ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Goa Stampede: ಗೋವಾದ ಜಾತ್ರೆಯಲ್ಲಿ ಕಾಲ್ತುಳಿತ, 7 ಜನ ಸಾವು, 50 ಮಂದಿಗೆ ಗಾಯ

ಈ ಕಾರ್ಯಕ್ರಮದಲ್ಲಿ 'ಧೋಂಡ್‌ಗಳು' ಎಂದು ಕರೆಯಲಾಗುವ ಭಕ್ತರು ನಿಗಿನಿಗಿ ಉರಿಯುತ್ತಿರುವ ಕೆಂಡದ ಹಾಸಿಗೆಯ ಮೇಲೆ ಬರಿಗಾಲಿನಲ್ಲಿ ನಡೆಯುತ್ತಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಜನರ ಒಂದು ಗುಂಪು ನಿಯಂತ್ರಣ ಕಳೆದುಕೊಂಡು ನೂಕಾಡಿ ತಳ್ಳಾಡಿ ಕಾಲ್ತುಳಿತ (Goa Stampede) ಸಂಭವಿಸಿತು.

ಗೋವಾದ ಜಾತ್ರೆಯಲ್ಲಿ ಕಾಲ್ತುಳಿತ, 7 ಜನ ಸಾವು, 50 ಮಂದಿಗೆ ಗಾಯ

ಹರೀಶ್‌ ಕೇರ ಹರೀಶ್‌ ಕೇರ May 3, 2025 8:10 AM

ಪಣಜಿ: ಗೋವಾದ ಶಿರ್ಗಾಂವ್‌ ಗ್ರಾಮದಲ್ಲಿ ವಾರ್ಷಿಕ ದೇವಿ ಲೈರಾಯ್ ಜಾತ್ರೆಯ (Shirgao Jatra) ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ (Goa Stampede) ಕನಿಷ್ಠ ಏಳು ಜನರು ಸಾವನ್ನಪ್ಪಿದ್ದಾರೆ ಮತ್ತು 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಶನಿವಾರ ಮುಂಜಾನೆ ಈ ಘಟನೆ ಸಂಭವಿಸಿದೆ. ಈ ದೇವಾಲಯದಲ್ಲಿ ಶತಮಾನಗಳಷ್ಟು ಹಳೆಯದಾದ ವಾರ್ಷಿಕ ಆಚರಣೆಯನ್ನು ವೀಕ್ಷಿಸಲು ಮತ್ತು ಅದರಲ್ಲಿ ಭಾಗವಹಿಸಲು ಸಾವಿರಾರು ಭಕ್ತರು ದೇವಾಲಯಕ್ಕೆ ಆಗಮಿಸಿದ್ದರು. ಆಗ ಈ ಕಾಲ್ತುಳಿತ ಸಂಭವಿಸಿದೆ.

ಈ ಕಾರ್ಯಕ್ರಮದಲ್ಲಿ 'ಧೋಂಡ್‌ಗಳು' ಎಂದು ಕರೆಯಲಾಗುವ ಭಕ್ತರು ನಿಗಿನಿಗಿ ಉರಿಯುತ್ತಿರುವ ಕೆಂಡದ ಹಾಸಿಗೆಯ ಮೇಲೆ ಬರಿಗಾಲಿನಲ್ಲಿ ನಡೆಯುತ್ತಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಜನರ ಒಂದು ಗುಂಪು ನಿಯಂತ್ರಣ ಕಳೆದುಕೊಂಡು ನೂಕಾಡಿ ತಳ್ಳಾಡಿ ಕಾಲ್ತುಳಿತ ಸಂಭವಿಸಿತು. ದೇವಾಲಯದಲ್ಲಿದ್ದ ಸ್ಥಳೀಯರು ಮತ್ತು ಸ್ವಯಂಸೇವಕರು ಜನರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದರು.

ಶ್ರೀ ಲೈರಾಯ್‌ ಯಾತ್ರೆಯನ್ನು ಪ್ರತಿ ವರ್ಷ ಉತ್ತರ ಗೋವಾದಲ್ಲಿ ನಡೆಸಲಾಗುತ್ತದೆ, ಇದು 50,000ಕ್ಕೂ ಹೆಚ್ಚು ಭಕ್ತರನ್ನು ಆಕರ್ಷಿಸುತ್ತದೆ. ದೇವಾಲಯಕ್ಕೆ ಸಾಗುವ ಮಾರ್ಗದಲ್ಲಿ ಒಂದು ಹಂತದಲ್ಲಿ, ಕೆಳಮುಖವಾದ ಇಳಿಜಾರಿನ ಕಾರಣದಿಂದಾಗಿ, ಜನಸಂದಣಿಯು ಏಕಕಾಲದಲ್ಲಿ ವೇಗವಾಗಿ ಚಲಿಸಲು ಪ್ರಾರಂಭಿಸಿದಾಗ ಕಾಲ್ತುಳಿತ ಸಂಭವಿಸಿದೆ ಎನ್ನಲಾಗಿದೆ.

ಇದನ್ನೂ ಓದಿ: Viral Video: ಗೋವಾದ ರಸ್ತೆಯಲ್ಲಿ ಯುವಕರ ಪುಂಡಾಟ; ಸ್ಥಳೀಯರಿಂದ ಫುಲ್‌ ಕ್ಲಾಸ್‌- ವಿಡಿಯೊ ನೋಡಿ!