ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

operation sindoor: ಕ್ಷಿಪಣಿ ದಾಳಿಯಿಂದ ಸ್ವಲ್ಪದರಲ್ಲೇ ಪಾರಾದ ಆಸೀಸ್‌ ಕ್ರಿಕೆಟಿಗರು

ಭಾರತದ ಕ್ಷಿಪಣಿ ದಾಳಿ ನಡೆಸುವ ಮೂರು ಗಂಟೆಗೂ ಮುನ್ನ ಪಿಎಸ್‌ಎಲ್‌ ಮುಂದೂಡಿಕೆ ಹಿನ್ನೆಲೆಯಲ್ಲಿ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ವ್ಯವಸ್ಥೆ ಮಾಡಿದ್ದ ವಿಮಾನದಲ್ಲಿ ಆಟಗಾರರು ದುಬೈಗೆ ತೆರಳಿದ್ದು, ಕೂದಲೆಳೆ ಅಂತರದಲ್ಲಿ ಬಚಾವಾಗಿದ್ದಾರೆ. ಈ ಬಗ್ಗೆ ಆಸ್ಟ್ರೇಲಿಯಾದ ಮಾಧ್ಯಮಗಳು ವರದಿ ಮಾಡಿವೆ.

ಕ್ಷಿಪಣಿ ದಾಳಿಯಿಂದ ಸ್ವಲ್ಪದರಲ್ಲೇ ಪಾರಾದ ಕ್ರಿಕೆಟಿಗರು

Profile Abhilash BC May 12, 2025 2:56 AM

ಕರಾಚಿ: ನೂರ್‌ ಖಾನ್ ವಾಯುನೆಲೆ ಮೇಲೆ ಭಾರತ ನಡೆಸಿದ್ದ ಕ್ಷಿಪಣಿ ದಾಳಿಯಿಂದ ಆಸ್ಟ್ರೇಲಿಯಾದ ನಾಲ್ವರು ಕ್ರಿಕೆಟಿಗರು ಸೇರಿದಂತೆ ನ್ಯೂಜಿಲ್ಯಾಂಡ್‌, ವೆಸ್ಟ್‌ ಇಂಡೀಸ್‌, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶದ ಆಟಗಾರರು ಸ್ವಲ್ಪದರಲ್ಲೇ ಪಾರಾಗಿದ್ದ ವಿಷಯ ತಡವಾಗಿ ಬೆಳಕಿಗೆ ಬಂದಿದೆ. ಪಾಕಿಸ್ತಾನ ಸೂಪರ್ ಲೀಗ್‌ (ಪಿಎಸ್‌ಎಲ್‌) ಮುಂದೂಡಲ್ಪಟ್ಟ ಹಿನ್ನೆಲೆ ಇವರೆಲ್ಲ ಪಾಕ್‌ನಿಂದ ಸ್ವದೇಶಕ್ಕೆ ತೆರಳುತ್ತಿದ್ದರು

ಶನಿವಾರ ಭಾರತವು ಪಾಕಿಸ್ತಾನದ ನೂರ್‌ ಖಾನ್ ವಾಯುನೆಲೆ ಸೇರಿದಂತೆ ಮೂರು ಪಾಕಿಸ್ತಾನಿ ನೆಲೆಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆಸಿತ್ತು. ಈ ದಾಳಿಗೂ ಮುಂಚೆ ನೂರ್‌ ಖಾನ್ ವಾಯುನೆಲೆಯಲ್ಲಿ ಆಸ್ಟ್ರೇಲಿಯಾ ಕ್ರಿಕೆಟಿಗರಾದ ಶಾನ್‌ ಅಬಾಟ್, ಬೆನ್‌ ದ್ವಾರಶುಯಿಸ್‌, ಆ್ಯಸ್ಟನ್‌ ಟರ್ನರ್‌ ಮತ್ತು ಮಿಚ್‌ ಓವನ್ ಇ ದ್ದರು. ಭಾರತದ ಕ್ಷಿಪಣಿ ದಾಳಿ ನಡೆಸುವ ಮೂರು ಗಂಟೆಗೂ ಮುನ್ನ ಪಿಎಸ್‌ಎಲ್‌ ಮುಂದೂಡಿಕೆ ಹಿನ್ನೆಲೆಯಲ್ಲಿ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ವ್ಯವಸ್ಥೆ ಮಾಡಿದ್ದ ವಿಮಾನದಲ್ಲಿ ದುಬೈಗೆ ತೆರಳಿದ್ದು, ಕೂದಲೆಳೆ ಅಂತರದಲ್ಲಿ ಬಚಾವಾಗಿದ್ದಾರೆ. ಈ ಬಗ್ಗೆ ಆಸ್ಟ್ರೇಲಿಯಾದ ಮಾಧ್ಯಮಗಳು ವರದಿ ಮಾಡಿವೆ.

ಮೇ 15 ರಿಂದ ಐಪಿಎಲ್‌ ಪುನಾರಂಭ?

ಭಾರತ ಹಾಗೂ ಪಾಕಿಸ್ತಾನ ನಡುವೆ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ಒಂದು ವಾರ ಕಾಲ ಸ್ಥಗಿತಗೊಳಿಸಲಾಗಿದ್ದ ಐಪಿಎಲ್‌ ಪಂದ್ಯಗಳನ್ನು ಪುನಾರಂಭಿಸಲು ಬಿಸಿಸಿಐ ಸಿದ್ಧತೆ ಆರಂಭಿಸಿದ್ದು ಮೇ15 ಅಥವಾ 16ರಿಂದಲೇ ಪುನಾರಂಭಗೊಳ್ಳುವ ಸಾಧ್ಯತೆಯಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಮೊದಲು ಮೇ 25ಕ್ಕೆ ಫೈನಲ್‌ ಪಂದ್ಯ ನಿಗದಿಯಾಗಿತ್ತು. ಸದ್ಯ ಕೆಲ ದಿನಗಳ ವಿರಾಮದಿಂದಾಗಿ ಮೇ ಕೊನೆಗೆ ಅಥವಾ ಜೂನ್‌ ಮೊದಲ ವಾರ ಟೂರ್ನಿ ಕೊನೆಗೊಳ್ಳಬಹುದು.

ಇಂಗ್ಲೆಂಡ್‌ ಆಟಗಾರರಾದ ಜಾಸ್‌ ಬಟ್ಲರ್‌, ಫಿಲ್‌ ಸಾಲ್ಟ್‌, ಜೇಕಬ್‌ ಬೆಥಲ್‌ ಜೋಫ್ರ ಆರ್ಚರ್‌ ಸೇರಿಂದತೆ ಇಂಗ್ಲೆಂಡ್‌ ಆಟಗಾರರು ಐಪಿಎಲ್‌ ಸ್ಥಗಿತಗೊಂಡ ಮಾರನೇ ದಿನವೇ ತವರಿಗೆ ಮರಳಿದ್ದಾರೆ. ಇವರೆಲ್ಲ ಮತ್ತೆ ಐಪಿಎಲ್‌ ಆಡಲು ಭಾರತಕ್ಕೆ ಬರುವುದು ಅನುಮಾನ ಎನ್ನಲಾಗಿದೆ.

ಇದನ್ನೂ ಓದಿ Operation Sindoor: ಕಾಶ್ಮೀರದಲ್ಲಿ ಸಿಲುಕಿದ್ದ ಕರ್ನಾಟಕದ 13 ವಿದ್ಯಾರ್ಥಿಗಳನ್ನು ಕರೆತರಲು ಎಚ್‌ಡಿಕೆ ನೆರವು

ಮಾರ್ಚ್‌ 22ಕ್ಕೆ ಆರಂಭಗೊಂಡ ಟೂರ್ನಿಯಲ್ಲಿ ಒಟ್ಟು 58 ಪಂದ್ಯಗಳು ನಡೆದಿದೆ. ಲೀಗ್‌ ಹಂತದಲ್ಲಿ 12 ಹಾಗೂ ಪ್ಲೇ-ಆಫ್‌ನ 3 ಹಾಗೂ ಒಂದು ಫೈನಲ್‌ ಸೇರಿ ಒಟ್ಟು 16 ಪಂದ್ಯಗಳು ಬಾಕಿಯಿವೆ.