Photos: ದುಬೈನಲ್ಲಿ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡ ನಟಿ ದೀಪಿಕಾ ದಾಸ್; ಪತ್ನಿಗೆ ದುಬಾರಿ ಉಡುಗೊರೆ ನೀಡಿದ ಪತಿ ದೀಪಕ್
ನಟಿ ದೀಪಿಕಾ ದಾಸ್ ಅವರು ಕನ್ನಡದ ಬಿಗ್ ಬಾಸ್ ಶೋ, ಅದಕ್ಕಿಂತ ಮುಂಚೆ ನಾಗಿಣಿ ಸೀರಿಯಲ್ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ನಟನೆ ಜೊತೆಗೆ ದೀಪಿಕಾ ದಾಸ್ ಅವರು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಇರುತ್ತಾರೆ. ಟ್ರಿಪ್ ಮಾಡುತ್ತಾ, ಅದರ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಅಂದಹಾಗೆ, ಫೆಬ್ರವರಿ 23ರಂದು ದೀಪಿಕಾ ದಾಸ್ಗೆ ಹುಟ್ಟುಹಬ್ಬ. ಈ ಬಾರಿ ಅವರು ತಮ್ಮ ಹುಟ್ಟುಹಬ್ಬವನ್ನು ದುಬೈನಲ್ಲಿ ಅದ್ದೂರಿಯಾಗಿ ಆಚರಿಸಿಕೊಂಡಿದ್ದಾರೆ. ಜೊತೆಗೆ ತಮ್ಮ ವಯಸ್ಸನ್ನ ಕೂಡ ದೀಪಿಕಾ ಹೇಳಿಕೊಂಡಿದ್ದಾರೆ.
-
ನಟಿ ದೀಪಿಕಾ ದಾಸ್ ಇತ್ತೀಚೆಗೆ ತಮ್ಮ 30ನೇ ವರ್ಷಕ್ಕೆ ಕಾಲಿಟ್ಟಿದ್ದು, ದುಬೈನಲ್ಲಿ ಪತಿಯೊಂದಿಗೆ ಸಂಭ್ರಮದಿಂದ ಜನ್ಮದಿನ ಆಚರಿಸಿಕೊಂಡಿದ್ದಾರೆ.
2024ರ ಮಾರ್ಚ್ 1ರಂದು ಉದ್ಯಮಿ ದೀಪಕ್ ಅವರ ಜೊತೆಗೆ ಗೋವಾದಲ್ಲಿ ನಡೆದ ಅದ್ಧೂರಿ 'ಡೆಸ್ಟಿನೇಷನ್ ವೆಡ್ಡಿಂಗ್' ಮೂಲಕ ದೀಪಿಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ವಿಶೇಷವಾದ ಹೂಗುಚ್ಛವನ್ನು ನೀಡಿ ಪತ್ನಿ ದೀಪಿಕಾಗೆ ಹುಟ್ಟುಹಬ್ಬದ ಶುಭಾಶಯಗಳನ್ನ ತಿಳಿಸಿದ ದೀಪಕ್ ಗೌಡ.
ದೀಪಿಕಾ ದಾಸ್ ಅವರು 'ದೂದ್ ಸಾಗರ್', 'ಡ್ರೀಮ್ ಗರ್ಲ್' ಹಾಗೂ 'ಪಾರು ಪಾರ್ವತಿ' ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಸದ್ಯಕ್ಕೆ ಯಾವುದೇ ಹೊಸ ಪ್ರಾಜೆಕ್ಟ್ಗಳನ್ನು ಒಪ್ಪಿಕೊಳ್ಳದ ನಟಿ, ಅಭಿನಯ ಕ್ಷೇತ್ರದಿಂದ ಸ್ವಲ್ಪ ದೂರ ಉಳಿದುಕೊಂಡಿದ್ದಾರೆ.
ಮದುವೆಯ ನಂತರ ದೀಪಿಕಾ ದಾಸ್ ಸದ್ಯ ದುಬೈನಲ್ಲಿ ನೆಲೆಸಿದ್ದು, ಅಲ್ಲಿಂದಲೇ ವಿವಿಧ ದೇಶಗಳನ್ನು ಸುತ್ತುತ್ತಾ ತಮ್ಮ ಪ್ರವಾಸದ ದಿನಗಳನ್ನು ಎಂಜಾಯ್ ಮಾಡುತ್ತಿದ್ದಾರೆ. ಕೇವಲ ಪ್ರವಾಸ ಮಾತ್ರವಲ್ಲದೆ, ಪತಿ ದೀಪಕ್ ಅವರ ವ್ಯವಹಾರದಲ್ಲೂ ದೀಪಿಕಾ ಬೆಂಬಲವಾಗಿ ನಿಂತು ಉದ್ಯಮದಲ್ಲಿ ಸಾಥ್ ನೀಡುತ್ತಿದ್ದಾರೆ.
ದೀಪಿಕಾ ದಾಸ್ ಹುಟ್ಟುಹಬ್ಬವನ್ನು ಪತಿ ದೀಪಕ್ ಗೌಡ ಅದ್ಧೂರಿಯಾಗಿ ಆಚರಿಸಿದ್ದು, ಪತ್ನಿಗೆ ಗುಲಾಬಿ ಹೂಗಳ ರಾಶಿ ಮಧ್ಯೆ ಚಿನ್ನದ ಸರ ಹಾಗೂ ಬ್ರೇಸ್ಲೆಟ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.