾರಾಟದ ಸಮಯದಲ್ಲಿ ಸಮಸ್ಯೆ ಎದುರಾದ ನಂತರ ಕಾರ್ಯಾಚರಣೆಯನ್ನು ಸಾಧಿಸಲು ಸಾಧ್ಯವಾಗಲಿಲ್ಲ ಎಂದು ಇಸ್ರೋ ಅಧ್ಯಕ್ಷ ವಿ ನಾರಾಯಣನ್ ಮಾಹಿತಿ ನೀಡಿದ್ದಾರೆ.
ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (PSLV-C61) ನಲ್ಲಿರುವ EOS-09 ಉಪಗ್ರಹವನ್ನು ಭಾನುವಾರ ಉಡಾವಣೆ ಮಾಡಲಾಯಿತು. ಇದು ಇಸ್ರೋದ 101 ನೇ ಉಡಾವಣೆಯಾಗಿತ್ತು. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬೆಳಿಗ್ಗೆ 5:59 ಕ್ಕೆ PSLV ಉಡಾವಣೆ ಮಾಡಲಾಗಿದ್ದು, ಇದು PSLV ಯ 63 ನೇ ಹಾರಾಟ ಮತ್ತು PSLV-XL ಸಂರಚನೆಯನ್ನು ಬಳಸುವ 27 ನೇ ಹಾರಾಟವಾಗಿತ್ತು. ಆದರೆ ತಾಂತ್ರಿಕ ಸಮಸ್ಯೆಯಿಂದ ಉಡಾವಣೆ ಯಶಸ್ವಿಯಾಗಿಲ್ಲ ಎಂಬುದು ತಿಳಿದುಬಂದಿದೆ.
ಇನ್ನು ಈ ಮಿಷನ್ ಯಶಸ್ವಿಗಾಗಿ ಶುಕ್ರವಾರದಂದು, ಇಸ್ರೋ ಅಧ್ಯಕ್ಷ ವಿ ನಾರಾಯಣನ್ ತಿರುಪತಿಯ ವೆಂಕಟೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು.
ಏನಿದರ ವಿಶೇಷತೆ?
ಇಸ್ರೋ EOS-09 ರಾತ್ರಿ ಕಣ್ಗಾವಲು ಉಪಗ್ರಹವಾಗಿದ್ದು, ಅದು ಬಿರುಗಾಳಿಯಾಗಿರಲಿ ಅಥವಾ ಕತ್ತಲೆಯ ರಾತ್ರಿಯಾಗಿರಲಿ, ಭೂಮಿಯ ಮೇಲಿನ ಪ್ರತಿಯೊಂದು ಚಲನವಲನಗಳ ಮೇಲೆ ತೀಕ್ಷ್ಣವಾದ ಕಣ್ಣಿಡಬಲ್ಲದು. ಮೋಡಗಳ ಮೂಲಕ ನೋಡಬಹುದಾದ ಮತ್ತು ಹಗಲಿನಂತೆಯೇ ರಾತ್ರಿಯೂ ಸ್ಪಷ್ಟ ಚಿತ್ರಗಳನ್ನು ತೆಗೆದುಕೊಳ್ಳಬಹುದಾದ ಸಾಮರ್ಥ್ಯ ಇದಕ್ಕಿದೆ. ಇದು ಆಧುನಿಕ ರಾಡಾರ್ ತಂತ್ರಜ್ಞಾನದಿಂದ ಕೂಡಿದೆ. ಒಂದು ವೇಳೆ ಈ ಸ್ಯಾಟಲೈಟ್ ಯಶಸ್ವಿಯಾಗಿದ್ದರೆ ಭಾರತದ ರಕ್ಷಣಾ ವ್ಯವಸ್ಥೆಗೆ ಬಹು ದೊಡ್ಡ ಮಟ್ಟದಲ್ಲಿ ಬಲ ಬಂದಂತಾಗುತ್ತಿತ್ತು.
ಈ ಸುದ್ದಿಯನ್ನೂ ಓದಿ: operation sindoor: ಸೇನೆಗೆ ಉಗ್ರರ ನೆಲೆ ತೋರಿಸಿದ್ದೇ ಇಸ್ರೋ
ಬಿರುಗಾಳಿಯಾಗಿರಲಿ ಅಥವಾ ಕತ್ತಲಾಗಿರಲಿ, ಇಸ್ರೋದ EOS-09 ಶತ್ರುಗಳ ಪ್ರತಿಯೊಂದು ನಡೆಯನ್ನೂ ಗಮನಿಸಬಲ್ಲದು. EOS-09 ಮೋಡಗಳು ಮತ್ತು ಕತ್ತಲೆಯನ್ನು ಚುಚ್ಚುವ ಮೂಲಕ ಸ್ಪಷ್ಟ ಚಿತ್ರಗಳನ್ನು ಕಳುಹಿಸಬಹುದು. EOS-09 ಎಂದು ಹೆಸರಿಸಲಾದ ಈ ಹೊಸ ಉಪಗ್ರಹವು ವಾಸ್ತವವಾಗಿ RISAT ಹೆಸರಿನ ಹಳೆಯ ಉಪಗ್ರಹ ಸರಣಿಯ ಹೊಸ ಮತ್ತು ಸುಧಾರಿತ ಆವೃತ್ತಿಯಾಗಿದೆ. ಶತ್ರುಗಳ ಮೇಲೆ ನಿಕಟ ನಿಗಾ ಇಡಲು ಸಾಧ್ಯವಾಗುವಂತೆ RISAT-2 ನಂತಹ ಹಿಂದಿನ ಉಪಗ್ರಹಗಳನ್ನು ಸೈನ್ಯಕ್ಕಾಗಿ ವಿಶೇಷವಾಗಿ ತಯಾರಿಸಲಾಗುತ್ತಿತ್ತು. EOS-09 ಸಿ-ಬ್ಯಾಂಡ್ ಎಂಬ ವಿಶೇಷ ರಾಡಾರ್ ಅನ್ನು ಹೊಂದಿದ್ದು, ಇದು ಮೋಡಗಳು ಮತ್ತು ಕತ್ತಲೆಯನ್ನು ಚುಚ್ಚುವ ಮೂಲಕ ಸ್ಪಷ್ಟ ಚಿತ್ರಗಳನ್ನು ಕಳುಹಿಸಬಹುದು.