ಜಮ್ಮು ಕಾಶ್ಮೀರದಲ್ಲಿ ಭದ್ರತಾ ಪಡೆಯಿಂದ ಉಗ್ರನ ಎನ್‌ಕೌಂಟರ್; AK-47 ಜಪ್ತಿ
Terrorist Encounter: ಜಮ್ಮು ಮತ್ತು ಕಾಶ್ಮೀರದ ಬುಡ್ಗಾಮ್ ಜಿಲ್ಲೆಯಲ್ಲಿ ಶುಕ್ರವಾರ ಅರಣ್ಯ ಪ್ರದೇಶದೊಳಗೆ ಭಾರತೀಯ ಸೇನೆ, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ಶ್ರೀನಗರ ಸೆಕ್ಟರ್ ಸಿಆರ್‌ಪಿಎಫ್ ಯೋಧರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಓರ್ವ ಭಯೋತ್ಪಾದಕನನ್ನು ಹತ್ಯೆಗೈದಿವೆ.
ಸಂಗ್ರಹ ಚಿತ್ರ -
ಬುಡ್ಗಮ್: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಬುಡ್ಗಾಮ್ ಜಿಲ್ಲೆಯಲ್ಲಿ ಶುಕ್ರವಾರ ಅರಣ್ಯ ಪ್ರದೇಶದೊಳಗೆ ಭಾರತೀಯ ಸೇನೆ, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ಶ್ರೀನಗರ ಸೆಕ್ಟರ್ ಸಿಆರ್‌ಪಿಎಫ್ ಯೋಧರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಓರ್ವ ಭಯೋತ್ಪಾದಕನನ್ನು (Terrorist Encounter) ಹತ್ಯೆಗೈದಿವೆ. ಪುಲ್ವಾಮಾ ಜಿಲ್ಲೆಯ ಪಖೇರ್‌ಪೋರಾದಿಂದ ಬುಡ್ಗಾಮ್‌ನ ಯೂಸ್‌ಮಾರ್ಗ್ ಕಡೆಗೆ ಶಂಕಿತ ಭಯೋತ್ಪಾದಕರ ಗುಂಪಿನ ಚಲನವಲನದ ಬಗ್ಗೆ ಮಾಹಿತಿಯ ಆಧಾರದ ಮೇಲೆ ಗುರುವಾರ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿವೆ.
ನಿರ್ದಿಷ್ಟ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಬುಡ್ಗಾಮ್‌ನ ಅಶ್ದರ್ ಗಲಿ ಪ್ರದೇಶದಲ್ಲಿ 'ಆಪರೇಷನ್ ಅಶ್ದರ್' ಎಂಬ ಜಂಟಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಗುಪ್ತಚರ ಮಾಹಿತಿ ಆಧರಿಸಿ ಅಶ್ದರ್ ಗಲಿ ಪ್ರದೇಶದಲ್ಲಿ ಸರ್ಚ್ ಆಪರೇಷನ್ ನಡೆಸುತ್ತಿದ್ದಾಗ, ಭಯೋತ್ಪಾದಕರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತ್ಯುತ್ತರ ನೀಡಿದ ಸಿಆರ್‌ಪಿಎಫ್, ಭಾರತೀಯ ಸೇನೆ ಹಾಗೂ ಜಮ್ಮು ಪೊಲೀಸರು ಒಬ್ಬ ಉಗ್ರನನ್ನು ಹತ್ಯೆ ಮಾಡಲಾಡಲಾಗಿದೆ.
OP ASHDAR, Budgam
— Chinar Corps🍁 - Indian Army (@ChinarcorpsIA) September 4, 2026
Based on specific intelligence input, a Joint Search Operation was launched by #IndianArmy, @JmuKmrPolice and @crpf_srinagar in general area Ashdar Gali, Budgam.
Vigilant troops observed suspicious activity and upon being challenged, terrorists opened fire,…
ಕಾರ್ಯಾಚರಣೆ ಬಗ್ಗೆ ಟ್ವಿಟರ್ನಲ್ಲಿ ಜಮ್ಮು-ಕಾಶ್ಮೀರದ ಚಿನಾರ್ ಟ್ರೂಪ್ಸ್ ಮಾಹಿತಿ ಹಂಚಿಕೊಂಡಿದ್ದು, ಎನ್ಕೌಂಟರ್ನಲ್ಲಿ ಸಾವನ್ನಪ್ಪಿರುವ ಭಯೋತ್ಪಾದಕ ಯಾವ ಸಂಘಟನೆಗೆ ಸೇರಿದ್ದನೆಂದು ತಿಳಿದು ಬಂದಿಲ್ಲ. ಆದರೆ ಇತನಿಂದ ಎಕೆ-47 ರೈಫಲನ್ನು ಜಫ್ತಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಹತ್ಯೆಗೀಡಾದ ಭಯೋತ್ಪಾದಕನ ಗುರುತು ಇನ್ನೂ ಬಹಿರಂಗಗೊಂಡಿಲ್ಲ. ದೂಧ್‌ಪತ್ರಿ ಬಳಿ ಕಾರ್ಯಾಚರಣೆ ನಡೆಯುತ್ತಿರುವುದರಿಂದ, ಮುಂದಿನ ಸೂಚನೆ ಬರುವವರೆಗೂ ಪ್ರವಾಸಿಗರು ಜನಪ್ರಿಯ ತಾಣದಿಂದ ದೂರವಿರಲು ಅಧಿಕಾರಿಗಳು ಸೂಚಿಸಿದ್ದಾರೆ. ಪೂಂಚ್, ರಾಜೌರಿ, ಬಾರಾಮುಲ್ಲಾ, ಪುಲ್ವಾಮಾ ಮತ್ತು ಶೋಪಿಯಾನ್ ಜಿಲ್ಲೆಗಳವರೆಗೆ ವ್ಯಾಪಿಸಿರುವ ಪಿರ್ ಪಂಜಾಲ್ ಶ್ರೇಣಿಯ ದಟ್ಟ ಕಾಡುಗಳಲ್ಲಿ ಭದ್ರತಾ ಪಡೆಗಳು ವ್ಯಾಪಕ ಶೋಧ ನಡೆಸುತ್ತಿವೆ. ಶಂಕಿತ ಭಯೋತ್ಪಾದಕರು ಪ್ರದೇಶದಿಂದ ಪಲಾಯನ ಮಾಡುವುದನ್ನು ತಡೆಯಲು ಮತ್ತು ಸುತ್ತುವರಿದ ಪ್ರದೇಶವನ್ನು ಬಲಪಡಿಸಲು ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೂಂಚ್‌ನ ಎಲ್‌ಒಸಿ ಬಳಿ ಶಂಕಿತ ಪಾಕಿಸ್ತಾನದ ಡ್ರೋನ್ ಪತ್ತೆ; ಜಮ್ಮು-ಕಾಶ್ಮೀರದಲ್ಲಿ ಹೈ ಅಲರ್ಟ್
ಕಳೆದ ವಾರ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಯರ್ವಾನ್ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ, ಉಗ್ರರಿಗೆ ನೆರವು ನೀಡುತ್ತಿದ್ದ ಇಬ್ಬರು ಸಹಚರರನ್ನು (OGWs) ಬಂಧನಕ್ಕೊಳಪಡಿಸಿದ್ದಾರೆ. ಉಗ್ರ ಜಾಲವನ್ನು ಭೇದಿಸುವ ಹಾಗೂ ಪ್ರದೇಶದ ಶಾಂತಿ ಮತ್ತು ಭದ್ರತೆಗೆ ಧಕ್ಕೆ ತರುವ ಪ್ರಯತ್ನಗಳನ್ನು ತಡೆಯುವ ನಿಟ್ಟಿನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪೊಲೀಸರು, ಸೇನೆ ಮತ್ತು ಸಿಆರ್‌ಪಿಎಫ್ ಜಂಟಿಯಾಗಿ ಇಬ್ಬರು ಉಗ್ರರ ಸಹಚರರನ್ನು ಬಂಧಿಸಿದ್ದಾರೆ. ಇದೇ ವೇಳೆ ಅವರ ಬಳಿಯಿದ್ದ ಒಂದು ಪಿಸ್ತೂಲ್, 12 ಪಿಸ್ತೂಲ್ ಗುಂಡುಗಳು ಹಾಗೂ ಒಂದು ಹ್ಯಾಂಡ್ ಗ್ರೆನೇಡ್ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಬಿ ನಾಥ್‌ನ ರಾಜ್‌ಪೋರಾದ ಯರ್ವಾನ್ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳಿಗೆ ದೊರೆತ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಸುತ್ತುವರಿದು ಶೋಧ ಕಾರ್ಯಾಚರಣೆ (CASO) ಆರಂಭಿಸಲಾಗಿತ್ತು. ಕಾರ್ಯಾಚರಣೆ ವೇಳೆ ಯಾರ್ವಾನ್ ಅರಣ್ಯ ಪ್ರದೇಶದಿಂದ ಸಿಬಿ ನಾಥ್ ಗ್ರಾಮದ ಕಡೆಗೆ ಇಬ್ಬರು ವ್ಯಕ್ತಿಗಳು ಅನುಮಾನಾಸ್ಪದವಾಗಿ ಬರುತ್ತಿರುವುದನ್ನು ಜಂಟಿ ತಂಡ ಗಮನಿಸಿದೆ. ಕೂಡಲೇ ಎಚ್ಚೆತ್ತ ಭದ್ರತಾ ಸಿಬ್ಬಂದಿ ಇಬ್ಬರನ್ನೂ ಸುತ್ತುವರಿದು ವಶಕ್ಕೆ ಪಡೆದಿದ್ದಾರೆ.