ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅಯೋಧ್ಯೆ ರಾಮ ಮಂದಿರದ ಹೆಸರಿನಲ್ಲಿ ನಕಲಿ ಪ್ರಸಾದ ಮಾರಾಟ: ಅಮೆಜಾನ್‌ಗೆ ಭಾರಿ ದಂಡ

Ayodhya Ram Mandir: ಶ್ರೀರಾಮ ಜನ್ಮ ಭೂಮಿಯ ಪ್ರಸಾದವೆಂದು ಬಿಂಬಿಸಿ ಅಮೆಜಾನ್‌ ಇ ಕಾರ್ಟ್‌ನಲ್ಲಿ ನಕಲಿ ಪ್ರಸಾದ ಮಾರಾಟ ಮಾಡಲಾಗುತ್ತಿದ್ದು, ಈ ಕುರಿತು ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ ಕ್ರಮ ಕೈಗೊಂಡಿದೆ. ಸುಳ್ಳು ಪ್ರಚಾರ ಹಾಗೂ ಜನರ ದಿಕ್ಕು ತಪ್ಪಿಸಿದ ಸಲುವಾಗಿ ಅಮೆಜಾನ್‌ಗೆ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ 1 ಲಕ್ಷ ರೂ. ದಂಡವನ್ನು ವಿಧಿಸಿದೆ.

ಅಯೋಧ್ಯೆ ರಾಮ ಮಂದಿರದ ಹೆಸರಿನಲ್ಲಿ ನಕಲಿ ಪ್ರಸಾದ ಮಾರಾಟ

ಅಯೋಧ್ಯೆ ರಾಮಂದಿರದ ಹೆಸರಿನಲ್ಲಿ ನಕಲಿ ಪ್ರಸಾದ ಮಾರಾಟ -

Vishakha Bhat Heggar
Vishakha Bhat Heggar Aug 19, 2026 5:09 PM

ನವದೆಹಲಿ: ದೇವರು ಹಾಗೂ ಭಕ್ತಿ ಕೇಂದ್ರಗಳ ಹೆಸರಿನಲ್ಲಿ ಜನರನ್ನು ಮೋಸಗೊಳಿಸುವುದನ್ನು ದಿನನಿತ್ಯ ನೋಡುತ್ತಿರುತ್ತೇವೆ. ಅಂತಹುದರಲ್ಲಿ ಕೋಟ್ಯಾಂತರ ಭಕ್ತರ ಶ್ರದ್ಧಾಕೇಂದ್ರವಾಗಿರುವ ಅಯೋಧ್ಯೆಯ(Ayodhya Ram Mandir) ರಾಮ ಮಂದಿರ ಹಾಗೂ ಶ್ರೀರಾಮನ ಹೆಸರು ಕೇಳಿದರೆ ಸಾಕು ಜನರು ಭಕ್ತಿ ಪರವಶರಾಗುತ್ತಾರೆ. ಆದರೆ, ಭಕ್ತರ ಈ ಅಪಾರ ನಂಬಿಕೆ ಮತ್ತು ಶ್ರದ್ಧೆಯನ್ನೇ ಬಂಡವಾಳ ಮಾಡಿಕೊಂಡು ಆನ್‌ಲೈನ್‌ನಲ್ಲಿ ನಕಲಿ ಪ್ರಸಾದ ಮಾರಾಟ ಮಾಡಲು ಹೊರಟ ದೈತ್ಯ ಇ-ಕಾಮರ್ಸ್ ಅಮೆಜಾನ್(Amazon) ಸಂಸ್ಥೆಗೆ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ ಭಾರಿ ಶಾಕ್ ನೀಡಿದೆ. ಶ್ರೀರಾಮ ಜನ್ಮಭೂಮಿ ಅಧಿಕೃತ ಪ್ರಸಾದ ಎಂದು ಸುಳ್ಳು ಹೇಳಿ ತುಪ್ಪದ ಲಾಡು ಹಾಗೂ ಹಾಲಿನ ಪೇಡಾಗಳನ್ನು ಮಾರಾಟಕ್ಕೆ ಇಟ್ಟಿದ್ದಕ್ಕಾಗಿ ಅಮೆಜಾನ್‌ಗೆ 1 ಲಕ್ಷ ರೂ. ದಂಡ ವಿಧಿಸಲಾಗಿದೆ.

ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಮಂದಿರದ ಪ್ರಾಣಪ್ರತಿಷ್ಠಾಪನೆ ಸಂದರ್ಭದಲ್ಲಿ ಅಮೆಜಾನ್ ಆನ್‌ಲೈನ್ ಪ್ಲಾಟಫಾರ್ಮ್ನಲ್ಲಿ ಕೆಲವು ಮಾರಾಟಗಾರರು ಸಿಹಿ ತಿಂಡಿಗಳನ್ನು ಮಂದಿರದ ಅಧಿಕೃತ ಪ್ರಸಾದ ಎಂದು ಪಟ್ಟಿ ಮಾಡಿದ್ದರು.

ಯಾವ ಯಾವ ಸ್ವಿಟ್‌ಗಳು

ಶ್ರೀರಾಮ ಜನ್ಮಭೂಮಿ ಅಯೋಧ್ಯೆ ಪ್ರಸಾದ್- ಆಟಾ ಲಾಡು

ಅಯೋಧ್ಯೆ ರಾಮಂದಿರ ಪ್ರಸಾದ್ ಮಿಲ್ಕ್ ಪೇಡಾ

ದೇಸಿ ತುಪ್ಪದ ಲಾಡು

ಖೋಯಾ ಪೇಡಾ ಎಂಬ ಹೆಸರಿನಲ್ಲಿ ಈ ಸ್ವಿಟ್‌ಗಳನ್ನು ಆನ್‌ಲೈನ್‌ನಲ್ಲಿ ಮಾರಾಟಮಾಡಲಾಗುತಿತ್ತು. ಈ ಸಿಹಿ ತಿಂಡಿಗಳಿಗೂ ಅಯೋಧ್ಯೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟಿಗೂ ಯಾವುದೇ ಸಂಬಂಧವಿಲ್ಲ. ಆದರೂ ಭಕ್ತರು ಇವುಗಳನ್ನು ಮಂದಿರದ ನೈಜ ಪ್ರಸಾದವೆಂದೇ ನಂಬಿ ಖರೀದಿಸುವಂತೆ ದಾರ ತಪ್ಪಿಸಲಾಗಿತ್ತು.

ಶ್ರೀರಾಮ ಜನ್ಮಭೂಮಿ ಮಂದಿರದ ಹೆಸರನ್ನು ಬಳಸಿ ಗ್ರಾಹಕರನ್ನು ಹಾದಿತಪ್ಪಿಸುವ ಪ್ರಸಾದದ ಜಾಹೀರಾತುಗಳನ್ನು ಗಮನಿಸಿದ ಕೇಂದ್ರದ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ, ಅಮೆಜಾನ್ ಸಂಸ್ಥೆಗೆ ನೋಟಿಸ್ ಜಾರಿಗೊಳಿಸಿತ್ತು. ತಮ್ಮ ವೆಬ್‌ಸೈಟ್‌ನಲ್ಲಿ ಯಾವುದೇ ವಸ್ತುವನ್ನು ಮಾರಾಟಕ್ಕೆ ನೀಡುವಾಗ ಅದರ ನೈಜ್ಯತೆಯನ್ನು ಪರಿಶೀಲಿಸುವುದು ಅಮೆಜಾನ್ ಸಂಸ್ಥೆಯ ಜವಾಬ್ದಾರಿಯಾಗಿದೆ. ನಕಲಿ ಹೇಳಿಕೆಗಳನ್ನು ನೀಡಿ ಶ್ರೀರಾಮ ಜನ್ಮಭೂಮಿ ಪ್ರಸಾದ ಎಂಬ ಹೆಸರಿನಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡುವುದು ಗ್ರಾಹಕರ ಸಂರಕ್ಷಣಾ ಕಾಯ್ದೆ 2019 ರ ನೇರ ಉಲ್ಲಂಘಣೆಯಾಗಿದೆ ಎಂದು ಸಿಸಿಪಿಎ ತಿಳಿಸಿದೆ. ಈ ಹಿನ್ನಲೆಯಲ್ಲಿ ಅಮೆಜಾನ್‌ಗೆ 1 ಲಕ್ಷ ರೂ. ದಂಡ ವಿಧಿಸಲಾಗಿದ್ದು, ಇಂತಹ ಮೋಸದ ಲಿಸ್ಟಿಂಗ್‌ಗಳನ್ನು ತಕ್ಷಣವೇ ತಮ್ಮ ವೆಬ್‌ಸೈಟ್‌ನಿಂದ ಸಂಪೂರ್ಣವಾಗಿ ತೆಗೆದುಹಾಕಲು ಆದೇಶಿಸಿದೆ.

ಅಯೋಧ್ಯೆ ರಾಮ ಮಂದಿರ ದೇಣಿಗೆ ಕಳವು ಪ್ರಕರಣ: ಟ್ರಸ್ಟ್‌ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್‌ಗೆ ಕ್ಲೀನ್‌ಚಿಟ್

ಸ್ಪಷ್ಟನೆ ನೀಡಿದ ಅಮೆಜಾನ್

ದಂಡದ ಆದೇಶ ಹೊರಬಿದ್ದ ಬೆನ್ನಲೇ ಸ್ಪಷ್ಟನೆ ನೀಡಿರುವ ಅಮೆಜಾನ್, ತಮ್ಮ ಪ್ಲಾಟ್‌ಫಾರ್ಮನಲ್ಲಿ ತೃತೀಯ ಪಕ್ಷದ ಮಾರಾಟಗಾರರು ನಿಯಮಗಳನ್ನು ಉಲ್ಲಂಘಿಸಿ ಮಾರಾಟ ಮಾಡುತ್ತಿರುವವರನ್ನು ಪಟ್ಟಿ ಮಾಡಿದ್ದಾರೆ ಹಾಗೂ ನೋಟಿಸ್ ಸಿಕ್ಕ ತಕ್ಷಣವೇ ಅಂತಹ ಎಲ್ಲಾ ಅಕ್ರಮ ಉತ್ಪನ್ನಗಳನ್ನು ಡಿಲೀಟ್ ಮಾಡಲಾಗಿದೆ ಎಂದು ತಿಳಿಸಿದೆ.

ಇತ್ತಿಚೀಗೆ ಅಯೋಧ್ಯೆ ರಾಮ ಮಂದಿರಕ್ಕೆ ಬಂದಿದ್ದ ದೇಣಿಗೆ ಹಣ ಮತ್ತು ಚಿನ್ನ, ಬೆಳ್ಳಿ ವಸ್ತುಗಳ ದುರುಪಯೋಗವು ದೇಶಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಪ್ರತಿ ದಿನ ಸುಮಾರು 1ರಿಂದ 1.5 ಲಕ್ಷ ಜನ ಭಕ್ತರು ಶ್ರೀರಾಮನ ದರ್ಶನಕ್ಕೆ ದೇವಸ್ಥಾನಕ್ಕೆ ಆಗಮಿಸುತ್ತಾರೆ.