ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಲಕ್ಷದ್ವೀಪದ ಬಳಿ ಭರ್ಜರಿ ಕಾರ್ಯಾಚರಣೆ: 3,000 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ, 5 ಪಾಕಿಸ್ತಾನಿ ಪ್ರಜೆಗಳ ಬಂಧನ

ಅರಬ್ಬಿ ಸಮುದ್ರದ ಲಕ್ಷದ್ವೀಪದ ಪಶ್ಚಿಮ ಕರಾವಳಿ ಭಾಗದಲ್ಲಿ ಭಾರತೀಯ ಕರಾವಳಿ ರಕ್ಷಕ ಪಡೆ (ICG) ಮತ್ತು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ATS) ಜಂಟಿ ಕಾರ್ಯಾಚರಣೆ ನಡೆಸಿ, 510 ಕೆಜಿ ಅತ್ಯಂತ ದುಬಾರಿ ಮಾದಕ ವಸ್ತುವನ್ನು ವಶಪಡಿಸಿಕೊಂಡಿವೆ. ಈ ಪ್ರಕರಣದಲ್ಲಿ ಐವರು ಪಾಕಿಸ್ತಾನಿ ಪ್ರಜೆಗಳನ್ನು ಬಂಧಿಸಲಾಗಿದೆ.

ಲಕ್ಷದ್ವೀಪದ ಬಳಿ ಭರ್ಜರಿ ಕಾರ್ಯಾಚರಣೆ: 3,000 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ

ಲಕ್ಷದ್ವೀಪದ ಬಳಿ ಭರ್ಜರಿ ಕಾರ್ಯಾಚರಣೆ ನಡೆಸಿ 3,000 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಲಾಗಿದೆ -

Vishakha Bhat Heggar
Vishakha Bhat Heggar Sep 30, 2026 1:13 PM

ಗಾಂಧೀನಗರ: ಅರಬ್ಬಿ ಸಮುದ್ರದ ಲಕ್ಷದ್ವೀಪದ ಪಶ್ಚಿಮ ಕರಾವಳಿ ಭಾಗದಲ್ಲಿ ಭಾರತೀಯ ಕರಾವಳಿ ರಕ್ಷಕ ಪಡೆ (ICG) ಮತ್ತು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ATS) ಜಂಟಿ ಕಾರ್ಯಾಚರಣೆ ನಡೆಸಿ, 510 ಕೆಜಿ ಅತ್ಯಂತ ದುಬಾರಿ ಮಾದಕ ವಸ್ತುವನ್ನು ವಶಪಡಿಸಿಕೊಂಡಿವೆ. ಈ ಪ್ರಕರಣದಲ್ಲಿ ಐವರು ಪಾಕಿಸ್ತಾನಿ ಪ್ರಜೆಗಳನ್ನು (Pakistan) ಬಂಧಿಸಲಾಗಿದೆ. ಗುಪ್ತಚರ ಮಾಹಿತಿಯ ಆಧಾರದ ಮೇಲೆ, ಕರಾವಳಿ (Drugs seized near Lakshadweep) ರಕ್ಷಣಾ ಪಡೆಯು ತನ್ನ ವಾಯು ಮತ್ತು ನೌಕಾ ಕಣ್ಗಾವಲು ವ್ಯವಸ್ಥೆಗಳನ್ನು ಬಳಸಿಕೊಂಡು ವ್ಯಾಪಕ ಶೋಧ ಕಾರ್ಯಾಚರಣೆ ನಡೆಸಿತು. ಸೆಪ್ಟೆಂಬರ್ 25 ರಂದು, ಅಧಿಕಾರಿಗಳು ರೇಡಾರ್‌ಗಳು ಮತ್ತು ವಿಮಾನಗಳನ್ನು ಬಳಸಿ ಇರಾನ್ ಮೂಲದ ಅನುಮಾನಾಸ್ಪದ ದೋಣಿಯೊಂದರ ಚಲನವಲನಗಳನ್ನು ಗಮನಿಸಿದ್ದರು.

ರಕ್ಷಣಾ ಪಡೆಯ ಹಡಗುಗಳು ತಕ್ಷಣವೇ ಅದನ್ನು ಬೆನ್ನಟ್ಟಿ, ಸುತ್ತುವರಿದು ದೋಣಿಯನ್ನು ವಶಕ್ಕೆ ಪಡೆಯಿತು. ನಂತರ ನಡೆಸಿದ ಕೂಲಂಕಷ ಪರಿಶೀಲನೆಯಲ್ಲಿ, ಹೆರಾಯಿನ್ ಮತ್ತು ಮೆಥಾಂಫೆಟಮೈನ್‌ನಂತಹ ಮಾರಣಾಂತಿಕ ಮಾದಕವಸ್ತುಗಳು ಸೇರಿದಂತೆ ಹಲವು ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಭದ್ರತಾ ಪಡೆಗಳು ಅಕ್ರಮವಾಗಿ ಪ್ರಯಾಣಿಸುತ್ತಿದ್ದ ಪಾಕಿಸ್ತಾನಿ ಪ್ರಜೆಗಳನ್ನು ಅಧಿಕೃತವಾಗಿ ವಶಕ್ಕೆ ತೆಗೆದುಕೊಂಡವು. ವಶಪಡಿಸಿಕೊಳ್ಳಲಾದ ದೋಣಿ, ಮಾದಕವಸ್ತುಗಳ ಸರಕು ಮತ್ತು ಆರೋಪಿಗಳನ್ನು ಮುಂಬೈಗೆ ಕರೆತರಲಾಗಿದೆ.

ಈ ಭಾರಿ ಕಾರ್ಯಾಚರಣೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. "ಮೋದಿ ಸರ್ಕಾರವು ಭಾರತದ ಯುವ ಪೀಳಿಗೆಯನ್ನು ಮಾದಕ ದ್ರವ್ಯಗಳ ಪಿಡುಗಿನಿಂದ ರಕ್ಷಿಸಲು ಬದ್ಧವಾಗಿದೆ. ಗುಜರಾತ್ ಎಟಿಎಸ್, ಕರಾವಳಿ ರಕ್ಷಕ ಪಡೆ ಮತ್ತು ಕೇಂದ್ರ ಸಂಸ್ಥೆಗಳ ಈ ಜಂಟಿ ಯಶಸ್ಸು ಅಂತರರಾಷ್ಟ್ರೀಯ ಡ್ರಗ್ಸ್ ಮಾಫಿಯಾದ ಆರ್ಥಿಕ ಜಾಲವನ್ನು ಧ್ವಂಸಗೊಳಿಸಿದೆ" ಎಂದು ಅವರು ತಿಳಿಸಿದ್ದಾರೆ.

2016ರ ಸರ್ಜಿಕಲ್ ಸ್ಟ್ರೈಕ್‌ಗೆ 10 ವರ್ಷ: ಉರಿ ದಾಳಿಗೆ ಪ್ರತಿಯಾಗಿ ಎಲ್‌ಒಸಿ ದಾಟಿ ಪಾಕಿಸ್ತಾನಕ್ಕೆ ನುಗ್ಗಿದ ಭಾರತೀಯ ಸೇನೆಯ ಕಾರ್ಯಾಚರಣೆ ಹೇಗಿತ್ತು?

ಪ್ರಾಥಮಿಕ ತನಿಖೆಯ ಪ್ರಕಾರ, ಈ ಡ್ರಗ್ಸ್ ಕನ್ಸೈನ್‌ಮೆಂಟ್ ಅನ್ನು ಲಕ್ಷದ್ವೀಪದ ಭಾಗದಿಂದ ಮುಂಬೈ ಹಾಗೂ ಭಾರತದ ಪ್ರಮುಖ ನಗರಗಳಿಗೆ ತಲುಪಿಸುವ ಜಾಲ ಇದಾಗಿತ್ತು ಎಂದು ತಿಳಿದುಬಂದಿದೆ. ಈ ಮಾದಕ ವಸ್ತುವಿನ ಮೂಲ ಯಾವುದು? ಇದರ ಹಿಂದೆ ಇರುವ ಅಂತರರಾಷ್ಟ್ರೀಯ ಕಿಂಗ್‌ಪಿನ್ ಯಾರು? ಮತ್ತು ಭಾರತದಲ್ಲಿ ಇದನ್ನು ಸ್ವೀಕರಿಸಬೇಕಾಗಿದ್ದವರು ಯಾರು? ಎಂಬ ಬಗ್ಗೆ ತನಿಖೆ ಮುಂದುವರಿದಿದೆ.