ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅಮ್ಮನ ದೋಸೆ ರೆಸಿಪಿಯಿಂದ ತಿಂಗಳಿಗೆ 12 ಲಕ್ಷ ರೂ. ಗಳಿಕೆ: ಥಾಣೆಯ ಸಹೋದರ-ಸಹೋದರಿಯ ಯಶೋಗಾಥೆ ಇದು

CA ಆಗುವ ಕನಸನ್ನು ಬದಿಗಿಟ್ಟು ತಾಯಿಯ ಬೆಣ್ಣೆ ದೋಸೆ ರೆಸಿಪಿಯನ್ನು ಉದ್ಯಮವನ್ನಾಗಿ ಮಾಡಿದ ಥಾಣೆಯ ಗಣೇಶ್ ಸಾಥೆ ಮತ್ತು ಅವರ ಸಹೋದರಿ ಸಪ್ನಾ, ಆರಂಭಿಕ ನಷ್ಟಗಳ ನಡುವೆಯೂ ಪ್ರಯತ್ನ ಕೈಬಿಡಲಿಲ್ಲ. ಸಾಮಾಜಿಕ ಜಾಲತಾಣದ ಮೂಲಕ ತಮ್ಮ ದೋಸೆಯ ಪಯಣವನ್ನು ಹಂಚಿಕೊಂಡ ಬಳಿಕ ವ್ಯಾಪಾರಕ್ಕೆ ಭರ್ಜರಿ ಸ್ಪಂದನೆ ದೊರೆತಿದ್ದು, ಇದೀಗ ದಿನಕ್ಕೆ ಸುಮಾರು 400 ಗ್ರಾಹಕರು ಭೇಟಿ ನೀಡುತ್ತಿದ್ದಾರೆ. ಹಳೆಯ ದೋಸೆ ಗಾಡಿಯಿಂದ ಆರಂಭವಾದ ಉದ್ಯಮ ಇಂದು ತಿಂಗಳಿಗೆ ಸುಮಾರು ₹12 ಲಕ್ಷ ಆದಾಯ ಗಳಿಸುವ ಮಟ್ಟಕ್ಕೆ ಬೆಳೆದಿದೆ.

ಅಮ್ಮನ ದೋಸೆಯಿಂದ ₹12 ಲಕ್ಷದ ಉದ್ಯಮ!

-

Profile
Sushmitha Jain Sep 4, 2026 8:58 PM

ಥಾಣೆ: ಸಣ್ಣ ಕನಸುಗಳು ಸರಿಯಾದ ಆಲೋಚನೆ, ಕಠಿಣ ಪರಿಶ್ರಮ ಮತ್ತು ಸೋಲನ್ನು ಒಪ್ಪಿಕೊಳ್ಳದ ಛಲದಿಂದ ದೊಡ್ಡ ಯಶಸ್ಸಾಗಿ ಬದಲಾಗಬಹುದು. ಇದಕ್ಕೆ ಥಾಣೆಯ ಗಣೇಶ್ ಸಾಥೆ ಮತ್ತು ಅವರ ಸಹೋದರಿ ಸಪ್ನಾ ಸಾಥೆ ಅವರ ಕಥೆಯೇ ಉತ್ತಮ ಉದಾಹರಣೆ. ಗಣೇಶ್ ಸಾಥೆ ಅವರು ಚಾರ್ಟರ್ಡ್ ಅಕೌಂಟೆಂಟ್ (CA) ಆಗಬೇಕೆಂಬ ಕುಟುಂಬದ ಕನಸಿನಂತೆ CA ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. ಆದರೆ ಬಾಲ್ಯದಿಂದಲೂ ತಾಯಿಯ ಕೈಯಿಂದ ತಯಾರಾಗುತ್ತಿದ್ದ ಬೆಣ್ಣೆ ದೋಸೆಯ (Benne Dosa) ರುಚಿ ಅವರ ಮನಸ್ಸಿನಲ್ಲಿ ಬೇರೂರಿತ್ತು. ಇದೇ ದೋಸೆಯನ್ನು ಉದ್ಯಮವನ್ನಾಗಿ ಮಾಡುವ ಆಲೋಚನೆ ಅವರಲ್ಲಿ ಮೂಡಿತು.

ಸಾಂಪ್ರದಾಯಿಕ ವೃತ್ತಿಜೀವನದ ಹಾದಿಯನ್ನು ಬಿಟ್ಟು ಗಣೇಶ್ ಅವರು ₹50,000 ಸಾಲ ಪಡೆದು ಹಳೆಯ ಗಾಡಿಯೊಂದರಲ್ಲಿ ಬೆಣ್ಣೆ ದೋಸೆ ಮಾರಾಟ ಆರಂಭಿಸಿದರು. ಸಹೋದರಿ ಸಪ್ನಾ ಕೂಡ ಅವರೊಂದಿಗೆ ಕೈಜೋಡಿಸಿದರು. ಆದರೆ ಆರಂಭದ ದಿನಗಳು ಸುಲಭವಾಗಿರಲಿಲ್ಲ. ಪಿಜ್ಜಾ, ಮೊಮೊಸ್ ಸೇರಿದಂತೆ ಹಲವು ಫುಡ್ ಬ್ರ್ಯಾಂಡ್‌ಗಳ ನಡುವೆ ಗ್ರಾಹಕರನ್ನು ಸೆಳೆಯುವುದು ಕಷ್ಟವಾಗಿತ್ತು. ದಿನಕ್ಕೆ ಸುಮಾರು ₹200 ನಷ್ಟವಾಗುತ್ತಿದ್ದ ಸಂದರ್ಭವೂ ಎದುರಾಗಿತ್ತು.

ಒಂದು ಹಂತದಲ್ಲಿ ವ್ಯಾಪಾರ ಸಂಪೂರ್ಣವಾಗಿ ಮುಚ್ಚುವ ಪರಿಸ್ಥಿತಿ ಬಂದರೂ ಸಹೋದರ-ಸಹೋದರಿ ಹಿಂದೆ ಸರಿಯಲಿಲ್ಲ. ಕೊನೆಯ ಪ್ರಯತ್ನವಾಗಿ ಸಾಮಾಜಿಕ ಜಾಲತಾಣಗಳ ಮೊರೆ ಹೋದರು. ಗಾಡಿಯನ್ನು ಹೊಸದಾಗಿ ರೂಪಿಸಿ, ದೋಸೆ ತಯಾರಿಸುವ ಪ್ರಕ್ರಿಯೆ ಹಾಗೂ ತಮ್ಮ ಉದ್ಯಮದ ಪಯಣವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲು ಆರಂಭಿಸಿದರು.

Viral Video: ಸೂರತ್ ರೈಲ್ವೆ ನಿಲ್ದಾಣದಲ್ಲಿ ಕಳಪೆ ಆಹಾರ; ಫುಡ್ ಕೌಂಟರ್‌ನಲ್ಲಿ ಪ್ರಯಾಣಿಕರಿಗಾಗಿ ತಯಾರಿಸಿದ ಪಫ್ ತಿಂದ ಇಲಿ

ಪ್ರತಿದಿನ ಬೆಳಗ್ಗೆ ಗಣೇಶ್ ಅವರ ತಾಯಿ ಮತ್ತು ಸಪ್ನಾ ತಾಜಾ ಹಿಟ್ಟನ್ನು ತಯಾರಿಸುತ್ತಿದ್ದರೆ, ಗಣೇಶ್ ರುಚಿಕರವಾದ ಬೆಣ್ಣೆ ದೋಸೆಗಳನ್ನು ತಯಾರಿಸುತ್ತಿದ್ದರು. ನಿಧಾನವಾಗಿ ಅವರ ವಿಡಿಯೋಗಳು ಜನರ ಗಮನ ಸೆಳೆಯತೊಡಗಿದವು. ಫಾಲೋವರ್ಸ್ ಹೆಚ್ಚಾದರು, ಗ್ರಾಹಕರ ಸಂಖ್ಯೆಯೂ ಏರಿತು. ಕೆಲವೇ ದಿನಗಳಲ್ಲಿ ಅವರ ದೋಸೆಗಳು ಒಂದು ಗಂಟೆಯೊಳಗೆ ಮಾರಾಟವಾಗುವಷ್ಟು ಜನಪ್ರಿಯವಾದವು. ಇಂದು ದಿನಕ್ಕೆ ಸುಮಾರು 400 ಮಂದಿ ಅವರ ಅಂಗಡಿಗೆ ಭೇಟಿ ನೀಡುತ್ತಾರೆ ಎನ್ನಲಾಗಿದೆ. ಹಳೆಯ ದೋಸೆ ಗಾಡಿ ಇದೀಗ ಶಾಶ್ವತ ಅಂಗಡಿಯಾಗಿ ರೂಪಾಂತರಗೊಂಡಿದ್ದು, ದಿನಕ್ಕೆ ಸುಮಾರು ₹40,000 ವಹಿವಾಟು ನಡೆಯುತ್ತಿದೆ. ಅಂದರೆ ತಿಂಗಳಿಗೆ ಸುಮಾರು ₹12 ಲಕ್ಷದಷ್ಟು ಆದಾಯ ಗಳಿಸುತ್ತಿದ್ದಾರೆ.

ಒಂದು ಸರಳವಾದ ಕುಟುಂಬದ ರೆಸಿಪಿಯ ಮೇಲೆ ನಂಬಿಕೆ ಇಟ್ಟು, ಕಷ್ಟಗಳ ನಡುವೆಯೂ ಪ್ರಯತ್ನ ಮುಂದುವರಿಸಿದ ಗಣೇಶ್ ಮತ್ತು ಸಪ್ನಾ ಅವರ ಕಥೆ, ಪ್ಯಾಷನ್, ಪರಿಶ್ರಮ ಮತ್ತು ತಾಳ್ಮೆ ಇದ್ದರೆ ಸಣ್ಣ ಆಲೋಚನೆಯೂ ದೊಡ್ಡ ಉದ್ಯಮವಾಗಿ ಬೆಳೆಯಬಹುದು ಎಂಬುದನ್ನು ತೋರಿಸುತ್ತ