Fact Check: ಭಾರತೀಯ ಅಂಚೆಯಿಂದ ಉಡುಗೊರೆ; ಈ ಸುದ್ದಿ ನಿಜವೇ? ಕೇಂದ್ರ ನೀಡಿದ ಎಚ್ಚರಿಕೆ ಏನು?
ಭಾರತೀಯ ಅಂಚೆ ಇಲಾಖೆಯಿಂದ ಉಡುಗೊರೆ, ಬಹುಮಾನಗಳನ್ನು ನೀಡಲಾಗುತ್ತಿದೆ ಎನ್ನುವ ಸುದ್ದಿಗಳು ವೈರಲ್ ಆಗುತ್ತಿದೆ. ಈ ಕುರಿತು ಪತ್ರಿಕಾ ಮಾಹಿತಿ ಬ್ಯೂರೋದ ಫ್ಯಾಕ್ಟ್ ಚೆಕ್ ಘಟಕವು ತನಿಖೆ ನಡೆಸಿದ್ದು, ಇದೊಂದು ಸುಳ್ಳು ಸುದ್ದಿ ಎನ್ನುವ ಸ್ಪಷ್ಟನೆಯನ್ನು ನೀಡಿದೆ. ಭಾರತೀಯ ಅಂಚೆಯು ಅಂತಹ ಯಾವುದೇ ಯೋಜನೆಯನ್ನು ನಡೆಸುತ್ತಿಲ್ಲ ಎಂದು ತಿಳಿಸಿದ್ದು, ಜನರು ಇಂತಹ ಸುಳ್ಳು ಸುದ್ದಿಯ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆಯನ್ನು ನೀಡಿದೆ.
ಸಂಗ್ರಹ ಚಿತ್ರ -
ನವದೆಹಲಿ: ಭಾರತೀಯ ಅಂಚೆ (India post) ಇಲಾಖೆ ಹೆಸರಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಇತ್ತೀಚೆಗೆ ಸುಳ್ಳು ಸುದ್ದಿಯೊಂದು ವೈರಲ್ (viral news) ಆಗುತ್ತಿದೆ. ಭಾರತೀಯ ಅಂಚೆ ಇಲಾಖೆಯಿಂದ ಉಡುಗೊರೆ, ಬಹುಮಾನಗಳನ್ನು (gifts) ನೀಡಲಾಗುತ್ತಿದೆ ಎನ್ನುವ ವೈರಲ್ ಸುದ್ದಿಯ ಬಗ್ಗೆ ತನಿಖೆ ನಡೆಸಿರುವ ಪತ್ರಿಕಾ ಮಾಹಿತಿ ಬ್ಯೂರೋದ (press information bureau) ಫ್ಯಾಕ್ಟ್ ಚೆಕ್ (Fact check) ಘಟಕವು ಇದೊಂದು ಸುಳ್ಳು ಸುದ್ದಿ ಎಂದು ಸ್ಪಷ್ಟಪಡಿಸಿದೆ. ಭಾರತೀಯ ಅಂಚೆ ವಿಭಾಗವು ಇಂತಹ ಯಾವುದೇ ಯೋಜನೆಯನ್ನು ಹೊಂದಿಲ್ಲ ಎಂದು ಹೇಳಿದೆ.
ಭಾರತೀಯ ಅಂಚೆ ವಿಭಾಗವು ಉಡುಗೊರೆಗಳು ಮತ್ತು ಬಹುಮಾನಗಳನ್ನು ನೀಡುತ್ತಿದೆ ಎಂದು ಸುದ್ದಿಯೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಈ ಕುರಿತು ಪತ್ರಿಕಾ ಮಾಹಿತಿ ಬ್ಯೂರೋದ ಫ್ಯಾಕ್ಟ್ ಚೆಕ್ ಘಟಕವು ತನಿಖೆಯನ್ನು ನಡೆಸಿ ಶನಿವಾರ ಇದೊಂದು ಸುಳ್ಳು ಸುದ್ದಿ ಎಂದು ಸ್ಪಷ್ಟಪಡಿಸಿದೆ.
25 ಲಕ್ಷ ರುಪಾಯಿ ಸಂಬಳದ ಜಾಬ್ ಆಫರ್ ತಿರಸ್ಕರಿಸಿ ಓಲಾ ಚಾಲಕನಾದ ಯುವಕ; ಮೂರೇ ವರ್ಷದಲ್ಲಿ 5 ಕಾರ್‌ಗಳ ಒಡೆಯ
ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚಾಗಿ ಹಂಚಿಕೊಳ್ಳಲಾಗುತ್ತಿರುವ ಇಂತಹ ಸುಳ್ಳು ಸಂದೇಶಗಳ ಬಗ್ಗೆ ಜನರು ಜಾಗೃತರಾಗಿರಬೇಕು. ಲಿಂಕ್‌ಗಳ ಮೇಲೆ ಕ್ಲಿಕ್ ಮಾಡುವ ಮೊದಲು ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು ಎಂದು ತಿಳಿಸಿದೆ.
ಅಂಚೆ ಇಲಾಖೆ ಹೆಸರಿನಲ್ಲಿ ವೈರಲ್ ಆಗುತ್ತಿರುವ ಈ ಸುದ್ದಿ ಸಂಪೂರ್ಣ ಸುಳ್ಳು. ಭಾರತೀಯ ಅಂಚೆ ವಿಭಾಗವು ಅಂತಹ ಯಾವುದೇ ಯೋಜನೆಯನ್ನು ನಡೆಸುತ್ತಿಲ್ಲ ಎಂದು ತನ್ನ ಎಕ್ಸ್ ಖಾತೆಯಲ್ಲಿ ತಿಳಿಸಿದೆ.
A message circulating on social media claims that India Post is offering gifts or rewards under 'Dak Seva Gifts'#PIBFactCheck:
— PIB Fact Check (@PIBFactCheck) May 30, 2026
❌ This claim is #Fake
➡️ @IndiaPostOffice has no connection with any such “Dak Seva Gifts” offer, reward scheme, or lucky draw
✅ Do not click… pic.twitter.com/GBj9RfPJZO
ಪಿಐಬಿ ಫ್ಯಾಕ್ಟ್ ಚೆಕ್ ನ ಎಕ್ಸ್ ಖಾತೆಯಲ್ಲಿ ಅದು ಮಾಹಿತಿಯನ್ನು ಹಂಚಿಕೊಂಡಿದ್ದು, 'ಡಾಕ್ ಸೇವಾ ಉಡುಗೊರೆಗಳು' ಹೆಸರಿನಲ್ಲಿ ಸುಳ್ಳು ಬಹುಮಾನಗಳ ಭರವಸೆ ನೀಡುವ ಸಂದೇಶದ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ. ಈ ಕೊಡುಗೆ, ಬಹುಮಾನ ಯೋಜನೆ ಅಥವಾ ಲಕ್ಕಿ ಡ್ರಾಕ್ಕೂ ಭಾರತ ಅಂಚೆ ಕಚೇರಿಗೆ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ.
ಅನುಮಾನಾಸ್ಪದ ಲಿಂಕ್‌ಗಳು ಅಥವಾ ವೆಬ್‌ಪುಟಗಳನ್ನು ತೆರೆಯಬೇಡಿ. ಯಾರೊಂದಿಗೂ ಬ್ಯಾಂಕ್ ವಿವರಗಳು, ಒಂದು ಬಾರಿಯ ಪಾಸ್‌ವರ್ಡ್‌ಗಳು ಅಥವಾ ಸರ್ಕಾರಿ ಗುರುತಿನ ಸಂಖ್ಯೆಗಳಂತಹ ಸೂಕ್ಷ್ಮ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬಾರದು ಎಂದು ತಿಳಿಸಿದೆ.
ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ ಅನುಮಾನಾಸ್ಪದ ಲಿಂಕ್‌ಗಳು, ಸಂದೇಶಗಳು, ಫೋಟೋಗಳು ಅಥವಾ ವಿಡಿಯೋಯೊಗಳು ಬಂದರೆ ತಕ್ಷಣ ಅವುಗಳನ್ನು ನೇರವಾಗಿ ಪಿಐಬಿ ಫ್ಯಾಕ್ಟ್ ಚೆಕ್ ತಂಡಕ್ಕೆ ವರದಿ ಮಾಡುವಂತೆ ತಿಳಿಸಿದೆ.
ಹೀಗೊಂದು ಕೋತಿ ಚೇಷ್ಟೆ: ವಕೀಲರ ಬ್ಯಾಗ್ ಕಿತ್ತುಕೊಂಡು 2 ಲಕ್ಷ ರುಪಾಯಿ ನೋಟಿನ ಮಳೆಗೈದ ಮಂಗ
2022ರಲ್ಲಿ ಕೂಡ ಭಾರತೀಯ ಅಂಚೆ ಹೆಸರಲ್ಲಿ ಸುಳ್ಳು ಸುದ್ದಿಯೊಂದನ್ನು ವೈರಲ್ ಮಾಡಲಾಗಿತ್ತು. ಆಗ ಸರ್ಕಾರವು ಸಮೀಕ್ಷೆಗಳ ಆಧಾರದ ಮೇಲೆ ಭಾರತೀಯ ಅಂಚೆ ಸಬ್ಸಿಡಿಗಳು, ಬೋನಸ್‌ಗಳು ಅಥವಾ ಬಹುಮಾನಗಳನ್ನು ಘೋಷಿಸುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು. ಈ ಕುರಿತು ಅಧಿಸೂಚನೆಯನ್ನು ಹೊರಡಿಸಿ, ಭಾರತೀಯ ಅಂಚೆಯು ಸಮೀಕ್ಷೆಗಳ ಆಧಾರದ ಮೇಲೆ ಸಬ್ಸಿಡಿ, ಬೋನಸ್ ಅಥವಾ ಬಹುಮಾನಗಳನ್ನು ಘೋಷಿಸುವಂತಹ ಯಾವುದೇ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲ. ಅಂತಹ ಸಂದೇಶ ಅಥವಾ ಇಮೇಲ್‌ಗಳು ಬಂದರೆ ಅವು ನಕಲಿಯಾಗಿರುತ್ತದೆ. ಇದಕ್ಕೆ ಪ್ರತಿಕ್ರಿಯಿಸಬಾರದು ಮತ್ತು ಯಾರೊಂದಿಗೂ ಹಂಚಿಕೊಳ್ಳಬಾರದು ಎಂದು ತಿಳಿಸಲಾಗಿತ್ತು.