ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಆಂಧ್ರ ಪ್ರದೇಶದ ONGC ತೈಲ ಬಾವಿಯಲ್ಲಿ ಅನಿಲ ಪೈಪ್‌ಲೈನ್ ಸೋರಿಕೆ; ಮುಗಿಲೆತ್ತರಕ್ಕೆ ಚಿಮ್ಮಿದ ಬೆಂಕಿ

ಆಂಧ್ರ ಪ್ರದೇಶದ ಅಂಬೇಡ್ಕರ್ ಕೋನಸೀಮಾ ಜಿಲ್ಲೆಯಲ್ಲಿ ಇರುವ ONGC ತೈಲ ಬಾವಿಯಲ್ಲಿ ಸೋಮವಾರ ಅನಿಲ ಪೈಪ್‌ಲೈನ್‌ನಲ್ಲಿ ಸೋರಿಕೆ ಉಂಟಾಗಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಈ ಘಟನೆಯಿಂದ ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಪ್ರಾಥಮಿಕ ವರದಿಗಳ ಪ್ರಕಾರ ಯಾವುದೇ ಸಾವು ನೋವು ಸಂಭವಿಸಿಲ್ಲ.

ಆಂಧ್ರ ಪ್ರದೇಶದಲ್ಲಿ ಅನಿಲ ಪೈಪ್‌ಲೈನ್ ಸೋರಿಕೆ

ಅಗ್ನಿ ಅವಘಡ -

Profile
Sushmitha Jain Jan 5, 2026 11:12 PM

ಅಮರಾವತಿ, ಜ. 5: ಆಂಧ್ರ ಪ್ರದೇಶ (Andhra Pradesh)ದ ಅಂಬೇಡ್ಕರ್ (Ambedkar) ಕೋನಸೀಮಾ (Konaseema) ಜಿಲ್ಲೆಯಲ್ಲಿರುವ ONGC ತೈಲ ಬಾವಿಯಲ್ಲಿ ಸೋಮವಾರ ಅನಿಲ ಪೈಪ್‌ಲೈನ್ ಸೋರಿಕೆಯಾಗಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ಅವಘಡದಲ್ಲಿ ಯಾವುದೇ ಸಾವು ಅಥವಾ ಗಾಯಗಳ ವರದಿಯಾಗಿಲ್ಲ ಎಂದು ಮಹಾರತ್ನ ಕಂಪನಿಯ ಅಧಿಕಾರಿ ತಿಳಿಸಿದ್ದಾರೆ.

ಈ ತೈಲ ಕೊಳವನ್ನು ONGCಯ ಉತ್ಪಾದನಾ ಗುತ್ತಿಗೆದಾರ ಸಂಸ್ಥೆಯಾದ ಡೀಪ್ ಇಂಡಸ್ಟ್ರೀಸ್ ಲಿಮಿಟೆಡ್ ನಡೆಸುತ್ತಿದೆ. ಅನಿಲ ಸೋರಿಕೆಯಿಂದ ಬೆಂಕಿ ಕಾಣಿಸಿಕೊಂಡ ನಂತರ, ONGCಯ ರಾಜಮಹೇಂದ್ರವರಂನ ಹಿರಿಯ ಅಧಿಕಾರಿಗಳು ತಕ್ಷಣವೇ ಘಟನೆ ನಡೆದ ಮೋರಿ ಗ್ರಾಮಕ್ಕೆ ಧಾವಿಸಿದ್ದಾರೆ.

ಇಡೀ ಪ್ರದೇಶದಲ್ಲಿ ಎಚ್ಚರಿಕೆ ವಹಿಸಲಾಗಿದ್ದು, ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ತಂಡಗಳನ್ನು ನಿಯೋಜಿಸಲಾಗಿದೆ. ಇದಲ್ಲದೆ ಸಂಸ್ಥೆಯ ಹಿರಿಯ ನಿರ್ವಹಣಾ ಸಿಬ್ಬಂದಿ ಮತ್ತು ತಾಂತ್ರಿಕ ತಜ್ಞರು ಘಟನೆಗೆ ನಿಖರ ಕಾರಣವೇನು ಎಂಬುವುದನ್ನು ಪರಿಶೀಲಿಸುತ್ತಿದ್ದಾರೆ ಎಂದು ONGC ಹೇಳಿದೆ.

ಭಾರಿ ಅಗ್ನಿ ಅವಘಡ:



ಕೋನಸೀಮಾ ಜಿಲ್ಲೆಯ ರಾಜೋಲೆ ಪ್ರದೇಶದ ಇರುಸುಮಂಡ ಗ್ರಾಮದಲ್ಲಿರುವ ತೈಲ ಬಾವಿಯಲ್ಲಿ ತಾತ್ಕಾಲಿಕವಾಗಿ ತೈಲ ಉತ್ಪಾದನೆಯನ್ನು ಸ್ಥಗಿತಗೊಳಿಸಿ ದುರಸ್ತಿ ಕಾರ್ಯ ನಡೆಸುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.

ಗಂಟಲಿಗೆ ಪೆನ್ಸಿಲ್ ಚುಚ್ಚಿ ಯುಕೆಜಿ ವಿದ್ಯಾರ್ಥಿ ಸಾವು; ತೆಲಂಗಾಣದಲ್ಲಿ ಹೃದಯ ವಿದ್ರಾವಕ ಘಟನೆ

ದುರಸ್ತಿ ಸಮಯದಲ್ಲಿ, ಪ್ರಬಲವಾದ ಬ್ಲೋಔಟ್ ಸಂಭವಿಸಿ ಕಚ್ಚಾ ತೈಲದೊಂದಿಗೆ ಮಿಶ್ರಿತ ಅನಿಲ ಬಿಡುಗಡೆಯಾಗಿದೆ ಮಂಜಿನಂತೆ ಹರಡಿದೆ. ಸೋರಿಕೆಯಾದ ಅನಿಲಕ್ಕೆ ಕ್ಷಣಮಾತ್ರದಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಮುಗಿಲೆತ್ತರಕ್ಕೆ ಬೆಂಕಿ ಜ್ವಾಲೆ ಚಿಮ್ಮಿದೆ. ಇದರ ಪರಿಣಾಮವಾಗಿ ಕೃಷಿ ಭೂಮಿಗಳು ಸುಟ್ಟು ಹೋಗಿ, ಗ್ರಾಮದ ಹಲವೆಡೆ ದಟ್ಟವಾದ ಹೊಗೆ ಆವರಿಸಿದ್ದು, ನಿವಾಸಿಗಳಲ್ಲಿ ಭೀತಿಯನ್ನು ಉಂಟು ಮಾಡಿತು.

ONGC ಅಧಿಕಾರಿಗಳು, ಅಗ್ನಿಶಾಮಕ ದಳ ಮತ್ತು ಪೊಲೀಸ್ ಸಿಬ್ಬಂದಿಯೊಂದಿಗೆ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಗ್ರಾಮಸ್ಥರು ಭಯ ಮತ್ತು ಆತಂಕದಲ್ಲಿದ್ದಾರೆ ಎಂದು ಅಗ್ನಿಶಾಮಕ ದಳದ ಅಧಿಕಾರಿ ಬಾಲಕೃಷ್ಣ ತಿಳಿಸಿದ್ದಾರೆ. ಸದ್ಯ ಪಂಚಾಯತ್ ಅಧಿಕಾರಿಗಳು ಹಾಗೂ ಸ್ಥಳೀಯ ಆಡಳಿತದ ಸೂಚನೆಯಂತೆ ಗ್ರಾಮಸ್ಥರನ್ನು ಸ್ಥಳಾಂತರಿಸಲು ಆದೇಶಿಸಿದ್ದಾರೆ ಮತ್ತು ವಿದ್ಯುತ್, ಗ್ಯಾಸ್‌ ಸ್ಟೌ ಹಾಗೂ ಒಲೆಯನ್ನು ಹೊತ್ತಿಸದಂತೆ ಎಂದು ಸೂಚಿಸಲಾಗಿದೆ.

ಆಗಿದ್ದೇನು?

“ಮೋರಿ–5 ತೈಲ ಬಾವಿಯಲ್ಲಿ ಅನಿಲ ಪೈಪ್‌ಲೈನ್ ಸೋರಿಕೆಯಿಂದ ಬೆಂಕಿ ಸಂಭವಿಸಿದ್ದು, ಉತ್ಪಾದನಾ ಹೆಚ್ಚಳ ಕಾರ್ಯಾಚರಣೆಗಳ ಭಾಗವಾಗಿ ಡೀಪ್ ಇಂಡಸ್ಟ್ರೀಸ್ ಲಿಮಿಟೆಡ್ ನಡೆಸುತ್ತಿತ್ತು, ಕೋನಸೀಮಾ ಜಿಲ್ಲಾ ಆಡಳಿತವೂ ಸ್ಥಳದಲ್ಲಿದ್ದು, ಅಗ್ನಿಶಾಮಕ ಕಾರ್ಯಾಚರಣೆ ಮತ್ತು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ONGCಯ ಉತ್ಪಾದನಾ ಹೆಚ್ಚಳ ಗುತ್ತಿಗೆದಾರ (PEC) ಆಗಿರುವ ಡೀಪ್ ಇಂಡಸ್ಟ್ರೀಸ್ ಲಿಮಿಟೆಡ್, 2024ರಲ್ಲಿ ಆಂಧ್ರಪ್ರದೇಶದ ರಾಜಮಹೇಂದ್ರವರಂ ಆಸ್ತಿಯ ಉತ್ಪಾದನಾ ಹೆಚ್ಚಳ ಕಾರ್ಯಾಚರಣೆಗಾಗಿ ₹1,402 ಕೋಟಿ ಮೌಲ್ಯದ ಒಪ್ಪಂದವನ್ನು ಪಡೆದಿತ್ತು ಎಂದು ವರದಿಗಳು ತಿಳಿಸಿವೆ. ಈ ಕಂಪನಿ ಕಳೆದ ಒಂದು ವರ್ಷದಿಂದ ಮೋರಿ–5 ತೈಲ ಬಾವಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.