ಪಂಜಾಬ್‌ನಲ್ಲಿ ಸಾರ್ವಜನಿಕವಾಗಿ ಡ್ರಗ್ಸ್ ಸೇವಿಸಿದ ಬಾಲಕರು; ಮಕ್ಕಳ ಸ್ಥಿತಿ ಕಂಡು ಬೆದರಿದ ಸ್ಥಳೀಯರು, ವಿಡಿಯೋ ನೋಡಿ
Viral Video: ಪಂಜಾಬ್ ನ ಕಪುರ್ತಲಾ ಜಿಲ್ಲೆಯ ಸುಭಾನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆತಂಕಾರಿ ಘಟನೆಯೊಂದು ಕಂಡು ಬಂದಿದೆ. ತೀವ್ರ ಬಡತನದಲ್ಲಿದ್ದರೂ 9 ಮತ್ತು 12 ವರ್ಷ ವಯಸ್ಸಿನ ಇಬ್ಬರು ಮಕ್ಕಳು ಸಿಂಥೆಟಿಕ್ ಡ್ರಗ್ಸ್ ಚಟಕ್ಕೆ ಒಳಗಾಗಿರುವ ವಿಡಿಯೋವೊಂದು ವೈರಲ್ ಆಗಿದೆ.
ಇಂಟರ್ ನೆಟ್ ಚಿತ್ರ -
ಪಂಜಾಬ್,ಅ.23: ಇಂದು ಮಕ್ಕಳ ಬಗ್ಗೆ ಪೋಷಕರು ಎಷ್ಟು ಜಾಗೃತಿ ವಹಿಸಿದರೂ ಸಾಲದು, ಆನ್ ಲೈನ್ ಗೇಮ್, ಮದ್ಯವ್ಯಸನ, ಡ್ರಗ್ಸ್ ಹೀಗೆ ಕೆಟ್ಟ ಚಟಕ್ಕೆ ಬೀಳುತ್ತಾರೆ. ಇದೀಗ ಪಂಜಾಬ್‌ನ ಕಪುರ್ತಲಾ ಜಿಲ್ಲೆಯ ಸುಭಾನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆತಂಕಾರಿ ಘಟನೆಯೊಂದು ಕಂಡು ಬಂದಿದೆ. ತೀವ್ರ ಬಡತನದಲ್ಲಿದ್ದರೂ 9 ಮತ್ತು 12 ವರ್ಷ ವಯಸ್ಸಿನ ಇಬ್ಬರು ಮಕ್ಕಳು ಸಿಂಥೆಟಿಕ್ ಡ್ರಗ್ಸ್ ಚಟಕ್ಕೆ ಒಳಗಾಗಿರುವ ವಿಡಿಯೋವೊಂದು ವೈರಲ್ (Viral News) ಆಗಿದೆ.
ಈ ದೃಶ್ಯವು ರಾಜ್ಯದಲ್ಲಿನ ಮಾದಕವಸ್ತು ಬಿಕ್ಕಟ್ಟಿನ ಬಗ್ಗೆ ಹೊಸ ಕಳವಳಗಳನ್ನು ಹುಟ್ಟು ಹಾಕಿದೆ. ಟಿನ್ ಫಾಯಿಲ್ ಮತ್ತು ಲೈಟರ್ ಬಳಸಿ ಮಕ್ಕಳು ನಶೆಯಲ್ಲಿ ತೇಲುತ್ತಿರುವ ವಿಡಿಯೋ ಭಾರೀ ವೈರಲ್ ಆಗಿತ್ತು. ಈ ದೃಶ್ಯ ವೈರಲ್ ಆದ ಬೆನ್ನಲ್ಲೇ ಪೊಲೀಸರು ತೀವ್ರ ಕಾರ್ಯಚರಣೆ ನಡೆಸಿದ್ದಾರೆ.
ವಿಡಿಯೋ ನೋಡಿ:
This horrifying sight is that of a 10-year-old child from Kapurthala snorting drugs with a tin foil and a lighter in hand like an expert… Drugs isn’t just a crisis anymore, it is the complete, systemic destruction of Punjab’s future under your watch, Guru Dokhi @BhagwantMann ! That’s why we have been repeatedly saying that @AamAadmiParty launched 'Yudh Youth Virudh' in Punjab and today it’s seeped down to this level! @AAPPunjab is giving a free rein to the drug mafia to target our most vulnerable, impoverished children. This is an unforgivable betrayal of Punjab’s Mawan-Dhiyan! #PunjabDrugMenace
— Harsimrat Kaur Badal (@HarsimratBadal_) October 23, 2026
ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋ ವೊಂದರಲ್ಲಿ, ಮಗುವೊಂದು ಮಾದಕ ದ್ರವ್ಯ ಅಥವಾ ಅಮಲು ಪದಾರ್ಥವನ್ನು ಸೇವಿಸುತ್ತಿರುವುದು ಕಂಡುಬಂದಿದೆ. ಈ ವಿಡಿಯೋ ಬೆನ್ನಲ್ಲೆ ಎಚ್ಚೆತ್ತ ಕಪುರ್ತಲಾ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಆ ಬಾಲಕರನ್ನು ರಕ್ಷಿಸಿದ್ದಾರೆ. ಮಕ್ಕಳನ್ನು ಈ ಚಟಕ್ಕೆ ಬೀಳಿಸಿದವರು ಯಾರೆಂದು ತನಿಖೆ ನಡೆಸಿದಾಗ ಹೊಶಿಯಾರ್‌ಪುರದ ನಿವಾಸಿ ಪರಮ್‌ಜಿತ್ ಸಿಂಗ್ (32) ಎಂಬ ಡ್ರಗ್ಸ್ ಕಳ್ಳಸಾಗಣೆದಾರ ಈ ಮಕ್ಕಳಿಗೆ ಬಲವಂತವಾಗಿ ನಶೆ ನೀಡಿದ್ದಾನೆ.
ಸದ್ಯ ಆತನನ್ನು ಪತ್ತೆಹಚ್ಚಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಶೆಯ ದಾಸರಾಗಿ ರುವ ಆ ಬಾಲಕರನ್ನು ತಕ್ಷಣವೇ ಸ್ಥಳೀಯ ಸಿವಿಲ್ ಆಸ್ಪತ್ರೆ ಹಾಗೂ ನಶಾಮುಕ್ತಿ ಕೇಂದ್ರಕ್ಕೆ ದಾಖಲಿಸಿ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ.