ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ರಾಹುಲ್ ಗಾಂಧಿಯನ್ನು ಮುಂಬೈ ದಾಳಿಯ ಅಪರಾಧಿ ಉಗ್ರ ಅಜ್ಮಲ್ ಕಸಬ್‌ಗೆ ಹೋಲಿಸಿದ ವಾಯುಪಡೆ ಮಾಜಿ ಅಧಿಕಾರಿ

Rahul Gandhi Kasab comparison: ಐಎಎಫ್ ನಿವೃತ್ತ ಫ್ಲೈಟ್ ಲೆಫ್ಟಿನೆಂಟ್ ಅನೂಪ್ ವರ್ಮಾ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಭಯೋತ್ಪಾದಕ ಅಜ್ಮಲ್ ಕಸಬ್‌ಗೆ ಹೋಲಿಸಿದ್ದಾರೆ. ವರ್ಮಾ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ರಾಹುಲ್ ಗಾಂಧಿ ಮತ್ತು ಕಸಬ್ ಬ್ಯಾಗ್ ಹೊತ್ತೊಯ್ಯುತ್ತಿರುವ ದೃಶ್ಯವನ್ನು ಕೊಲಾಜ್ ಮಾಡಿ ಹಂಚಿಕೊಂಡಿದ್ದಾರೆ.

ರಾಹುಲ್ ಗಾಂಧಿಯನ್ನು ಅಜ್ಮಲ್ ಕಸಬ್‌ಗೆ ಹೋಲಿಸಿದ ಐಎಎಫ್ ಮಾಜಿ ಅಧಿಕಾರಿ

ಐಎಎಫ್ ನಿವೃತ್ತ ಫ್ಲೈಟ್ ಲೆಫ್ಟಿನೆಂಟ್ ಅನೂಪ್ ವರ್ಮಾ ಮಾಡಿದ ಪೋಸ್ಟ್ -

Priyanka P
Priyanka P Sep 30, 2026 3:03 PM

ನವದೆಹಲಿ, ಸೆ.30: ವಾಯುಪಡೆಯ ನಿವೃತ್ತ ಫ್ಲೈಟ್ ಲೆಫ್ಟಿನೆಂಟ್ ಅನೂಪ್ ವರ್ಮಾ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಯನ್ನು ಭಯೋತ್ಪಾದಕ ಅಜ್ಮಲ್ ಕಸಬ್‌ (Ajmal Kasab) ಗೆ ಹೋಲಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಅವರು, 2008ರ ಮುಂಬೈ ದಾಳಿಯ (Mumbai terror attack) ಅಪರಾಧಿ ಭಯೋತ್ಪಾದಕ ಅಜ್ಮಲ್ ಕಸಬ್‌ಗೆ ರಾಹುಲ್ ಗಾಂಧಿಯನ್ನು ಹೋಲಿಸಿ, ಭಾರತಕ್ಕೆ ಹೆಚ್ಚು ಅಪಾಯಕಾರಿ ಎಂದು ಹೇಳಿದ್ದಾರೆ. ಇದೀಗ ಅನೂಪ್ ವರ್ಮಾ ವಿರುದ್ಧ ಕಾಂಗ್ರೆಸ್ ಸೇವಾ ದಳ ಸೈಬರ್ ದೂರು ದಾಖಲಿಸಿದೆ.

ವರ್ಮಾ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ರಾಹುಲ್ ಗಾಂಧಿ ಮತ್ತು ಕಸಬ್ ಬ್ಯಾಗ್ ಹೊತ್ತೊಯ್ಯುತ್ತಿರುವ ದೃಶ್ಯವನ್ನು ಕೊಲಾಜ್ ಮಾಡಿ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಇಬ್ಬರೂ ಬ್ಯಾಗ್‌ಗಳನ್ನು ಹೊತ್ತೊಯ್ಯುತ್ತಿರುವುದನ್ನು ತೋರಿಸಲಾಗಿದೆ. ಎಡಭಾಗದಲ್ಲಿರುವ ವ್ಯಕ್ತಿ ಭಾರತಕ್ಕೆ ಹೆಚ್ಚು ಅಪಾಯಕಾರಿ. ಎಡಭಾಗದಲ್ಲಿ ರಾಹುಲ್ ಗಾಂಧಿಯವರ ಚಿತ್ರವಿದೆ. ಈ ಪೋಸ್ಟ್ ಲೋಕಸಭೆಯಲ್ಲಿ ಹಾಲಿ ವಿರೋಧ ಪಕ್ಷದ ನಾಯಕ ಮತ್ತು 26/11 ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಶಿಕ್ಷೆಗೊಳಗಾದ ಕಸಬ್‌ನನ್ನು ಹೋಲಿಸಿದ್ದಕ್ಕೆ ಭಾರಿ ವಿವಾದಕ್ಕೆ ಕಾರಣವಾಗಿದೆ.

ಕಾಂಗ್ರೆಸ್ ಸೇವಾದಳದ ಕಾನೂನು ಘಟಕವು ಈ ವಿಷಯವನ್ನು ಸೂಕ್ತ ಕಾನೂನು ಮಾರ್ಗಗಳ ಮೂಲಕ ಮುಂದುವರಿಸುವುದಾಗಿ ತಿಳಿಸಿದೆ. ಕಾಂಗ್ರೆಸ್ ಪಕ್ಷ ಮತ್ತು ಅದರ ನಾಯಕರು ಅಥವಾ ಸದಸ್ಯರನ್ನು ಗುರಿಯಾಗಿಸಿಕೊಂಡು ನಡೆಯುವ ಯಾವುದೇ ದುರುದ್ದೇಶಪೂರಿತ ಅಥವಾ ಕಾನೂನುಬಾಹಿರ ಕೃತ್ಯಗಳನ್ನು ಸಹಿಸುವುದಿಲ್ಲ ಎಂದು ಸಂಘಟನೆ ಹೇಳಿದೆ.

ಇಲ್ಲಿದೆ ಪೋಸ್ಟ್:



ಪ್ರಸ್ತುತ ಪ್ರಕರಣದಲ್ಲಿ ಆರೋಪಿಸಲಾಗಿರುವಂತೆ, ಸಾಂವಿಧಾನಿಕ ಹುದ್ದೆಗಳಿಗೆ ಕಳಂಕ ತರುವ, ಕಾಂಗ್ರೆಸ್ ನಾಯಕರ ಮಾನಹಾನಿ ಮಾಡುವ ಅಥವಾ ಪ್ರಜಾಸತ್ತಾತ್ಮಕ ಭಿನ್ನಾಭಿಪ್ರಾಯವನ್ನು ಭಯೋತ್ಪಾದನೆಗೆ ಸಮಾನವಾಗಿ ಪರಿಗಣಿಸುವ ಯಾವುದೇ ಕಾನೂನುಬಾಹಿರ ಕೃತ್ಯವನ್ನು ನಾವು ಪ್ರಶ್ನಿಸಲು ಬದ್ಧರಾಗಿದ್ದೇವೆ ಎಂದು ಸಂಘಟನೆ ಹೇಳಿದೆ. ಸಂವಿಧಾನ, ಭಾರತೀಯ ನ್ಯಾಯ ಸಂಹಿತೆ ಮತ್ತು ಅನ್ವಯವಾಗುವ ಸೈಬರ್ ಕಾನೂನುಗಳ ಅಡಿಯಲ್ಲಿ ಕಾನೂನಾತ್ಮಕ ಹೋರಾಟ ಮಾಡುವುದಾಗಿ ಸಂಘಟನೆ ಹೇಳಿದೆ.

ಸ್ಟ್ಯಾಂಡ್‌ಅಪ್‌ ಕಾಮಿಡಿ ಹೆಸರಿನಲ್ಲಿ ರಾಹುಲ್‌ ಗಾಂಧಿ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ತಾಯಿಗೆ ಅವಮಾನ; ಕಾಂಗ್ರೆಸ್‌ ಕೀಳು ಮನಸ್ಥಿತಿ ಮತ್ತೊಮ್ಮೆ ಸಾಬೀತಾಗಿದೆ ಎಂದ ಬಿಜೆಪಿ

ಇನ್ನು ಈ ಪೋಸ್ಟ್‌ಗೆ ಭಾರತೀಯ ವಾಯುಪಡೆಯ ನಿವೃತ್ತ ಅಧಿಕಾರಿ ಸಾರ್ಜೆಂಟ್ ಕರ್ಮವೀರ್ ಸಿಂಗ್ ಕೂಡ ಪ್ರತಿಕ್ರಿಯಿಸಿದ್ದಾರೆ. ರಾಹುಲ್ ಗಾಂಧಿ ಅವರನ್ನು ಶಿಕ್ಷಿಸಲ್ಪಟ್ಟ ಭಯೋತ್ಪಾದಕನೊಂದಿಗೆ ಹೋಲಿಸಿರುವುದನ್ನು ಅವರು ಟೀಕಿಸಿದರು.

“ರಾಜಕೀಯವಾಗಿ ವಿರೋಧಿಸುವುದು ತಪ್ಪಲ್ಲ. ರಾಜಕೀಯ ಭಿನ್ನಾಭಿಪ್ರಾಯಗಳು ಪ್ರಜಾಪ್ರಭುತ್ವದ ಭಾಗವಾಗಿವೆ. ಆದರೆ ಟೀಕಿಸುವಾಗ ಗೌರವ ಮತ್ತು ಸಭ್ಯತೆಯನ್ನು ಕಾಪಾಡಬೇಕು. ನೀವು ಸೇನೆಯಲ್ಲಿ ಸೇವೆ ಸಲ್ಲಿಸಿದ್ದೀರಿ. ಕನಿಷ್ಠ ಸ್ವಲ್ಪ ಶಿಸ್ತು ಮತ್ತು ಗೌರವವನ್ನು ಕಾಪಾಡಿಕೊಳ್ಳಿ. ಇಂತಹ ಹೋಲಿಕೆಗಳನ್ನು ಮಾಡದೆ ವಿರೋಧ ಪಕ್ಷದ ನಾಯಕರನ್ನು ಟೀಕಿಸಬಹುದು” ಎಂದು ಅವರು ಹೇಳಿದ್ದಾರೆ.

“ಪ್ರಜಾಪ್ರಭುತ್ವದಲ್ಲಿ ರಾಜಕೀಯವಾಗಿ ತೀವ್ರ ಭಿನ್ನಾಭಿಪ್ರಾಯಗಳು ಇರುವುದು ಸಹಜ. ಆದರೆ ಭಿನ್ನಾಭಿಪ್ರಾಯ ವ್ಯಕ್ತಪಡಿಸುವಾಗಲೂ ಮಾನವೀಯತೆ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಕಾಪಾಡಬೇಕು. ಈ ರೀತಿ ಕೆಳಮಟ್ಟದ ಹೇಳಿಕೆಗಳನ್ನು ನೀಡುವುದು ಆ ಮೌಲ್ಯಗಳಿಗೆ ಧಕ್ಕೆ ತರುತ್ತದೆ. 24 ವರ್ಷಗಳ ಕಾಲ ಭಾರತೀಯ ವಾಯುಪಡೆಯಲ್ಲಿ ಸೇವೆ ಸಲ್ಲಿಸಿದ ನಿವೃತ್ತ ಯೋಧನಾಗಿ, ನಿಮ್ಮ ಇಂತಹ ವರ್ತನೆ ನನಗೆ ತೀವ್ರ ಮುಜುಗರ ಉಂಟುಮಾಡಿದೆ. ನಿಮ್ಮ ಈ ನಡೆ ನಿಮಗೂ, ನಿಮ್ಮ ಕುಟುಂಬಕ್ಕೂ ನಾಚಿಕೆ ತರುವಂತಹದ್ದು” ಎಂದು ಸಾರ್ಜೆಂಟ್ ಕರ್ಮವೀರ್ ಸಿಂಗ್ ಎಕ್ಸ್‌ನಲ್ಲಿ ಬರೆದಿದ್ದಾರೆ.