ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅಸ್ಸಾಂನಲ್ಲಿ ಬಿಗಡಾಯಿಸಿದ ಪ್ರವಾಹ ಪರಿಸ್ಥಿತಿ, ಸಾವಿನ ಸಂಖ್ಯೆ 95ಕ್ಕೆ ಏರಿಕೆ: ನಿರಾಶ್ರಿತರಾದ 1.6 ಲಕ್ಷಕ್ಕೂ ಹೆಚ್ಚು ಮಂದಿ

Assam Flood: ಅಸ್ಸಾಂ ರಾಜ್ಯವು ಭೀಕರ ಪ್ರವಾಹಕ್ಕೆ ಅಕ್ಷರಶಃ ತತ್ತರಿಸಿದೆ. ಈಶಾನ್ಯ ರಾಜ್ಯದ 14 ಜಿಲ್ಲೆಗಳು ಮತ್ತು 1.6 ಲಕ್ಷಕ್ಕೂ ಹೆಚ್ಚು ಜನರು ಪ್ರವಾಹದಿಂದ ನಿರಾಶ್ರಿತರಾಗಿದ್ದಾರೆ. ಸಾವಿನ ಸಂಖ್ಯೆಯು 95ಕ್ಕೇರಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಪ್ರವಾಹದ ನೀರು ಒಡ್ಡುಗಳು, ರಸ್ತೆಗಳು, ಸೇತುವೆಗಳು ಮತ್ತು ಇತರ ಮೂಲಸೌಕರ್ಯಗಳನ್ನು ಹಾನಿಗೊಳಿಸಿದೆ.

ಅಸ್ಸಾಂನಲ್ಲಿ ಭಾರಿ ಪ್ರವಾಹ, ಸಾವಿನ ಸಂಖ್ಯೆ 95ಕ್ಕೆ ಏರಿಕೆ

ಅಸ್ಸಾಂನಲ್ಲಿ ಬಿಗಡಾಯಿಸಿದ ಪ್ರವಾಹ ಪರಿಸ್ಥಿತಿ -

Priyanka P
Priyanka P Aug 6, 2026 6:03 PM

ದಿಸ್ಪುರ್, ಆ.7: ಅಸ್ಸಾಂ ರಾಜ್ಯವು ಭೀಕರ ಪ್ರವಾಹಕ್ಕೆ (Assam Flood) ಅಕ್ಷರಶಃ ತತ್ತರಿಸಿದೆ. ಈಶಾನ್ಯ ರಾಜ್ಯದ 14 ಜಿಲ್ಲೆಗಳು ಮತ್ತು 1.6 ಲಕ್ಷಕ್ಕೂ ಹೆಚ್ಚು ಜನರು ಪ್ರವಾಹದಿಂದ (flood) ನಿರಾಶ್ರಿತರಾಗಿದ್ದಾರೆ. ಸಾವಿನ ಸಂಖ್ಯೆಯು 95ಕ್ಕೇರಿದೆ. ಇತ್ತೀಚಿನ ವರದಿ ಪ್ರಕಾರ, ಶಿವಸಾಗರ್ ಮತ್ತು ಬಿಸ್ವಾನಾಥ್ ಜಿಲ್ಲೆಗಳಲ್ಲಿ ತಲಾ ಇಬ್ಬರು ಮತ್ತು ಗೋಲಾಘಾಟ್ ಮತ್ತು ಮೋರಿಗಾಂವ್‌ನಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಶಿವಸಾಗರ್ ಅತಿ ಹೆಚ್ಚು ಹಾನಿಗೊಳಗಾದ ಜಿಲ್ಲೆಯಾಗಿದ್ದು, ಇದುವರೆಗೆ 50 ಸಾವುಗಳು ಸಂಭವಿಸಿವೆ. ನೆರೆಯ ಚಾರೈಡಿಯೊದಲ್ಲಿ 21 ಸಾವುಗಳು ಸಂಭವಿಸಿವೆ.

ಜೋರ್ಹತ್‌ನಲ್ಲಿ ಒಂಬತ್ತು ಮಂದಿ ಸಾವನ್ನಪ್ಪಿದ್ದರೆ, ಗೋಲಾಘಾಟ್‌ನಲ್ಲಿ ಐದು, ಧೇಮಾಜಿಯಲ್ಲಿ ಮೂರು, ಕರ್ಬಿ ಆಂಗ್ಲಾಂಗ್ ಮತ್ತು ಬಿಸ್ವಾನಾಥ್‌ನಲ್ಲಿ ತಲಾ ಎರಡು ಮತ್ತು ಸೋನಿತ್‌ಪುರ, ಕಾಮರೂಪ ಮೆಟ್ರೋಪಾಲಿಟನ್ ಮತ್ತು ಮೋರಿಗಾಂವ್‌ನಲ್ಲಿ ತಲಾ ಒಂದು ಸಾವು ಸಂಭವಿಸಿದೆ. ಬಿಸ್ವನಾಥ್, ಚರೈಡಿಯೊ, ದರ್ರಾಂಗ್, ಧೇಮಾಜಿ, ಗೋಲಾಘಾಟ್, ಜೋರ್ಹತ್, ಕಮ್ರೂಪ್ ಮೆಟ್ರೋಪಾಲಿಟನ್, ಕರ್ಬಿ ಆಂಗ್ಲಾಂಗ್, ಲಖಿಂಪುರ, ನಾಗಾಂವ್, ಶಿವಸಾಗರ್, ಸೋನಿತ್‌ಪುರ್, ತಿನ್ಸುಕಿಯಾ ಮತ್ತು ಉದಲ್ಗುರಿ ಜಿಲ್ಲೆಗಳಲ್ಲಿ 1,60,600 ಕ್ಕೂ ಹೆಚ್ಚು ಜನರು ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಐದು ಜಿಲ್ಲೆಗಳಲ್ಲಿ 1.22 ಲಕ್ಷದಷ್ಟು ಮಂದಿ ಪ್ರವಾಹದಿಂದ ನಿರಾಶ್ರಿತರಾಗಿದ್ದಾರೆ. ಆರು ಜಿಲ್ಲೆಗಳಲ್ಲಿ 100ಕ್ಕೂ ಹೆಚ್ಚು ಪರಿಹಾರ ಶಿಬಿರಗಳು ಮತ್ತು ಪರಿಹಾರ ವಿತರಣಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ 44,523 ಪೀಡಿತ ಜನರಿಗೆ ಆಹಾರ ಒದಗಿಸುತ್ತಿವೆ. 16,951.76 ಹೆಕ್ಟೇರ್ ಬೆಳೆ ಪ್ರದೇಶವು ಜಲಾವೃತಗೊಂಡಿದೆ.

ʻಆರ್‌ಸಿಬಿಯ ನಿಜವಾದ ರಾಣಿʼ: ಅಸ್ಸಾಂ ಪ್ರವಾಹ ಪೀಡಿತರಿಗೆ ನೆರವಾದ ಅನನ್ಯಾ ಬಿರ್ಲಾ!

ರಾಜ್ಯದ ವಿವಿಧ ಭಾಗಗಳಲ್ಲಿ ಪ್ರವಾಹದ ನೀರು ಒಡ್ಡುಗಳು, ರಸ್ತೆಗಳು, ಸೇತುವೆಗಳು ಮತ್ತು ಇತರ ಮೂಲಸೌಕರ್ಯಗಳನ್ನು ಹಾನಿಗೊಳಿಸಿದೆ. ಬುಧವಾರ (ಆ,5) ಕೇಂದ್ರ ಸಚಿವ ಜೆ.ಪಿ. ನಡ್ಡಾ ಅವರು ಅತಿ ಹೆಚ್ಚು ಹಾನಿಗೊಳಗಾದ ಜಿಲ್ಲೆಗಳ ಪರಿಸ್ಥಿತಿಯನ್ನು ಪರಿಶೀಲಿಸಿದರು. ಹಾನಿಯ ಪ್ರಮಾಣವು ತುಂಬಾ ದೊಡ್ಡದಿದೆ. ಸಹಜ ಸ್ಥಿತಿಗೆ ಮರಳಲು ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.

ಜುಲೈ 19 ರಂದು ಪ್ರಾರಂಭವಾದ ಇತ್ತೀಚಿನ ಪ್ರವಾಹದಲ್ಲಿ ಹೆಚ್ಚು ಹಾನಿಗೊಳಗಾದ ಪ್ರದೇಶಗಳಲ್ಲಿ ಒಂದಾದ ಅಸ್ಸಾಂ-ನಾಗಾಲ್ಯಾಂಡ್ ಗಡಿಯಲ್ಲಿರುವ ಶಿವಸಾಗರ್ ಜಿಲ್ಲೆಯ ನೇಪಾಳಿಖುಟಿ ಪ್ರದೇಶಕ್ಕೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಭೇಟಿ ನೀಡಿದರು. ಸಂಜೆ ನಂತರ, ನಡ್ಡಾ ಅವರು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ಹಿರಿಯ ರಾಜ್ಯ ಸರ್ಕಾರಿ ಅಧಿಕಾರಿಗಳೊಂದಿಗೆ ಪ್ರವಾಹ ಪರಿಸ್ಥಿತಿ ಮತ್ತು ತೆಗೆದುಕೊಳ್ಳುತ್ತಿರುವ ಪರಿಹಾರ, ಪುನರ್ವಸತಿ ಮತ್ತು ಆರೋಗ್ಯ ಕ್ರಮಗಳ ಕುರಿತು ಉನ್ನತ ಮಟ್ಟದ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದರು.

ಸಂತ್ರಸ್ತರಿಗೆ ಕೇಂದ್ರದಿಂದ ಸಾಧ್ಯವಿರುವ ಎಲ್ಲಾ ಸಹಾಯವನ್ನು ನೀಡುವುದಾಗಿ ಅವರು ಭರವಸೆ ನೀಡಿದರು. ಸರ್ಕಾರ ಅವರೊಂದಿಗೆ ದೃಢವಾಗಿ ನಿಲ್ಲುತ್ತದೆ ಎಂದು ಹೇಳಿದರು. ಪ್ರವಾಹವು ಅಸ್ಸಾಂನಾದ್ಯಂತ ವ್ಯಾಪಕ ಹಾನಿಯನ್ನುಂಟುಮಾಡಿದೆ. ಜೀವಹಾನಿ, ದೊಡ್ಡ ಪ್ರಮಾಣದ ಸ್ಥಳಾಂತರ, ಮುಳುಗಿದ ಬೆಳೆಗಳು ಮತ್ತು ಪ್ರಮುಖ ಮೂಲಸೌಕರ್ಯಗಳಿಗೆ ಹಾನಿಯಾಗಿದೆ.